ಚಿಕ್ಕಬಳ್ಳಾಪುರ: ಗೆಳೆತನ ಅಥವಾ ದೋಸ್ತಿ ಎಷ್ಟು ಪವಿತ್ರವಾದದ್ದು ಎಂದರೆ ದೋಸ್ತಿಗಾಗಿ ಏನನ್ನು ಬೇಕಾದರು ಮಾಡಲು ಸಿದ್ಧವಿರುವವರು ಕಾಣಸಿಗುತ್ತಾರೆ. ಆದರೆ ಚಿಕ್ಕಬಳ್ಳಾಪುರ ನಗರದಲ್ಲಿ ಸ್ನೇಹಿತನ ಆಸೆ ಈಡೇರಿಸಲು ಹೋದ ವ್ಯಕ್ತಿಯೋರ್ವ ಮರಳಿ ಬಾರದ ಲೋಕಕ್ಕೆ ಹೋದ ದುರ್ಘಟನೆ ನಡೆದಿದೆ. ಸ್ನೇಹಿತ ಬಾಬು ಎಂಬ ವ್ಯಕ್ತಿಗೆ ಮೀನು ಎಂದರೆ ಬಹಳವೇ ಇಷ್ಟವಿತ್ತಂತೆ. ಬಾಬುವಿನ ಗೆಳೆಯ ಬಾಪೂಜಿ ನಗರದ ನಿವಾಸಿ ಶಾಂತ್ ರಾಜ್. ಬಾಬುವಿಗೆ ಮೀನು ಹಿಡಿದು ತರಲೆಂದು ಶಾಂತ್ ರಾಜ್ ಚಿಕ್ಕಬಳ್ಳಾಪುರ ನಗರದ ಕಂದವಾರ ಕೆರೆಯಲ್ಲಿ ಇಳಿದಿದ್ದಾರೆ. ಆದರೆ ದುರದೃಷ್ಟವಷಾತ್ ಶಾಂತ್ ರಾಜ್ ಕೆರೆಯಲ್ಲಿಯೆ ಮುಳುಗಿಹೋಗಿದ್ದಾರೆ. ಗೆಳೆಯನ ಮೀನು ತಿನ್ನುವ ಆಸೆ ತೀರಿಸಲೋಸುಗ ಮೀನು ಹಿಡಿಯಲು ಹೋಗಿದ್ದ ವ್ಯಕ್ತಿ ಸಾವನ್ನಪ್ಪಿದ್ದಾರೆ ಎಂದು ಹೇಳಲಾಗಿದೆ. ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿ ಪ್ರಕರಣ ದಾಖಲಾಗಿದ್ದು, ಈಕುರಿತು ಸತ್ಯಾಸತ್ಯತೆ ತನಿಖೆಯ ನಂತರವೇ ತಿಳಿದುಬರಬೇಕಿದೆ.
