AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಈ ವರ್ಷವೇ ಚಂದ್ರಯಾನ 3, ಸಾಫ್ಟ್ ಲ್ಯಾಂಡಿಂಗ್ ಮಾಡಲು ಸಜ್ಜಾಗಿದ್ದೇವೆ- ಶಿವನ್

ಬೆಂಗಳೂರು: 2019ರಲ್ಲಿ ಮಹತ್ವಾಕಾಂಕ್ಷೆ ಯೋಜನೆಯಾಗಿದ್ದ ಚಂದ್ರಯಾನ 2 ಯೋಜನೆ ಕೊನೆ ಕ್ಷಣದಲ್ಲಿ ವೈಫಲ್ಯ ಕಂಡಿತ್ತು. ಆದ್ರೆ ಇದೀಗ ಮತ್ತೆ ಚಂದ್ರಯಾನ 3 ಯೋಜನೆ ಮಾಡುವುದಾಗಿ ಇಸ್ರೋ ಅಧ್ಯಕ್ಷ ಕೆ.ಶಿವನ್ ತಿಳಿಸಿದ್ದಾರೆ. ನಾವು ಚಂದ್ರಯಾನ 2 ಯೋಜನೆಯನ್ನು ಸಂಪೂರ್ಣಗೊಳಿಸಿದ್ದೇವೆ. ಆದ್ರೆ ಸಾಫ್ಟ್ ಲ್ಯಾಂಡಿಂಗ್ ಮಾತ್ರ ಮಾಡಲು ನಮ್ಮಿಂದ ಸಾಧ್ಯವಾಗಲಿಲ್ಲ. ನಾವು ಸದ್ಯದಲ್ಲೇ ಇಂಟರ್‌ನೆಟ್ ಮೊಬೈಲ್ ಜಿಪಿಎಸ್ ಮಾಡುತ್ತೇವೆ. ಚಂದ್ರಯಾನ 2 ರಲ್ಲಿ ಲ್ಯಾಂಡಿಗ್ ವೇಳೆ ಸಮಸ್ಯೆಯಾಗಿತ್ತು. ನ್ಯಾವಿಗೇಷನ್ ಕಂಟ್ರೋಲ್ ಸಿಸ್ಟಮ್‌ ಹ್ಯಾಂಡಲ್ ಮಾಡಲು ಸಾಧ್ಯವಾಗಲಿಲ್ಲ ಎಂದರು. ಚಂದ್ರಯಾನ 3 […]

ಈ ವರ್ಷವೇ ಚಂದ್ರಯಾನ 3,  ಸಾಫ್ಟ್ ಲ್ಯಾಂಡಿಂಗ್ ಮಾಡಲು ಸಜ್ಜಾಗಿದ್ದೇವೆ- ಶಿವನ್
ಸಾಧು ಶ್ರೀನಾಥ್​
|

Updated on:Jan 01, 2020 | 1:43 PM

Share

ಬೆಂಗಳೂರು: 2019ರಲ್ಲಿ ಮಹತ್ವಾಕಾಂಕ್ಷೆ ಯೋಜನೆಯಾಗಿದ್ದ ಚಂದ್ರಯಾನ 2 ಯೋಜನೆ ಕೊನೆ ಕ್ಷಣದಲ್ಲಿ ವೈಫಲ್ಯ ಕಂಡಿತ್ತು. ಆದ್ರೆ ಇದೀಗ ಮತ್ತೆ ಚಂದ್ರಯಾನ 3 ಯೋಜನೆ ಮಾಡುವುದಾಗಿ ಇಸ್ರೋ ಅಧ್ಯಕ್ಷ ಕೆ.ಶಿವನ್ ತಿಳಿಸಿದ್ದಾರೆ.

ನಾವು ಚಂದ್ರಯಾನ 2 ಯೋಜನೆಯನ್ನು ಸಂಪೂರ್ಣಗೊಳಿಸಿದ್ದೇವೆ. ಆದ್ರೆ ಸಾಫ್ಟ್ ಲ್ಯಾಂಡಿಂಗ್ ಮಾತ್ರ ಮಾಡಲು ನಮ್ಮಿಂದ ಸಾಧ್ಯವಾಗಲಿಲ್ಲ. ನಾವು ಸದ್ಯದಲ್ಲೇ ಇಂಟರ್‌ನೆಟ್ ಮೊಬೈಲ್ ಜಿಪಿಎಸ್ ಮಾಡುತ್ತೇವೆ. ಚಂದ್ರಯಾನ 2 ರಲ್ಲಿ ಲ್ಯಾಂಡಿಗ್ ವೇಳೆ ಸಮಸ್ಯೆಯಾಗಿತ್ತು. ನ್ಯಾವಿಗೇಷನ್ ಕಂಟ್ರೋಲ್ ಸಿಸ್ಟಮ್‌ ಹ್ಯಾಂಡಲ್ ಮಾಡಲು ಸಾಧ್ಯವಾಗಲಿಲ್ಲ ಎಂದರು.

