ಮಾಜಿ ಸ್ಪೀಕರ್ ರಮೇಶ್ ಕುಮಾರ್ ಕೊಕ್ಕರೆ ಇದ್ದ ಹಾಗೆ; ಆರೋಗ್ಯ ಸಚಿವ ಕೆ ಸುಧಾಕರ್ ವಾಗ್ದಾಳಿ
ಮುಂದುವರಿದು ಮಾತನಾಡಿದ ಆರೋಗ್ಯ ಸಚಿವ, ರೂಪಾಂತರಿ ಒಮಿಕ್ರಾನ್ ವೈರಸ್ ವೇಗವಾಗಿ ಹರಡುತ್ತದೆ. ಜನರು ಮಾಸ್ಕ್, ದೈಹಿಕ ಅಂತರ ಕಾಪಾಡುವಂತೆ ಮನವಿ ಮಾಡಿದ್ದಾರೆ. ಸರ್ಕಾರ ಅಚ್ಚುಕಟ್ಟಾಗಿ ಕೊರೊನಾ ನಿರ್ವಹಣೆ ಮಾಡುತ್ತಿದೆ.

ಚಿಕ್ಕಬಳ್ಳಾಪುರ: ಮಾಜಿ ಸ್ಪೀಕರ್ ರಮೇಶ್ ಕುಮಾರ್ ಕೊಕ್ಕರೆ ಇದ್ದ ಹಾಗೆ ಅಂತ ಚಿಕ್ಕಬಳ್ಳಾಪುರ ತಾಲೂಕಿನ ಗೋಪಿನಾಥ್ ಬೆಟ್ಟದಲ್ಲಿ ಸಚಿವ ಡಾ ಕೆ ಸುಧಾಕರ್ ವಾಗ್ದಾಳಿ ನಡೆಸಿದ್ದಾರೆ. ಅವರು ಹೇಳೋದು ಒಂದು ನಡೆದುಕೊಳ್ಳೋದು ಒಂದು. ಬಾಯಿ ಮಾತಿನಲ್ಲಿ ಅವರು ನೀತಿಪಾಠ ಹೇಳುತ್ತಾರೆ ಅಷ್ಟೆ. ಊರೂರು ಸುತ್ತುತ್ತಾರಲ್ಲ ಹಾಗೆ ರಮೇಶ್ ಕುಮಾರ್. ಪಕ್ಷದಿಂದ ಪಕ್ಷಕ್ಕೆ ವ್ಯಕ್ತಿಗಳಿಂದ ವ್ಯಕ್ತಿಗಳ ಜೊತೆ ಹೋಗಿಲ್ಲವೇ? ಅಂತ ಸುಧಾಕರ್ ರಮೇಶ್ ಕುಮಾರ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಮುಂದುವರಿದು ಮಾತನಾಡಿದ ಆರೋಗ್ಯ ಸಚಿವ, ರೂಪಾಂತರಿ ಒಮಿಕ್ರಾನ್ ವೈರಸ್ ವೇಗವಾಗಿ ಹರಡುತ್ತದೆ. ಜನರು ಮಾಸ್ಕ್, ದೈಹಿಕ ಅಂತರ ಕಾಪಾಡುವಂತೆ ಮನವಿ ಮಾಡಿದ್ದಾರೆ. ಸರ್ಕಾರ ಅಚ್ಚುಕಟ್ಟಾಗಿ ಕೊರೊನಾ ನಿರ್ವಹಣೆ ಮಾಡುತ್ತಿದೆ. ಕೊರೊನಾ ರೂಪಾಂತರಿ ತಡೆಗೆ ವ್ಯಾಕ್ಸಿನೇಷನ್ ಮದ್ದು. ಜನವರಿಯೊಳಗೆ ಎಲ್ಲರಿಗೂ ವ್ಯಾಕ್ಸಿನೇಷನ್ ಮಾಡುತ್ತೇವೆ ಅಂತ ಅವರು ತಿಳಿಸಿದ್ದಾರೆ.
ಗೌಪ್ಯ ಸಭೆ ಗೋಪಿನಾಥ ಬೆಟ್ಟದಲ್ಲಿ ಸಚಿವ ಸುಧಾಕರ್ ಗೌಪ್ಯ ಸಭೆ ನಡೆಸುತ್ತಿದ್ದಾರೆ. ಸ್ಥಳೀಯ ಜನಪ್ರತಿನಿಧಿಗಳ ಜೊತೆ ಸಚಿವರು ಚರ್ಚೆ ನಡೆಸುತ್ತಿದ್ದಾರೆ. ನಂದಿ ಹೋಬಳಿ ಗ್ರಾಮ ಪಂಚಾಯತ್ ಸದಸ್ಯರುಗಳ ಜೊತೆ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಡಾ ವೇಣುಗೋಪಾಲರನ್ನು ಬೆಂಬಲಿಸುವಂತೆ ಸಭೆ ನಡೆಸುತ್ತಿದ್ದಾರೆ.
ಇದನ್ನೂ ಓದಿ
Book Release : ಅಚ್ಚಿಗೂ ಮೊದಲು ; ಇಂದು ಧಾರವಾಡದಲ್ಲಿ ಆರಿಫ್ ರಾಜಾ ‘ಎದೆ ಹಾಲಿನ ಪಾಳಿ’ ಕವನ ಸಂಕಲನ ಬಿಡುಗಡೆ
Published On - 1:56 pm, Sun, 5 December 21