ಝಿಕಾ ವೈರಸ್​​ ಪಾಸಿಟಿವ್ ಬಂದರು ಆತಂಕ ಬೇಡ: ಆರೋಗ್ಯ ಇಲಾಖೆ ಆಯುಕ್ತ ರಂದೀಪ್

ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಝಿಕಾ ಸೊಳ್ಳೆಯಿಂದ ವೈರಸ್ ಪತ್ತೆ ಬೆನ್ನಲ್ಲೆ ರಾಜ್ಯಾದ್ಯಂತ ಹೈ ಅಲರ್ಟ್​​ ಆಗಿದೆ. ಈ ಕುರಿತಾಗಿ ಆರೋಗ್ಯ ಇಲಾಖೆಯ ಆಯುಕ್ತ ರಂದೀಪ್​ ಪ್ರತಿಕ್ರಿಯೆ ನೀಡಿದ್ದು, ಡೆಂಘೀ ರೀತಿಯಲ್ಲಿ ತುಂಬಾ ಗಂಭೀರ ಸ್ವರೂಪವಿಲ್ಲ. ಮರಣದ ಪ್ರಮಾಣದ ಕಡಿಮೆ ಇರುತ್ತದೆ‌. ಆದರೆ ಗರ್ಭಿಣಿಯರು ಎಚ್ಚರಿಕೆ ವಹಿಸಬೇಕು ಎಂದಿದ್ದಾರೆ.

ಝಿಕಾ ವೈರಸ್​​ ಪಾಸಿಟಿವ್ ಬಂದರು ಆತಂಕ ಬೇಡ: ಆರೋಗ್ಯ ಇಲಾಖೆ ಆಯುಕ್ತ ರಂದೀಪ್
ಪ್ರಾತಿನಿಧಿಕ ಚಿತ್ರ
Follow us
Vinay Kashappanavar
| Updated By: ಗಂಗಾಧರ​ ಬ. ಸಾಬೋಜಿ

Updated on: Nov 02, 2023 | 2:46 PM

ಬೆಂಗಳೂರು, ನವೆಂಬರ್​​​​ 02: ಜಿಲ್ಲೆಯಲ್ಲಿ ಝಿಕಾ (Zika Virus) ಸೊಳ್ಳೆಯಿಂದ ವೈರಸ್ ಪತ್ತೆ ಬೆನ್ನಲ್ಲೆ ರಾಜ್ಯಾದ್ಯಂತ ಹೈ ಅಲರ್ಟ್​​ ಆಗಿದೆ. ಈ ಕುರಿತಾಗಿ ಆರೋಗ್ಯ ಇಲಾಖೆಯ ಆಯುಕ್ತ ರಂದೀಪ್​ ಪ್ರತಿಕ್ರಿಯೆ ನೀಡಿದ್ದು, ಡೆಂಘೀ ರೀತಿಯಲ್ಲಿ ತುಂಬಾ ಗಂಭೀರ ಸ್ವರೂಪವಿಲ್ಲ. ಮರಣದ ಪ್ರಮಾಣದ ಕಡಿಮೆ ಇರುತ್ತದೆ‌. ಆದರೆ ಗರ್ಭಿಣಿಯರು ಎಚ್ಚರಿಕೆ ವಹಿಸಬೇಕು. ಮಗುವಿ‌ನ ಬ್ರೈನ್ ಬೆಳವಣಿಗೆಗೆ ತೊಂದರೆಯಾಗಲಿದೆ. ಝೀಕಾ ಪಾಸಿಟಿವ್ ಬಂದರು ತೀರಾ ಆತಂಕ ಬೇಡ ಎಂದು ಹೇಳಿದ್ದಾರೆ.

ರಾಜ್ಯಾದ್ಯಂತ ಝಿಕಾ ವೈರಸ್ ಪತ್ತೆಗಾಗಿ ಸ್ಯಾಂಪಲ್ಸ್ ಟೆಸ್ಟ್ ಮಾಡಲಿದ್ದೇವೆ. ಹೊಸದಾಗಿ ಶೀಘ್ರದಲ್ಲಿ ಇದಕ್ಕಾಗಿ ಗೈಡ್ ಲೈನ್ಸ್ ಹೊರಡಿಸಲಿದ್ದೇವೆ. ಚಿಕ್ಕಬಳ್ಳಾಪುರದ ಮೂರು ಭಾಗದಲ್ಲಿ ಒಂದು ಸೊಳ್ಳೆಯ ಪೂಲ್ ನಲ್ಲಿ ಝೀಕಾ ಪತ್ತೆಯಾಗಿದೆ. ಎನ್​ಐವಿ ಪುಣೆಯಿಂದ ಪತ್ತೆಯಾಗಿದೆ. ಮೂರು ಗ್ರಾಮ ವ್ಯಾಪ್ತಿಯಲ್ಲಿ ಈಗಾಗಲೇ ಅಧಿಕಾರಿಗಳು ತೀವ್ರ ಎಚ್ಚರಿಕೆ ವಹಿಸಿದ್ದಾರೆ ಎಂದರು.

