AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪಂಚಾಯತ್ ಚುನಾವಣೆಗೆ ಕಾಂಗ್ರೆಸ್ ಸಿದ್ಧತೆ; ಕಾರ್ಯಕರ್ತರ ಜೊತೆ ಸಭೆ, ಪ್ರತಿಭಟನೆ ನಡೆಸುತ್ತೇವೆ: ಡಿ ಕೆ ಶಿವಕುಮಾರ್

Karnataka Congress: ಕಾಂಗ್ರೆಸ್​ಗೆ ಪದಾಧಿಕಾರಿಗಳ ನೇಮಕದ ಬಗ್ಗೆ ಸೂಚಿಸಿದ್ದೇನೆ. ಮಾಸಾಂತ್ಯದಲ್ಲಿ ಎಲ್ಲಾ ಘಟಕಗಳಿಗೆ ನೇಮಕಾತಿ ಮಾಡುತ್ತೇವೆ. ಕಾಂಗ್ರೆಸ್​ನಿಂದ ಸಾಂಸ್ಕೃತಿಕ, ಸಾರಿಗೆ ವಿಭಾಗ ಮಾಡುತ್ತಿದ್ದೇವೆ ಎಂದು ಕೆಪಿಸಿಸಿ ಕಚೇರಿಯಲ್ಲಿ ಡಿ.ಕೆ.ಶಿವಕುಮಾರ್​ ತಿಳಿಸಿದ್ದಾರೆ.

ಪಂಚಾಯತ್ ಚುನಾವಣೆಗೆ ಕಾಂಗ್ರೆಸ್ ಸಿದ್ಧತೆ; ಕಾರ್ಯಕರ್ತರ ಜೊತೆ ಸಭೆ, ಪ್ರತಿಭಟನೆ ನಡೆಸುತ್ತೇವೆ: ಡಿ ಕೆ ಶಿವಕುಮಾರ್
ಡಿ.ಕೆ. ಶಿವಕುಮಾರ್
TV9 Web
| Edited By: |

Updated on:Sep 04, 2021 | 4:47 PM

Share

ಬೆಂಗಳೂರು: ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್ ಚುನಾವಣೆಗೆ ನಾವು ಸಿದ್ಧತೆ ನಡೆಸುತ್ತಿದ್ದೇವೆ. ಜಿಲ್ಲಾ ಕಾಂಗ್ರೆಸ್​ ನಾಯಕರ ಅಭಿಪ್ರಾಯವನ್ನು ಕೇಳಿದ್ದೇವೆ ಎಂದು ಕೆಪಿಸಿಸಿ ಕಚೇರಿಯಲ್ಲಿ ಕೆಪಿಸಿಸಿ ಅಧ್ಯಕ್ಷ ಹಾಗೂ ಕಾಂಗ್ರೆಸ್ ನಾಯಕ ಡಿ.ಕೆ. ಶಿವಕುಮಾರ್ ಶನಿವಾರ (ಸಪ್ಟೆಂಬರ್ 4)​ ಹೇಳಿಕೆ ನೀಡಿದ್ದಾರೆ. ಅಕ್ಟೋಬರ್​ ಪೂರ್ತಿ ಗಾಂಧಿ ಗ್ರಾಮ ಸ್ವರಾಜ್ಯ ಕಾರ್ಯಕ್ರಮ ನಡೆಸುತ್ತೇವೆ. 2 ದಿನಗಳಿಗೊಮ್ಮೆ ನಾಯಕರು ತೆರಳಿ ಸಭೆ, ಧರಣಿ ನಡೆಸ್ತೇವೆ. ಕಾಂಗ್ರೆಸ್ ಕಾರ್ಯಕರ್ತರ ಜತೆ ಸಭೆ, ಪ್ರತಿಭಟನೆ ಮಾಡ್ತೇವೆ ಎಂದು ಹೇಳಿದ್ದಾರೆ.

