ಚನ್ನಪಟ್ಟಣ NDA ಅಭ್ಯರ್ಥಿ ನಿಖಿಲ್‌ ಕುಮಾರಸ್ವಾಮಿ ಕೋಟ್ಯಾಧಿಪತಿ: ಪುತ್ರ ಲಕ್ಷಾಧಿಪತಿ..!

ಚನ್ನಪಟ್ಟಣ ಉಪಚುನಾವಣೆಗೆ ಬಿಜೆಪಿ ಹಾಗೂ ಜೆಡಿಎಸ್​​ ಎನ್​ಡಿಎ ಅಭ್ಯರ್ಥಿಯಾಗಿ ನಿಖಿಲ್ ಕುಮಾರಸ್ವಾಮಿ ಕಣಕ್ಕಿಳಿದಿದ್ದಾರೆ. ನಾಮಪತ್ರ ಸಲ್ಲಿಕೆಗೆ ಕೊನೆ ದಿನವಾದ ಇಂದು(ಅಕ್ಟೋಬರ್ 25) ನಿಖಿಲ್ ಕುಮಾರಸ್ವಾಮಿ ತಮ್ಮ ನಾಮಪತ್ರ ಸಲ್ಲಿಸಿದರು. ಇನ್ನು ನಾಮಪತ್ರದಲ್ಲಿ ನಿಖಿಲ್​ ತಮ್ಮ ಆಸ್ತಿ ವಿವರ ಘೋಷಣೆ ಮಾಡಿದ್ದು, ಕೋಟಿ ಒಡೆಯರಾಗಿದ್ದಾರೆ. ಇನ್ನು ಅವರ ಪುಟ್ಟ ಮಗು ಹೆಸರಿನಲ್ಲೂ ಸಹ ಲಕ್ಷಾಂತರ ರೂ, ಹಣ ಇದೆ.

ಚನ್ನಪಟ್ಟಣ NDA ಅಭ್ಯರ್ಥಿ ನಿಖಿಲ್‌ ಕುಮಾರಸ್ವಾಮಿ ಕೋಟ್ಯಾಧಿಪತಿ: ಪುತ್ರ ಲಕ್ಷಾಧಿಪತಿ..!
ನಿಖಿಲ್ ಕುಮಾರಸ್ವಾಮಿ ನಾಮಪತ್ರ ಸಲ್ಲಿಕೆ
Follow us
| Updated By: ರಮೇಶ್ ಬಿ. ಜವಳಗೇರಾ

Updated on: Oct 25, 2024 | 5:23 PM

ರಾಮನಗರ, (ಅಕ್ಟೋಬರ್ 25): ಚನ್ನಪಟ್ಟಣ ಉಪಚುನಾವಣೆಯ (Channapatna Bypoll) ‘ಮೈತ್ರಿ’ ಅಭ್ಯರ್ಥಿಯಾಗಿ ನಿಖಿಲ್‌ ಕುಮಾರಸ್ವಾಮಿ (Nikhil Kumaraswamy) ಅವರು ಇಂದು(ಅಕ್ಟೋಬರ್ 25) ನಾಮಪತ್ರ ಸಲ್ಲಿಕೆ ಮಾಡಿದರು. ಬಿಜೆಪಿ ಮತ್ತು ಜೆಡಿಎಸ್​ ನಾಯಕರ ಜತೆಯಾಗಿ ನಿಖಿಲ್ ಬೃಹತ್​ ರೋಡ್​ ಶೋ ಮೂಲಕ ತೆರಳಿ ನಾಮಪತ್ರ ಸಲ್ಲಿಸಿದರು. ಇನ್ನು ನಿಖಿಲ್ ನಾಮಪತ್ರದಲ್ಲಿ ತಮ್ಮ ಹೆಸರಿನಲ್ಲಿರುವ ಆಸ್ತಿ ವಿವರ ನೀಡಿದ್ದು, ನಿಖಿಲ್ 113 ಕೋಟಿ ರೂ. ಮೌಲ್ಯದ ಆಸ್ತಿ ಒಡೆಯರಾಗಿದ್ದಾರೆ, ಇನ್ನು ಅವರ ಪುತ್ರ ವ್ಯಾನ್ ದೇವ್ ಹೆಸರಿನಲ್ಲಿ 11ಲಕ್ಷ ರೂ. ಹಣ ಇದ್ದರೆ, ಪತ್ನಿ ರೇವತಿ ನಿಖಿಲ್ ಹೆಸರಲ್ಲಿ 5.49ಕೋಟಿ ಮೌಲ್ಯದ ಚರಾಸ್ತಿ, 43ಲಕ್ಷ ಮೌಲ್ಯದ ಸ್ಥಿರಾಸ್ತಿ ಇದೆ.

