AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೊತ್ವಾಲ್ ರಾಮಚಂದ್ರ ತೀರಿಕೊಂಡಾಗ ನಾನು ಪ್ರೈಮರಿ ಸ್ಕೂಲ್​ನಲ್ಲಿದ್ದೆ: ಡಿಕೆ ಶಿವಕುಮಾರ್ ಹೇಳಿಕೆಗೆ ಸಿಟಿ ರವಿ ಟಾಂಗ್

CT Ravi: ಬಡವರಿಗೆ 20 ತಿಂಗಳು ಉಚಿತವಾಗಿ ಆಹಾರ ಧಾನ್ಯ ನೀಡಲಾಗಿದೆ. ಆಹಾರ ಧಾನ್ಯ ಉಚಿತವಾಗಿ ನೀಡ್ತಿರುವ ಏಕೈಕ ರಾಷ್ಟ್ರ ಭಾರತ. ನೂರು ಕೋಟಿ ಜನರಿಗೆ ಲಸಿಕೆ ನೀಡ್ತಿರುವ ಏಕೈಕ ದೇಶ ಭಾರತ ಎಂದು ಚಿಕ್ಕಮಗಳೂರಿನಲ್ಲಿ ಬಿಜೆಪಿ ನಾಯಕ ಸಿ.ಟಿ. ರವಿ ಪ್ರತಿಕ್ರಿಯೆ ನೀಡಿದ್ದಾರೆ.

ಕೊತ್ವಾಲ್ ರಾಮಚಂದ್ರ ತೀರಿಕೊಂಡಾಗ ನಾನು ಪ್ರೈಮರಿ ಸ್ಕೂಲ್​ನಲ್ಲಿದ್ದೆ: ಡಿಕೆ ಶಿವಕುಮಾರ್ ಹೇಳಿಕೆಗೆ ಸಿಟಿ ರವಿ ಟಾಂಗ್
ಸಿಟಿ ರವಿ
TV9 Web
| Edited By: |

Updated on:Sep 05, 2021 | 3:55 PM

Share

ಬೆಂಗಳೂರು: ಸದ್ಯ ದೇಶದಲ್ಲಾಗಿರುವ ಬೆಲೆ ಏರಿಕೆ ತಾತ್ಕಾಲಿಕ. ಕೊವಿಡ್‌ನಿಂದ ಆರ್ಥಿಕತೆ ಏರಿಳಿತವನ್ನು ಇಡೀ ಜಗತ್ತು ಎದುರಿಸ್ತಿದೆ. ಈ ಹಿಂದೆ ಕಾಂಗ್ರೆಸ್‌ನ ಭ್ರಷ್ಟಾಚಾರದಿಂದ ಬೆಲೆ ಏರಿಕೆ ಆಗಿತ್ತು. ಕಾಂಗ್ರೆಸ್ ಅಧಿಕಾರ ಬಿಟ್ಟುಹೋಗುವಾಗ ಗ್ಯಾಸ್‌ ಬೆಲೆ 981 ರೂಪಾಯಿ ಆಗಿತ್ತು. ಕಾಂಗ್ರೆಸ್‌ನವರು ಚಳುವಳಿ ಮಾಡುವ ಮಟ್ಟಕ್ಕೆ ಬೆಲೆ ಏರಿಲ್ಲ. ಬೆಲೆ ಏರಿಕೆ ವಿರುದ್ಧ ಚಳುವಳಿ ಮಾಡುವ ನೈತಿಕತೆ ಕಾಂಗ್ರೆಸಿಗಿಲ್ಲ ಎಂದು ಬಿಜೆಪಿ ನಾಯಕ ಹಾಗೂ ಬಿಜೆಪಿ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಹೇಳಿಕೆ ನೀಡಿದ್ದಾರೆ. ಆ ಮೂಲಕ, ಅಗತ್ಯವಸ್ತುಗಳ ಬೆಲೆ ಏರಿಕೆಯನ್ನು ಸಿ.ಟಿ. ರವಿ ಸಮರ್ಥಿಸಿಕೊಂಡಿದ್ದಾರೆ.

