ಕೈಲಾಸ ಪರ್ವತವೇರಿ ಶಿವನ ದರ್ಶನ ಪಡೆಯಲಾಗದವರು ರಾಜಧಾನಿ ಪಕ್ಕದಲ್ಲೆ ಇರುವ ವಿಶ್ವಪ್ರಸಿದ್ದ ಗಿರಿಧಾಮಕ್ಕೆ ಪ್ರದಕ್ಷಿಣೆ ಹಾಕಿದರು!

Pancha Giri Walking: ಪ್ರತಿದಿನ ಮನೆಯ ಬಳಿ ಒಂದು ಕೀಲೋ ಮೀಟರ್ ವಾಕಿಂಗ್ ಮಾಡಲು ಬೇಸರ ಮಾಡಿಕೊಳ್ಳುವ ಮಹಿಳೆಯರಂತೂ... ಮುಗಿಬಿದ್ದು 16 ಕೀಲೋ ಮೀಟರ್ ಪ್ರದಕ್ಷಣೆ ಹಾಕಿದ್ದು ವಿಶೇಷವಾಗಿತ್ತು.

ಕೈಲಾಸ ಪರ್ವತವೇರಿ ಶಿವನ ದರ್ಶನ ಪಡೆಯಲಾಗದವರು ರಾಜಧಾನಿ ಪಕ್ಕದಲ್ಲೆ ಇರುವ ವಿಶ್ವಪ್ರಸಿದ್ದ ಗಿರಿಧಾಮಕ್ಕೆ ಪ್ರದಕ್ಷಿಣೆ ಹಾಕಿದರು!
ಕೈಲಾಸ ದರ್ಶನ! ನಂದಿಗಿರಿಧಾಮ ಸೇರಿದಂತೆ ಪಂಚಗಿರಿಗಳ ಸಾಲಿನಲ್ಲಿ 16 ಕಿ.ಮೀ. ಗಿರಿ ಪ್ರದಕ್ಷಿಣೆ
Follow us
ಭೀಮಪ್ಪ ಪಾಟೀಲ್​, ಚಿಕ್ಕಬಳ್ಳಾಪುರ
| Updated By: ಸಾಧು ಶ್ರೀನಾಥ್​

Updated on: Jul 11, 2023 | 2:13 PM

ಕೈಲಾಸ ಪರ್ವತವೇರಿ ಶಿವನ ದರ್ಶನ ಪಡೆಯಲಾಗದವರು ರಾಜಧಾನಿ ಪಕ್ಕದಲ್ಲೆ ಇರುವ ವಿಶ್ವ ಪ್ರಸಿದ್ದ ಗಿರಿಧಾಮವೊಂದನ್ನು ಪ್ರದಕ್ಷಿಣೆ ಹಾಕಿದ್ರೆ… ಮುಕ್ತಿ ಸಿಗುತ್ತೆ ಅಂತಾ ನಂಬಿಕೆ ಇಟ್ಟಿರೋ ಸಾವಿರಾರು ಜನ ಶಿವನ ಭಕ್ತರು, 16 ಕೀಲೋ ಮೀಟರ್ ಸುತ್ತಳತೆಯ ಗಿರಿಧಾಮವೊಂದನ್ನು ಪ್ರದಕ್ಷಿಣೆ ಹಾಕಿದ್ದು ವಿಶೇಷವಾಗಿತ್ತು. ಅಷ್ಟಕ್ಕೂ ಅದ್ಯಾವ ಧಾಮ ಅಂತೀರಾ ಈ ವರದಿ ನೋಡಿ!! ತಣ್ಣನೆ ಬೀಸುವ ಚುಮುಚುಮು ಚಳಿಯಲ್ಲಿ ಹರಿನಾಮ ಸ್ಮರಣೆ ಮಾಡುತ್ತಾ ಕಾಲ್ನಡಿಗೆಯಲ್ಲಿ ಗಿರಿಗಳಿಗೆ ಪ್ರದಕ್ಷಿಣೆ ಹಾಕುತ್ತಿರುವುದು ಚಿಕ್ಕಬಳ್ಳಾಪುರ (Chikkaballapur) ತಾಲೂಕಿನ ಪಂಚಗಿರಿಗಳ ಸಾಲಿನಲ್ಲಿ. ನಂದಿಬೆಟ್ಟದ (Nandi Hills) ಮೇಲೆ ಯೋಗ ನಂದೀಶ್ವರ, ಬೆಟ್ಟದ ಕೆಳಗೆ ಭೋಗ ನಂದೀಶ್ವರ, ಇವರಿಬ್ಬರ ಮಧ್ಯೆ ವಿಶಾಲವಾಗಿ ಹರಡಿರುವ ಸ್ಕಂದಗಿರಿ, ದಿಬ್ಬಗಿರಿ, ಚಂದ್ರಗಿರಿ ಸೇರಿದಂತೆ ಐದು ಬೆಟ್ಟಗಳ (Pancha Giri) ಸಾಲಿನ ನಡುವೆ ಭಕ್ತ ಸಮೂಹ, ಶಿವನನ್ನು ನೆನೆಯುತ್ತಾ ಹಾಡು ಭಜನೆ ಮಾಡುತ್ತಾ ಸಾಗ್ತಿದ್ರೆ ಕೈಲಾಸವೆ ಧರೆಗಿಳಿದಂತಾಗಿತ್ತು. ಮಕ್ಕಳಿಂದ ವೃದ್ದರವರೆಗೂ 16 ಕೀಲೋ ಮೀಟರ್ ಸುತ್ತಳತೆಯ ನಂದಿಗಿರಿಧಾಮವನ್ನು ಪ್ರದಕ್ಷಿಣೆ ಹಾಕಿ ಶಿವನ ಭಕ್ತರು ಸಂತಸ ಪಟ್ಟರು.

ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು, ಬಾಗೇಪಲ್ಲಿ, ಗುಡಿಬಂಡೆ, ಬೆಂಗಳೂರು ಗ್ರಾಮಂತರ ಜಿಲ್ಲೆಯ ದೇವನಹಳ್ಳಿ, ದೊಡ್ಡಬಳ್ಳಾಪುರ, ನೆಲಮಂಗಲ ಸೇರಿದಂತೆ ನೆರೆಯ ಆಂಧ್ರದ ಹಿಂದೂಪುರ, ಅನಂತಪುರದಿಂದಲೂ ಭಕ್ತ ಸಮೂಹ ನಂದಿಹಿಲ್ಸ್ ಗಿರಿ ಪ್ರದಕ್ಷಿಣೆಗೆ ಹರಿದು ಬಂದಿತ್ತು.

ಸಾವಿರಾರು ಸಂಖ್ಯೆಯಲ್ಲಿ ಸೇರಿದ್ದ ಭಕ್ತರಲ್ಲಿ ದೇವಾಂಗ ಜನಾಂಗಕ್ಕೆ ಸೇರಿದ ಭಕ್ತ ಸಮೂಹ ಹೆಚ್ಚಾಗಿತ್ತು. ಪ್ರತಿ ವರ್ಷ ಆಶಾಢ ಮಾಸದ ಕೊನೆ ಸೋಮವಾರ ದಿನದಂದು ಈ ರೀತಿ ಗಿರಿಪ್ರದಕ್ಷಿಣೆ ಹಾಕುತ್ತಾರೆ. ಪ್ರತಿದಿನ ಮನೆಯ ಬಳಿ ಒಂದು ಕೀಲೋ ಮೀಟರ್ ವಾಕಿಂಗ್ ಮಾಡಲು ಬೇಸರ ಮಾಡಿಕೊಳ್ಳುವ ಮಹಿಳೆಯರಂತೂ… ಮುಗಿಬಿದ್ದು 16 ಕೀಲೋ ಮೀಟರ್ ಪ್ರದಕ್ಷಣೆ ಹಾಕಿದ್ದ ವಿಶೇಷವಾಗಿತ್ತು.

