Chikkaballapur Crime: ಚಿಕ್ಕಬಳ್ಳಾಪುರ ಪೊಲೀಸರಿಗೆ ಯಾಮಾರಿಸಲು ಹೋಗಿ ಜೈಲು ಸೇರಿದ ನಟ ಭಯಂಕರ ಆರೋಪಿ!

Chikkaballapur police: ಪೊಲೀಸರ ಬಳಿ ಪಳನಿಯು ದುಷ್ಕರ್ಮಿಗಳು ತನ್ನನ್ನು ಬೆದರಿಸಿ ಹಣ ದರೋಡೆ ಮಾಡಿದ್ದಾರೆ. ನನಗೆ ನ್ಯಾಯ ಕೊಡಿಸಿ ಎಂದು ಅಂಗಲಾಚಿದ್ದ. ಪ್ರಕರಣ ದಾಖಲಿಸಿಕೊಂಡ ಚಿಕ್ಕಬಳ್ಳಾಪುರ ಗ್ರಾಮಾಂತರ ಠಾಣಾ ಪೊಲೀಸರು ತನಿಖೆ ಕೈಗೊಂಡರೆ ದೂರು ನೀಡಿದವನೇ ಆರೋಪಿ ನಟ ಭಯಂಕರನೆಂದು ಗೊತ್ತಾಗಿದೆ. ಇದರಿಂದ ಪಳನಿಯನ್ನು ಬಂಧಿಸಿ ವಿಚಾರಣೆ ನಡೆಸಿದಾಗ ಸತ್ಯ ಬಯಲಾಗಿದೆ.

Chikkaballapur Crime: ಚಿಕ್ಕಬಳ್ಳಾಪುರ ಪೊಲೀಸರಿಗೆ ಯಾಮಾರಿಸಲು ಹೋಗಿ ಜೈಲು ಸೇರಿದ ನಟ ಭಯಂಕರ ಆರೋಪಿ!
ಚಿಕ್ಕಬಳ್ಳಾಪುರ: ಪೊಲೀಸರಿಗೆ ಯಾಮಾರಿಸಲು ಹೋಗಿ ಜೈಲು ಸೇರಿದ ನಟ ಭಯಂಕರ ಆರೋಪಿ
Follow us
| Updated By: ಸಾಧು ಶ್ರೀನಾಥ್​

Updated on:Sep 05, 2024 | 4:23 PM

ಚಿಕ್ಕಬಳ್ಳಾಪುರ: ಖಾಸಗಿ ಫೈನಾನ್ಸ್ ಕಂಪನಿಯಲ್ಲಿ ಕ್ಯಾಷ್​ ಕಲೆಕ್ಷನ್ ಕೆಲಸ ಮಾಡುತ್ತಿದ್ದ ಉದ್ಯೋಗಿಯೋರ್ವ ತನ್ನದೇ ಸ್ನೇಹಿತರ ಮೂಲಕ ದರೋಡೆ ಮಾಡಿಸಿಕೊಂಡು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದ. ತನಿಖೆ ನಡೆಸಿದ ಪೊಲೀಸರಿಗೆ ದೂರು ಕೊಟ್ಟವನೇ ಆರೋಪಿ ಎನ್ನುವುದು ಪತ್ತೆ ಹಚ್ಚಲು ಹೆಚ್ಚು ಸಮಯ ಹಿಡಿಸಲಿಲ್ಲ.

ಚಿಕ್ಕಬಳ್ಳಾಪುರ ನಗರದ ಮಂಜುನಾಥ ಫೈನಾನ್ಸ್​​ನಲ್ಲಿ ಆಂಧ್ರದ ಕುಪ್ಪಂ ತಾಲ್ಲೂಕು ಕೂಸೂರು ಗ್ರಾಮದ ಪಳನಿ. ಎಂ ಎನ್ನುವ ಯುವಕ ಕ್ಯಾಷ್​ ಕಲೆಕ್ಟರ್ ಆಗಿ ಕೆಲಸ ಮಾಡುತ್ತಿದ್ದ. ಆಗಸ್ಟ್ 21 ರಂದು ಕ್ಯಾಷ್ ಕಲೆಕ್ಷನ್‌ಗೆಂದು ಚಿಕ್ಕಬಳ್ಳಾಪುರ ತಾಲ್ಲೂಕು, ಆಕಲತಿಮ್ಮನಹಳ್ಳಿಗೆ ಹೋಗಿ ವಾಪಸ್ಸು ಚಿಕ್ಕಬಳ್ಳಾಪುರದತ್ತ ಮುಖ ಮಾಡಿದ್ದ. ಆಗ ಚಿಕ್ಕಬಳ್ಳಾಪುರ ತಾಲ್ಲೂಕು, ಗುಂಡ್ಲಗುರ್ಕಿ ಬಳಿ ಪಳನಿಯನ್ನು ಅಡ್ಡಗಟ್ಟಿದ ಮೂರು ಮಂದಿ ದುಷ್ಕರ್ಮಿಗಳ ತಂಡ ಮಾರಕಾಸ್ತ್ರಗಳಿಂದ ಬೆದರಿಸಿ ಆತನ ಬಳಿಯಿದ್ದ ನಗದು ಹಣವನ್ನು ಕಿತ್ತುಕೊಂಡು ಪರಾರಿಯಾಗಿದ್ದರಂತೆ. ಇದರಿಂದ ಪಳನಿ ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದ.

