ಹಾಲಿನ ಉತ್ಪಾದನೆ ಮೇಲೆ ಬರದ ಛಾಯೆ; ಕೋಚಿಮುಲ್ ವಿವಾದದಿಂದ ಸೌಲಭ್ಯ ವಂಚಿತಾರದ ರೈತರು

ಕೋಲಾರ, ಚಿಕ್ಕಬಳ್ಳಾಪುರ ರೈತರ ಜೀವನಾಡಿಯಾಗಿರುವ ಹೈನೋದ್ಯಮ, ಮಳೆ, ಬೆಳೆ, ನೀರಾವರಿಯನ್ನು ಅವಲಂಭಿಸಿದೆ. ಆದರೆ, ಅವಳಿ ಜಿಲ್ಲೆಗಳಲ್ಲಿ ತೀವ್ರ ಬರ ಆವರಿಸಿ ಸಮರ್ಪಕ ಕುಡಿಯುವ ನೀರು, ಹುಲ್ಲು ಇಲ್ಲದ ಕಾರಣ ನಿಗದಿತ ಪ್ರಮಾಣದ ಹಾಲು ಉತ್ಪಾದನೆ ಆಗುತ್ತಿಲ್ಲ. ಮತ್ತೊಂದೆಡೆ ಕೋಚಿಮುಲ್ ವಿವಾದದಿಂದ ಅವಳಿ ಜಿಲ್ಲೆಗಳ ಹಾಲು ಉತ್ಪಾದಕ ರೈತರು ಸೌಲಭ್ಯಗಳಿಂದ ವಂಚಿತಾರಾಗುತ್ತಿದ್ದಾರೆ. 

ಹಾಲಿನ ಉತ್ಪಾದನೆ ಮೇಲೆ ಬರದ ಛಾಯೆ; ಕೋಚಿಮುಲ್ ವಿವಾದದಿಂದ ಸೌಲಭ್ಯ ವಂಚಿತಾರದ ರೈತರು
ಹಾಲಿನ ಉತ್ಪಾದನೆಗೆ ಬರದ ಛಾಯೆ
Follow us
ಭೀಮಪ್ಪ ಪಾಟೀಲ್​, ಚಿಕ್ಕಬಳ್ಳಾಪುರ
| Updated By: ಕಿರಣ್ ಹನುಮಂತ್​ ಮಾದಾರ್

Updated on: Mar 15, 2024 | 7:02 PM

ಚಿಕ್ಕಬಳ್ಳಾಪುರ, ಮಾ.15: ಕೋಲಾರ ಹಾಗೂ ಚಿಕ್ಕಬಳ್ಳಾಪುರ(Kolar-Chikkaballapur) ಹಾಲು ಉತ್ಪಾದಕರ (Milk production) ಮಹಾ ಮಂಡಳಿ, ಗುಣಮಟ್ಟದ ಹಾಲಿಗೆ ರಾಜ್ಯದಲ್ಲಿಯೇ ಖ್ಯಾತಿ ಪಡೆದಿದೆ. ಆದರೆ, ಈ ಬಾರಿ ತೀವ್ರ ಬರಗಾಲ ಕಾಡುತ್ತಿರುವ ಹಿನ್ನೆಲೆ ಹಸು, ಎಮ್ಮೆಗಳಿಗೆ ಸಮರ್ಪಕ ಕುಡಿಯುವ ನೀರು, ಹುಲ್ಲು ಇಲ್ಲದ ಕಾರಣ ನಿಗದಿತ ಪ್ರಮಾಣದಲ್ಲಿ ಹಾಲು ಉತ್ಪಾದನೆ ಆಗುತ್ತಿಲ್ಲ. ಇನ್ನು ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಂತೂ ಹಾಲು ಉತ್ಪಾದನೆ ಗಣನೀಯವಾಗಿ ಕಡಿಮೆಯಾಗಿದೆ.

ಮತ್ತೊಂದೆಡೆ ಕೋಲಾರ-ಚಿಕ್ಕಬಳ್ಳಾಪುರ ಹಾಲು ಉತ್ಪಾದಕರ ಮಹಾ ಮಂಡಳಿಯನ್ನು ವಿಭಜಿಸಿ ಚಿಕ್ಕಬಳ್ಳಾಪುರ ಜಿಲ್ಲಾ ಹಾಲು ಉತ್ಪಾದಕರ ಮಹಾ ಮಂಡಳಿಯನ್ನಾಗಿ ಪ್ರತ್ಯೇಕಗೊಳಿಸಲಾಗಿತ್ತು. ಆದರೆ, ರಾಜಕೀಯ ಮೇಲಾಟದಿಂದ ಮತ್ತೆ ಚಿಕ್ಕಬಳ್ಳಾಪುರ ಹಾಲು ಒಕ್ಕೂಟವನ್ನು ಕೋಲಾರದ ಜೊತೆ ವಿಲೀನ ಮಾಡಲಾಗಿದೆ. ಇದರಿಂದ ರೈತರಿಗೆ ಪ್ರೋತ್ಸಾಹದ ರೀತಿಯಲ್ಲಿ ದೊರೆಯಬೇಕಿದ್ದ ಚಾಪ್ ಕಟರ್, ಹಾಲು ಕರೆಯುವ ಯಂತ್ರಗಳು ಸೇರಿದಂತೆ ಮಹಾ ಮಂಡಳಿಯಿಂದ ರೈತರಿಗೆ ನೀಡುವ ಯಾವುದೇ ಸೌಲಭ್ಯಗಳೂ ದೊರೆಯುತ್ತಿಲ್ಲ. ಒಂದೆಡೆ ಬರದಿಂದ ಹಾಲಿನ ಉತ್ಪಾದನೆ ಗಣನೀಯ ಕಡಿಮೆಯಾಗಿದೆ. ಮತ್ತೊಂದೆಡೆ ಕೋಚಿಮುಲ್ ಚೀಮುಲ್ ವಿಭಜನೆ ವಿವಾದದಿಂದ ರೈತರಿಗೆ ದೊರೆಯಬೇಕಾಗಿರುವ ಸೌಲಭ್ಯಗಳು ದೊರೆಯುತ್ತಿಲ್ಲ.

ಇದನ್ನೂ ಓದಿ:ಬೆಂಗಳೂರಿಗೆ ಎದುರಾಗಲಿದೆ ಹಾಲಿನ ಕೊರತೆ; ಹಾಲಿನ ಉತ್ಪಾದನೆ ಕಡಿಮೆಯಾಗಿದೆ ಎಂದು ಎಚ್ಚರಿಕೆ ನೀಡಿದ ಬಮುಲ್

ಬೇಸಿಗೆಯ ಬೇಗೆಯ ನಡುವೆ ಬೆಂಗಳೂರು ಮಂದಿಗೂ ಮತ್ತೊಂದು ಬಿಸಿ ತಟ್ಟಲಿದೆ. ಬೆಂಗಳೂರು ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಹಾಲಿನ ಉತ್ಪಾದನೆಯು ದಿನಕ್ಕೆ 14-15 ಲಕ್ಷ ಲೀಟರ್‌ನಿಂದ 12-13 ಲಕ್ಷ ಲೀಟರ್‌ ಕಡಿಮೆಯಾಗುವುದರಿಂದ ಹಾಲಿನ ಪೂರೈಕೆಯಲ್ಲಿ ಕೊರತೆ ಉಂಟಾಗಲಿದೆ. ಹೀಗಾಗಿ ಸರಿಯಾದ ಸಮಯಕ್ಕೆ ಹಾಲು ಸಿಗುವುದು ಕಷ್ಟವಾಗಲಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