ಚಂದ್ರಯಾನ 3 ಯೋಜನೆ: 2020 ರಲ್ಲಿ ನಮ್ಮ ಮುಖ್ಯ ಯೋಜನೆ ಚಂದ್ರಯಾನ 3. ಈ ಯೋಜನೆ ಸಹ ಚಂದ್ರಯಾನ 2ರಂತೆಯೇ ಇದೆ. ಚಂದ್ರಯಾನ 2ರಲ್ಲಿನ ಲ್ಯಾಂಡರ್ ಹಾಗೂ ರೋವರ್​ ಅನ್ನು ಚಂದ್ರಯಾನ 3 ರಲ್ಲೂ ಬಳಸುತ್ತಿದ್ದೇವೆ. ಈ ಬಾರಿ ರೋವರ್ ಹಾಗೂ ಲ್ಯಾಂಡರ್ ಮೂಲಕ ಚಂದ್ರನ ಮೇಲೆ ಸಾಫ್ಟ್ ಲ್ಯಾಂಡಿಂಗ್ ಮಾಡುತ್ತೇವೆ ಎಂದು ಸುದ್ದಿಗೋಷ್ಠಿಯಲ್ಲಿ ಕೆ.ಶಿವನ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಜ.26ಕ್ಕೆ ಗಗನಯಾನ ಮಿಷನ್ ಆರಂಭ: ಹೊಸ ವರ್ಷಕ್ಕೆ ಶುಭಾಷಯ ಕೋರಿದ ಇಸ್ರೋ ಅಧ್ಯಕ್ಷ ಕೆ.ಶಿವನ್, ಸುದ್ದಿಗೋಷ್ಠಿಯಲ್ಲಿ 2020ರ ಇಸ್ರೋದ ಕಾರ್ಯಚಟುವಟಿಕೆಗಳ ವಿವರಣೆ ನೀಡಿದರು. ಜನವರಿ 26ರಂದು‌ ಇಸ್ರೋದ ಮಹತ್ವಾಕಾಂಕ್ಷೆಯ ಯೋಜನೆ ಗಗನಯಾನ ಮಿಷನ್ ಆರಂಭವಾಗಲಿದೆ. ಗಗನಯಾತ್ರಿಗಳನ್ನು ಸ್ಪೇಸ್​ಗೆ ಕಳುಹಿಸಲು ಪೂರಕ ತರಬೇತಿ ನೀಡಲಾಗುತ್ತಿದೆ. ತಮಿಳುನಾಡಿನ ತೂತುಕುಡಿಯಲ್ಲಿ ಇದ್ರ ಕಾರ್ಯ ಆರಂಭವಾಗಿದೆ. ರಷ್ಯಾದಲ್ಲಿ ಮೆಡಿಕಲ್ ಟೆಸ್ಟ್ ಮಾಡಲಾಗುತ್ತದೆ. ನಾಲ್ವರು ಪುರುಷ ಯಾತ್ರಿಗಳಿಗೆ ಅಲ್ಲಿಯೇ ಎಲ್ಲಾ ಟೆಸ್ಟ್‌ಗಳನ್ನು ಮಾಡಿಸುತ್ತಿದ್ದೇವೆ. IAFನಿಂದ ಯಾತ್ರಿಗಳನ್ನು ಆಯ್ಕೆ ಮಾಡಲಾಗಿದೆ ಎಂದರು.

