ಮಾರುಕಟ್ಟೆಯಲ್ಲಿ ಹೆಚ್ಚಾಗುತ್ತಿದೆ ನಕಲಿ ಕೊವಿಡ್​ 19 ಲಸಿಕೆಗಳ ಹಾವಳಿ; ಅಸಲಿ..ನಕಲಿ ಪತ್ತೆ ಹಚ್ಚೋದು ಹೇಗೆ? ಇಲ್ಲಿದೆ ಮಾಹಿತಿ

Covid 19 Vaccine: ಇದೀಗ ಕೇಂದ್ರ ಸರ್ಕಾರ ರೂಪಿಸಿರುವ ಪ್ಯಾರಾಮೀಟರ್ ಯುಕ್ತ ಮಾರ್ಗಸೂಚಿ​, ಕೊವಿಡ್​ ಲಸಿಕೆ ನಕಲಿಯೋ..ಅಸಲಿಯೋ ಎಂಬುದನ್ನು ಪತ್ತೆ ಮಾಡಲು ಸಹಾಯ ಮಾಡುತ್ತದೆ.

ಮಾರುಕಟ್ಟೆಯಲ್ಲಿ ಹೆಚ್ಚಾಗುತ್ತಿದೆ ನಕಲಿ ಕೊವಿಡ್​ 19 ಲಸಿಕೆಗಳ ಹಾವಳಿ; ಅಸಲಿ..ನಕಲಿ ಪತ್ತೆ ಹಚ್ಚೋದು ಹೇಗೆ? ಇಲ್ಲಿದೆ ಮಾಹಿತಿ
ಸಾಂಕೇತಿಕ ಚಿತ್ರ
Follow us
TV9 Web
| Updated By: Lakshmi Hegde

Updated on:Sep 05, 2021 | 4:18 PM

ದೆಹಲಿ: ಕೊವಿಶೀಲ್ಡ್​ ಲಸಿಕೆಯ ನಕಲಿ ಆವೃತ್ತಿಗಳು ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಸಿಗುತ್ತಿರುವ ವರದಿಗಳು ಬಂದ ಬೆನ್ನಲ್ಲೇ ವಿಶ್ವ ಆರೋಗ್ಯ ಸಂಸ್ಥೆ ಕೂಡ ಆತಂಕ ವ್ಯಕ್ತಪಡಿಸಿತ್ತು. ಇದೀಗ ಕೇಂದ್ರ ಸರ್ಕಾರ ನಕಲಿ ಮತ್ತು ಅಸಲಿ ಲಸಿಕೆ ಕಂಡು ಹಿಡಿಯುವ ಸಂಬಂಧ ಪ್ಯಾರಾಮೀಟರ್​ಗಳನ್ನು ಸೂಚಿಸಿದೆ. ಇದೀಗ ಭಾರತದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ನೀಡಲಾಗುತ್ತಿರುವ ಕೊವಿಶೀಲ್ಡ್​, ಕೊವ್ಯಾಕ್ಸಿನ್​ ಮತ್ತು ಸ್ಪುಟ್ನಿಕ್​ ಕೊವಿಡ್​ 19 ಲಸಿಕೆಗಳ ಅಸಲಿ ಮತ್ತು ನಕಲಿ ಆವೃತ್ತಿಗಳನ್ನು ಗುರುತಿಸಲು ಕೇಂದ್ರ ಸರ್ಕಾರ ಮಾರ್ಗಸೂಚಿ ಬಿಡುಗಡೆ ಮಾಡಿದ್ದು, ನಕಲಿ ಲಸಿಕೆಗಳ ಬಗ್ಗೆ ಎಚ್ಚರವಾಗಿರುವಂತೆ ರಾಜ್ಯಗಳಿಗೆ ಸೂಚನೆ ನೀಡಿದೆ.

ಇದೀಗ ಮಾಡಿರುವ ಪ್ಯಾರಾಮೀಟರ್​, ಕೊವಿಡ್​ ಲಸಿಕೆ ನಕಲಿಯೋ..ಅಸಲಿಯೋ ಎಂಬುದನ್ನು ಪತ್ತೆ ಮಾಡಲು ಸಹಾಯ ಮಾಡುತ್ತದೆ. ಹಾಗೇ, ಕೊವಿಶೀಲ್ಡ್​, ಕೊವ್ಯಾಕ್ಸಿನ್​ ಮತ್ತು ಸ್ಪುಟ್ನಿಕ್​ ವಿ ತಯಾರಕ ಕಂಪನಿಗಳಿಗೂ ಮಾಹಿತಿ ನೀಡಲಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ರಾಜ್ಯ ಸರ್ಕಾರಗಳಿಗೆ ಪತ್ರ ಬರೆದಿದೆ.

