Sign In

By signing in or creating an account, you agree with Associated Broadcasting Company's Terms & Conditions and Privacy Policy.

ಚಿಂತಾಮಣಿ ಚಿನ್ನದಂಗಡಿ ಮಾಲೀಕನಿಗೆ ಟೊಮೆಟೊ ಮಾರಾಟದಿಂದ ಭರ್ಜರಿ ಲಾಭ; ಗಳಿಸಿದ್ದೆಷ್ಟು?

ಚಿಂತಾಮಣಿಯ ನಕ್ಷತ್ರಾ ಚಿನ್ನದ ಅಂಗಡಿ ಮಾಲೀಕ ಚಂದ್ರಶೇಖರ್ ಈ ಬಾರಿ ಟೊಮೆಟೊ ಕೂಡ ಬೆಳೆದಿದ್ದರು. ಪರಿಣಾಮವಾಗಿ ಚಿನ್ನದ ವ್ಯವಹಾರ ಕೈಕೊಟ್ಟರೂ ಟೊಮೆಟೊ ಬೆಳೆ ಮಾರಾಟ ಮಾಡುವ ಮೂಲಕ ಅವರು ಲಾಭ ಗಳಿಸಿದ್ದಾರೆ.

ಚಿಂತಾಮಣಿ ಚಿನ್ನದಂಗಡಿ ಮಾಲೀಕನಿಗೆ ಟೊಮೆಟೊ ಮಾರಾಟದಿಂದ ಭರ್ಜರಿ ಲಾಭ; ಗಳಿಸಿದ್ದೆಷ್ಟು?
ಟೊಮೆಟೊ
Follow us
ಭೀಮಪ್ಪ ಪಾಟೀಲ್​, ಚಿಕ್ಕಬಳ್ಳಾಪುರ
| Updated By: Ganapathi Sharma

Updated on:Jul 31, 2023 | 3:05 PM

ಚಿಕ್ಕಬಳ್ಳಾಫುರ: ಕರ್ನಾಟಕ ಹಾಗೂ ವಿವಿಧ ರಾಜ್ಯಗಳ ಟೊಮೆಟೊ (Tomato) ಬೆಳೆಗಾರರು ಈ ವರ್ಷ ಭಾರಿ ಲಾಭ ಗಳಿಸಿದ ಬಗ್ಗೆ ಹಲವಾರು ಮಾಧ್ಯಮ ವರದಿಗಳನ್ನು ನೀವು ನೋಡಿರಬಹುದು. ಆದರೆ, ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿಯ (Chintamani) ಚಿನ್ನದ ಅಂಗಡಿ ಮಾಲೀಕರೊಬ್ಬರಿಗೂ ಈ ಬಾರಿ ಕೈಹಿಡಿದಿದ್ದು ಟೊಮೆಟೊ ಬೆಳೆ ಎಂದರೆ ನೀವು ನಂಬಲೇಬೇಕು! ಹೌದು, ಚಿಂತಾಮಣಿಯ ನಕ್ಷತ್ರಾ ಚಿನ್ನದ ಅಂಗಡಿ ಮಾಲೀಕ ಚಂದ್ರಶೇಖರ್ ಈ ಬಾರಿ ಟೊಮೆಟೊ ಕೂಡ ಬೆಳೆದಿದ್ದರು. ಪರಿಣಾಮವಾಗಿ ಚಿನ್ನದ ವ್ಯವಹಾರ ಕೈಕೊಟ್ಟರೂ ಟೊಮೆಟೊ ಬೆಳೆ ಮಾರಾಟ ಮಾಡುವ ಮೂಲಕ ಅವರು ಲಾಭ ಗಳಿಸಿದ್ದಾರೆ.

ಚಂದ್ರಶೇಖರ್ ಅವರು ಟೊಮೆಟೊ ಮಾರಾಟ ಮಾಡಿ ಈಗಾಗಲೇ 45 ಲಕ್ಷ ರೂಪಾಯಿ ಲಾಭ ಗಳಿಸಿದ್ದಾರೆ. ಇನ್ನೂ 15-20 ಲಕ್ಷ ರೂಪಾಯಿ ಲಾಭದ ನರೀಕ್ಷೆಯಲ್ಲಿದ್ದಾರೆ. 15 ಕಿಲೋ ಟೊಮೆಟೊ ಬಾಕ್ಸ್​ ಅನ್ನು ಅವರು 2100 ರೂಪಾಯಿಯಂತೆ ಮಾರಾಟ ಮಾಡಿದ್ದಾರೆ. ಚಂದ್ರಶೇಖರ್ ಅವರು ಸುಮಾರು ಒಂದೂವರೆ ಎಕರೆ ಜಾಗದಲ್ಲಿ ಟೊಮೆಟೊ ಬೆಳೆದಿದ್ದರು.