ದೂರು ಕೊಟ್ಟವನೇ ಎ1 ಆರೋಪಿ! ಇನ್ನು ಪೊಲೀಸರ ಬಳಿ ಪಳನಿಯು ದುಷ್ಕರ್ಮಿಗಳು ತನ್ನನ್ನು ಬೆದರಿಸಿ ಹಣ ದರೋಡೆ ಮಾಡಿದ್ದಾರೆ. ನನಗೆ ನ್ಯಾಯ ಕೊಡಿಸಿ ಎಂದು ಅಂಗಲಾಚಿದ್ದ. ಪ್ರಕರಣ ದಾಖಲಿಸಿಕೊಂಡ ಚಿಕ್ಕಬಳ್ಳಾಪುರ ಗ್ರಾಮಾಂತರ ಠಾಣಾ ಪೊಲೀಸರು ತನಿಖೆ ಕೈಗೊಂಡರೆ ದೂರು ನೀಡಿದವನೇ ಆರೋಪಿ ನಟ ಭಯಂಕರನೆಂದು ಗೊತ್ತಾಗಿದೆ. ಇದರಿಂದ ಪಳನಿಯನ್ನು ಬಂಧಿಸಿ ವಿಚಾರಣೆ ನಡೆಸಿದಾಗ ಸತ್ಯ ಬಯಲಾಗಿದೆ.

ಇದನ್ನೂ ಓದಿ: Male Population on Extinct: ಭವಿಷ್ಯದಲ್ಲಿ ಗಂಡಸರೇ ಇರುವುದಿಲ್ವಂತೆ… ಪುರುಷ ವಂಶವಾಹಿ ಶಕ್ತಿ ಕ್ಷೀಣಿಸುತ್ತಿದೆಯಂತೆ! ಮುಂದೇನು?

ಅಸಲಿಗೆ ಅಲ್ಲಿ ಆಗಿದ್ದೇನು? ಪಳನಿ ತಾನು ಕೆಲಸ ಮಾಡುವ ಕಂಪನಿಗೆ ವಂಚನೆ ಮಾಡಲು ತನ್ನ ಕುಪ್ಪಂನ ಸ್ನೇಹಿತರಾದ ಪಳನಿ. ಸಿ, ಆರ್. ಹರಿ, ಈಶ್ವರಬಾಬು ಎನ್ನುವ ಮೂವರು ಸ್ನೇಹಿತರನ್ನು ಕರೆಯಿಸಿ ದರೋಡೆ ಮಾಡುವ ಸಂಚು ಸೃಷ್ಟಿಸಿದ್ದಾನೆ. ಈತನ ಮಾರ್ಗದರ್ಶನದಂತೆ ಆತನ ಸ್ನೇಹಿತರು ನಡೆದುಕೊಂಡಿದ್ದಾರೆ. ಈಗ ಮಾಡಿದ ತಪ್ಪಿಗೆ ದೂರುದಾರ ಪಳನಿ. ಎಂ ಸೇರಿದಂತೆ ಆತನ ಮೂವರು ಸ್ನೇಹಿತರೂ ಜೈಲು ಪಾಲಾಗಿದ್ದಾರೆ. ಬಂಧಿತರಿಂದ 1 ಪಲ್ಸರ್ ಬೈಕ್, 8000 ಸಾವಿರ ನಗದು ಜಪ್ತಿ ಮಾಡಿದ್ದಾರೆ. ಇದರಿಂದ ಚಿಕ್ಕಬಳ್ಳಾಪುರ ಎಸ್ಪಿ ಕುಶಲ್‌ ಚೌಕ್ಸಿ ಕಾರ್ಯಾಚರಣೆಯಲ್ಲಿ ಭಾಗಿಯಾದ ಸಿಬ್ಬಂದಿಗಳಿಗೆ ಬಹುಮಾನ ಘೋಷಿಸಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 4:22 pm, Thu, 5 September 24

