ಚಿಕ್ಕಬಳ್ಳಾಪುರದಲ್ಲಿ ಕಳೆದ ವರ್ಷ ಸುರಿದ ಮಳೆಗೆ ಜಲಾವೃತವಾದ ದೇವಾಲಯ ರೀ ಓಪನ್! ದೇವಾಲಯಕ್ಕೆ ಮುಗಿಬಿದ್ದ ಭಕ್ತರು
ಇದು ರಾಜ್ಯದಲ್ಲೇ ಪ್ರಸಿದ್ಧಿ ಪಡೆದಿರುವ ಗಂಗಾಭಾಗೀರಥಿ ದೇಗುಲ. ಚಿಕ್ಕಬಳ್ಳಾಪುರ ಜಿಲ್ಲೆ ಗೌರಿಬಿದನೂರಿನ ಮದುಗಾನಕುಂಟೆ ಬಳಿ ಇರುವ ಬೃಹತ್ ಕೆರೆಯೊಂದು, ಸಂಪೂರ್ಣ ತುಂಬಿ ಕೆರೆಯಂಗಳದಲ್ಲಿರುವ ಗಂಗಾಭಾಗೀರಥಿ ದೇವಸ್ಥಾನವೂ ಸಂಫೂರ್ಣ ಜಲಾವೃತವಾಗಿತ್ತು.
ಚಿಕ್ಕಬಳ್ಳಾಪುರ: ಜಿಲ್ಲೆಯ ಗೌರಿಬಿದನೂರಿನ ಮದುಗಾನಕುಂಟೆ ಬಳಿ ಇರುವ ದೇವಸ್ಥಾನವು ದೇವಿ ಮಹತ್ಮೆ ಇರುವ ಪ್ರಸಿದ್ದ ದೇವಸ್ಥಾನ. ಇಲ್ಲಿಗೆ ಹೋಗಿ ಪ್ರಾರ್ಥನೆ ಸಲ್ಲಿಸಿ ಹರಕೆ ಕಟ್ಟಿಕೊಂಡ್ರೆ ಇಷ್ಟಾರ್ಥಗಳು ಈಡೇರುತ್ತೆ ಅನ್ನೋ ಅಚಲ ನಂಬಿಕೆ ಭಕ್ತರಲ್ಲಿದೆ. ಕಳೆದ ವರ್ಷ ಸುರಿದ ಭಾರಿ ಮಳೆಗೆ ಇಲ್ಲಿರುವ ಕೆರೆ ತುಂಬಿ ದೇವಸ್ಥಾನವೇ ಜಲಾವೃತವಾಗಿತ್ತು. ಆದ್ರೆ ಈಗ ನೀರು ಕಡಿಮೆಯಾದ ಕಾರಣ ದೇಗುಲ ರೀ ಓಪನ್ ಆಗಿದೆ. ಭಕ್ತರು ಇಲ್ಲಿರುವ ಕೆರೆಯ ನೀರಿನಲ್ಲಿ ಸ್ನಾನ ಮಾಡಿ ದೇವಿಯ ದರ್ಶನ ಮಾಡ್ತಾರೆ. ಎಡೆಯಿಟ್ಟು ಪೂಜೆ ಸಲ್ಲಿಸಿ ಮುಕ್ತ ಮನಸಿನ ಧ್ಯಾನ ಮಾಡ್ತಾರೆ. ಸದ್ಯ ವಿಶಿಷ್ಟ ಶಕ್ತಿಯಿರೋ ಈ ದೇವರ ದರ್ಶನ ಪಡೆಯಲು ಜನರ ದಂಡೇ ಆಗಮಿಸುತ್ತಿದೆ.