ಇಲ್ಲಿದೆ ನೋಡಿ..ಲಸಿಕೆಗಳ ಹೆಸರು ಮತ್ತು ಅವು ಅಸಲಿಯೋ, ನಕಲಿಯೋ ಎಂದು ಪತ್ತೆ ಹಚ್ಚಲು ಕೇಂದ್ರ ಸರ್ಕಾರ ಸೂಚಿಸುವ ಪ್ಯಾರಾಮೀಟರ್​..

ಕೊವಿಶೀಲ್ಡ್​ 1. ಎಸ್​ಐಐ (SII) ಉತ್ಪನ್ನದ ಲೇಬಲ್​ 2. ಅನುಮೋದಿಸಲಾದ ಆರ್ಟ್​ ವರ್ಕ್​ ಪ್ರಕಾರ ಕೊವಿಶೀಲ್ಡ್ ಲಸಿಕೆಯ ಮೇಲಿನ ಲೇಬಲ್​ ಬಣ್ಣ ಕಡು ಹಸಿರಾಗಿ (Shade: Pantone 355C) ಇರುತ್ತದೆ. 3. ಟ್ರೇಡ್​ ಮಾರ್ಕ್ ಹೊಂದಿರುವ ಬ್ರ್ಯಾಂಡ್​​ ಹೆಸರನ್ನು ಉಲ್ಲೇಖಿಸಲಾಗುತ್ತದೆ. ಉದಾಹರಣೆಗೆ COVISHIELD. 4.ಜನರಿಕ್​ ಹೆಸರು ಅನ್​ಬೋಲ್ಡ್​ ಆಗಿರುತ್ತದೆ. 5. Recombinant ಎಂಬುದು ಜನರಿಕ್ ಹೆಸರಿನ ಕೊನೆಯಲ್ಲಿ ಪ್ರಿಂಟ್​ ಆಗಿರುತ್ತದೆ. 6. ಸಿಜಿಎಸ್​ ನಾಟ್​ ಫಾರ್ ಸೇಲ್​  (CGS NOT FOR SALE) ಎಂದು ಬರೆಯಲಾಗಿದೆ. ಆದರೆ ಇದು ಅಕ್ಷರಗಳ ಕೆಳಗೆ ಪ್ರಿಂಟ್​ ಆಗಿದೆ (Over Print). 7. SII ಲೋಗೋವನ್ನು ಮುದ್ರಿಸಲು ಪ್ರಿಂಟಿಂಗ್​ ಮಶಿನ್​ನಲ್ಲಿ ಸುಧಾರಿತ ವ್ಯವಸ್ಥೆ ಅಳವಡಿಸಿಕೊಳ್ಳಲಾಗಿದ್ದರಿಂದ ಲೋಗೋ ವಿಭಿನ್ನವಾಗಿ ಪ್ರಿಂಟ್ ಆಗಿದೆ. ಹಾಗೇ, ಒಂದು ನಿರ್ಧಿಷ್ಟ ಸ್ಥಾನದಲ್ಲಿ, ನಿರ್ಧಿಷ್ಟ ಭಂಗಿಯಲ್ಲಿ ಲೋಗೋವನ್ನು ಇಡಲಾಗಿದ್ದು ಅದನ್ನು ಬೇರೆಯವರು ಅನುಕರಿಸಲು ಸಾಧ್ಯವಿಲ್ಲ. ಲಸಿಕೆ ಬಗ್ಗೆ ಎಲ್ಲ ವಿವರ ಗೊತ್ತಿರುವ ಕೆಲವೇ ಕೆಲವು ಮಂದಿ ಮಾತ್ರ ಇದನ್ನು ಗುರುತಿಸಬಹುದಾಗಿದೆ. 8. ಲೇಬಲ್​ ಮೇಲೆ ಬಿಳಿಬಣ್ಣದಲ್ಲಿ, ಸ್ಪಷ್ಟವಾಗಿ, ಓದಲು ಸಾಧ್ಯವಾಗುವಂತೆ ಅಕ್ಷರಗಳನ್ನು ಬರೆಯಲಾಗಿದೆ. 9. ಬಾಕ್ಸ್​ ಮೇಲಿನ ಸಂಪೂರ್ಣ ಲೇಬಲ್​ ಒಂದು ಜೇನುಗೂಡಿನ ಆಕೃತಿಯಲ್ಲಿದೆ. ಅದಕ್ಕೊಂದು ನಿರ್ದಿಷ್ಟ ಅಳತೆಯಿದೆ.

