ಆಕಾಶದಲ್ಲಿ ಮೇಘಸ್ಪೋಟವಾಗಿದ್ದಕ್ಕೆ ಪಾತಾಳದಿಂದ ಅಂತರ್ಜಲ ಸ್ಫೋಟ! ಬರದ ನಾಡಿನ ರೈತರ ಮೊಗದಲ್ಲಿ ಈಗ ಮಂದಹಾಸವೋ ಮಂದಹಾಸ
Chikkaballapur rains: ಇತ್ತೀಚೆಗೆ ಸುರಿದ ಧಾರಾಕರ ಮಳೆಗೆ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಸಾವಿರಾರು ಹೆಕ್ಟರ್ ಬೆಳೆಗಳು ಜಲಾವೃತವಾಗಿವೆ, ಆದರೂ ರೈತರು ತಲೆ ಕೆಡಿಸಿಕೊಂಡಿಲ್ಲ, ಹೊದರೆ ಒಂದು ಬೆಳೆ ಹೊಗಲಿ, ನೀರು ಇದ್ರೆ ಬೇಕಾದಷ್ಟು ಬೆಳೆಯಬಹುದು ಎನ್ನುತ್ತಿದ್ದಾರೆ.
ಚಿಕ್ಕಬಳ್ಳಾಪುರ ಜಿಲ್ಲೆ ಹೇಳಿ ಕೇಳಿ ಬಯಲು ಸೀಮೆಯ ಬರದ ನಾಡು ಎಂದೆ ಖ್ಯಾತಿಯಾಗಿತ್ತು. ಅಲ್ಲಿ ನದಿ ನಾಲೆ ಸೇರಿದಂತೆ ನೀರಿನ ಮೂಲಗಳು ಇರಲಿ, ಅಂತರ್ಜಲವೂ ಕಾಣೆಯಾಗಿತ್ತು. ಎರಡು ಸಾವಿರ ಅಡಿಗಳ ಆಳ ಭೂಮಿ ಕೊರೆದ್ರೂ ಪಾತಾಳಗಂಗೆ ಸಿಗುತ್ತಿರಲಿಲ್ಲ. ಆದ್ರೆ ಈಗ ಇತ್ತೀಚಿಗೆ ಸುರಿದ ಧಾರಾಕಾರ ಮಳೆಯಿಂದ ( Chikkaballapur rains) ಈ ಜಿಲ್ಲೆಯಲ್ಲಿ ಬತ್ತಿ ಹೋಗಿದ್ದ ಹಾಗೂ ವಿಫಲ ಕೊಳವೆ ಬಾವಿಗಳಲ್ಲಿಯೂ (borewell) ಅಂತರ್ಜಲ ಉಕ್ಕಿ ಉಕ್ಕಿ ಬರ್ತಿದ್ದು… ರೈತನ (farmers) ವಿಫಲ ಕೊಳವೆ ಬಾವಿಯಲ್ಲಿ ಅಂತರ್ಜಲ ಆಕಾಶಕ್ಕೆ ಚಿಮ್ಮುತ್ತಿದೆ! ಈ ವರದಿ ನೋಡಿ!!
ಬತ್ತಿಹೋಗಿದ್ದ ರೈತನ ವಿಫಲ ಕೊಳವೆ ಬಾವಿಗಳಲ್ಲಿ ಉಕ್ಕಿ ಉಕ್ಕಿ, ಆಕಾಶದತ್ತ ಚಿಮ್ಮುತ್ತಿದೆ ಜೀವಜಲ!
ವಿಫಲವಾದ ಕೊಳವೆ ಬಾವಿಗೆ ಕ್ಯಾಪ್ ಹಾಕಿ ಬಂದೋಬಸ್ತ್ ಮಾಡಿ, ಇನ್ನೇನು ನಮಗೆ ಅಂತರ್ಜಲ ಸಿಗಲ್ಲ ಅಂತ ಕೈಚೆಲ್ಲಿದ್ದ ರೈತನ ಮೊಗದಲ್ಲಿ ಈಗ ಮಂದಹಾಸವೋ ಮಂದಹಾಸ. ವಿಫಲ ಕೊಳವೆ ಬಾವಿಯಲ್ಲಿ ಅಂತರ್ಜಲ ಉಕ್ಕಿ ಉಕ್ಕಿ ಆಕಾಶಕ್ಕೆ ಚಿಮ್ಮುತ್ತಿದೆ. ಇಂಥ ರೋಚಕ ದೃಶ್ಯ ಕಂಡು ಬಂದಿರೋದು… ಚಿಕ್ಕಬಳ್ಳಾಪುರ ಜಿಲ್ಲೆ ಶಿಡ್ಲಘಟ್ಟ ತಾಲೂಕಿನ ದಿಬ್ಬೂರಹಳ್ಳಿ ಗ್ರಾಮದ ರೈತ ನಾಗರಾಜ್ ಜಮೀನಿನಲ್ಲಿ.
