AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಚಿಕ್ಕಬಳ್ಳಾಪುರದಲ್ಲಿ ಝೀಕಾ ವೈರಸ್ ಪತ್ತೆ ಕೇಸ್​​​: 56 ಜನರ ರಕ್ತದ ಪರೀಕ್ಷಾ ವರದಿ ನೆಗೆಟಿವ್

Zika Virus: ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ತಾಲೂಕಿನ ತಲಕಾಯಲಬೆಟ್ಟ ಗ್ರಾಮದ ಸೊಳ್ಳೆಯಲ್ಲಿ ಝೀಕಾ ವೈರಸ್ ಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸದ್ಯ 56 ಜನರ ರಕ್ತದ ಪರೀಕ್ಷಾ ವರದಿ ಚಿಕ್ಕಬಳ್ಳಾಪುರ ಜಿಲ್ಲಾಡಳಿತ ಕೈಸೇರಿದ್ದು ನೆಗೆಟಿವ್ ಇದೆ. ಬೆಂಗಳೂರಿನ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್‌ ವೈರಾಲಜಿಯಿಂದ ವರದಿ ನೀಡಲಾಗಿದೆ.

ಚಿಕ್ಕಬಳ್ಳಾಪುರದಲ್ಲಿ ಝೀಕಾ ವೈರಸ್ ಪತ್ತೆ ಕೇಸ್​​​: 56 ಜನರ ರಕ್ತದ ಪರೀಕ್ಷಾ ವರದಿ ನೆಗೆಟಿವ್
ಪ್ರಾತಿನಿಧಿಕ ಚಿತ್ರ
ಭೀಮಪ್ಪ ಪಾಟೀಲ್​, ಚಿಕ್ಕಬಳ್ಳಾಪುರ
| Updated By: ಗಂಗಾಧರ​ ಬ. ಸಾಬೋಜಿ|

Updated on:Nov 16, 2023 | 4:25 PM

Share

ಚಿಕ್ಕಬಳ್ಳಾಪುರ, ನವೆಂಬರ್​​​​ 16: ಜಿಲ್ಲೆಯ ಶಿಡ್ಲಘಟ್ಟ ತಾಲೂಕಿನ ತಲಕಾಯಲಬೆಟ್ಟ ಗ್ರಾಮದ ಸೊಳ್ಳೆಯಲ್ಲಿ ಝೀಕಾ ವೈರಸ್ (Zika Virus) ಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸದ್ಯ 56 ಜನರ ರಕ್ತದ ಪರೀಕ್ಷಾ ವರದಿ ಚಿಕ್ಕಬಳ್ಳಾಪುರ ಜಿಲ್ಲಾಡಳಿತ ಕೈಸೇರಿದ್ದು ನೆಗೆಟಿವ್ ಇದೆ. ಬೆಂಗಳೂರಿನ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್‌ ವೈರಾಲಜಿಯಿಂದ ವರದಿ ನೀಡಲಾಗಿದೆ.

ಈ ಕುರಿತಾಗಿ ಟಿವಿ9ಗೆ ಚಿಕ್ಕಬಳ್ಳಾಪುರ ಡಿಹೆಚ್‌ಒ ಎಸ್.ಎಸ್.ಮಹೇಶ್‍ಕುಮಾರ್​ ಪ್ರತಿಕ್ರಿಯಿಸಿದ್ದು, ಅ.26ರಂದು ಗ್ರಾಮದಲ್ಲಿ ಕೇವಲ ಒಂದು ಸೊಳ್ಳೆಯಲ್ಲಿ ವೈರಸ್ ಪತ್ತೆಯಾಗಿತ್ತು. ಝೀಕಾ ವೈರಸ್ ಪತ್ತೆ ಹಿನ್ನೆಲೆಯಲ್ಲಿ ಟೆಸ್ಟ್‌ಗೆ ರಕ್ತದ ಸ್ಯಾಂಪಲ್ ಕಳಿಸಲಾಗಿತ್ತು. ಗ್ರಾಮದಲ್ಲಿ 11 ಸ್ಥಳಗಳಲ್ಲಿ ಸಂಗ್ರಹಿಸಿದ್ದ ಸೊಳ್ಳೆಗಳ ರಕ್ತದ ಸ್ಯಾಂಪಲ್ ಹಾಗೂ ತಲಕಾಯಲಬೆಟ್ಟದಲ್ಲಿ 56 ಜನರ ರಕ್ತದ ಸ್ಯಾಂಪಲ್ ಟೆಸ್ಟ್‌ಗೆ ಕಳಿಸಲಾಗಿತ್ತು. ಸೊಳ್ಳೆಗಳಿಗೂ ಹಾಗೂ 56 ಜನರಿಗೂ ಯಾವುದೇ ಸೋಂಕು ಪತ್ತೆಯಾಗಿಲ್ಲ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಝಿಕಾ ವೈರಸ್​​ ಪಾಸಿಟಿವ್ ಬಂದರು ಆತಂಕ ಬೇಡ: ಆರೋಗ್ಯ ಇಲಾಖೆ ಆಯುಕ್ತ ರಂದೀಪ್