ಕಾಂಗ್ರೆಸ್​ಗೆ ಪದಾಧಿಕಾರಿಗಳ ನೇಮಕದ ಬಗ್ಗೆ ಸೂಚಿಸಿದ್ದೇನೆ. ಮಾಸಾಂತ್ಯದಲ್ಲಿ ಎಲ್ಲಾ ಘಟಕಗಳಿಗೆ ನೇಮಕಾತಿ ಮಾಡುತ್ತೇವೆ. ಕಾಂಗ್ರೆಸ್​ನಿಂದ ಸಾಂಸ್ಕೃತಿಕ, ಸಾರಿಗೆ ವಿಭಾಗ ಮಾಡುತ್ತಿದ್ದೇವೆ ಎಂದು ಕೆಪಿಸಿಸಿ ಕಚೇರಿಯಲ್ಲಿ ಡಿ.ಕೆ.ಶಿವಕುಮಾರ್​ ತಿಳಿಸಿದ್ದಾರೆ. ಜಿಲ್ಲಾ ಪಂಚಾಯತಿ, ಎಂಎಲ್​ಸಿ ಚುನಾವಣೆಗೆ ತಯಾರಿ ಮಾಡುತ್ತಿದ್ದೇವೆ. ಜಿಲ್ಲಾ ನಾಯಕರ ಅಭಿಪ್ರಾಯ ಕೇಳಿದ್ದೇವೆ. ಪ್ರತಿ ದಿನ ಎರಡು ಗ್ರಾಮಕ್ಕೆ ನಾಯಕರು ತೆರಳಿ ಕಾರ್ಯಕರ್ತರ ಸಭೆ ಅಥವಾ ಪ್ರತಿಭಟನೆ ಮಾಡುತ್ತೇವೆ. ಎಲ್ಲಾ ಮುಂಚೂಣಿ ಘಟಕಗಳ ನೇಮಕಾತಿ ತಿಂಗಳಾಂತ್ಯದಲ್ಲಿ ಮಾಡುತ್ತೇವೆ ಎಂದು ಶಿವಕುಮಾರ್ ಮಾಹಿತಿ ನೀಡಿದ್ದಾರೆ.

ಪರಿಷತ್​ನ 29 ಸ್ಥಾನಗಳ ಚುನಾವಣೆಗೆ ಅರ್ಜಿ ಕರೆದಿದ್ದೇವೆ. ಮುಂದಿನ 10 ದಿನಗಳ ಕಾಲ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗುವುದು. ಮಾಸಾಂತ್ಯದಲ್ಲಿ 29 ಕ್ಷೇತ್ರಗಳಿಗೆ ಅಭ್ಯರ್ಥಿ ಘೋಷಣೆ ಮಾಡಲಾಗುತ್ತದೆ. ಕಾಂಗ್ರೆಸ್ ಪಕ್ಷದಿಂದ ಅಭ್ಯರ್ಥಿಗಳನ್ನು ಘೋಷಿಸುತ್ತೇವೆ ಎಂದು ಶಿವಕುಮಾರ್​ ಹೇಳಿದ್ದಾರೆ.

ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಗೆ ಡಿ.ಕೆ ಶಿವಕುಮಾರ್ ಆಕ್ಷೇಪ ‘ಎನ್​ಇಪಿ ಅಂದ್ರೆ ನಾಗ್ಪುರ್ ಎಜುಕೇಷನ್ ಪಾಲಿಸಿ’ ಎಂದು ರಾಷ್ಟ್ರೀಯ ಶಿಕ್ಷಣ ನೀತಿ ಬಗ್ಗೆ ಡಿ.ಕೆ. ಶಿವಕುಮಾರ್​ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಕೇಂದ್ರ ಸರ್ಕಾರದ ಹೊಸ ಎನ್​ಇಪಿ ಸರಿಕಾಣುತ್ತಿಲ್ಲ. ನಾನು ಕೂಡ ಶಿಕ್ಷಣ ಸಂಸ್ಥೆ ನಡೆಸುತ್ತೇನೆ, ಟ್ರಸ್ಟಿಯಾಗಿದ್ದೇನೆ. ಆದರೂ ರಾಷ್ಟ್ರೀಯ ಶಿಕ್ಷಣ ನೀತಿ ಅರ್ಥೈಸಿಕೊಳ್ಳಲಾಗುತ್ತಿಲ್ಲ. ಎನ್​ಇಪಿ ಬಗ್ಗೆ ಸಂಸತ್, ವಿಧಾನಸಭೆಯಲ್ಲಿ ಚರ್ಚೆಯಾಗಿಲ್ಲ. ಯಾರ ಅನುಕೂಲಕ್ಕಾಗಿ ಎನ್​ಇಪಿ ಜಾರಿಗೆ ಹೊರಟಿದ್ದಾರೆ ಎಂದು ಪ್ರಶ್ನೆ ಮಾಡಿದ್ದಾರೆ.

