ಕಿತ್ತೂರು ಉತ್ಸವ: ಚೆನ್ನಮ್ಮನ ಉತ್ಸವದ ದಿನಾಂಕ ನಿಗದಿ, ಯಾವೆಲ್ಲ ಕಾರ್ಯಕ್ರಮಗಳು ನಡೆಯಲಿವೆ? ಇಲ್ಲಿದೆ ಮಾಹಿತಿ

ಚೆನ್ನಮ್ಮನ ಕಿತ್ತೂರು ಉತ್ಸವದ ಜ್ಯೋತಿ ಯಾತ್ರೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶುಕ್ರವಾರ ಚಾಲನೆ ನೀಡಿದರು. ವಿಧಾನಸೌಧದ ಮುಂಭಾಗದಲ್ಲಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಈ ಹಿಂದೆ ನಾನು ಮುಖ್ಯಮಂತ್ರಿಯಾಗಿದ್ದಾಗ ಕಿತ್ತೂರು ರಾಣಿ ಜಯಂತೋತ್ಸವಕ್ಕೆ ತೀರ್ಮಾನ ಮಾಡಿದೆ ಎಂದರು.

ಕಿತ್ತೂರು ಉತ್ಸವ: ಚೆನ್ನಮ್ಮನ ಉತ್ಸವದ ದಿನಾಂಕ ನಿಗದಿ, ಯಾವೆಲ್ಲ ಕಾರ್ಯಕ್ರಮಗಳು ನಡೆಯಲಿವೆ? ಇಲ್ಲಿದೆ ಮಾಹಿತಿ
ಕಿತ್ತೂರು ರಾಣಿ ಚೆನ್ನಮ್ಮ
Follow us
| Updated By: Digi Tech Desk

Updated on:Oct 13, 2023 | 2:37 PM

ಬೆಂಗಳೂರು ಅ.13: ಪ್ರತಿಬಾರಿಯಂತೆ ಈ ಬಾರಿಯು ಚೆನ್ನಮ್ಮನ ಕಿತ್ತೂರು ಉತ್ಸವವನ್ನು (Chennammana Kittur Utsav) ವಿಜೃಂಭಣೆಯಿಂದ ಆಚರಿಸಲು ಜಿಲ್ಲಾಡಳಿತ ಸಜ್ಜಾಗುತ್ತಿದೆ. ಅ.23, 24, 25 ರಂದು ಮೂರು ದಿನಗಳ ಕಾಲ ಕಿತ್ತೂರು ಉತ್ಸವ ನಡೆಯಲಿದೆ. ಚೆನ್ನಮ್ಮನ ಕಿತ್ತೂರು ಉತ್ಸವದ ವಿಜಯ ಜ್ಯೋತಿಯಾತ್ರೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಅವರು ಇಂದು (ಅ.13) ರಂದು ಚಾಲನೆ ನೀಡಿದರು. ವಿಧಾನಸೌಧದ ಮುಂಭಾಗದಲ್ಲಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಈ ಹಿಂದೆ ನಾನು ಮುಖ್ಯಮಂತ್ರಿಯಾಗಿದ್ದಾಗ ಕಿತ್ತೂರು ರಾಣಿ ಜಯಂತೋತ್ಸವಕ್ಕೆ ತೀರ್ಮಾನ ಮಾಡಿದೆ. ಅಲ್ಲಿಯವರೆಗೆ ಬೇರೆ ಯಾರೂ ಮಾಡಿರಲಿಲ್ಲ ಎಂದರು.

ಸ್ವಾತಂತ್ರ್ಯ ಹೋರಾಟಗಾರರು ನಮ್ಮ ದೇಶದ, ಸಮಾಜದ ಆಸ್ತಿ. ಪ್ರತಿಯೊಬ್ಬರು ಕಿತ್ತೂರು ರಾಣಿ ಆಗಲು ಸಾಧ್ಯವಾಗೋದಿಲ್ಲ. ಸಂಗೊಳ್ಳಿರಾಯಣ್ಣ, ರಾಣಿ ಚೆನ್ನಮ್ಮ ಬಗ್ಗೆ ಮಾತಾಡುವಾಗ ದೇಶ ಪ್ರೇಮ ಬೆಳೆಸಿಕೊಳ್ಳಬೇಕು. ಮೂರು ದಿನವೂ ಈ ಕಾರ್ಯಕ್ರಮ ನಡೆಯಲಿದೆ. ಅಲ್ಲಿಯವರೆಗೆ ವಿಜಯದ ಜ್ಯೋತಿ ಎಲ್ಲ ಕಡೆ ಉರಿಯುತ್ತಿರುತ್ತೆ. ಕಿತ್ತೂರಿ ರಾಣಿ ಚೆನ್ನಮ್ಮ ಆದರ್ಶ ಎಲ್ಲ ಯುವಕರಿಗೆ ಬೇಕು. ಸಂತೋಷದಿಂದ ಈ ಉತ್ಸವದ ವಿಜಯ ಕಾರ್ಯಕ್ರಮ ಉದ್ಘಾಟನೆ ಮಾಡಿದ್ದೇನೆ ಎಂದರು.