Published On - 1:30 pm, Wed, 1 January 20

ಇದ್ದಕ್ಕಿದ್ದಂತೆ ಜನರು, ಹಸುಗಳ ಮೇಲೆ ಕಾಡು ಕರಡಿ ದಾಳಿ; ವಿಡಿಯೋ ವೈರಲ್
ಇದ್ದಕ್ಕಿದ್ದಂತೆ ಜನರು, ಹಸುಗಳ ಮೇಲೆ ಕಾಡು ಕರಡಿ ದಾಳಿ; ವಿಡಿಯೋ ವೈರಲ್
ಮೈಸೂರು ರಿಂಗ್ ರಸ್ತೆಯ ಪರಿಸ್ಥಿತಿ ಹೇಗಿದೆ? ವಿಡಿಯೋ ಮೂಲಕ ತಿಳಿಸಿದ ಅನಿರುದ್
ಮೈಸೂರು ರಿಂಗ್ ರಸ್ತೆಯ ಪರಿಸ್ಥಿತಿ ಹೇಗಿದೆ? ವಿಡಿಯೋ ಮೂಲಕ ತಿಳಿಸಿದ ಅನಿರುದ್
ನರಕ ಸದೃಶ್ಯವಾಗಿತ್ತು ಖಳನಟ ವಜ್ರಮುನಿ ಕೊನೆಯ ದಿನಗಳು
ನರಕ ಸದೃಶ್ಯವಾಗಿತ್ತು ಖಳನಟ ವಜ್ರಮುನಿ ಕೊನೆಯ ದಿನಗಳು
ಉತ್ತರಾಖಂಡದ ಜೋಶಿಮಠದಲ್ಲಿರುವ ಸೇನಾ ಶಿಬಿರದಲ್ಲಿ ಬೆಂಕಿ ಅವಘಡ
ಉತ್ತರಾಖಂಡದ ಜೋಶಿಮಠದಲ್ಲಿರುವ ಸೇನಾ ಶಿಬಿರದಲ್ಲಿ ಬೆಂಕಿ ಅವಘಡ
ಪತಿ ಮತ್ತು ಮಾವನಿಂದ ಚಿತ್ರಹಿಂಸೆ
ಪತಿ ಮತ್ತು ಮಾವನಿಂದ ಚಿತ್ರಹಿಂಸೆ
ಬಳ್ಳಾರಿ ಗಲಭೆ: ಶಾಸಕ ಜನಾರ್ದನರೆಡ್ಡಿ ನಿವಾಸದಲ್ಲಿ ಮತ್ತೊಂದು ಬುಲೆಟ್ ಪತ್ತೆ
ಬಳ್ಳಾರಿ ಗಲಭೆ: ಶಾಸಕ ಜನಾರ್ದನರೆಡ್ಡಿ ನಿವಾಸದಲ್ಲಿ ಮತ್ತೊಂದು ಬುಲೆಟ್ ಪತ್ತೆ
ಗಿಲ್ಲಿ-ಅಶ್ವಿನಿ ನಡುವೆ ಮತ್ತೆ ಜಗಳ, ಯೋಗ್ಯತೆ ಬಗ್ಗೆ ಮಾತು: ವಿಡಿಯೋ
ಗಿಲ್ಲಿ-ಅಶ್ವಿನಿ ನಡುವೆ ಮತ್ತೆ ಜಗಳ, ಯೋಗ್ಯತೆ ಬಗ್ಗೆ ಮಾತು: ವಿಡಿಯೋ
ರಿವರ್ಸ್ ವೇಳೆ ನಿಯಂತ್ರಣ ತಪ್ಪಿದ ಕಾರು: ವಿಡಿಯೋ ನೋಡಿದ್ರೆ ಹೌಹಾರ್ತೀರಿ
ರಿವರ್ಸ್ ವೇಳೆ ನಿಯಂತ್ರಣ ತಪ್ಪಿದ ಕಾರು: ವಿಡಿಯೋ ನೋಡಿದ್ರೆ ಹೌಹಾರ್ತೀರಿ
ಬಳ್ಳಾರಿ ಘರ್ಷಣೆಯಲ್ಲಿ ಕೈ ಕಾರ್ಯಕರ್ತ ಬಲಿ: ಗಲಾಟೆ ಶುರುವಾಗಿದ್ದು ಹೇಗೆ?
ಬಳ್ಳಾರಿ ಘರ್ಷಣೆಯಲ್ಲಿ ಕೈ ಕಾರ್ಯಕರ್ತ ಬಲಿ: ಗಲಾಟೆ ಶುರುವಾಗಿದ್ದು ಹೇಗೆ?
ಸರ್ಕಾರಿ ಶಾಲಾ ಮಕ್ಕಳಿಗೆ ಶಿಕ್ಷಕರಿಂದ ಔತಣಕೂಟ: ವಿಶೇಷವೇನು?
ಸರ್ಕಾರಿ ಶಾಲಾ ಮಕ್ಕಳಿಗೆ ಶಿಕ್ಷಕರಿಂದ ಔತಣಕೂಟ: ವಿಶೇಷವೇನು?