ಅಯ್ಯಪ್ಪಸ್ವಾಮಿ‌ ಮಾಲಾಧಾರಿಗಳ ಮೇಲೆ ಹರಿದ ಕಾರು; ಒಬ್ಬರು ಸಾವು, ಇನ್ನೊಬ್ಬರಿಗೆ ಗಂಭೀರ ಗಾಯ!

ಅಯ್ಯಪ್ಪಸ್ವಾಮಿ‌ ಮಾಲೆ ಧರಿಸಿದ್ದ ಸುಮಾರು 30 ಕ್ಕೂ ಹೆಚ್ಚು ಜನ ಅಯ್ಯಪ್ಪಸ್ವಾಮಿ‌ ಭಕ್ತರು, ಆಂಧ್ರದ ಅನಂತಪುರ ಜಿಲ್ಲೆಯ ಹಿಂದೂಪುರ ಪಟ್ಟಣದಿಂದ ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ಕಡೆಗೆ ಕಾಲ್ನಡಿಗೆಯಲ್ಲಿ ಪಾದಯಾತ್ರೆ ಹೊರಟಿದ್ದರು. ಇದೇ ವೇಳೆ ಚೌಳೂರು ಕಡೆಯಿಂದ ಬಂದ ಕಾರು, ಏಕಾಏಕಿ ಅಯ್ಯಪ್ಪ ಸ್ವಾಮಿ‌ ಮಾಲಾಧಾರಿಗಳ‌‌ ಮೇಲೆ ಹರಿದಿದೆ.

ಅಯ್ಯಪ್ಪಸ್ವಾಮಿ‌ ಮಾಲಾಧಾರಿಗಳ ಮೇಲೆ ಹರಿದ ಕಾರು; ಒಬ್ಬರು ಸಾವು, ಇನ್ನೊಬ್ಬರಿಗೆ ಗಂಭೀರ ಗಾಯ!
ಚಿಕ್ಕಬಳ್ಳಾಪುರ
Edited By: ಕಿರಣ್ ಹನುಮಂತ್​ ಮಾದಾರ್

Updated on: Dec 10, 2023 | 6:34 PM

ಚಿಕ್ಕಬಳ್ಳಾಪುರ, ಡಿ.10: ಜಿಲ್ಲೆಯ ಗೌರಿಬಿದನೂರು(Gauribidanur) ತಾಲ್ಲೂಕಿನ ಆಂಧ್ರ ಪ್ರದೇಶ- ಕರ್ನಾಟಕ ಗಡಿನಾಡು ‌ವಿದುರಾಶ್ವತ್ಥ ಗ್ರಾಮದ ಬಳಿ ಕಾಲ್ನಡಿಗೆಯಲ್ಲಿ ಪಾದಯಾತ್ರೆ ಹೊರಟಿದ್ದ ಅಯ್ಯಪ್ಪಸ್ವಾಮಿ‌ ಮಾಲಾಧಾರಿ (Ayyappaswamy Maladhari)ಗಳ ಮೇಲೆ ಕಾರೊಂದು ಹರಿದ ಪರಿಣಾಮ ಓರ್ವ ವ್ಯಕ್ತಿ ಮೃತಪಟ್ಟಿದ್ದು, ಇಬ್ಬರು ತೀವ್ರವಾಗಿ ಗಾಯಗೊಂಡಿರುವ ಘಟನೆ ನಡೆದಿದೆ.