ಎನ್​ಇಪಿ ಬಗ್ಗೆ ಶಿಕ್ಷಕರು, ಉಪನ್ಯಾಸಕರಿಗೆ ಮಾಹಿತಿಯಿಲ್ಲ. ಯಾರಿಗೂ ಮಾಹಿತಿ ನೀಡದೆ ಎನ್​ಇಪಿ ಜಾರಿಗೆ ತರಾತುರಿ ಮಾಡಲಾಗುತ್ತಿದೆ. ರಾಜ್ಯದ ಉನ್ನತ ಶಿಕ್ಷಣ ಸಚಿವರು ಆಸಕ್ತಿ ತೋರುತ್ತಿದ್ದಾರೆ. ಆದರೆ, ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಗೆ ನಮ್ಮ ವಿರೋಧವಿದೆ. ಬಿಜೆಪಿ ಆಡಳಿತವಿರುವ ರಾಜ್ಯಗಳಲ್ಲಿ ಎನ್​ಇಪಿ ಜಾರಿಯಾಗಿಲ್ಲ. ಆದರೆ, ಕರ್ನಾಟಕದಲ್ಲಿ ಮಾತ್ರ ಎನ್​ಇಪಿ ಜಾರಿಗೆ ಒತ್ತಡ ಹೇರಲಾಗುತ್ತಿದೆ. ಹಿಂಬಾಗಿಲ ಮೂಲಕ ಹಿಂದಿ ಹೇರಲು ಯತ್ನಿಸುತ್ತಿದ್ದಾರೆ ಎಂದು ಹೇಳಿದ್ದಾರೆ.

ಎನ್​ಇಪಿ ವಿಸ್ತೃತ ಅರ್ಥ ನಾಗ್ಪುರ್ ಎಜುಕೇಷನ್ ಪಾಲಿಸಿ: ಡಿ.ಕೆ ಶಿವಕುಮಾರ್ ಸಿಎಂ ಬಸವರಾಜ ಬೊಮ್ಮಾಯಿ ಬೇರೆ ಕೆಲಸದಲ್ಲಿ ಬ್ಯುಸಿ ಆಗಿದ್ದಾರೆ. ಆದರೆ, ಶಿಕ್ಷಣ ಸಚಿವರು ಮಾತ್ರ ಎನ್​ಇಪಿ ಜಾರಿಗೆ ಆಸಕ್ತಿ ವಹಿಸಿದ್ದಾರೆ. ಅಧಿಕಾರಿಗಳ ಜತೆ ಸಚಿವರು ಸಭೆ ಮೇಲೆ ಸಭೆ ನಡೆಸ್ತಿದ್ದಾರೆ. ಈ ಮಧ್ಯೆ, ರಾಷ್ಟ್ರೀಯ ಶಿಕ್ಷಣ ನೀತಿಯಿಂದ ಜನರು ಗಾಬರಿಯಾಗಿದ್ದಾರೆ. ಎನ್​ಇಪಿ ಜಾರಿ ಬಗ್ಗೆ ಸಾರ್ವಜನಿಕವಾಗಿ ಚರ್ಚೆಯಾಗಬೇಕು. ಶಿಕ್ಷಣ ತಜ್ಞರು, ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರ ಜತೆ ಚರ್ಚೆ ನಡೆಯಬೇಕು. ವಿಧಾನಸಭೆ, ವಿಧಾನಪರಿಷತ್​ನಲ್ಲಿ ಚರ್ಚೆಯಾಗಬೇಕು. ಏನಾದ್ರೂ ಆಕ್ಷೇಪಗಳಿದ್ದರೆ ರಾಜ್ಯ ಸರ್ಕಾರ ಆಲಿಸಬೇಕು ಎಂದು ಶಿವಕುಮಾರ್ ತಿಳಿಸಿದ್ದಾರೆ.

