AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಚಿಂತಾಮಣಿಯಲ್ಲಿ ಹುಣಸೆಹಣ್ಣಿನ ಘಮಲು, ಭಾರೀ ಸಂಖ್ಯೆಯಲ್ಲಿ ಮಾರುಕಟ್ಟೆಗೆ ಲಗ್ಗೆಯಿಟ್ಟ ಪಕ್ಕದ ರಾಜ್ಯಗಳ ವ್ಯಾಪಾರಿಗಳು

Chintamani tamarind market: ಈ ಬಾರಿ ಮರದಲ್ಲಿರುವ ಎಲೆಗಳನ್ನೇ ಮೀರಿಸುವ ಹಾಗೆ ಹುಣಸೆ ಕಾಯಿಗಳು ಬಿಟ್ಟಿವೆ. ಇದ್ರಿಂದ ಅಗತ್ಯಕ್ಕಿಂತ ಹೆಚ್ಚಿಗೆ ಸರಕು ಮಾರುಕಟ್ಟೆಗ ಬರ್ತಿದೆ. ಭಾನುವಾರ, ಮಂಗಳವಾರ ಹಾಗೂ ಶುಕ್ರವಾರ ಹುಣಸೆ ಹಣ್ಣಿನ ಸಂತೆ ನಡೆಯುತ್ತೆ, ನೂರಾರು ಟನ್ ಹುಣಸೆಹಣ್ಣು ಮಾರುಕಟ್ಟೆಗೆ ಬರ್ತಿದೆ. ಆದರೆ ಇದ್ರಿಂದ ನಿರೀಕ್ಷೆಯಷ್ಟು ಬೆಲೆ ಸಿಗ್ತಿಲ್ಲ. ರೈತರಂತೂ ಬೆಲೆ ಕಡಿಮೆಯಿಂದ ಅಸಮಾಧಾನಗೊಂಡಿದ್ದಾರೆ.

ಚಿಂತಾಮಣಿಯಲ್ಲಿ ಹುಣಸೆಹಣ್ಣಿನ ಘಮಲು, ಭಾರೀ ಸಂಖ್ಯೆಯಲ್ಲಿ ಮಾರುಕಟ್ಟೆಗೆ ಲಗ್ಗೆಯಿಟ್ಟ ಪಕ್ಕದ ರಾಜ್ಯಗಳ ವ್ಯಾಪಾರಿಗಳು
ಚಿಂತಾಮಣಿ ಮಾರುಕಟ್ಟೆಯಲ್ಲಿ ಹುಣಸೆಹಣ್ಣಿನ ಘಮಲು, ಲಗ್ಗೆಯಿಟ್ಟ ವ್ಯಾಪಾರಿಗಳು
ಭೀಮಪ್ಪ ಪಾಟೀಲ್​, ಚಿಕ್ಕಬಳ್ಳಾಪುರ
| Updated By: ಸಾಧು ಶ್ರೀನಾಥ್​|

Updated on: Mar 23, 2024 | 6:58 AM

Share

ರುಚಿ ರುಚಿಯಾಗಿ ಸವಿರುಚಿಗಾಗಿ ಅಡುಗೆ ಮಾಡಬೇಕು ಅಂದ್ರೆ ಅದೊಂದು ಪದಾರ್ಥ ಬೇಕೆ ಬೇಕು, ಅಡುಗೆ ಮನೆಯಲ್ಲಿ ಅದು ಇಲ್ಲದೆ ಅಡುಗೆ ಪರಿಪೂರ್ಣವಾಗಲ್ಲ, ಈಗ ಅದರ ಸೀಜನ್ ಆರಂಭವಾಗಿದ್ದು… ಅದೊಂದು ಮಾರುಕಟ್ಟೆಯಲ್ಲಿ ಅದರದ್ದೇ ಕಾರುಕಾರು. ಅಷ್ಟಕ್ಕೂ ಅದೇನ್ ಅಂತೀರಾ ಈ ವರದಿ ನೋಡಿ!! ಇದು ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲೂಕಿನ ಕೃಷಿ ಉತ್ಪನ್ನ ಮಾರುಕಟ್ಟೆ, ಇದು ಕೋಲಾರ ಚಿಕ್ಕಬಳ್ಳಾಪುರ ಅವಳಿ ಜಿಲ್ಲೆಗೆ ಖ್ಯಾತಿ. ಇಂಥದರಲ್ಲಿ ಇಲ್ಲಿ ನಡೆಯುವ ಹುಣಸೆ ಹಣ್ಣಿನ ಮಾರುಕಟ್ಟೆ (tamarind traders) ದಕ್ಷಿಣ ಭಾರತದಲ್ಲಿ ಖ್ಯಾತಿ. ಈಗ ಎಲ್ಲಿ ನೋಡಿದ್ರೂ ಎತ್ತ ನೋಡಿದ್ರೂ… ಹುಣಸೆ ಹಣ್ಣಿನ ಸಿಜನ್ (Chintamani tamarind market).

