AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಒಂದು ಹೆಣ್ಣಿಗಾಗಿ ಕೋರ್ಟ್ ಅಟೆಂಡರ್​ನನ್ನು ಕೊಲ್ಲಿಸಿದನೇ ವಕೀಲ?

ಚಿಕ್ಕಬಳ್ಳಾಪುರ ಕೋರ್ಟ್ ಅಟೆಂಡರ್​ ನವೀನ್ ಹತ್ಯೆ ಪ್ರಕರಣ ಜಿಲ್ಲಾ ಪೊಲೀಸರು ಭೇದಿಸಿದ್ದು ಕೊಲೆ ಆರೋಪದಲ್ಲಿ ಒಬ್ಬ ವಕೀಲ, ಒಬ್ಬ ಮಹಿಳಾ ಅಟೆಂಡರ್​, ಹಾಗೂ ಇಬ್ಬರು ಕಕ್ಷಿದಾರರನ್ನು ಬಂಧಿಸಲಾಗಿದೆ ಬಂಧಿತರನ್ನು ವೃತ್ತಿಯಲ್ಲಿ ವಕೀಲನಾಗಿರುವ ಜಿ.ನವೀನ್ (ಕೊಲೆಯಾದವನ ಹೆಸರು ಸಹ ನವೀನ್) ನ್ಯಾಯಾಲಯದ ಅಟೆಂಡರ್​ ದೀಪಾ, ಕಕ್ಷಿದಾರರಾದ ಕೃಷ್ಣಮೂರ್ತಿ, ಅನಿಲ್ ಎಂದು ಗುರುತಿಸಲಾಗಿದೆ. ಪೊಲೀಸ್ ಮೂಲಗಳ ಪ್ರಕಾರ ವಕೀಲ ನವೀನ್ ದೀಪಾ ಜತೆ ಅನೈತಿಕ ಸಂಪರ್ಕಹೊಂದಿದ್ದ. ಆದರೆ, ಕೆಲ ದಿನಗಳ ಮಟ್ಟಿಗೆ ಅವನು ಬೆಂಗಳೂರಿಗೆ ತೆರಳಿದ್ದಾಗ ಅಟೆಂಡರ್​ ನವೀನ್ ದೀಪಾ […]

ಒಂದು ಹೆಣ್ಣಿಗಾಗಿ ಕೋರ್ಟ್ ಅಟೆಂಡರ್​ನನ್ನು ಕೊಲ್ಲಿಸಿದನೇ ವಕೀಲ?
ಅರುಣ್​ ಕುಮಾರ್​ ಬೆಳ್ಳಿ
|

Updated on: Sep 14, 2020 | 7:42 PM

Share
caption

ವಕೀಲ ಜಿ ನವೀನ್

ಚಿಕ್ಕಬಳ್ಳಾಪುರ ಕೋರ್ಟ್ ಅಟೆಂಡರ್​ ನವೀನ್ ಹತ್ಯೆ ಪ್ರಕರಣ ಜಿಲ್ಲಾ ಪೊಲೀಸರು ಭೇದಿಸಿದ್ದು ಕೊಲೆ ಆರೋಪದಲ್ಲಿ ಒಬ್ಬ ವಕೀಲ, ಒಬ್ಬ ಮಹಿಳಾ ಅಟೆಂಡರ್​, ಹಾಗೂ ಇಬ್ಬರು ಕಕ್ಷಿದಾರರನ್ನು ಬಂಧಿಸಲಾಗಿದೆ

ಬಂಧಿತರನ್ನು ವೃತ್ತಿಯಲ್ಲಿ ವಕೀಲನಾಗಿರುವ ಜಿ.ನವೀನ್ (ಕೊಲೆಯಾದವನ ಹೆಸರು ಸಹ ನವೀನ್) ನ್ಯಾಯಾಲಯದ ಅಟೆಂಡರ್​ ದೀಪಾ, ಕಕ್ಷಿದಾರರಾದ ಕೃಷ್ಣಮೂರ್ತಿ, ಅನಿಲ್ ಎಂದು ಗುರುತಿಸಲಾಗಿದೆ.

ಪೊಲೀಸ್ ಮೂಲಗಳ ಪ್ರಕಾರ ವಕೀಲ ನವೀನ್ ದೀಪಾ ಜತೆ ಅನೈತಿಕ ಸಂಪರ್ಕಹೊಂದಿದ್ದ. ಆದರೆ, ಕೆಲ ದಿನಗಳ ಮಟ್ಟಿಗೆ ಅವನು ಬೆಂಗಳೂರಿಗೆ ತೆರಳಿದ್ದಾಗ ಅಟೆಂಡರ್​ ನವೀನ್ ದೀಪಾ ಜತೆ ಅಕ್ರಮ ಸಂಪರ್ಕ ಬೆಳೆಸಿದನೆನ್ನಲಾಗಿದೆ. ಸದರಿ ವಿಷಯ ಗೊತ್ತಾದಾಗ ಕೆಂಡಾಮಂಡಲನಾದ ವಕೀಲ ನವೀನ್ ಅಟೆಂಡರ್​ನೊಂದಿಗೆ ಮೊದಲಿಗೆ ಜಗಳ ಮಾಡಿ ನಂತರ ಹತ್ಯೆಗೈಯಲು ತನ್ನ ಕಕ್ಷಿದಾರರಾದ ಕೃಷ್ಣಮೂರ್ತಿ, ಅನಿಲ್​ಗೆ ಸುಪಾರಿ ನೀಡಿದ್ದನಂತೆ.

ಸುಪಾರಿ ಪಡೆದ ಕೃಷ್ಣಮೂರ್ತಿ ಹಾಗೂ ಅನಿಲ್ ಅಟೆಂಡರ್​ ನವೀನ್​ನ ಕುತ್ತಿಗೆ ಬಿಗಿದು ಕೊಲೆಗೈದರೆಂದು ಪೊಲೀಸ್ ಮೂಲಗಳು ತಿಳಿಸಿವೆ. ಚಾಣಾಕ್ಷತನದಿಂದ ಕೊಲೆ ಪ್ರಕರಣ ಬೇದಿಸಿದ ಚಿಕ್ಕಬಳ್ಳಾಪುರ ಪೊಲೀಸರನ್ನು ಹಿರಿಯ ಅಧಿಕಾರಿಗಳು ಅಭಿನಂದಿಸಿದ್ದಾರೆ.

caption

ದೀಪಾ

caption

ಅನಿಲ್

caption

ಕೃಷ್ಣಮೂರ್ತಿ