ಬಿಬಿಎ ಪದವೀಧರನಾಗಿರುವ ಕೇಂದ್ರ ಸಚಿವ ಕುಮಾರಸ್ವಾಮಿ ಪುತ್ರ ನಿಖಿಲ್‌, ಬರೋಬ್ಬರಿ 113 ಕೋಟಿ ಆಸ್ತಿ ಒಡೆಯ. ಒಟ್ಟು 78.15 ಕೋಟಿ ಮೌಲ್ಯದ ಚರಾಸ್ತಿ, 29.34ಕೋಟಿ ಮೌಲ್ಯದ ಸ್ಥಿರಾಸ್ತಿ ಹೊಂದಿದ್ದಾರೆ. ಪತ್ನಿ ರೇವತಿ ನಿಖಿಲ್ ಹೆಸರಲ್ಲಿ 5.49ಕೋಟಿ ಮೌಲ್ಯದ ಚರಾಸ್ತಿ, 43 ಲಕ್ಷ ಮೌಲ್ಯದ ಸ್ಥಿರಾಸ್ತಿ ಇದೆ. ಮಗ ಆವ್ಯಾನ್ ದೇವ್ ಹೆಸರಲ್ಲಿ 11 ಲಕ್ಷ ಹಣ ಇದೆ.

ಇದನ್ನೂ ಓದಿ: ನಿಖಿಲ್‌ ಕುಮಾರಸ್ವಾಮಿ ಆಸ್ತಿ ಮೌಲ್ಯ 77 ಕೋಟಿ, ಲ್ಯಾಂಬೊರ್ಗಿನಿ ಸಹಿತ ಐದು ಕಾರುಗಳ ಒಡೆಯ; ಇನ್ನೂ ಏನೆಲ್ಲ ಇವೆ? ಇಲ್ಲಿದೆ ವಿವರ

ನಿಖಿಲ್ ಕುಮಾರಸ್ವಾಮಿ ಹೆಸರಲ್ಲಿ 1.488 ಕೆಜಿ ಚಿನ್ನ, 16 ಕೆಜಿ ಬೆಳ್ಳಿ ಹಾಗೂ ರೇವತಿ ಹೆಸರಲ್ಲಿ 1.411 ಕೆಜಿ ಚಿನ್ನ, 33.05 ಕೆಜಿ ಬೆಳ್ಳಿ, 13 ಕ್ಯಾರೆಟ್ ಡೈಮಂಡ್ ಇದೆ. 1 ಇನ್ನೋವಾ ಐ ಕ್ರಾಸ್, 1 ರೇಂಜ್ ರೋವರ್ ಹಾಗೂ ಎರಡು ಕ್ಯಾರಾವ್ಯಾನ್, 1 ಇನ್ನೋವಾ ಕ್ರಿಸ್ಟ ಕಾರು ಇದೆ. ಇನ್ನು ನಿಖಿಲ್ ಹೆಸರಲ್ಲಿ ಒಟ್ಟು 70.44 ಕೋಟಿ ಸಾಲ ಇದೆ. ತಮ್ಮ ಪತ್ನಿ ಹೆಸರಲ್ಲಿ 4.96 ಕೋಟಿ ರೂ. ಸಾಲ ಇದೆ ಎಂದು ಆಸ್ತಿ ವಿವರದಲ್ಲಿ ತಿಳಿಸಿದ್ದಾರೆ.