ಈ ಮಧ್ಯೆ, ಚಿಂತಾಮಣಿಯಲ್ಲಿ 15 ಕೆಜೆಯ ಕ್ರೇಟ್​​​ನ ಟೊಮೆಟೊ 2300 ರೂಪಾಯಿಗೆ ಹರಾಜಾಗಿದೆ. ಚಿಂತಾಮಣಿ ನಗರದ ಎಪಿಎಂಸಿಯ ಟೊಮೆಟೊ ಮಾರುಕಟ್ಟೆಯಲ್ಲಿ ಭರ್ಜರಿ ಮೊತ್ತಕ್ಕೆ ಟೊಮೆಟೊ ಮಾರಾಟವಾಗಿದೆ.

ಚಿಕ್ಕಬಳ್ಳಾಪುರ ಹಾಗೂ ಕೋಲಾದಲ್ಲಿ ಹೆಚ್ಚಾಗಿ ಟೊಮೆಟೊ ಬೆಳೆಯಲಾಗುತ್ತಿದ್ದು, ಈ ವರ್ಷ ರೈತರಿಗೆ ಭರ್ಜರಿ ಲಾಭ ದೊರೆತಿದೆ. ಕರ್ನಾಟಕದ ಮಂಡ್ಯ, ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ರೈತರು ಟೊಮೆಟೊ ಬೆಳೆಯನ್ನು ಮಾರಾಟ ಮಾಡುವ ಮೂಲಕ ಲಕ್ಷ ಅಥವಾ ಕೋಟಿ ರೂಪಾಯಿ ಆದಾಯ ಹಾಗೂ ಲಾಭ ಗಳಿಸುತ್ತಿದ್ದಾರೆ.

ಇದನ್ನೂ ಓದಿ: Tomato Price Hike: ಇಳಿಕೆ ಕಾಣದ ಟೊಮೆಟೊ ದರ, ಇನ್ನೊಂದು ತಿಂಗಳು ಇದೇ ಪರಿಸ್ಥಿತಿ

ತೆಲಂಗಾಣದ ಮೇದಕ್ ಜಿಲ್ಲೆಯ ರೈತರೊಬ್ಬರು ಟೊಮೆಟೊ ಮಾರಾಟ ಮಾಡಿ 1.8 ಕೋಟಿ ರೂ. ಆದಾಯ ಗಳಿಸಿದ್ದ ಬಗ್ಗೆ ಇತ್ತೀಚೆಗೆ ವರದಿಯಾಗಿತ್ತು. ಅವರು 90 ಲಕ್ಷ ರೂ. ಲಾಭ ಗಳಿಸಿದ್ದರು.

ಕಳೆದ ಒಂದು ತಿಂಗಳಿನಿಂದೀಚೆಗೆ ಟೊಮೆಟೊ ಬೆಲೆ ಗಗನಕ್ಕೇರಿದ್ದು, ದರ ನಿಯಂತ್ರಣಕ್ಕೆ ಸರ್ಕಾರ ಕೂಡ ಕ್ರಮ ಕೈಗೊಂಡಿತ್ತು. ಆದಾಗ್ಯೂ, ದರ ಏರಿಕೆಯಿಂದ ರೈತರಿಗೆ ಪ್ರಯೋಜನವಾಗಿದೆ. ಪ್ರತಿ ವರ್ಷ ಸೂಕ್ತ ಬೆಲೆ ಸಿಗದೆ ಟೊಮೆಟೊವನ್ನು ರಸ್ತೆಗೆ ಎಸೆಯುತ್ತಿದ್ದ ರೈತರಿಗೆ ಈ ವರ್ಷ ಭರ್ಜರಿ ಲಾಭ ದೊರೆಯುತ್ತಿದೆ.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 2:51 pm, Mon, 31 July 23