ಗ್ಯಾಸ್ ಗೀಸರ್ ಸೋರಿಕೆಯಿಂದ ಉಸಿರುಗಟ್ಟಿ ವಿದ್ಯಾರ್ಥಿನಿ
ಗ್ಯಾಸ್ ಗೀಸರ್ ಸೋರಿಕೆಯಾಗಿ ಉಸಿರುಗಟ್ಟಿ ಎಂಬಿಬಿಎಸ್ ವಿದ್ಯಾರ್ಥಿನಿಯೋರ್ವಳು ಸಾವನ್ನಪ್ಪಿದ ಘಟನೆ ಬೆಂಗಳೂರಿನ ಮಹಾಲಕ್ಷ್ಮೀ ಲೇಔಟ್ನಲ್ಲಿ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ. ಸಂಪದ (23) ವರ್ಷದ ಅಂತಿಮ ವರ್ಷದ ಎಂಬಿಬಿಎಸ್ ವಿದ್ಯಾರ್ಥಿನಿಯೇ ಮೃತಪಟ್ಟ ದುರ್ದೈವಿ. ಸೆಪ್ಟೆಂಬರ್ 4ರಂದು ಸ್ನಾನಕ್ಕೆ ತೆರಳಿದ್ದಾಗ ವಿದ್ಯಾರ್ಥಿನಿ ಕಾರ್ಬನ್ ಮಾನಾಕ್ಸೈಡ್ ಸೋರಿಕೆಯಾಗಿ ಉಸಿರುಗಟ್ಟಿ ಸಾವನ್ನಪ್ಪಿದ್ದು ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಸ್ನಾನ ಮಾಡಲು ಮಧ್ಯಾಹ್ನ 12.30ಕ್ಕೆ ಬಾತ್ರೂಂಗೆ ಹೋಗಿದ್ದ ವಿದ್ಯಾರ್ಥಿನಿ 2 ಗಂಟೆಯಾದರೂ ಹೊರಬಂದಿರಲಿಲ್ಲ. ಅನುಮಾನದಿಂದ ಬಾತ್ರೂಮ್ ಬಾಗಿಲು ಒಡೆದು ನೋಡಿದಾಗ ಪ್ರಜ್ಞೆತಪ್ಪಿ ಬಿದ್ದಿರುವುದು ಕಂಡಿತ್ತು. ತಕ್ಷಣವೇ ವಿದ್ಯಾರ್ಥಿನಿ ಸಂಪದಾಳನ್ನು ಆಸ್ಪತ್ರೆಗೆ ಕರೆತಂದರೂ ಮಾರ್ಗಮಧ್ಯೆಯೇ ಆಕೆ ಸಾವನ್ನಪ್ಪಿದ್ದಾಳೆ. ಮಹಾಲಕ್ಷ್ಮೀ ಲೇಔಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಫೋನ್ ಚಾರ್ಜ್ ಹಾಕುವಾಗ ಹಾವು ಕಡಿದು ಗಾಯ
ಕೊಪ್ಪಳ: ಫೋನ್ ಚಾರ್ಜ್ ಹಾಕುವಾಗ ಹಾವು ಕಚ್ಚಿ ವಿದ್ಯಾರ್ಥಿಯೋರ್ವ ಗಾಯಗೊಂಡ ಘಟನೆ ಕೊಪ್ಪಳ ಜಿಲ್ಲೆ ಗಂಗಾವತಿ ಕಲ್ಮಠ ಖಾಸಗಿ ITI ಕಾಲೇಜಿನಲ್ಲಿ ನಡೆದಿದೆ. ಗವಿಸ್ವಾಮಿ(18) ಹಾವು ಕಡಿತಕ್ಕೊಳಗಾದ ವಿದ್ಯಾರ್ಥಿ. ಪೋನ್ ಚಾರ್ಜ್ ಹಾಕುವಾಗ ಸ್ವಿಚ್ ಬೋರ್ಡ್ನಲ್ಲಿ ಹೊಕ್ಕಿ ಕುಳಿತಿದ್ದ ಹಾವು ವಿದ್ಯಾರ್ಥಿಯನ್ನು ಕಚ್ಚಿದೆ. ಇದನ್ನು ತಿಳಿದ ಗವಿಸ್ವಾಮಿಯ ಸ್ನೇಹಿತರು ತಕ್ಷಣವೇ ಆಸ್ಪತ್ರೆಗೆ ದಾಖಲಿಸಿದ್ದಾರೆ.ಸದ್ಯ ಪ್ರಾಣಾಪಾಯದಿಂದ ವಿದ್ಯಾರ್ಥಿ ಬಚಾವಾಗಿದ್ದು, ವೈದ್ಯರು ಚಿಕಿತ್ಸೆ ಮುಂದುವರೆಸಿದ್ದಾರೆ.
ಇದನ್ನೂ ಓದಿ:
(Chikkaballapur A man who crumbled to catch fish to satisfy his friends desire to eat has died)