ನಿಖಿಲ್ ಆಸ್ತಿ ಹೆಚ್ಚಳ, ಸಾಲವೂ ಏರಿಕೆ

ಇನ್ನು ಕಳೆದ ವರ್ಷದ ನಡೆದ ರಾಮನಗರ ವಿಧಾನಸಭಾ ಚುನಾವಣೆಯಲ್ಲಿ ನಿಖಿಲ್ ಕುಮಾರಸ್ವಾಮಿ ಸ್ಪರ್ಧಿಸಿ ಸೋಲುಕಂಡಿದ್ದರು. ಆಗ ನಿಖಿಲ್ ತಮ್ಮ ಬಳಿ 77 ಕೋಟಿ ರೂಪಾಯಿ ಮೌಲ್ಯದ ಆಸ್ತಿ ಹೊಂದಿರುವುದಾಗಿ ಘೋಷಣೆ ಮಾಡಿಕೊಂಡಿದ್ದರು. ಆದ್ರೆ, ಇದೀಗ ಚನ್ನಪಟ್ಟಣ ಉಪಚುನಾವಣೆ ವೇಳೆ 113 ಕೋಟಿ ರೂ. ಆಸ್ತಿ ಇದೆ ಎಂದು ತೋರಿಸಿದ್ದಾರೆ. ಈ ಮೂಲಕ ಒಂದೇ ವರ್ಷದಲ್ಲಿ ನಿಖ್ ಆಸ್ತಿ ಬರೋಬ್ಬರಿ 36 ಕೋಟಿ ರೂ. ಏರಿಕೆಯಾಗಿದೆ.

ಇನ್ನು ಆಗ ನಿಖಿಲ್​​ 38.94 ಕೋಟಿ ರೂಪಾಯಿ ಸಾಲವನ್ನು ಹೊಂದಿದ್ದರು. ಈಗ ಆ ಸಾಲ 70.44 ಕೋಟಿ ರೂಪಾಯಿಗೆ ಏರಿಕೆಯಾಗಿದೆ.