ಶಿಕ್ಷಣ ಸಚಿವರಿಗೆ ಸಾಮಾನ್ಯ ಜ್ಞಾನವಿಲ್ಲದಂತೆ ಕಾಣಿಸುತ್ತಿದೆ. ಎನ್​ಇಪಿ ಜಾರಿಯಾದರೆ ನಗರವಾಸಿಗಳಿಗಷ್ಟೇ ಅನುಕೂಲ ಆಗಲಿದೆ. ಗ್ರಾಮಾಂತರ ಪ್ರದೇಶದ ಮಕ್ಕಳಿಗೆ ಎನ್​ಇಪಿಯಿಂದ ಸಮಸ್ಯೆ ಆಗಲಿದೆ. ಸರ್ಕಾರ ಎಲ್ಲಾ ಮಕ್ಕಳಿಗೂ ಮೂಲಸೌಕರ್ಯ ಕಲ್ಪಿಸಿದೆಯಾ ಎಂದು ಹಾಗೂ ಎನ್​ಇಪಿ ಬಗ್ಗೆ ಸಮಗ್ರ ಚರ್ಚೆಯಾಗಬೇಕು ಎಂದು ಆಗ್ರಹ ವ್ಯಕ್ತಪಡಿಸಿದ್ದಾರೆ. ಅಲ್ಲಿಯವರೆಗೆ ಎನ್​ಇಪಿ ಜಾರಿಮಾಡಬಾರದು ಎಂದು ಒತ್ತಾಯಿಸಿದ್ದಾರೆ.

ಇದನ್ನೂ ಓದಿ: ಕಾಂಗ್ರೆಸ್​ನಲ್ಲಿ ಸಿದ್ದರಾಮಯ್ಯಗೆ ಪರ್ಯಾಯವಾಗಿ ಹಿಂದುಳಿದ ವರ್ಗಗಳ ಮನ ಗೆಲ್ಲಲು ತಂತ್ರ ಹೂಡಿದ ಡಿಕೆ ಶಿವಕುಮಾರ್!

ಇದನ್ನೂ ಓದಿ: ಬೆಳಗಾವಿಯನ್ನು 2ನೇ ರಾಜಧಾನಿ ಎಂದು ಘೋಷಣೆ ಮಾಡಿ ನಿರ್ಲಕ್ಷ್ಯ ವಹಿಸಲಾಗುತ್ತಿದೆ: ಡಿಕೆ ಶಿವಕುಮಾರ್

