ಚಿಕ್ಕಬಳ್ಳಾಪುರ: ಮನರಂಜನೆಯನ್ನು ಹೊರತುಪಡಿಸಿ, ಕ್ಷೇತ್ರದ ಅಭಿವೃದ್ಧಿಯನ್ನು ಬಿಂಬಿಸುವ ಉತ್ಸವವೇ ಚಿಕ್ಕಬಳ್ಳಾಪುರ ಉತ್ಸವವಾಗಿದೆ(Chikkaballapur Utsav). ಕಲಾವಿದರನ್ನು ಆರಾಧಿಸುವ ಶಕ್ತಿ ಸಚಿವ ಡಾ.ಕೆ. ಸುಧಾಕರ್(Dr K Sudhakar) ಅವರಿಗಿದೆ. ಇಂತಹ ನಾಯಕರನ್ನು ಪಡೆದ ಚಿಕ್ಕಬಳ್ಳಾಪುರದ ಜನತೆ ಧನ್ಯರು ಎಂದು ಖ್ಯಾತ ನಟ ದುನಿಯಾ ವಿಜಯ್(Duniya Vijay) ಹೊಗಳಿ ಕೊಂಡಾಡಿದ್ದಾರೆ.
ಚಿಕ್ಕಬಳ್ಳಾಪುರ ನಗರದ ಸರ್.ಎಂ.ವಿ. ಜಿಲ್ಲಾ ಕ್ರೀಡಾಂಗಣದಲ್ಲಿ ಭಾನುವಾರ ರಾತ್ರಿ ಆಯೋಜಿಸಿದ್ದ ಚಿಕ್ಕಬಳ್ಳಾಪುರ ಉತ್ಸವ ವೇದಿಕೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ್ರು. ಇದೇ ವೇದಿಕೆಯಲ್ಲಿ ಭಾಗವಹಿಸಿದ್ದ ಖ್ಯಾತ ಚಲನಚಿತ್ರ ನಿರ್ದೇಶಕ ಆರ್. ಚಂದ್ರು ಮಾತನಾಡಿ, ಇಂತಹ ಉತ್ಸವ ವಾರಗಳ ಕಾಲ ಮಾಡಲು ಮಹಾರಾಜರಿಂದ ಮಾತ್ರ ಸಾಧ್ಯ. ಆದರೆ ಚಿಕ್ಕಬಳ್ಳಾಪುರದ ಮಹಾರಾಜರಾಗಿರುವ ಡಾ.ಕೆ. ಸುಧಾಕರ್ ಅವರು ಒಂದು ವಾರದ ಉತ್ಸವ ಆಯೋಜಿಸುವ ಮೂಲಕ ಜಿಲ್ಲೆಯ ಅಭಿವೃದ್ಧಿಯನ್ನು ಪ್ರಚುರಪಡಿಸುವ ಕೆಲಸ ಮಾಡಿರುವುದು ಅಭಿನಂದನೀಯ. ಇಂತಹ ನಾಯಕರು ಇನ್ನಷ್ಟು ಎತ್ತರಕ್ಕೆ ಏರಲಿ ಎಂದು ಹಾರೈಸಿದರು.
ಇದನ್ನೂ ಓದಿ: ಡಾ. ಸುಧಾಕರ್ ಚಿಕ್ಕಬಳ್ಳಾಪುರ ಜಿಲ್ಲೆಯ 3ನೇ ಭಾರತ ರತ್ನ; ದೇಶಕ್ಕೆ ಮೋದಿ, ರಾಜ್ಯಕ್ಕೆ ಸುಧಾಕರ್ -ಸಚಿವ ಮುನಿರತ್ನ ಬಣ್ಣನೆ
ಚಿಕ್ಕಬಳ್ಳಾಪುರ ಉತ್ಸವ ವೇದಿಕೆ ಕಾರ್ಯಕ್ರಮದಲ್ಲಿ ಕಿರುತೆರೆ ನಿರ್ದೇಶಕ ಸಿಹಿಕಹಿ ಚಂದ್ರು, ಒಗ್ಗರಣೆ ಖ್ಯಾತಿಯ ಮುರಳಿ, ಜಿಲ್ಲಾಧಿಕಾರಿ ಎನ್.ಎಂ. ನಾಗರಾಜ್, ಜಿಲ್ಲಾ ಪೊಲೀಸ್ ವರಿಷ್ಠಾಕಾರಿ ನಾಗೇಶ್, ಜಿಪಂ ಸಿಇಒ ಶಿವಶಂಕರ್ ಸೇರಿದಂತೆ ಸ್ಥಳಿಯ ಮುಖಂಡರು ಭಾಗವಹಿಸಿದ್ದರು.
ವರದಿ: ಭೀಮಪ್ಪ ಪಾಟೀಲ, ಟಿವಿ9 ಚಿಕ್ಕಬಳ್ಳಾಪುರ
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