ವಿಧಾನಸಭೆ ಚುನಾವಣೆ ತಾಜಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಬಿಗ್ ಬಾಸ್​ನಿಂದ ಹೊರಬಿದ್ದ ಜಗದೀಶ್​ಗೆ ಸುದ್ದಿಯಲ್ಲಿರುವ ಹಪಾಹಪಿ ಇರುವಂತಿದೆ
ಬಿಗ್ ಬಾಸ್​ನಿಂದ ಹೊರಬಿದ್ದ ಜಗದೀಶ್​ಗೆ ಸುದ್ದಿಯಲ್ಲಿರುವ ಹಪಾಹಪಿ ಇರುವಂತಿದೆ
ಇದು ಕೆಂಪಿರುವೆ ಪಾನಿಪುರಿ, ಹೊಸ ಚಾಟ್ಸ್​ ಹೇಗಿದೆ ನೋಡಿ
ಇದು ಕೆಂಪಿರುವೆ ಪಾನಿಪುರಿ, ಹೊಸ ಚಾಟ್ಸ್​ ಹೇಗಿದೆ ನೋಡಿ
ಯೋಗೇಶ್ವರ್​ಗೆ ಟಿಕೆಟ್ ನೀಡದ್ದು ಬಿಜೆಪಿಯಲ್ಲಿ ಅಸಮಾಧಾನಕ್ಕೆ ಕಾರಣವಾಯಿತೇ?
ಯೋಗೇಶ್ವರ್​ಗೆ ಟಿಕೆಟ್ ನೀಡದ್ದು ಬಿಜೆಪಿಯಲ್ಲಿ ಅಸಮಾಧಾನಕ್ಕೆ ಕಾರಣವಾಯಿತೇ?
ಹಾಸನಾಂಬೆಯ ದರ್ಶನಕ್ಕೆ ಬೆಳಗ್ಗೆ 4 ಗಂಟೆಯಿಂದ ಸರತಿ ಸಾಲಲ್ಲಿ ಭಕ್ತರ ದಂಡು
ಹಾಸನಾಂಬೆಯ ದರ್ಶನಕ್ಕೆ ಬೆಳಗ್ಗೆ 4 ಗಂಟೆಯಿಂದ ಸರತಿ ಸಾಲಲ್ಲಿ ಭಕ್ತರ ದಂಡು
ಗೋಕಾಕ್: ಭಾರಿ ಮಳೆಗೆ ತುಂಬಿ ಹರಿದ ಹಳ್ಳ ದಾಟಲು ಜೆಸಿಬಿ ಏರಿದ ಶಾಲೆ ಮಕ್ಕಳು
ಗೋಕಾಕ್: ಭಾರಿ ಮಳೆಗೆ ತುಂಬಿ ಹರಿದ ಹಳ್ಳ ದಾಟಲು ಜೆಸಿಬಿ ಏರಿದ ಶಾಲೆ ಮಕ್ಕಳು
KSRTC ಬಸ್​ನಲ್ಲಿ ಚಪ್ಪಲಿಯಿಂದ ಹೊಡೆದಾಡಿಕೊಂಡ ಮಹಿಳೆಯರು
KSRTC ಬಸ್​ನಲ್ಲಿ ಚಪ್ಪಲಿಯಿಂದ ಹೊಡೆದಾಡಿಕೊಂಡ ಮಹಿಳೆಯರು
ಕಿವೀಸ್ ಬ್ಯಾಟರ್ ಎದುರು ಹಿಂದಿಯಲ್ಲಿ ಮಾತನಾಡಿ ಪೇಚಿಗೆ ಸಿಲುಕಿದ ಪಂತ್
ಕಿವೀಸ್ ಬ್ಯಾಟರ್ ಎದುರು ಹಿಂದಿಯಲ್ಲಿ ಮಾತನಾಡಿ ಪೇಚಿಗೆ ಸಿಲುಕಿದ ಪಂತ್
ಮುಡಾ ಪ್ರಕರಣ; ಕೋರ್ಟ್ ಆದೇಶ ಮರುಪರಿಶೀಲನೆ ಕೋರುವ ಅವಕಾಶವಿದೆ: ಪರಮೇಶ್ವರ್
ಮುಡಾ ಪ್ರಕರಣ; ಕೋರ್ಟ್ ಆದೇಶ ಮರುಪರಿಶೀಲನೆ ಕೋರುವ ಅವಕಾಶವಿದೆ: ಪರಮೇಶ್ವರ್
1 ರನ್​ಗೆ ಸುಸ್ತಾದ ಕೊಹ್ಲಿ; ಹಳೆಯ ದೌರ್ಬಲ್ಯಕ್ಕೆ ಮತ್ತೊಮ್ಮೆ ಬಲಿ
1 ರನ್​ಗೆ ಸುಸ್ತಾದ ಕೊಹ್ಲಿ; ಹಳೆಯ ದೌರ್ಬಲ್ಯಕ್ಕೆ ಮತ್ತೊಮ್ಮೆ ಬಲಿ
ಫೂಜೆಯಲ್ಲಿ ನಿಖಿಲ್ ಪತ್ನಿ ರೇವತಿ ಮತ್ತು ಹೆಚ್ ಡಿ ಕುಮಾರಸ್ವಾಮಿ ಸಹ ಭಾಗಿ
ಫೂಜೆಯಲ್ಲಿ ನಿಖಿಲ್ ಪತ್ನಿ ರೇವತಿ ಮತ್ತು ಹೆಚ್ ಡಿ ಕುಮಾರಸ್ವಾಮಿ ಸಹ ಭಾಗಿ