ಬಡವರಿಗೆ 20 ತಿಂಗಳು ಉಚಿತವಾಗಿ ಆಹಾರ ಧಾನ್ಯ ನೀಡಲಾಗಿದೆ. ಆಹಾರ ಧಾನ್ಯ ಉಚಿತವಾಗಿ ನೀಡ್ತಿರುವ ಏಕೈಕ ರಾಷ್ಟ್ರ ಭಾರತ. ನೂರು ಕೋಟಿ ಜನರಿಗೆ ಲಸಿಕೆ ನೀಡ್ತಿರುವ ಏಕೈಕ ದೇಶ ಭಾರತ ಎಂದು ಚಿಕ್ಕಮಗಳೂರಿನಲ್ಲಿ ಬಿಜೆಪಿ ನಾಯಕ ಸಿ.ಟಿ. ರವಿ ಪ್ರತಿಕ್ರಿಯೆ ನೀಡಿದ್ದಾರೆ.

ಕಾಂಗ್ರೆಸ್ ನಾಯಕ, ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಹೇಳಿಕೆಗೆ ಸಿ.ಟಿ ರವಿ ಟಾಂಗ್ ಕೊಟ್ಟಿದ್ದಾರೆ. ನನ್ನ ಕಾಲದಲ್ಲಿ ಕೊತ್ವಾಲ್ ರಾಮಚಂದ್ರ ಬದುಕೇ ಇರಲಿಲ್ಲ. ಕೊತ್ವಾಲ್ ರಾಮಚಂದ್ರ ತೀರಿಕೊಂಡಾಗ ನಾನು ಪ್ರೈಮರಿ ಸ್ಕೂಲ್​ನಲ್ಲಿದ್ದೆ. ಆದರೆ ಹೆಮ್ಮೆಯಿಂದ ನಾನು ಅವರ ಶಿಷ್ಯ ಅಂತ ಹೇಳಿಕೊಂಡಿದ್ದು ನಾನಲ್ಲ. ಆ ದಿನಗಳು ಪುಸ್ತಕದಲ್ಲಿ ಯಾರು, ಯಾರ ಶಿಷ್ಯರು ಅಂತ ಬರೆದಿದ್ದಾರೆ. ಆ ಪುಸ್ತಕದಲ್ಲಿ ನನ್ನ ಹೆಸರು ಖಂಡಿತವಾಗಿಯೂ ಇಲ್ಲ. ರಾಜಕೀಯ ಮಾಡೋದಕ್ಕೆ ಗೂಂಡಾಗಿರಿ ಮೆರಿಟ್ ಅಂತಾ ನಾನು ಭಾವಿಸಿಲ್ಲ. ನಾನು ಚಳುವಳಿ ಮಾಡಿದ್ದೇನೆ, ಆ ಕಾರಣಕ್ಕೆ ಜೈಲಿಗೆ ಹೋಗಿದ್ದೇನೆ. ಭ್ರಷ್ಟಾಚಾರ, ಗುಂಡಾಗಿರಿ ಮಾಡಿ ಜೈಲಿಗೆ ಹೋಗಿಲ್ಲ ಎಂದು ಸಿ.ಟಿ. ರವಿ ತಿರುಗೇಟು ನೀಡಿದ್ದಾರೆ.

ನನ್ನ ಮೇಲೆ ತುಂಬಾ ಕೇಸುಗಳು ಬಿದ್ದಿವೆ. ಆ ಎಲ್ಲಾ ಕೇಸುಗಳು ಹೋರಾಟ ಮಾಡಿ ಜೈಲಿಗೆ ಹೋಗಿರುವುದು. ಗೂಂಡಾಗಿರಿ ಮಾಡಿ ಯಾವತ್ತೂ ಜೈಲಿಗೆ ಹೋಗಿಲ್ಲ, ಹೋಗುವುದು ಇಲ್ಲ. ಭ್ರಷ್ಟಾಚಾರ ಮಾಡಿ ಜೈಲಿಗೆ ಹೋಗಿಲ್ಲ, ಹೋಗುವುದಿಲ್ಲ ಎಂದು ಬಿಜೆಪಿ ನಾಯಕ ಸಿ.ಟಿ ರವಿ ತಿಳಿಸಿದ್ದಾರೆ.