ಇದ್ರಿಂದ ರೈತರು ತಾವು ಬೆಳೆದ ಹುಣಸೆ ಹಣ್ಣು ಹಾಗೂ ಕಾಯಿಯನ್ನು ತೆಗೆದುಕೊಂಡು ಚಿಂತಾಮಣಿ ಮಾರುಕಟ್ಟೆಯಲ್ಲಿ ಮಾರಾಟ ಮಾಡುತ್ತಾರೆ. ಇದ್ರಿಂದ ಹುಣಸೆ ಹಣ್ಣು ಕೊಂಡುಕೊಳ್ಳಲು ಕೇರಳ ತಮಿಳನಾಡು ಆಂದ್ರ ಮಹಾರಾಷ್ಟ್ರದಿಂದಲೂ ದೊಡ್ಡ ದೊಡ್ಡ ಕಂಪನಿಗಳು ದೊಡ್ಡ ದೊಡ್ಡ ವರ್ತಕರು ಇಲ್ಲಿಗೆ ಆಗಮಿಸಿ ಹುಣಸೆ ಹಣ್ಣು ಖರೀದಿ ಮಾಡ್ತಿದ್ದಾರೆ.

Also Read: Forest Poachers – ಚಿಕ್ಕಬಳ್ಳಾಪುರದಲ್ಲಿ ನವಿಲುಗಳ ಮಾರಣಹೋಮ, ತಿಂಗಳಲ್ಲಿ 15ಕ್ಕೂ ಹೆಚ್ಚು ರಾಷ್ಟ್ರಪಕ್ಷಿಗಳ ಹತ್ಯೆ

ಈ ಬಾರಿ ಹುಣಸೆ ಮರದಲ್ಲಿರುವ ಎಲೆಗಳನ್ನೇ ಮೀರಿಸುವ ಹಾಗೆ ಹುಣಸೆ ಕಾಯಿಗಳು ಬಿಟ್ಟಿವೆ. ಇದ್ರಿಂದ ಅಗತ್ಯಕ್ಕಿಂತ ಹೆಚ್ಚಿಗೆ ಸರಕು ಮಾರುಕಟ್ಟೆಗ ಬರ್ತಿದೆ. ಭಾನುವಾರ, ಮಂಗಳವಾರ ಹಾಗೂ ಶುಕ್ರವಾರ ಹುಣಸೆ ಹಣ್ಣಿನ ಸಂತೆ ನಡೆಯುತ್ತೆ, ನೂರಾರು ಟನ್ ಹುಣಸೆಹಣ್ಣು ಮಾರುಕಟ್ಟೆಗೆ ಬರ್ತಿದೆ. ಆದರೆ ಇದ್ರಿಂದ ನಿರೀಕ್ಷೆಯಷ್ಟು ಬೆಲೆ ಸಿಗ್ತಿಲ್ಲ. ರೈತರಂತೂ ಬೆಲೆ ಕಡಿಮೆಯಿಂದ ಅಸಮಾಧಾನಗೊಂಡಿದ್ದಾರೆ.

ಮತ್ತೊಂದೆಡೆ ಹುಣಸೆ ಹಣ್ಣಿನ ಆಟಾಟೋಪದ ಮುಂದೆ ಟೊಮ್ಯಾಟೊ ಬೆಲೆ ಕುಸಿದಿದೆ. ಕೆ.ಜಿ. ಹುಣಸೆಹಣ್ಣು 30 ರೂಪಾಯಿಗೆ ಬಿಕಾರಿಯಾಗ್ತಿದೆ, ಇದ್ರಿಂದ ಟೊಮ್ಯಾಟೊ ಹಣ್ಣುಗಳನ್ನು ಕೇಳೋರೆ ಇಲ್ಲದಂತಾಗಿದೆ. ಟೊಮ್ಯಾಟೊಗೂ ಒಂದು ಕಾಲವಾದ್ರೆ ಹುಣಸೆಗೂ ಒಂದು ಕಾಲ ಎನ್ನುವಂತಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ​