ಶಿವನ ಭಕ್ತರಿಗೆ ಬೇಸರವಾಗದಿರಲಿ ಎಂದು ಆಗಾಗ ತುಂತುರು ಮಳೆ ಸುರಿದು, ರಸ್ತೆ ತಂಪಾಗುವಂತೆ ಮಾಡಿದ್ದು ವಿಶೇಷವಾಗಿತ್ತು! ನಂದಿಯ ಶ್ರೀ ಭೋಗನಂಧಿಶ್ವರ ಸ್ವಾಮಿ ದೇವಸ್ಥಾನದಿಂದ ಹೊರಟು ಮತ್ತೆ ದೇವಸ್ಥಾನಕ್ಕೆ ಆಗಮಿಸಿ ದೇವರ ದರ್ಶನ ಮಾಡುವುದರ ಮೂಲಕ ಗಿರಿ ಪ್ರದಕ್ಷಿಣೆ ಮುಕ್ತಾಯ ಮಾಡಿದ್ರು.

ಚಿಕ್ಕಬಳ್ಳಾಪುರ ಜಿಲ್ಲೆಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

‘ವಟವಟ ಅಂತಾನೆ’; ಐಶ್ವರ್ಯಾಗೆ ಶಿಶಿರ್ ಮೇಲಿದ್ದ ಅಭಿಪ್ರಾಯ ಬದಲಾಯ್ತಾ?
‘ವಟವಟ ಅಂತಾನೆ’; ಐಶ್ವರ್ಯಾಗೆ ಶಿಶಿರ್ ಮೇಲಿದ್ದ ಅಭಿಪ್ರಾಯ ಬದಲಾಯ್ತಾ?
ಮನೆಯಲ್ಲಿ ತೆಂಗಿನಕಾಯಿ ಕಟ್ಟುವುದರ ಹಿಂದಿನ ಅರ್ಥವೇನು ಗೊತ್ತಾ? ವಿಡಿಯೋ ನೋಡಿ
ಮನೆಯಲ್ಲಿ ತೆಂಗಿನಕಾಯಿ ಕಟ್ಟುವುದರ ಹಿಂದಿನ ಅರ್ಥವೇನು ಗೊತ್ತಾ? ವಿಡಿಯೋ ನೋಡಿ
ಇಂದಿನ ರಾಶಿ ಫಲ, ಪಂಚಾಂಗ ಮತ್ತು ಜ್ಯೋತಿಷ್ಯ ಭವಿಷ್ಯ ತಿಳಿಯಿರಿ
ಇಂದಿನ ರಾಶಿ ಫಲ, ಪಂಚಾಂಗ ಮತ್ತು ಜ್ಯೋತಿಷ್ಯ ಭವಿಷ್ಯ ತಿಳಿಯಿರಿ
ಬುಲಂದ್‌ಶಹರ್‌ನಲ್ಲಿ ಟ್ರ್ಯಾಕ್ಟರ್ ಸ್ಟಂಟ್‌ ವೇಳೆ ದುರಂತ
ಬುಲಂದ್‌ಶಹರ್‌ನಲ್ಲಿ ಟ್ರ್ಯಾಕ್ಟರ್ ಸ್ಟಂಟ್‌ ವೇಳೆ ದುರಂತ
ಸರ್ಕಾರದ ಪ್ರಸ್ತಾವನೆಯನ್ನು ಆಶಾ ಕಾರ್ಯಕರ್ತೆಯರು ಒಪ್ಪಿಲ್ಲವೇ?
ಸರ್ಕಾರದ ಪ್ರಸ್ತಾವನೆಯನ್ನು ಆಶಾ ಕಾರ್ಯಕರ್ತೆಯರು ಒಪ್ಪಿಲ್ಲವೇ?
ಡಿಕೆಶಿ ಮಾಡಿಸಿದ ಹೋಮದ ಹಿಂದಿನ ರಹಸ್ಯವೇನು? ಶತ್ರುನಾಶವಾಗುತ್ತಾ?
ಡಿಕೆಶಿ ಮಾಡಿಸಿದ ಹೋಮದ ಹಿಂದಿನ ರಹಸ್ಯವೇನು? ಶತ್ರುನಾಶವಾಗುತ್ತಾ?
ಶಾಸಕ ಚಂದ್ರರನ್ನು ಸುನೀಲ ಮಾಮಾ ಅಂತ ಕರೆಯುತ್ತಿದ್ದ: ಆನಂದ್
ಶಾಸಕ ಚಂದ್ರರನ್ನು ಸುನೀಲ ಮಾಮಾ ಅಂತ ಕರೆಯುತ್ತಿದ್ದ: ಆನಂದ್
ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