ಜಿಲ್ಲೆಯಲ್ಲಿ ಝೀಕಾ ವೈರಸ್ ಸೊಳ್ಳೆಯಿಂದ ಪತ್ತೆಯಾದ ಬೆನ್ನಲ್ಲೆ ಆರೋಗ್ಯ ಇಲಾಖೆ ಹೈ ಅಲರ್ಟ್​​ ಆಗಿತ್ತು. ಈ ಕುರಿತಾಗಿ ಆರೋಗ್ಯ ಇಲಾಖೆಯ ಆಯುಕ್ತ ರಂದೀಪ್​ ಪ್ರತಿಕ್ರಿಯೆ ನೀಡಿದ್ದರು. ಡೆಂಘೀ ರೀತಿಯಲ್ಲಿ ತುಂಬಾ ಗಂಭೀರ ಸ್ವರೂಪವಿಲ್ಲ. ಮರಣದ ಪ್ರಮಾಣದ ಕಡಿಮೆ ಇರುತ್ತದೆ‌. ಆದರೆ ಗರ್ಭಿಣಿಯರು ಎಚ್ಚರಿಕೆ ವಹಿಸಬೇಕು. ಮಗುವಿ‌ನ ಬ್ರೈನ್ ಬೆಳವಣಿಗೆಗೆ ತೊಂದರೆಯಾಗಲಿದೆ. ಝೀಕಾ ಪಾಸಿಟಿವ್ ಬಂದರು ತೀರಾ ಆತಂಕ ಬೇಡ ಎಂದು ಹೇಳಿದ್ದರು.

ವೈರಸ್ ಹರದಡಂತೆ ಮುಂಜಾಗ್ರತಾ ಕ್ರಮ

ವೈರಸ್ ಪತ್ತೆಯಾದ ಭಾಗದಲ್ಲಿ ಮುನ್ನೆಚ್ಚರಿಕೆ ವಹಿಸಲು ಸೂಚನೆ ನೀಡಲಾಗಿತ್ತು. ಝೀಕಾ ವೈರಸ್​ ಪತ್ತೆಯಾದ ಕಡೆ ಯಾವುದೇ ಹರಡುವಿಕೆಯಾಗಿಲ್ಲ. ಝೀಕಾ ವೈರಸ್ ಪತ್ತೆಯಾದ ಸುತ್ತಮುತ್ತಲಿನ ಗ್ರಾಮಗಳಲ್ಲಿ ನಿಗಾ ಇಡಲಾಗಿತ್ತು. ಮನೆ ಮನೆ ಸಮೀಕ್ಷೆ ಮಾಡಿ ರಕ್ತ ಸಂಗ್ರಹಕ್ಕೆ ಮಾಡಲಾಗಿತ್ತು. ತೀವ್ರ ವೈರಸ್ ಹರದಡಂತೆ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿತ್ತು.

ಇದನ್ನೂ ಓದಿ: ಚಿಕ್ಕಬಳ್ಳಾಪುರದಲ್ಲಿ ಝಿಕಾ ವೈರಸ್ ಪತ್ತೆ; ಆರೋಗ್ಯ ಇಲಾಖೆಯಿಂದ ಮುಜಾಗೃತ ಕ್ರಮ

ಝೀಕಾ ವೈರಸ್ ರೋಗದ ಲಕ್ಷಣಗಳು

  • ಕಣ್ಣು ಕೆಂಪಾಗುವಿಕೆ
  • ತಲೆ ನೋವು
  • ಜ್ವರ
  • ಕೀಲುಗಳಲ್ಲಿ ನೋವು
  • ಗಂಧೆಗಳು
  • ಸ್ನಾಯುಗಳಲ್ಲಿ ನೋವು

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 4:13 pm, Thu, 16 November 23