ಅಯ್ಯಪ್ಪಸ್ವಾಮಿ‌ ಮಾಲೆ ಧರಿಸಿದ್ದ ಸುಮಾರು 30 ಕ್ಕೂ ಹೆಚ್ಚು ಜನ ಅಯ್ಯಪ್ಪಸ್ವಾಮಿ‌ ಭಕ್ತರು, ಆಂಧ್ರದ ಅನಂತಪುರ ಜಿಲ್ಲೆಯ ಹಿಂದೂಪುರ ಪಟ್ಟಣದಿಂದ ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ಕಡೆಗೆ ಕಾಲ್ನಡಿಗೆಯಲ್ಲಿ ಪಾದಯಾತ್ರೆ ಹೊರಟಿದ್ದರು. ಇದೇ ವೇಳೆ ಚೌಳೂರು ಕಡೆಯಿಂದ ಬಂದ ಕಾರು, ಏಕಾಏಕಿ ಅಯ್ಯಪ್ಪ ಸ್ವಾಮಿ‌ ಮಾಲಾಧಾರಿಗಳ‌‌ ಮೇಲೆ ಹರಿದಿದೆ. ಈ ಘಟನೆಯಲ್ಲಿ ವೆಂಕಟೇಶ್ ಎನ್ನುವ 55 ವರ್ಷದ ವ್ಯಕ್ತಿಯೊರ್ವ ಸ್ಥಳದಲ್ಲಿ ಮೃತಪಟ್ಟಿದ್ದು, ಪ್ರಹ್ಲಾದ್ (36) ಹಾಗೂ ಮಣಿಕಂಠ (26) ಎನ್ನುವವರಿಗೆ ಗಂಭೀರ ಗಾಯಗಳಾಗಿವೆ. ಇಬ್ಬರು ಗಾಯಾಳುಗಳನ್ನು ಗೌರಿಬಿದನೂರು ಸಾರ್ವಜನಿಕ ‌ಆಸ್ಪತ್ರೆಗೆ ದಾಖಲಿಸಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಗ್ರಾಮಾಂತರ ಗ್ರಾಮಾಂತರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದಾರೆ.

ಇದನ್ನೂ ಓದಿ:ಮುಲ್ಕಿ ಬಳಿ ಸರಣಿ ಅಪಘಾತ ಪ್ರಕರಣ; ಲಾರಿ ಚಾಲಕನ ಬಂಧನ, ಇಲ್ಲಿದೆ ಅಪಘಾತದ ಭಯಾನಕ ವಿಡಿಯೋ

ಬೆಳಗಾವಿ: ಜಿಲ್ಲೆಯ ಹುಕ್ಕೇರಿ ಪಟ್ಟಣದಲ್ಲಿರುವ ಗ್ರಾಮೀಣ ವಿದ್ಯುತ್ ಸಹಕಾರಿ ಸಂಘ ಆವರಣದಲ್ಲಿ ಆಕಸ್ಮಿಕ ಅಗ್ನಿ ಅವಘಡ ಸಂಭವಿಸಿದೆ. ಹಳೆಯ ಟಿಸಿ, ಗುಜರಿ ವಸ್ತುಗಳು ಬೆಂಕಿಗಾಹುತಿಯಾಗಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಕೂಡಲೇ ಸ್ಥಳಕ್ಕೆ ಬಂದ ಅಗ್ನಿಶಾಮಕ ದಳದ ಸಿಬ್ಬಂದಿಗಳು, ಬೆಂಕಿ ನಂದಿಸಿದ್ದಾರೆ. ಈ ಕುರಿತು ಹುಕ್ಕೇರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 6:32 pm, Sun, 10 December 23

Bheemappa Patil

ಚಿಕ್ಕಬಳ್ಳಾಪುರ ಎಂಬ ಸುಂದರ ಊರು ನನಗೆ ಸುಂದರವಾದ ಬದುಕನ್ನು ಕಟ್ಟಿಕೊಟ್ಟಿದೆ. 18 ವರ್ಷಗಳಿಂದ ಹಗಲುರಾತ್ರಿ ಟಿವಿ9 ಕನ್ನಡ ಸುದ್ದಿವಾಹಿನಿಯಲ್ಲಿ ಹಿರಿಯ ವರದಿಗಾರನಾಗಿ ಜನ ಸೇವೆಯಲ್ಲಿದ್ದೇನೆ. ಶಿಕ್ಷಣವೆಲ್ಲ ಬೆಂಗಳೂರಿನಲ್ಲಿ. ಸರ್ಕಾರಿ ಚಲನಚಿತ್ರ ಮತ್ತು ದೂರದರ್ಶನ ಸಂಸ್ಥೆಯಲ್ಲಿ ಪದವಿ. ಬೆಂಗಳೂರು ವಿವಿಯಲ್ಲಿ ಬಿ.ಸಿ.ಎ ವ್ಯಾಸಂಗ. ವಿದ್ಯಾರ್ಥಿದೆಸೆಯಿಂದಲೆ ಟಿವಿ9 ಕನ್ನಡದಲ್ಲಿ ಕೆಲಸ.

Read More
Follow Us