ಇದನ್ನೂ ಓದಿ: ಚಿಕ್ಕಬಳ್ಳಾಪುರದಲ್ಲಿ ಮಾರಕ ಜಿಕಾ ವೈರಲ್ ಪತ್ತೆ, ಆರೋಗ್ಯ ಇಲಾಖೆ ಹೈ ಅಲರ್ಟ್

ಜ್ವರ ಬಂದವರ ಸ್ಯಾಂಪಲ್ಸ್​ಗಳನ್ನು ಈಗಾಗಲೇ ಪುಣೆಗೆ ಕಳಿಸಿದ್ದಾರೆ. ಎರಡು ಸಾವಿರ ಮನೆಗಳಲ್ಲಿ ಫೀವರ್ ಸ್ಯಾಂಪಲ್ಸ್ ಕಳಿಸಲಾಗಿದೆ. ಸ್ವಚ್ಛವಾದ ನೀರು ಇರುವ ಕಡೆ ಸೊಳ್ಳೆ ಉತ್ಪತ್ತಿಯಾಗುತ್ತದೆ. ಗರ್ಭಿಣಿಯರ ಪ್ರತ್ಯೇಕ ಸ್ಕ್ರೀನಿಂಗ್ ವ್ಯವಸ್ಥೆಯನ್ನು ಮಾಡಲಾಗಿದೆ. ಮೂವರ ವರದಿ ಬರಬೇಕಾಗಿದೆ. ಅದರಲ್ಲಿ ಒಬ್ಬರು ಇವತ್ತು ಡಿಸ್​ಜಾರ್ಜ್ ಆಗುತ್ತಾರೆ. ಇನ್ನಿಬ್ಬರು ಮೊನ್ನೆಯೇ ಡಿಸ್​ಜಾರ್ಜ್ ಆಗಿದ್ದಾರೆ ಎಂದು ತಿಳಿಸಿದ್ದಾರೆ.

ವೈರಸ್ ಹರದಡಂತೆ ಮುಂಜಾಗ್ರತಾ ಕ್ರಮ

ವೈರಸ್ ಪತ್ತೆಯಾದ ಭಾಗದಲ್ಲಿ ಮುನ್ನೆಚ್ಚರಿಕೆ ವಹಿಸಲು ಸೂಚನೆ ನೀಡಲಾಗಿದೆ. ಝಿಕಾ ವೈರಸ್​ ಪತ್ತೆಯಾದ ಕಡೆ ಯಾವುದೇ ಹರಡುವಿಕೆಯಾಗಿಲ್ಲ. ಝಿಕಾ ವೈರಸ್ ಪತ್ತೆಯಾದ ಸುತ್ತಮುತ್ತಲಿನ ಗ್ರಾಮಗಳಲ್ಲಿ ನಿಗಾ ಇಡಲಾಗಿದೆ. ಮನೆ ಮನೆ ಸಮೀಕ್ಷೆ ಮಾಡಿ ರಕ್ತ ಸಂಗ್ರಹಕ್ಕೆ ಮುಂದಾಗಿದ್ದೇವೆ. ತೀವ್ರ ವೈರಸ್ ಹರದಡಂತೆ ಮುಂಜಾಗ್ರತಾ ಕ್ರಮ ಕೈಗೊಂಡಿದ್ದೇವೆ ಎಂದರು.

ಝಿಕಾ, ನಿಫಾ ಬೇರೆ ಬೇರೆ: ಸಚಿವ ದಿನೇಶ್ ಗುಂಡೂರಾವ್​​ 

ಆರೋಗ್ಯ ಸಚಿವ ದಿನೇಶ್ ಗುಂಡೂರಾವ್​​ ಹೇಳಿಕೆ ನೀಡಿದ್ದು, ಕೇರಳದಲ್ಲಿ ನಿಫಾ ವೈರಸ್ ಪತ್ತೆಯಾಗಿತ್ತು, ಝಿಕಾ ಬೇರೆ, ನಿಫಾ ಬೇರೆ. ಝಿಕಾ ಬಗ್ಗೆ ಭಯ ಬೇಡ, ಬಾಣಂತಿಯರು ಎಚ್ಚರಿಕೆಯಿಂದ ಇರಬೇಕು. ಸೊಳ್ಳೆಗಳಲ್ಲಿ ಝಿಕಾ ಕಾಣಿಸಿಕೊಂಡಿದೆ, ಮನುಷ್ಯರಿಗೆ ಪಾಸಿಟಿವ್ ಬಂದಿಲ್ಲ. ಝಿಕಾ ಪತ್ತೆ ಹಿನ್ನೆಲೆ ಆಸ್ಪತ್ರೆಯಲ್ಲಿ ಇದ್ದವರಿಗೆ ಪರೀಕ್ಷೆ ಮಾಡಲಾಗಿದೆ. ಝಿಕಾ ವೈರಸ್​ ಲಕ್ಷಣ ಇದ್ದವರ ಸ್ಯಾಂಪಲ್ ಪಡೆಯಲಾಗಿದೆ. ಇನ್ನು 3 ದಿನಗಳಲ್ಲಿ ಟೆಸ್ಟ್​ಗೆ ಒಳಪಟ್ಟವರ ವರದಿ ಬರುವ ಸಾಧ್ಯತೆ. ಆರೋಗ್ಯ ಇಲಾಖೆಯಿಂದ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.