Forest Poachers: ಚಿಕ್ಕಬಳ್ಳಾಪುರದಲ್ಲಿ ನವಿಲುಗಳ ಮಾರಣಹೋಮ, ತಿಂಗಳಲ್ಲಿ 15ಕ್ಕೂ ಹೆಚ್ಚು ರಾಷ್ಟ್ರಪಕ್ಷಿಗಳ ಹತ್ಯೆ

ಚಿಕ್ಕಬಳ್ಳಾಪುರದ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು ಹಿಂದೆ ಕೆರೆಯಂಗಳ ಇದ್ದು, ಕೆರೆಯಂಗಳಲ್ಲಿ ನವಿಲುಗಳು ಅಸ್ವಸ್ಥವಾಗಿದ್ದು, ಕೆಲವು ನವಿಲುಗಳು ಸ್ಥಳದಲ್ಲಿ ಮೃತಪಟ್ಟಿವೆ. ಸ್ಥಳಕ್ಕೆ ತೆರಳಿ ಪರಿಶೀಲಿಸಿರುವ ವನ್ಯ ಪ್ರಾಣಿಗಳ ರಕ್ಷಕ ಹಾಗೂ ಉರಗ ತಜ್ಞ ಫೃಥ್ವಿರಾಜ್ ಕೆಲವು ಅಸ್ವಸ್ಥ ನವಿಲುಗಳನ್ನು ಅರಣ್ಯ ಇಲಾಖೆಗೆ ನೀಡಿದ್ದಾರೆ. ಅರಣ್ಯ ಇಲಾಖೆ ಮೃತ ನವಿಲುಗಳ ಕಳೆ ಬರಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದು ವರದಿಗಾಗಿ ಕಾಯುತ್ತಿದೆ

Forest Poachers: ಚಿಕ್ಕಬಳ್ಳಾಪುರದಲ್ಲಿ ನವಿಲುಗಳ ಮಾರಣಹೋಮ, ತಿಂಗಳಲ್ಲಿ 15ಕ್ಕೂ ಹೆಚ್ಚು ರಾಷ್ಟ್ರಪಕ್ಷಿಗಳ ಹತ್ಯೆ
ಚಿಕ್ಕಬಳ್ಳಾಪುರದಲ್ಲಿ ನವಿಲುಗಳ ಮಾರಣಹೋಮ
Follow us
ಭೀಮಪ್ಪ ಪಾಟೀಲ್​, ಚಿಕ್ಕಬಳ್ಳಾಪುರ
| Updated By: ಸಾಧು ಶ್ರೀನಾಥ್​

Updated on: Mar 19, 2024 | 11:15 AM

ರಾಜ್ಯಾದ್ಯಂತ ತೀವ್ರ ಬರಗಾಲ ಬಂದು ಕಾಡುಮೇಡುಗಳಲ್ಲಿ ಪ್ರಾಣಿಪಕ್ಷಿಗಳಿಗೆ ಕುಡಿಯುವ ನೀರು ಇಲ್ಲವಾಗಿದೆ. ತಿನ್ನಲು ಆಹಾರವೂ ಇಲ್ಲ, ಇದ್ರಿಂದ ಅನ್ನ ಆಹಾರ ನೀರು ಹುಡುಕಿಕೊಂಡು ಕಾಡಿನ ಪಕ್ಷಿ ಪ್ರಾಣಿಗಳು ನೀರು ಇರುವ ಕೆರೆಗಳ ಕಡೆ ಮುಖ ಮಾಡಿವೆ. ಆದ್ರೆ ಕೆರೆಗಳ ಬಳಿ ಬಂದ ರಾಷ್ಟ್ರಪಕ್ಷಿ ನವಿಲುಗಳ ಮಾರಣಹೋಮವಾಗ್ತಿವೆ. ಅಷ್ಟಕ್ಕೂ ಯ್ಯಾಕೆ ಅಂತೀರಾ ಈ ಕುರಿತು ಒಂದು ವರದಿ!