ಕೆಲ ದಿನಗಳ ಹಿಂದೆ ನಡೆದ ಉತ್ಸವದ ಪೂರ್ವಭಾವಿ ಸಭೆಯಲ್ಲಿ ಲೋಕೋಪಯೋಗಿ ಇಲಾಖೆ ಸಚಿವ ಸತೀಶ್​ ಜಾರಕಿಹೊಳಿ ಮಾತನಾಡಿ ಮೂರು ದಿನಗಳ ಉತ್ಸವವನ್ನು ವಿಜೃಂಭಣೆಯಿಂದ ಆಚರಿಸಲು ಕನಿಷ್ಠ ಮೂರು ಕೋಟಿ ರೂಪಾಯಿ ಅನುದಾನದ ಅಗತ್ಯವಿದ್ದು, ಈಗಾಗಲೇ 5 ಕೋಟಿ ರೂ. ನೀಡುವಂತೆ ಪ್ರಸ್ತಾವನೆ ಕಳಿಸಲಾಗಿದೆ ಎಂದು ಹೇಳಿದ್ದರು.

ಇದನ್ನೂ ಓದಿ: ಉತ್ತರ ಕನ್ನಡ ‘ಕಿತ್ತೂರು ಕರ್ನಾಟಕಕ್ಕೆ: ಕರಾವಳಿ ಸೌಲಭ್ಯಗಳಿಂದ ವಂಚಿತ?

ಈ ವಿಜಯಜ್ಯೋತಿ ಯಾತ್ರೆಯು ಕಿತ್ತೂರು ಕರ್ನಾಟಕ ವ್ಯಾಪ್ತಿಯ ತಾಲೂಕುಗಳಿಗೆ ಹಾಗೂ ಪ್ರವಾಸಿ ತಾಣಗಳಲ್ಲಿ ಸಂಚರಿಸಲಿದೆ. ಉತ್ಸವದ ಯಶಸ್ವಿಯಾಗಿ 16 ಉಪಸಮಿತಿಗಳನ್ನು ರಚಿಸಲಾಗಿದೆ. ಉತ್ಸವಕ್ಕೆ ಮುಖ್ಯ ವೇದಿಕೆ ಸೇರಿದಂತೆ ಮತ್ತೆರಡು ವೇದಿಕೆಗಳನ್ನು ನಿರ್ಮಾಣ ಮಾಡಲಾಗಿದೆ. ಕೋಟೆ ಆವರಣದಲ್ಲಿ ಮುಖ್ಯ ವೇದಿಕೆ ಇದ್ದರೆ, ಎರಡನೇ ವೇದಿಕೆ ವೀರಭದ್ರೇಶ್ವರ ದೇವಸ್ಥಾನದ ಕಲ್ಯಾಣ ಮಂಟಪದಲ್ಲಿ ಹಾಗೂ ಮೂರನೇ ವೇದಿಕೆ ಸರ್ಕಾರಿ ಬಾಲಕಿಯರ ಪ್ರೌಢಶಾಲೆ ಬಳಿ ಇರುವ ರಾಜಗುರು ಗುರುಭವನದಲ್ಲಿ ಇರಲಿದೆ.

ಉತ್ಸವದಲ್ಲಿ ವಿಚಾರಗೋಷ್ಠಿ, ಕವಿಗೋಷ್ಠಿ, ಮಹಿಳಾಗೋಷ್ಠಿ, ಕುಸ್ತಿ ಸೇರಿ ವಿವಿಧ ಕ್ರೀಡಾಕೂಟಗಳು, ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಸ್ಥಳೀಯ ಕಲಾವಿದರು ಮತ್ತು ಕಾರ್ಯಕ್ರಮ ನಿರೂಪಕರಿಗೆ ಆದ್ಯತೆ ನೀಡಲಾಗುತ್ತದೆ.

ರಾಜ್ಯಮಟ್ಟದ ಉತ್ಸವಕ್ಕಾಗಿ ಕೂಗು

1996ರಲ್ಲಿ ಆಗಿನ ಮುಖ್ಯಮಂತ್ರಿಯಾಗಿದ್ದ ಜನತಾದಳದ ಜೆ.ಎಚ್.ಪಟೇಲ್ ಅವರು ಜನರ ಬ್ರೂನೆಗೆ ಸ್ಪಂದಿಸಿ ಕಿತ್ತೂರು ಉತ್ಸವವನ್ನು ಸರ್ಕಾರದ ಉತ್ಸವವನ್ನಾಗಿ ಘೋಷಣೆ ಮಾಡಿದ್ದರು. ಆದರೆ ಇದು ಈಗಲೂ ಕಿತ್ತೂರಿಗೆ ಮಾತ್ರ ಸೀಮಿತವಾಗಿರುವ ಉತ್ಸವವಾಗಿದೆ ಎಂಬ ಕೊರಗು ಜನರಲ್ಲಿದೆ. ಅದನ್ನು ದೂರ ಮಾಡಿ ರಾಜ್ಯಮಟ್ಟದ ಉತ್ಸವವನ್ನಾಗಿ ಮಾಡುವ ಜವಾಬ್ದಾರಿ ಈಗಿನ ಸಿಎಂ ಮೇಲಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 2:20 pm, Fri, 13 October 23