Chikkaballapura Ustava 2023: ಫ್ಲವರ್ ಶೋದಲ್ಲಿ ಅರಳಿದ ಐತಿಹಾಸಿಕ ಪ್ರಸಿದ್ದ ದೇವಸ್ಥಾನ, ಶಿವಲಿಂಗ, ನಂದಿ; ಇಲ್ಲಿದೆ ಫೋಟೋಗಳು
ಚಿಕ್ಕಬಳ್ಳಾಪುರ ನೂತನ ಜಿಲ್ಲೆಯಾಗಿ ಬರೋಬ್ಬರಿ 15 ವರ್ಷಗಳು ಕಳೆದ ನಂತರ ಇದೇ ಪ್ರಥಮ ಬಾರಿಗೆ ಅದ್ಧೂರಿಯಾಗಿ ಚಿಕ್ಕಬಳ್ಳಾಪುರ ಉತ್ಸವ ನಡೆಯುತ್ತಿದೆ.
Updated on:Jan 08, 2023 | 9:46 PM

ಚಿಕ್ಕಬಳ್ಳಾಪುರ ನೂತನ ಜಿಲ್ಲೆಯಾಗಿ ಬರೋಬ್ಬರಿ 15 ವರ್ಷಗಳು ಕಳೆದ ನಂತರ ಇದೇ ಪ್ರಥಮ ಬಾರಿಗೆ ಅದ್ಧೂರಿ ಚಿಕ್ಕಬಳ್ಳಾಪುರ ಉತ್ಸವ ನಡೆಸುವ ಯೋಗ ಕೂಡಿಬಂದಿದೆ. ಜನವರಿ 07 ರಿಂದ 14 ರವರೆಗೆ 7 ದಿನಗಳ ಕಾಲ ಉತ್ಸವ ನಡೆಯಲಿದೆ

ಚಿಕ್ಕಬಳ್ಳಾಪುರ ಉತ್ಸವ ಹಿನ್ನೆಲೆ ಚಿಕ್ಕಬಳ್ಳಾಪುರ ನಗರದ ಸೋಲಾಲಪ್ಪನ ದಿನ್ನೆಯಲ್ಲಿ ಕಲರ್ ಪುಲ್ ಫಲಪುಷ್ಪ ಪ್ರದರ್ಶನ ಏರ್ಪಡಿಸಿಲಾಗಿದೆ.

ಬರೋಬ್ಬರಿ ಎರಡುವರೆ ಲಕ್ಷ ಗುಲಾಬಿಗಳಲ್ಲಿ ಪುರಾಣ ಪ್ರಸಿದ್ದ ನಂದಿಯ ಶ್ರೀ ಭೋಗನಂದೀಶ್ವರ ದೇವಸ್ಥಾನವನ್ನು ನಿರ್ಮಾಣ ಮಾಡಲಾಗಿದೆ. ಕೆಂಪು ಗುಲಾಬಿಗಳ ಮಧ್ಯೆ, ಐದು ಕಲರ್ ಸೇವಂತಿ ಹೂಗಳನ್ನು ಬಳಸಿ ಗುಲಾಬಿ ದೇವಾಸ್ಥಾನ ಮಾಡಿರುವುದು ಸಾರ್ವಜನಿಕರ ಗಮನ ಸೆಳೆಯಿತು.

ಗುಲಾಬಿ ದೇವಸ್ಥಾನ ನಿರ್ಮಿಸಲು ಬೆಂಗಳೂರು ಮೂಲದ ಕಾಳಿದಾಸ ಹಾಗೂ ಜಗದೀಶ ಎನ್ನುಂಬವರ ತಂಡ, ಬರೋಬ್ಬರಿ 1 ವಾರಗಳ ಕಾಲ ಹಗಲು-ರಾತ್ರಿ ಶ್ರಮವಹಿಸಿ ಹೂಗಳಲ್ಲಿ ಅತ್ಯಾಕರ್ಷಕವಾಗಿ ತಯಾರಿಸಿದ್ದಾರೆ.

ದೇವಸ್ಥಾನದದ ಮುಖ್ಯದ್ವಾರ, ನಂದಿ ಹಾಗೂ ನಂದಿ ಮಂಟಪ ಹಾಗೂ ಶಿವಲಿಂಗ ಫಲಪುಷ್ಪ ಪ್ರದರ್ಶನಕ್ಕೆ ಬಂದವರ ಗಮನ ಸೆಳೆಯುತ್ತಿದೆ.

10 ಅಡಿಯ ಶಿವಲಿಂಗ ನೋಡುಗರಲ್ಲಿ ಭಕ್ತಿ-ಭಾವ ಮೂಡಿ ಬರುತ್ತಿದೆ.

ಹೂವಿನಲ್ಲಿ ಮಾವಿನ ಹಣ್ಣು ತಯಾರಾಗಿದೆ

ಹೂವಿನ ಮಕರಂದ ಹೀರುತ್ತಿರುವ ದುಂಬಿ

ಹೂ ಗೊಂಬೆ

ಮರಳಿನಲ್ಲಿ ಸರ್. ಎಮ್. ವಿಶ್ವೇಶ್ವರಯ್ಯ

ಮರಳಿನಲ್ಲಿ ನಾಡಪ್ರಭು ಕೆಂಪೇಗೌಡರು
Published On - 9:39 pm, Sun, 8 January 23




