Chikkaballapura: ಸೂಟು ಬೂಟು ತೆಗೆದು, ಸಲಕೆ, ಪೊರಕೆ ಹಿಡಿದು ವಿದ್ಯಾರ್ಥಿನಿಯರಿಗೆ ಸ್ವಚ್ಚತೆ ಪಾಠ ಮಾಡಿದ ನ್ಯಾಯಾಧೀಶ ಬಿ.ವೀರಪ್ಪ

| Updated By: ಕಿರಣ್ ಹನುಮಂತ್​ ಮಾದಾರ್

Updated on: Jan 08, 2023 | 4:16 PM

ನಗರದ ಸರ್ಕಾರಿ ಮಹಿಳಾ ಕಾಲೇಜಿನ ಪರಿಶೀಲನೆಗೆ ಬಂದ ನ್ಯಾಯಮೂರ್ತಿಗಳು, ಸ್ವತಃ ತಾವೆ ಶೂಟು ಬೂಟು ತೆಗೆದು ಸಲಿಕೆ ಪೊರಕೆ ಹಿಡಿದು ಸ್ವಚ್ಚತೆ ಮಾಡುವುದರ ಮೂಲಕ ವಿದ್ಯಾರ್ಥಿನಿಯರಿಗೆ ಸ್ವಚ್ಚತೆಯ ಪಾಠ ಮಾಡಿದ್ದಾರೆ.

Chikkaballapura: ಸೂಟು ಬೂಟು ತೆಗೆದು, ಸಲಕೆ, ಪೊರಕೆ ಹಿಡಿದು ವಿದ್ಯಾರ್ಥಿನಿಯರಿಗೆ ಸ್ವಚ್ಚತೆ ಪಾಠ ಮಾಡಿದ ನ್ಯಾಯಾಧೀಶ ಬಿ.ವೀರಪ್ಪ
ಸ್ವಚ್ಛತೆ ಪಾಠ ಮಾಡಿದ ನ್ಯಾಯಾಧೀಶ ಬಿ. ವೀರಪ್ಪ
Follow us on

ಚಿಕ್ಕಬಳ್ಳಾಪುರ: ನಗರದ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನ ಅವ್ಯವಸ್ಥೆ ಕುರಿತು ಸ್ವತಃ ಕಾಲೇಜಿನ ವಿದ್ಯಾರ್ಥಿನಿಯರು ರಾಜ್ಯ ಕಾನೂನು ಸೇವಾ ಪ್ರಾಧಿಕಾರದ ಅಧ್ಯಕ್ಷರಾದ ನ್ಯಾಯಾಧೀಶ ಬಿ.ವೀರಪ್ಪ ರವರಿಗೆ ಪತ್ರ ಬರೆದಿದ್ದರು. ಈ ಹಿನ್ನಲೆ ಇಂದು(ಜ.7) ಕಾಲೇಜು ಪರಿಶೀಲನೆಗೆ ಬಂದ ನ್ಯಾಯಮೂರ್ತಿಗಳು, ಸ್ವತಃ ತಾವೆ ಶೂಟು ಬೂಟು ತೆಗೆದು ಸಲಿಕೆ, ಪೊರಕೆ ಹಿಡಿದು ಸ್ವಚ್ಚತೆ ಮಾಡುವುದರ ಮೂಲಕ ವಿದ್ಯಾರ್ಥಿನಿಯರಿಗೆ ಸ್ವಚ್ಚತೆಯ ಪಾಠ ಮಾಡಿದ್ದಾರೆ.

ಕಾಲೇಜಿನ ಮೂಲೆ ಮೂಲೆಯಲ್ಲೂ ಇಂಚಿಂಚು ಪರಿಶೀಲನೆ ನಡೆಸಿದ ನ್ಯಾಯಮೂರ್ತಿ ಬಿ.ವೀರಪ್ಪನವರು. 500 ಹೆಣ್ಣು ಮಕ್ಕಳಿಗೆ ಒಂದೇ ಟಾಯ್ಲೆಟ್, ಮೂಲಸೌಕರ್ಯವಿಲ್ಲದ ಕೊಠಡಿಗಳು, ಕುಡಿಯುವ ನೀರಿನ ಕೊರತೆ, ಗಿಡ ಗಂಟೆಗಳು ಬೆಳೆದಿರುವ ಕಾಲೇಜಿನ ಆವರಣ, ಮತ್ತೊಂದೆಡೆ ಅರ್ಧಕ್ಕೆ ನಿಂತು ಪಾಳು ಕೊಂಪೆಯಾದ ಕಾಲೇಜು ಕಟ್ಟಡವನ್ನ ಕಂಡು ನ್ಯಾಯಧೀಶರು ಪುಲ್ ಗರಂ ಆದರು.

ಇದನ್ನೂ ಓದಿ:PM-CM-President ಗಳಿಗೆ ಚಿಕ್ಕಬಳ್ಳಾಪುರ ಸರ್ಕಾರಿ ಕಾಲೇಜಿನ ನೂರಾರು ವಿದ್ಯಾರ್ಥಿನಿಯರು ಸಾಲು ಸಾಲು ಪತ್ರ ಬರೆದರು! ಉದ್ದೇಶವೇನು?

ಎರಡು ತಿಂಗಳುಗಳ ಒಳಗಾಗಿ ಅರ್ಧಕ್ಕೆ ನಿಂತಿರುವ ಕಾಲೇಜು ಕಟ್ಟಡ ಕಂಪ್ಲೀಟ್ ಮಾಡಿಕೊಡಲು ನ್ಯಾಯಾಧೀಶರು ಸೂಚನೆ ನೀಡಿದರು. ಒಂದು ವೇಳೆ ಪೂರ್ಣ ಆಗದೇ ಹೋದಲ್ಲಿ ಸ್ವಯಂ ಪಿ.ಐ.ಎಲ್ ದಾಖಲು ಮಾಡಿಕೊಂಡು ಅಧಿಕಾರಿಗಳು ಹಾಗೂ ಸರ್ಕಾರವನ್ನು ನ್ಯಾಯಾಲಯಕ್ಕೆ ಎಳೆಯುವುದಾಗಿ ಎಚ್ಚರಿಸಿದರು.

ವರದಿ: ಭೀಮಪ್ಪ ಪಾಟೀಲ ಟಿವಿ9 ಚಿಕ್ಕಬಳ್ಳಾಪುರ

ಇನ್ನಷ್ಟು ರಾಜ್ಯಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