ಕೃಷಿಕ ನಾಗರಾಜ್… 10 ವರ್ಷಗಳ ಹಿಂದೆ 70 ಸಾವಿರ ರೂಪಾಯಿ ಖರ್ಚು ಮಾಡಿ 800 ಅಡಿಗಳ ಆಳ ಬೋರ್ ವೇಲ್ ಕೊರೆಸಿದ್ದರು. ಆದ್ರೆ ಹನಿ ನೀರು ಬಂದಿರಲಿಲ್ಲ. ಆದ್ರೂ ಗ್ರಾಮಸ್ಥರ ಸಲಹೆಯ ಮೇರೆಗೆ ಬೋರ್ ಗೆ ಅಳವಡಿಸಿದ್ದ ಕೇಸಿಂಗ್ ಪೈಪ್ ಕಿತ್ತು ಹಾಕದೆ, ಬಂದೋಬಸ್ತ್ ಮಾಡಿ ಸುಮ್ಮನಾಗಿದ್ದರು. ಆದ್ರೆ ಇತ್ತೀಚೆಗೆ ಸುರಿದ ಧಾರಾಕಾರ ಮಳೆ ಹಾಗೂ ಕಳೆದ ಡಿಸೇಂಬರ್ ನಲ್ಲಿ ಸುರಿದ ಮಹಾಮಳೆಯ ಪರಿಣಾಮದಿಂದ ಈಗ… ನಾಗರಾಜ್ ನ ಬೋರ್ ವೇಲ್ ನಲ್ಲಿ ವಿಸ್ಮಯ ನಡೆದಿದೆ. ಈ ಕುರಿತು ನಮ್ಮ ಚಿಕ್ಕಬಳ್ಳಾಪುರ ಪ್ರತಿನಿಧಿ ಭೀಮಪ್ಪ ಪಾಟೀಲ ನೀಡಿರುವ ಪ್ರತ್ಯಕ್ಷ ವರದಿ ಇಲ್ಲಿದೆ.
ಕಳೆದ ಕೆಲವು ದಿನಗಳಿಂದ ಸುರಿದ ಧಾರಾಕರ ಮಳೆಗೆ ಚಿಕ್ಕಬಳ್ಳಾಪುರ ಜಿಲ್ಲೆಯ ಕೆರೆ, ಕುಂಟೆ, ನದಿ, ನಾಲೆಗಳು ತುಂಬಿ ಭೊರ್ಗರೆಯುತ್ತಿವೆ. ಇದರಿಂದ ಕಾಣೆಯಾಗಿದ್ದ ಅಂತರ್ಜಲ ಮತ್ತೆ ಉಕ್ಕಿ ಹರಿಯುತ್ತಿದೆ. ಬತ್ತಿ ಹೋಗಿದ್ದ ಬೋರ್ ವೇಲ್ ಗಳು, ಬಾವಿಗಳಲ್ಲಿ ನೀರು ನಳನಳಿಸುತ್ತಿದೆ. ಇನ್ನು ಕೆಲವೆಡೆ ರೈತರ ಬೋರ್ ಗಳಲ್ಲಿ ನೀರು ಆಕಾಶದೆತ್ತರಕ್ಕೆ ಚಿಮ್ಮುತ್ತಿದೆ. ಇದ್ರಿಂದ ರೈತರ ಸಂತೋಷಕ್ಕೆ ಪಾರವೆ ಇಲ್ಲ.
ಇತ್ತೀಚೆಗೆ ಸುರಿದ ಧಾರಾಕರ ಮಳೆಗೆ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಸಾವಿರಾರು ಹೆಕ್ಟರ್ ಬೆಳೆಗಳು ಜಲಾವೃತವಾಗಿವೆ, ಆದರೂ ರೈತರು ತಲೆ ಕೆಡಿಸಿಕೊಂಡಿಲ್ಲ, ಹೊದರೆ ಒಂದು ಬೆಳೆ ಹೊಗಲಿ, ನೀರು ಇದ್ರೆ ಬೇಕಾದಷ್ಟು ಬೆಳೆಯಬಹುದು ಎನ್ನುತ್ತಿದ್ದಾರೆ. ಇನ್ನು ಕೆಲವು ರೈತರು ಬೋರ್ ವೇಲ್ ಗಳಲ್ಲಿ ಉಕ್ಕುವ ನೀರನ್ನು ನೋಡಿ… ನಮ್ಮವ್ವ ಗಂಗಮ್ಮ ತಾಯಿ ಈಗಲಾದ್ರೂ ನಮ್ಮ ಬಯಲು ಸೀಮೆಯ ರೈತರ ಮೇಲೆ ಕರುಣೆ ತೋರಿದ್ದೀಯಲ್ಲವ್ವಾ ಎಂದು ದೀರ್ಘ ದಂಡ ನಮಸ್ಕಾರ ಹಾಕ್ತಿದ್ದಾರೆ – ಭೀಮಪ್ಪ ಪಾಟೀಲ, ಟಿವಿ 9, ಚಿಕ್ಕಬಳ್ಳಾಪುರ