ಮದ್ವೆಯಾಗಲು ನಿರಾಕರಿಸಿದ ಸೊಸೆ ಮೇಲೆ ಆ್ಯಸಿಡ್ ಎರಚಿ ತಾನೂ ಆತ್ಮಹತ್ಯೆಗೆ ಯತ್ನಿಸಿದ ಸೋದರ ಮಾವ‌

ಮದುವೆಯಾಗಲು ನಿರಾಕರಿಸಿದ ಸೊಸೆ ಮೇಲೆಯೇ ಸೋದರ ಮಾವ‌ ಟಾಯ್ಲೆಟ್ ಕ್ಲೀನರ್ ಆ್ಯಸಿಡ್ ಎರಚಿದ್ದಾನೆ. ಆ್ಯಸಿಡ್​ ಎರಚಿ ನಂತರ ಭಯಗೊಂಡು ಸೋದರ ಮಾವನೂ ಸಹ ಸೊಸೆ ಮನೆ ಮುಂದೆಯೇ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಅದೃಷ್ಟವಶಾತ್ ಸೊಸೆ ಪ್ರಾಣಾಪಾಯದಿಂದ ಪಾರಾಗಿದ್ದರೆ, ಸೋದರ ಮಾವ ಸುಟ್ಟ ಗಾಯಗಳಿಂದ ಬಳಲುತ್ತಿದ್ದಾನೆ.

ಮದ್ವೆಯಾಗಲು ನಿರಾಕರಿಸಿದ ಸೊಸೆ ಮೇಲೆ ಆ್ಯಸಿಡ್ ಎರಚಿ ತಾನೂ ಆತ್ಮಹತ್ಯೆಗೆ ಯತ್ನಿಸಿದ ಸೋದರ ಮಾವ‌
ಪ್ರಾತಿನಿಧಿಕ ಚಿತ್ರ
Updated By: ರಮೇಶ್ ಬಿ. ಜವಳಗೇರಾ

Updated on: Jul 08, 2025 | 7:09 PM

ಚಿಕ್ಕಬಳ್ಳಾಪುರ, (ಜುಲೈ 08): ಮದುವೆಯಾಗಲು ನಿರಾಕರಿಸುತ್ತಿದ್ದಾಳೆಂದು ಕೋಪಗೊಂಡ ಸೋದರ ಮಾವ, ಸೊಸೆ ಮೇಲೆಯೇ ಟಾಯ್ಲೆಟ್ ಕ್ಲೀನರ್ ಆ್ಯಸಿಡ್ ಎರಚಿರುವ (acid attack) ಘಟನೆ ಚಿಕ್ಕಬಳ್ಳಾಪುರ(Chikkaballapu)  ತಾಲೂಕಿನ ಮಂಚನಬಲೆ ಗ್ರಾಮದಲ್ಲಿ ನಡೆದಿದೆ. ಚಿಕ್ಕಬಳ್ಳಾಪುರ ಜಿಲ್ಲೆ ಶಿಡ್ಲಘಟ್ಟ ತಾಲೂಕಿನ ಬಶೆಟ್ಟಿಹಳ್ಳಿ ನಿವಾಸಿ ಅನಂದ್ ಕುಮಾರ್ ಎನ್ನುವಾತ  ಸೊಸೆ ವೈಶಾಲಿ(ಅತ್ತೆ ಮಗಳು) ಮೇಲೆ ಆ್ಯಸಿಡ್ ದಾಳಿ ಮಾಡಿದ್ದಾನೆ. ಬಳಿಕ ಆನಂದ್ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾನೆ.  ಸದ್ಯ  ವೈಶಾಲಿಯನ್ನು ಚಿಕ್ಕಬಳ್ಳಾಪುರ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದ್ದು, ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾಳೆ. ಇನ್ನು ಆತ್ಮಹತ್ಯೆಗೆ ಯತ್ನಿಸಿದ ಸೋದರ ಮಾವ ಆನಂದ್ ಸಹ ಸುಟ್ಟ ಗಾಯಗಳಿಂದ ಬಳಲುತ್ತಿದ್ದಾನೆ.