ಕಾಡು ಮೇಡುಗಳಲ್ಲಿ ಸ್ವಚ್ಛಂದವಾಗಿ ಕಾಳುಕಡಿ ತಿಂದು ನೀರು ಕುಡಿದು ನಾಟ್ಯವಾಡಿಕೊಂಡಿರಬೇಕಿದ್ದ ರಾಷ್ಟ್ರಪಕ್ಷಿ ನವಿಲುಗಳು ಹೀಗೆ ಮಾರಣಹೋಮವಾಗಿರುವುದು ಚಿಕ್ಕಬಳ್ಳಾಪುರ ನಗರದ ಹೊರಹೊಲಯದ ಅಮಾನಿ ಗೋಪಾಲಕೃಷ್ಣ ಕೆರೆಯಂಗಳಲ್ಲಿ. ಹೌದು!! ತೀವ್ರಬರಗಾಲ ಬಂದು ಕಾಡು ಮೇಡುಗಳಲ್ಲಿ ಕುಡಿಯುವ ನೀರು ಇಲ್ಲದ ಕಾರಣ ನವಿಲುಗಳು ನೀರು ಇರುವ ಕೆರೆಯ ಬಳಿ ಬಂದಿವೆ. ಆದ್ರೆ ಕಳೆದ ಒಂದು ತಿಂಗಳಲ್ಲಿ ದಿನಕ್ಕೊಂದು ನವಿಲುಗಳು ಇದ್ದಕ್ಕಿದ್ದಂತೆ ಸಾಯುತ್ತಿವೆ.

ಇನ್ನು ಚಿಕ್ಕಬಳ್ಳಾಪುರದ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು ಹಿಂದೆ ಕೆರೆಯಂಗಳ ಇದ್ದು, ಕೆರೆಯಂಗಳಲ್ಲಿ ನವಿಲುಗಳು ಅಸ್ವಸ್ಥವಾಗಿರುವುದು ಒಂದೆಡೆಯಾದ್ರೆ ಮತ್ತೊಂದೆಡೆ ಕೆಲವು ನವಿಲುಗಳು ಸ್ಥಳದಲ್ಲಿ ಮೃತಪಡುತ್ತಿವೆ. ಮಾಹಿತಿ ಅರಿತು ಸ್ಥಳಕ್ಕೆ ಬಂದ ವನ್ಯ ಪ್ರಾಣಿಗಳ ರಕ್ಷಕ ಹಾಗೂ ಉರಗ ತಜ್ಞ ಫೃಥ್ವಿರಾಜ್ ಅವರು ಕೆಲವು ಅಸ್ವಸ್ಥ ನವಿಲುಗಳನ್ನು ಅರಣ್ಯ ಇಲಾಖೆಗೆ ನೀಡಿದ್ದಾರೆ. ಅರಣ್ಯ ಇಲಾಖೆ ಮೃತ ನವಿಲುಗಳ ಕಳೆ ಬರಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದು ವರದಿಗಾಗಿ ಕಾಯುತ್ತಿದೆ

Also Read: ಬಾಲ್ಯವಿವಾಹವಾಗಿದ್ದ ಬಾಲಕಿ ನೇಣುಬಿಗಿದುಕೊಂಡು ಆತ್ಮಹತ್ಯೆ: ಗಂಡ ಅರೆಸ್ಟ್​​

ಬರದಿಂದ ಕಂಗೆಟ್ಟ ರಾಷ್ಟ್ರಪಕ್ಷಿ ನವಿಲುಗಳು ಕಾಡಿನಿಂದ ನಾಡಿನತ್ತ ಆಗಮಿಸುತ್ತಿದ್ದು, ಯಾರಾದ್ರೂ ಬೇಟೆಯಾಡಲು ನವಿಲುಗಳಿಗೆ ವಿಷ ಇಕ್ಕುತ್ತಿದ್ದಾರಾ? ಇಲ್ಲಾ ಕಲುಷಿತ ನೀರು ಸೇವಿಸಿ ಪ್ರಾಣಕ್ಕೆ ಸಂಚಕಾರ ತಂದುಕೊಂಡಿವೆಯಾ? ಇಲ್ಲಾ ರೈತರು ಬೆಳೆ ರಕ್ಷಿಸಿಕೊಳ್ಳಲು ವಿಷ ಸಿಂಪಡಣೆ ಮಾಡ್ತಿದ್ದಾರಾ? ಅನ್ನೊ ಅನುಮಾನ ಕಾಡ್ತಿದ್ದು, ಅರಣ್ಯ ಇಲಾಖೆ ಅಧಿಕಾರಿಗಳು ಸೂಕ್ತ ಕ್ರಮಕೈಗೊಳ್ಳಬೇಕಿದೆ.

ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

ನಿನ್ನ ರೌಡಿಸಂ ನನ್ನ ಹತ್ರ ಬೇಡ: ರಜತ್​ಗೆ ಖಡಕ್ ಆವಾಜ್ ಹಾಕಿದ ಚೈತ್ರಾ
ನಿನ್ನ ರೌಡಿಸಂ ನನ್ನ ಹತ್ರ ಬೇಡ: ರಜತ್​ಗೆ ಖಡಕ್ ಆವಾಜ್ ಹಾಕಿದ ಚೈತ್ರಾ
ಐತಿಹಾಸಿಕ ಶತಕ ಸಿಡಿಸಿದ ಮಗನನ್ನು ತಬ್ಬಿ ಕಣ್ಣೀರಿಟ್ಟ ನಿತೀಶ್ ಅಪ್ಪ-ಅಮ್ಮ
ಐತಿಹಾಸಿಕ ಶತಕ ಸಿಡಿಸಿದ ಮಗನನ್ನು ತಬ್ಬಿ ಕಣ್ಣೀರಿಟ್ಟ ನಿತೀಶ್ ಅಪ್ಪ-ಅಮ್ಮ
70 ಅಡಿ ಸೇತುವೆ ಮೇಲಿಂದ ಗಂಗಾ ನದಿಗೆ ಹಾರಿದ ಯುವತಿ; ವಿಡಿಯೋ ಇಲ್ಲಿದೆ
70 ಅಡಿ ಸೇತುವೆ ಮೇಲಿಂದ ಗಂಗಾ ನದಿಗೆ ಹಾರಿದ ಯುವತಿ; ವಿಡಿಯೋ ಇಲ್ಲಿದೆ
ಮೋಸ ಮಾಡಿದವರಿಗೆ ಕರ್ಮವಾಗಿ ಕಾಡಲು ಬಂದ ಸುದೀಪ್
ಮೋಸ ಮಾಡಿದವರಿಗೆ ಕರ್ಮವಾಗಿ ಕಾಡಲು ಬಂದ ಸುದೀಪ್
ಹಿಮಾವೃತ ರಸ್ತೆಯಿಂದ ಜಾರಿ ಪ್ರಪಾತಕ್ಕೆ ಬಿದ್ದ ಟ್ರಕ್
ಹಿಮಾವೃತ ರಸ್ತೆಯಿಂದ ಜಾರಿ ಪ್ರಪಾತಕ್ಕೆ ಬಿದ್ದ ಟ್ರಕ್
ಹಾಸನ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರ ಕೊರತೆ: ವಿದ್ಯಾರ್ಥಿಯ ವಿಡಿಯೋ ವೈರಲ್
ಹಾಸನ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರ ಕೊರತೆ: ವಿದ್ಯಾರ್ಥಿಯ ವಿಡಿಯೋ ವೈರಲ್
ಗೋಕರ್ಣ, ಮುರುಡೇಶ್ವರಕ್ಕೆ ಪ್ರವಾಸಿಗರ ದಂಡು: ಹೊನ್ನಾವರದಲ್ಲಿ ಟ್ರಾಫಿಕ್ ಜಾಂ
ಗೋಕರ್ಣ, ಮುರುಡೇಶ್ವರಕ್ಕೆ ಪ್ರವಾಸಿಗರ ದಂಡು: ಹೊನ್ನಾವರದಲ್ಲಿ ಟ್ರಾಫಿಕ್ ಜಾಂ
‘ಡೆವಿಲ್’ ಶೂಟಿಂಗ್ ಆರಂಭದ ಬಗ್ಗೆ ಮಾಹಿತಿ ನೀಡಿದ ದರ್ಶನ್ ಸಹೋದರ ದಿನಕರ್
‘ಡೆವಿಲ್’ ಶೂಟಿಂಗ್ ಆರಂಭದ ಬಗ್ಗೆ ಮಾಹಿತಿ ನೀಡಿದ ದರ್ಶನ್ ಸಹೋದರ ದಿನಕರ್
ಚಿನ್ನ ವಂಚನೆ ಕೇಸ್​ನಲ್ಲಿ ಹೆಸರು: ಡಿಕೆ ಸುರೇಶ್ ಹೇಳಿದ್ದೇನು ನೋಡಿ
ಚಿನ್ನ ವಂಚನೆ ಕೇಸ್​ನಲ್ಲಿ ಹೆಸರು: ಡಿಕೆ ಸುರೇಶ್ ಹೇಳಿದ್ದೇನು ನೋಡಿ
ಮಾಜಿ ಪಿಎಂ ಮನಮೋಹನ್ ಸಿಂಗ್​ಗೆ ಅಂತಿಮ ನಮನ ಸಲ್ಲಿಸಿದ ಪ್ರಧಾನಿ ಮೋದಿ
ಮಾಜಿ ಪಿಎಂ ಮನಮೋಹನ್ ಸಿಂಗ್​ಗೆ ಅಂತಿಮ ನಮನ ಸಲ್ಲಿಸಿದ ಪ್ರಧಾನಿ ಮೋದಿ