ಅದು ಬಯಲು ಸೀಮೆಯ ಬರದ ನಾಡಿನ ಜಿಲ್ಲೆ. ಅಲ್ಲಿ ಯಾವಾಗಲೂ ನೀರಿಗಾಗಿಯೆ ಧರಣಿ, ಪ್ರತಿಭಟನೆ ಹೋರಾಟ ಬಂದ್ ಮಾಡುತ್ತಿದ್ದ ಜಿಲ್ಲೆ. ಅಲ್ಲಿಗೆ ಆ ನೀರು ಬರುತ್ತೆ ಈ ನೀರು ಬರುತ್ತೆ ಅಂತ ಸರ್ಕಾರ ಸಾವಿರಾರು ಕೋಟಿ ರೂಪಾಯಿ ಸುರಿದಿದೆ. ಆದ್ರೆ ಇದುವರೆಗೂ ಸಮರ್ಪಕವಾಗಿ ಯಾವುದೆ ನೀರಿನ ಮೂಲಗಳು ಅಲ್ಲಿಗೆ ಬಂದಿಲ್ಲ, ಆದ್ರೆ ಇತ್ತಿಚಿಗೆ ಸುರಿದ ಧಾರಾಕರ ಮಳೆಗೆ, ಜಿಲ್ಲೆಯ ಅತಿ ದೊಡ್ಡ ಕೆರೆಯೊಂದು ತುಂಬಿ ಎರಡು ಕಡೆ ಕೊಡಿ ನೀರು ಹರಿಯುತ್ತಿದೆ, ಇದ್ರಿಂದ ರೈತರು ಕೆರೆ ನೀರಿನಿಂದ ಬೆಳೆ ನಷ್ಟ ಆದ್ರು ಲೆಕ್ಕಿಸದೆ, ಕೆರೆ ಕೋಡಿ ನೀರನ್ನು ನೋಡಿ ಸಂತಸ ಸಂಭ್ರಮ ಆಚರಿಸುತ್ತಿದ್ದಾರೆ. ಅಷ್ಟಕ್ಕೂ ಅದೆಲ್ಲಿ ಅಂತೀರಾ ಈ ವರದಿ ಓದಿ (chikkaballapur rains).
ರಾಜಧಾನಿ ಬೆಂಗಳೂರಿನಲ್ಲಿ ಕಾವೇರಿ ನೀರಿನ ಜುಳು ಜುಳು ನಿನಾದ ಇದ್ರೂ ಪಕ್ಕದ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಮಾತ್ರ ಕಾವೇರಿ ನೀರಿನ ಸದ್ದೆ ಇಲ್ಲ, ಇದ್ರಿಂದ ಜಿಲ್ಲೆಯಲ್ಲಿ ಶಾಶ್ವತ ನೀರಿನ ಮೂಲಗಳಿಲ್ಲದೆ… ಅಂತರ್ಜಲ ಪಾತಾಳ ಸೇರಿತ್ತು… ಚಿಕ್ಕಬಳ್ಳಾಪುರ ಜಿಲ್ಲೆಯ ರೈತರ ಸಂಕಷ್ಟ ಅರಿತ ಮಳೆರಾಯ, ಇತ್ತಿಚಿಗೆ ಸಾಕು ಸಾಕು ಎನ್ನುವಷ್ಟು ಮಳೆ ಸುರಿಸಿದ್ದಾನೆ, ಇದ್ರಿಂದ ಚಿಕ್ಕಬಳ್ಳಾಪುರ ಜಿಲ್ಲೆಯ ಬಹುತೇಕ ಕೆರೆ ಕುಂಟೆ ನದಿ ನಾಲೆಗಳು ತುಂಬಿ ಹರಿಯುತ್ತಿವೆ. ಮತ್ತೊಂದೆಡೆ ಜಿಲ್ಲೆಯ ಅತಿ ದೊಡ್ಡ ಕೆರೆಯಾಗಿರುವ ಚಿಕ್ಕಬಳ್ಳಾಪುರದ ಅಮಾನಿ ಗೋಪಾಲ ಕೃಷ್ಣ ಕೆರೆ 45 ವರ್ಷಗಳ ನಂತರ ತುಂಬಿ ಕೆರೆಯ ಎರಡು ಕಡೆ ಕೊಡಿ ಹರಿಯುತ್ತಿದೆ. ಇದ್ರಿಂದ ರೈತರ ಮೊಗದಲ್ಲಿ ಸಂತಸ ಇಮ್ಮಡಿಯಾಗಿದೆ.
620 ಎಕರೆ ವಿಶಾಲವಾದ ಜಾಗದಲ್ಲಿ ಇರುವ ಅಮಾನಿ ಗೋಪಾಲಕೃಷ್ಣ ಕೆರೆ, 45 ವರ್ಷಗಳ ನಂತರ ಕೊಡಿ ಹರಿಯುತ್ತಿದೆ. ಇದ್ರಿಂದ ಕೆರೆಯ ಕಾಲುವೆ ಹೊಡೆದು ಕೆಲವೆಡೆ ರೈತರ ಜಮೀನುಗಳು ಜಲಾವೃತವಾಗಿ ಬೆಳೆದಿದ್ದ ಬೆಳೆಗಳು ಹಾಳಾಗಿವೆ, ಆದ್ರು ರೈತರು, ಹೊದ್ರೆ ಒಂದು ಬೆಳೆ ಹೊಗಲಿ ಇನ್ನೂ ಹತ್ತು ಬೆಳೆ ಬೆಳೆದು ನಿರಾಳರಾಗಬಹುದು ಅಂತ ಕೆರೆಯಲ್ಲಿ ನೀರು ನೋಡಿ ಸಂತಸಗೊಂಡಿದ್ದಾರೆ.
ಇನ್ನು ಚಿಕ್ಕಬಳ್ಳಾಪುರ ಜಿಲ್ಲೆಯ ಪ್ರಮುಖ ಜಲಾಶಯಗಳು, ಕೆರೆ ಕುಂಟೆ ನದಿ ನಾಲೆಗಳು ನೀರಿನಿಂದ ತುಂಬಿ ತುಳುಕುತ್ತಿದ್ದು, ಪಾತಾಳ ಸೇರಿದ್ದ ಅಂತರ್ಜಲ ಈಗ ಬೋರ್ ವೇಲ್ ಗಳಲ್ಲಿ ಉಕ್ಕಿ ಹರಿಯುತ್ತಿದೆ. ಇದ್ರಿಂದ ಜಲಾಶಯಗಳ ಸುತ್ತ ಪ್ರಕೃತಿ ಸೌಂದರ್ಯ ಮೇಳೈಸಿದೆ.
– ಭೀಮಪ್ಪ ಪಾಟೀಲ್, ಟಿವಿ9, ಚಿಕ್ಕಬಳ್ಳಾಪುರ
CuCumber Demand: ಚಿಕ್ಕಬಳ್ಳಾಫುರದ ಎಪಿಎಂಸಿ ಮಾರ್ಕೆಟ್ನಲ್ಲಿ ನುಗ್ಗೆಕಾಯಿ ರೇಟ್ ಎಷ್ಟು ಗೊತ್ತಾ?|Tv9 kannada
Published On - 12:09 pm, Tue, 7 December 21