ಚಿಕ್ಕಬಳ್ಳಾಪುರ ಜಿಲ್ಲೆ ಶಿಡ್ಲಘಟ್ಟ ತಾಲೂಕಿನ ಬಶೆಟ್ಟಿಹಳ್ಳಿ ನಿವಾಸಿ ಅನಂದ್ ಕುಮಾರನಿಗೆ ವೈಶಾಲಿ ಅತ್ತೆ ಮಗಳು ಆಗಿದ್ದು,  ಈಕೆಯನ್ನೇ ಪ್ರೀತಿಸುತ್ತಿದ್ದ. ಅಲ್ಲದೇ ಮದುವೆ ಮಾಡಿಕೊಳ್ಳವ ಕನಸು ಕಂಡಿದ್ದ.ಆದ್ರೆ, ಇದಕ್ಕೆ ವೈಶಾಲಿ ನಿರಾಕರಿಸಿದ್ದಾಳೆ.  ಇದರಿಂದ ಕೋಪಗೊಂಡ  ಆನಂದ್, ಇಂದು ಜುಲೈ 08) ಅತ್ತೆ ಮನೆ ಬಳಿ ಬಂದು ಸೊಸೆ ವೈಶಾಲಿ ಮೇಲೆ ಆ್ಯಸಿಡ್ ದಾಳಿ ಮಾಡಿದ್ದಾನೆ. ಬಳಿಕ ಭಯಗೊಂಡು ತಾನೂ ಸಹ ಬೆಂಕಿ ಹಚ್ಚಿಕೊಂಡು ಆತ್ಮಹತ್ಯಗೆ ಯತ್ನಿಸಿದ್ದಾನೆ.

ಇದನ್ನೂ ಓದಿ:  ವಿದ್ಯಾರ್ಥಿನಿ ಮೇಲೆ ಕ್ಲರ್ಕ್ ಅತ್ಯಾಚಾರ: ಪರೀಕ್ಷೆ ಗೈಡ್ ಮಾಡ್ತೇನೆಂದು ಬಲೆಗೆ ಬೀಳಿಸಿಕೊಂಡಿದ್ದ SDA

ವೈಶಾಲಿ ಹಾಗೂ ಆನಂದ್​ ಕುಮಾರನನ್ನು ಚಿಕ್ಕಬಳ್ಳಾಪುರ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದ್ದು, ಅದೃಷ್ಟವಶಾತ್ ವೈಶಾಲಿ ಪ್ರಾಣಾಪಾಯದಿಂದ ಪಾರಾಗಿದ್ದಾಳೆ. ಇನ್ನು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದ ಆನಂದ್ ಗೆ​​ ತೀವ್ರ ಸುಟ್ಟ ಗಾಯಗಳಾಗಿದ್ದು, ಚಿಕಿತ್ಸೆ ಮುಂದುವರೆದಿದೆ.

ಆಟೋ ಡಿಕ್ಕಿಯಾಗಿ ಬೈಕ್ ಸವಾರ ಸಾವು

ಇನ್ನು ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ತಾಲೂಕಿನ ಕೂಡಮಲಕುಂಟೆದಲ್ಲಿ ಆಟೋ ಹಾಗೂ ಬೈಕ್ ನಡುವೆ ಅಪಘಾತ ಸಂಭವಿಸಿದ್ದು, ಘಟನೆಯಲ್ಲಿ ಬೈಕ್ ಸವಾರ ಸಾವನ್ನಪ್ಪಿದ್ದಾನೆ. ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ತಾಲೂಕಿನ ಕೂಡಮಲಕುಂಟೆ. ಕೂಡಮಲಕುಂಟೆ ಕೈಗಾರಿಕಾ ಪ್ರದೇಶದಲ್ಲಿ ಆಟೋ ಬೈಕ್ ಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಬೈಕ್ ಸವಾರ ಶಿವಶಂಕರ(20) ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಈ ಸಂಬಂಧ ಗೌರಿಬಿದನೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 7:06 pm, Tue, 8 July 25