ಇದು ರಾಜ್ಯದಲ್ಲೇ ಪ್ರಸಿದ್ಧಿ ಪಡೆದಿರುವ ಗಂಗಾಭಾಗೀರಥಿ ದೇಗುಲ. ಚಿಕ್ಕಬಳ್ಳಾಪುರ ಜಿಲ್ಲೆ ಗೌರಿಬಿದನೂರಿನ ಮದುಗಾನಕುಂಟೆ ಬಳಿ ಇರುವ ಬೃಹತ್ ಕೆರೆಯೊಂದು, ಸಂಪೂರ್ಣ ತುಂಬಿ ಕೆರೆಯಂಗಳದಲ್ಲಿರುವ ಗಂಗಾಭಾಗೀರಥಿ ದೇವಸ್ಥಾನವೂ ಸಂಫೂರ್ಣ ಜಲಾವೃತವಾಗಿತ್ತು. ಇದ್ರಿಂದ ಜಿಲ್ಲಾಡಳಿತ ದೇವಸ್ಥಾನಕ್ಕೆ ಭಕ್ತರ ಪ್ರವೇಶ ನಿರ್ಬಂಧಿಸಿ ಆದೇಶ ಮಾಡಿತ್ತು. ಆದ್ರೀಗ ಕೆರೆಯಲ್ಲಿ ನೀರು ಕಡಿಮೆಯಾದ ಕಾರಣ ಮತ್ತೆ ಭಕ್ತರ ಪ್ರವೇಶಕ್ಕೆ ಅವಕಾಶ ಕಲ್ಪಿಸಲಾಗಿದೆ. ಇದ್ರಿಂದ ದೇವಸ್ಥಾನಕ್ಕೆ ದೇಶ ವಿದೇಶದಿಂದ ಭಕ್ತರು ಆಗಮಿಸ್ತಿದ್ದಾರೆ.
ಇನ್ನು ಈ ದೇವಿಗೆ ಹರಕೆ ಹೊತ್ತು ಪೂಜೆ ಸಲ್ಲಿಸಿದ್ರೆ ಇಷ್ಟಾರ್ಥಗಳು ಈಡೇರುತ್ತವೆಂಬ ನಂಬಿಕೆ ಭಕ್ತರಲ್ಲಿದೆ. ವಿಶೇಷವಾಗಿ ಮಹಿಳೆಯರು ಪ್ರತಿ ಸೋಮವಾರ ದೇವಸ್ಥಾನಕ್ಕೆ ಆಗಮಿಸಿ ಬೊಮ್ಮಕಲ್ಲು ವಿಗ್ರಹಗಳನ್ನು ಪ್ರತಿಷ್ಠಾಪಿಸಿ ಕೆಲ ನಿಮಿಷ ಭಕ್ತಿಯಿಂದ ಪೂಜೆ ಸಲ್ಲಿಸ್ತಾರೆ. ಇದ್ರಿಂದ ಆಸ್ಪತ್ರೆಗಳಲ್ಲಿ ವಾಸಿಯಾಗದ ಕಾಯಿಲೆಗಳು ಇಲ್ಲಿ ವಾಸಿಯಾಗುತ್ತವೆ ಅನ್ನೋದು ಭಕ್ತರ ಅಭಿಪ್ರಾಯ. ಇಲ್ಲಿ ಮತ್ತೊಂದು ವಿಶೇಷ ಏನಂದ್ರೆ ಈ ದೇವಸ್ಥಾನದಲ್ಲಿ ಅರ್ಚಕರು, ಸಿಬ್ಬಂದಿ ಯಾರು ಇರಲ್ಲ. ದೇವಸ್ಥಾನಕ್ಕೆ ಬಂದ ಭಕ್ತರೇ ದೇವಿಗೆ ಪೂಜೆ ಮಾಡ್ತಾರೆ. ಒಟ್ಟಾರೆ ಬಂದ್ ಆಗಿದ್ದ ದೇವಸ್ಥಾನ ಈಗ ಮತ್ತೆ ಓಪನ್ ಆಗಿದ್ದು ದಿನದಿಂದ ದಿನಕ್ಕೆ ಭಕ್ತರ ಸಂಖ್ಯೆ ಹೆಚ್ಚಾಗ್ತಿದೆ.
ವರದಿ: ಭೀಮಪ್ಪ ಪಾಟೀಲ, ಟಿವಿ9, ಚಿಕ್ಕಬಳ್ಳಾಪುರ
ಇದನ್ನೂ ಓದಿ: The Kashmir Files: ಬಾಕ್ಸಾಫೀಸ್ನಲ್ಲಿ ‘ದಿ ಕಾಶ್ಮೀರ್ ಫೈಲ್ಸ್’ ನಾಗಾಲೋಟ; ಹಲವು ದಾಖಲೆ ಸೃಷ್ಟಿ; ಕಲೆಕ್ಷನ್ ವಿವರ ಇಲ್ಲಿದೆ
Published On - 3:05 pm, Tue, 22 March 22