ವಿವೋ ಹೊಸ ಸ್ಮಾರ್ಟ್​​ಫೋನ್ ಕ್ಯಾಮೆರಾದ ಫೋಟೊ ಕ್ಲಾರಿಟಿ ಸೂಪರ್ಬ್
ವಿವೋ ಹೊಸ ಸ್ಮಾರ್ಟ್​​ಫೋನ್ ಕ್ಯಾಮೆರಾದ ಫೋಟೊ ಕ್ಲಾರಿಟಿ ಸೂಪರ್ಬ್
ಮೈಸೂರು ದಸರಾ ಆನೆಗಳ ಮಾವುತ, ಕಾವಾಡಿಗರಿಗೆ ಹಾಟ್​​ ಬಾಕ್ಸ್​​ ಗಿಫ್ಟ್​​
ಮೈಸೂರು ದಸರಾ ಆನೆಗಳ ಮಾವುತ, ಕಾವಾಡಿಗರಿಗೆ ಹಾಟ್​​ ಬಾಕ್ಸ್​​ ಗಿಫ್ಟ್​​
ವಿದ್ಯಾರ್ಥಿಗಳ ಮುಂದೆ ಮಾದಕ ಮೈಮಾಟ ತೋರಿಸಿಕೊಂಡು ನೃತ್ಯ ಮಾಡಿದ ಶಿಕ್ಷಕಿ
ವಿದ್ಯಾರ್ಥಿಗಳ ಮುಂದೆ ಮಾದಕ ಮೈಮಾಟ ತೋರಿಸಿಕೊಂಡು ನೃತ್ಯ ಮಾಡಿದ ಶಿಕ್ಷಕಿ
‘ಚಾರ್ಜ್​ಶೀಟ್ ಸಾರ್ವಜನಿಕ ಡಾಕ್ಯುಮೆಂಟ್; ಜಿ. ಪರಮೇಶ್ವರ್
‘ಚಾರ್ಜ್​ಶೀಟ್ ಸಾರ್ವಜನಿಕ ಡಾಕ್ಯುಮೆಂಟ್; ಜಿ. ಪರಮೇಶ್ವರ್
ಗಣೇಶ ವಿಸರ್ಜನೆ ವೇಳೆ ನೀರಿನಲ್ಲಿ ಮುಳುಗಿ ಇಬ್ಬರು ಯುವಕರು ಸಾವು
ಗಣೇಶ ವಿಸರ್ಜನೆ ವೇಳೆ ನೀರಿನಲ್ಲಿ ಮುಳುಗಿ ಇಬ್ಬರು ಯುವಕರು ಸಾವು
ಹಾಸನ: ಕೆರೆಯಲ್ಲಿ ಈಜಾಡಿ ಕಾಫಿ ತೋಟಕ್ಕೆ ಲಗ್ಗೆ ಇಟ್ಟ ಕಾಡಾನೆಗಳು
ಹಾಸನ: ಕೆರೆಯಲ್ಲಿ ಈಜಾಡಿ ಕಾಫಿ ತೋಟಕ್ಕೆ ಲಗ್ಗೆ ಇಟ್ಟ ಕಾಡಾನೆಗಳು
ಬಿವಿವಿ ಸಂಘದ ಮೆಡಿಕಲ್ ಕಾಲೇಜ್ ಆವರಣದಲ್ಲಿ ಓಣಂ ಸಂಭ್ರಮ, ವಿಡಿಯೋ ನೋಡಿ
ಬಿವಿವಿ ಸಂಘದ ಮೆಡಿಕಲ್ ಕಾಲೇಜ್ ಆವರಣದಲ್ಲಿ ಓಣಂ ಸಂಭ್ರಮ, ವಿಡಿಯೋ ನೋಡಿ
ಪಿತೃಪಕ್ಷದ ಮಹತ್ವ ತಿಳಿಯಲು ಈ ವಿಡಿಯೋದಲ್ಲಿ ನೋಡಿ
ಪಿತೃಪಕ್ಷದ ಮಹತ್ವ ತಿಳಿಯಲು ಈ ವಿಡಿಯೋದಲ್ಲಿ ನೋಡಿ
Nithya Bhavishya: ಈ ರಾಶಿಯವರಿಗೆ ಸ್ವ ಉದ್ಯೋಗವು ಇಂದು ಕೈ ಹಿಡಿಯುವುದು
Nithya Bhavishya: ಈ ರಾಶಿಯವರಿಗೆ ಸ್ವ ಉದ್ಯೋಗವು ಇಂದು ಕೈ ಹಿಡಿಯುವುದು
ಗುಜರಾತ್ ಪ್ರವಾಹದಲ್ಲಿ ಸಿಲುಕಿದ ಕಾರು ಹತ್ತಿ ಕುಳಿತು ಹರಟೆ ಹೊಡೆದ ದಂಪತಿ
ಗುಜರಾತ್ ಪ್ರವಾಹದಲ್ಲಿ ಸಿಲುಕಿದ ಕಾರು ಹತ್ತಿ ಕುಳಿತು ಹರಟೆ ಹೊಡೆದ ದಂಪತಿ