ಗಣೇಶೋತ್ಸವ ಆಚರಣೆ ವಿಚಾರವಾಗಿ ಮಾತನಾಡಿದ ಅವರು, ಎಲ್ಲಾ ಕಡೆ ಗಣೇಶೋತ್ಸವ ವಿಜೃಂಭಣೆಯಿಂದ ನಡೆಯಬೇಕು ಎಂಬುದು ನನ್ನ ಭಾವನೆ. ಕೊವಿಡ್ ಹೆಚ್ಚು ಕೇಸ್ ಇರೋ ಕಡೆ ನಿರ್ಬಂಧ ಹಾಕಲೇಬೇಕು. ಕೊರೊನಾ ಕೇಸ್ ಕಡಿಮೆ ಇರುವ ಕಡೆ ಅವಕಾಶ ಕೊಡಬೇಕು ಎಂದು ಹೇಳಿದ್ದಾರೆ. ಕೇಸ್‍ಗಳೇ ಇಲ್ಲದ ಜಿಲ್ಲೆಯಲ್ಲಿ ಮುಕ್ತವಾದ ಅವಕಾಶ ನೀಡಬೇಕು. ಹೀಗೆಂದು ಮುಖ್ಯಮಂತ್ರಿ ಜೊತೆ ಮಾತನಾಡುವಾಗ ಹೇಳಿದ್ದೇನೆ. ಎಸ್.ಓ.ಪಿ ಪಾಲನೆ ಆಗಬೇಕು, ಕೇಸ್ ಇಲ್ಲದ ಜಿಲ್ಲೆಯಲ್ಲ ಕಠಿಣ ನಿರ್ಬಂಧದ ಅಗತ್ಯವಿಲ್ಲ. ಹೆಚ್ಚು ಕೇಸ್ ಇರುವ ಜಿಲ್ಲೆಗಳಲ್ಲಿ ನಿರ್ಬಂಧ ಹಾಕಿ. ಗಣೇಶೋತ್ಸವ ಭಾವನೆಗೆ ತಕ್ಕಂತೆ ನಡೆಯಲಿ ಎಂದು ಮನವಿ ಮಾಡಿದ್ದೇನೆ ಎಂದು ತಿಳಿಸಿದ್ದಾರೆ. ಆದರೆ, ಇದೀಗ ಗಣೇಶ ಉತ್ಸವ ಆಚರಣೆಗೆ ಸರ್ಕಾರ ಮಾರ್ಗಸೂಚಿ ಪ್ರಕಟಿಸಿದೆ.

ಇದನ್ನೂ ಓದಿ: ಪಂಚಾಯತ್ ಚುನಾವಣೆಗೆ ಕಾಂಗ್ರೆಸ್ ಸಿದ್ಧತೆ; ಕಾರ್ಯಕರ್ತರ ಜೊತೆ ಸಭೆ, ಪ್ರತಿಭಟನೆ ನಡೆಸುತ್ತೇವೆ: ಡಿ ಕೆ ಶಿವಕುಮಾರ್

ಇದನ್ನೂ ಓದಿ: ಹಿಂದೂಗಳ ಜನಸಂಖ್ಯೆ ಹೆಚ್ಚಾಗಿರುವವರೆಗೆ ಮಾತ್ರ ಸಂವಿಧಾನ ಉಳಿಯಲಿದೆ: ಸಿ ಟಿ ರವಿ

Published On - 3:53 pm, Sun, 5 September 21