ಯಶಸ್ವಿ ಜೈಸ್ವಾಲ್ ಸ್ಫೋಟಕ ಸೆಂಚುರಿ: ಮುಂಬೈ ದಾಖಲೆಯ ರನ್ ಚೇಸ್​
ಯಶಸ್ವಿ ಜೈಸ್ವಾಲ್ ಸ್ಫೋಟಕ ಸೆಂಚುರಿ: ಮುಂಬೈ ದಾಖಲೆಯ ರನ್ ಚೇಸ್​
‘ಮಾರ್ಕ್’ ಸಿನಿಮಾದಲ್ಲಿ ಹೀರೋಯಿನ್ ಇಲ್ಲ ಯಾಕೆ? ಉತ್ತರಿಸಿದ ಕಿಚ್ಚ ಸುದೀಪ್
‘ಮಾರ್ಕ್’ ಸಿನಿಮಾದಲ್ಲಿ ಹೀರೋಯಿನ್ ಇಲ್ಲ ಯಾಕೆ? ಉತ್ತರಿಸಿದ ಕಿಚ್ಚ ಸುದೀಪ್
ಚುನಾವಣೆಯಲ್ಲಿ ಸೋತಿದ್ದಕ್ಕೆ ಮೀಸೆ ಬೋಳಿಸಿಕೊಂಡ ಎಲ್‌ಡಿಎಫ್ ಕಾರ್ಯಕರ್ತ
ಚುನಾವಣೆಯಲ್ಲಿ ಸೋತಿದ್ದಕ್ಕೆ ಮೀಸೆ ಬೋಳಿಸಿಕೊಂಡ ಎಲ್‌ಡಿಎಫ್ ಕಾರ್ಯಕರ್ತ
ಪಾಕ್ ವಿರುದ್ಧ ಫ್ಲಾಪ್: ಸುಲಭವಾಗಿ ಔಟಾದ ವೈಭವ್ ಸೂರ್ಯವಂಶಿ
ಪಾಕ್ ವಿರುದ್ಧ ಫ್ಲಾಪ್: ಸುಲಭವಾಗಿ ಔಟಾದ ವೈಭವ್ ಸೂರ್ಯವಂಶಿ
ಶಾಲೆಯ ಬಳಿ ಸೆಕ್ಯುರಿಟಿಯ ಭುಜಕ್ಕೆ ಕಚ್ಚಿದ ಬೀದಿ ನಾಯಿ
ಶಾಲೆಯ ಬಳಿ ಸೆಕ್ಯುರಿಟಿಯ ಭುಜಕ್ಕೆ ಕಚ್ಚಿದ ಬೀದಿ ನಾಯಿ
ರೈಲಿನಲ್ಲಿ ಟಾಯ್ಲೆಟ್​ನಿಂದ ಹೊರಬರಲಾರದೆ ಪೊಲೀಸರಿಗೆ ಕರೆ ಮಾಡಿದ ಮಹಿಳೆ
ರೈಲಿನಲ್ಲಿ ಟಾಯ್ಲೆಟ್​ನಿಂದ ಹೊರಬರಲಾರದೆ ಪೊಲೀಸರಿಗೆ ಕರೆ ಮಾಡಿದ ಮಹಿಳೆ
ನಕಲಿ ಪೊಲೀಸರಿಗೆ ಅಸಲಿ ಖಾಕಿ ಶಾಕ್​​: ದರೋಡೆಗಿಳಿದಿದ್ದ ಗ್ಯಾಂಗ್​​ ಅರೆಸ್ಟ್
ನಕಲಿ ಪೊಲೀಸರಿಗೆ ಅಸಲಿ ಖಾಕಿ ಶಾಕ್​​: ದರೋಡೆಗಿಳಿದಿದ್ದ ಗ್ಯಾಂಗ್​​ ಅರೆಸ್ಟ್
ರಜತ್ ಪಾಪದ ಕೊಡ ತುಂಬಿದೆ, ಮನೆಯಿಂದ ಹೊರಗೆ ಕಳಿಸ್ತೀನಿ: ಗಿಲ್ಲಿ ಚಾಲೆಂಜ್
ರಜತ್ ಪಾಪದ ಕೊಡ ತುಂಬಿದೆ, ಮನೆಯಿಂದ ಹೊರಗೆ ಕಳಿಸ್ತೀನಿ: ಗಿಲ್ಲಿ ಚಾಲೆಂಜ್
Video: ತರಗತಿಯಲ್ಲಿ ಕುಳಿತಿದ್ದಾಗಲೇ ಹೃದಯಾಘಾತದಿಂದ ವಿದ್ಯಾರ್ಥಿನಿ ಸಾವು
Video: ತರಗತಿಯಲ್ಲಿ ಕುಳಿತಿದ್ದಾಗಲೇ ಹೃದಯಾಘಾತದಿಂದ ವಿದ್ಯಾರ್ಥಿನಿ ಸಾವು
ರಸ್ತೆಯಲ್ಲಿರೋದು ಒಂದೇ ಒಂದು ಕಾರು, ಟ್ರಾಫಿಕ್ ಇಲ್ಲ, ಸ್ಟಿಲ್ ವೈಟಿಂಗ್
ರಸ್ತೆಯಲ್ಲಿರೋದು ಒಂದೇ ಒಂದು ಕಾರು, ಟ್ರಾಫಿಕ್ ಇಲ್ಲ, ಸ್ಟಿಲ್ ವೈಟಿಂಗ್