ಕೊವ್ಯಾಕ್ಸಿನ್​ 1. ಲೇಬಲ್​ ಮೇಲೆ, ಕಣ್ಣಿಗೆ ಕಾಣದ ಯುವಿ ಹೆಲಿಕ್ಸ್​ (ಡಿಎನ್​ಎ ಮಾದರಿ ರಚನೆ) ಇರುತ್ತದೆ. ಈ ರಚನೆ ಯುವಿ ಬೆಳಕಿನಲ್ಲಿ ಮಾತ್ರ ಕಾಣುತ್ತದೆ. 2. ಲೇಬಲ್​ ಕ್ಲೇಮ್ಸ್​ನಲ್ಲಿರುವ ಡಾಟ್ಸ್​ಗಳಲ್ಲಿ, ಅತಿಸಣ್ಣ ಅಕ್ಷರದಲ್ಲಿ COVAXIN ಎಂದು ಬರೆಯಲಾಗಿದ್ದು, ಇದು ಮರೆಮಾಚಿದ ರೂಪದಲ್ಲಿದೆ. 3. ಕೊವ್ಯಾಕ್ಸಿನ್​ (COVAXIN)ನಲ್ಲಿ ಎಕ್ಸ್​ ಪದದ ಒಂದು ಬದಿಗೆ ಹಸಿರು ಬಣ್ಣ ನೀಡಲಾಗಿದೆ. 4. COVAXIN ಶಬ್ದಕ್ಕೆ ಹೊಲೊಗ್ರಾಫಿಕ್​ ಎಫೆಕ್ಟ್​ ನೀಡಲಾಗಿದೆ. ಅಂದರೆ ಎದ್ದು ಕಾಣುವಂತೆ ಆಯಾಮಗಳನ್ನು ಕೊಟ್ಟು ಬರೆಯಲಾಗಿದೆ.

ಸ್ಪುಟ್ನಿಕ್​ ವಿ 1. ಇದು ರಷ್ಯಾದಿಂದ ಆಮದುಗೊಂಡ ಲಸಿಕೆ. ಸ್ಪುಟ್ನಿಕ್​ ವಿಯನ್ನು ರಷ್ಯಾದ ಎರಡು ವಿಭಿನ್ನ ಬೃಹತ್​ ಉತ್ಪಾದನಾ ಸೈಟ್​ಗಳಿಂದ ಆಮದು ಮಾಡಿಕೊಳ್ಳಲಾಗಿದೆ. ಹಾಗಾಗಿ ಎರಡೂ ತಾಣಗಳ ಲಸಿಕೆಗಳ ಮೇಲೆ ಆಯಾ ಸೈಟ್​ಗಳಿಗೆ ಸಂಬಂಧಪಟ್ಟ ಬೇರೆ ಬೇರೆ ವಿಧದ ಲೇಬಲ್​ಗಳಿವೆ. ಆದರೆ ವಿನ್ಯಾಸ, ಮಾಹಿತಿಗಳು ಎರಡರ ಮೇಲೆಯೂ ಒಂದೇ ತೆರನಾಗಿ ಇವೆ. ತಯಾರಕರ ಹೆಸರು ಮಾತ್ರ ಬೇರೆ ಇರುತ್ತದೆ. 2. ಸ್ಪುಟ್ನಿಕ್​ ವಿ ಲಸಿಕೆಯ ಒಂದು ಬಾಕ್ಸ್​ನಲ್ಲಿ 5 ಅಂಪೌಲ್​​​​ಗಳಿರುತ್ತವೆ. ಈ ಬಾಕ್ಸ್​ನ ಹಿಂಭಾಗ ಮತ್ತು ಮುಂಭಾಗದಲ್ಲಿ ಇಂಗ್ಲಿಷ್​ ಅಕ್ಷರಗಳಿದ್ದು ಉಳಿದೆಲ್ಲ ಬದಿಯಲ್ಲೂ ರಷ್ಯನ್ ಭಾಷೆಯಿದೆ. ಅಂಪೌಲ್​ನ ಪ್ರಾಥಮಿಕ ಮೇಲೆ ಕೂಡ ರಷ್ಯನ್​ ಭಾಷೆಯ ಅಕ್ಷರಗಳಿವೆ.

ಇದನ್ನೂ ಓದಿ: ಕೊತ್ವಾಲ್ ರಾಮಚಂದ್ರ ತೀರಿಕೊಂಡಾಗ ನಾನು ಪ್ರೈಮರಿ ಸ್ಕೂಲ್​ನಲ್ಲಿದ್ದೆ: ಡಿಕೆ ಶಿವಕುಮಾರ್ ಹೇಳಿಕೆಗೆ ಸಿಟಿ ರವಿ ಟಾಂಗ್

IND vs ENG, 4th Test Day 4, Live Score: 4 ನೇ ದಿನದಾಟಕ್ಕೆ ಕ್ಷಣಗಣನೇ ಕೊಹ್ಲಿ ಮೇಲೆ ಹೆಚ್ಚಿನ ಜವಬ್ದಾರಿ

(How to identify fake Covid 19 vaccines check here to get Information)

Published On - 4:09 pm, Sun, 5 September 21

ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್