Published On - 4:37 pm, Sat, 4 September 21

Follow Us
ಇನ್ನೇನು ವಿಶೇಷ ಚೇತನರಿಗೆ ಹಸ್ತಾಂತರಿಸಬೇಕಿದ್ದ ವಾಹನಗಳು ಸುಟ್ಟು ಭಸ್ಮ
ಇನ್ನೇನು ವಿಶೇಷ ಚೇತನರಿಗೆ ಹಸ್ತಾಂತರಿಸಬೇಕಿದ್ದ ವಾಹನಗಳು ಸುಟ್ಟು ಭಸ್ಮ
ಬಂಗಾಳದ ಮತಗಟ್ಟೆಗೆ ಕಾಡಾನೆ ಎಂಟ್ರಿ; ಕಂಗಾಲಾದ ಮತದಾರರು
ಬಂಗಾಳದ ಮತಗಟ್ಟೆಗೆ ಕಾಡಾನೆ ಎಂಟ್ರಿ; ಕಂಗಾಲಾದ ಮತದಾರರು
ಟಿಎಂಸಿಯ ಗೂಂಡಾಗಿರಿ ಅಂತ್ಯವಾಗುವ ಸಮಯ ಬಂದಿದೆ; ಬಂಗಾಳದಲ್ಲಿ ಅಮಿತ್ ಶಾ
ಟಿಎಂಸಿಯ ಗೂಂಡಾಗಿರಿ ಅಂತ್ಯವಾಗುವ ಸಮಯ ಬಂದಿದೆ; ಬಂಗಾಳದಲ್ಲಿ ಅಮಿತ್ ಶಾ
ದೆಹಲಿಯಲ್ಲಿ ಡಿಕೆಶಿ ಸ್ಫೋಟಕ ಹೇಳಿಕೆ, ರಾಜ್ಯ ರಾಜಕಾರಣದಲ್ಲಿ ಸಂಚಲನ
ದೆಹಲಿಯಲ್ಲಿ ಡಿಕೆಶಿ ಸ್ಫೋಟಕ ಹೇಳಿಕೆ, ರಾಜ್ಯ ರಾಜಕಾರಣದಲ್ಲಿ ಸಂಚಲನ
ಬಂಗಾಳದ ಹೌರಾದಲ್ಲಿ ಪ್ರಧಾನಿ ಮೋದಿ ಬೃಹತ್ ರೋಡ್ ಶೋ
ಬಂಗಾಳದ ಹೌರಾದಲ್ಲಿ ಪ್ರಧಾನಿ ಮೋದಿ ಬೃಹತ್ ರೋಡ್ ಶೋ
ಬೆಂಗಳೂರಿನಲ್ಲಿ ಭಾರೀ ಅಗ್ನಿ ದುರಂತ, 10ಕಿ.ಮೀ ವರೆಗೂ ಗೋಚರಿಸಿದ ದಟ್ಟ ಹೊಗೆ
ಬೆಂಗಳೂರಿನಲ್ಲಿ ಭಾರೀ ಅಗ್ನಿ ದುರಂತ, 10ಕಿ.ಮೀ ವರೆಗೂ ಗೋಚರಿಸಿದ ದಟ್ಟ ಹೊಗೆ
ತಂದೆ ಸಾವಿನ ನಡುವೆ ಪರೀಕ್ಷೆ ಬರೆದಿದ್ದ ವಿದ್ಯಾರ್ಥಿ SSLC ಪಾಸ್​​
ತಂದೆ ಸಾವಿನ ನಡುವೆ ಪರೀಕ್ಷೆ ಬರೆದಿದ್ದ ವಿದ್ಯಾರ್ಥಿ SSLC ಪಾಸ್​​
ಬಂಗಾಳದಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಅಟ್ಟಾಡಿಸಿಕೊಂಡು ಹೋಗಿ ಹಲ್ಲೆ
ಬಂಗಾಳದಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಅಟ್ಟಾಡಿಸಿಕೊಂಡು ಹೋಗಿ ಹಲ್ಲೆ
ಶುರುವಾಯ್ತು ಸಲ್ಮಾನ್ ಖಾನ್-ನಯನತಾರಾ ಸಿನಿಮಾ: ವಿಡಿಯೋ
ಶುರುವಾಯ್ತು ಸಲ್ಮಾನ್ ಖಾನ್-ನಯನತಾರಾ ಸಿನಿಮಾ: ವಿಡಿಯೋ
ಮದುವೆ ಮಂಟಪದಿಂದ ಮತಗಟ್ಟೆಗೆ; ತಿರುನಲ್ವೇಲಿಯಲ್ಲಿ ನವವಿವಾಹಿತರ ಮತದಾನ
ಮದುವೆ ಮಂಟಪದಿಂದ ಮತಗಟ್ಟೆಗೆ; ತಿರುನಲ್ವೇಲಿಯಲ್ಲಿ ನವವಿವಾಹಿತರ ಮತದಾನ