ಚಿಕ್ಕಬಳ್ಳಾಪುರ: ಸೇವಂತಿ ತೋಟಕ್ಕೆ ವಿದ್ಯುತ್ ಅಲಂಕಾರ; ಧಾರಾಕಾರ ಮಳೆಯಿಂದ ಬೆಳೆ ರಕ್ಷಿಸಲು ರೈತರ ಹೊಸ ಪ್ರಯೋಗ

ರೈತ ರಾಮಾಂಜಿ ತಮ್ಮ ನಾಲ್ಕು ಎಕರೆಯಲ್ಲಿ ಐಶ್ವರ್ಯ ಎನ್ನುವ ವಿನೂತನ ಸೇವಂತಿ ತಳಿಯನ್ನು ನಾಟಿ ಮಾಡಿದ್ದು, ಸಾವಿರದ ನೂರು ವಿದ್ಯುತ್ ಬಲ್ಬ್​ಗಳನ್ನು ಇದಕ್ಕೆ ಅಳವಡಿಸಿದ್ದಾರೆ. ಒಂದು ಎಕರೆ ಜಮೀನಿಗೆ ವಿದ್ಯುತ್ ಬಲ್ಬ್​ಗಳನ್ನು ಅಳವಡಿಸಿಲು 30 ಸಾವಿರ ರೂಪಾಯಿ ಖರ್ಚು ಮಾಡಿದ್ದಾರೆ.

ಚಿಕ್ಕಬಳ್ಳಾಪುರ: ಸೇವಂತಿ ತೋಟಕ್ಕೆ ವಿದ್ಯುತ್ ಅಲಂಕಾರ; ಧಾರಾಕಾರ ಮಳೆಯಿಂದ ಬೆಳೆ ರಕ್ಷಿಸಲು ರೈತರ ಹೊಸ ಪ್ರಯೋಗ
ವಿದ್ಯುತ್ ದೀಪ

ಚಿಕ್ಕಬಳ್ಳಾಪುರ: ಇತ್ತೀಚೆಗೆ ಸುರಿದ ಧಾರಾಕಾರ ಮಳೆ (Karnataka rain) ಹಾಗೂ ಸೈಕ್ಲೋನ್​ನಿಂದ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಬಿಸಿಲಂತೂ ಇಲ್ಲವೆ ಇಲ್ಲ ಎನ್ನುವಂತಾಗಿದೆ. ಹೀಗಾಗಿ ಬೆಳೆದ ಸೇವಂತಿ (chrysanthemum) ಹೂವಿಗೆ ಅವಶ್ಯಕವಾಗಿರುವ ಕನಿಷ್ಠ ತಾಪಮಾನವಿಲ್ಲದೆ ಬೆಳೆ ಹಾಳಾಗುತ್ತಿರುವುದನ್ನು ಕಂಡ ರೈತರು ನೂತನ ಪ್ರಯೋಗ ಮಾಡಿದ್ದು, ಸೇವಂತಿ ತೋಟಗಳಿಗೆ ವಿದ್ಯುತ್ ದೀಪಗಳನ್ನು (electric light) ಅಳವಡಿಸಿದ್ದಾರೆ. ಇದರಿಂದ ತಾಪಮಾನ ಏರಿಕೆ ಮಾಡುವುದರ ಮೂಲಕ ಬೆಳೆ ರಕ್ಷಣೆ ಮಾಡಿಕೊಳ್ಳುತ್ತಿದ್ದಾರೆ.

ಸೇವಂತಿ ತೋಟಕ್ಕೆ ಅಲಂಕಾರ ಮಾಡಿದ ಹಾಗೆ ಜಗ ಮಗ ವಿದ್ಯುತ್ ದೀಪಾಲಂಕಾರ ಮಾಡಿರುವುದು ಚಿಕ್ಕಬಳ್ಳಾಪುರ ತಾಲೂಕಿನ ಅಗಲಗುರ್ಕಿ ಗ್ರಾಮದ ಪ್ರಗತಿಪರ ರೈತ ರಾಮಾಂಜಿ ತೋಟದಲ್ಲಿ. ಹೌದು ಇತ್ತಿಚಿಗೆ ಸುರಿದ ಧಾರಾಕರ ಮಳೆಯಿಂದ ಭೂಮಿ ತಂಪಾಗಿದೆ. ಹೊಗಲಿ ಮಳೆ ನಿಂತಿದೆ ಎನ್ನುವಷ್ಟರಲ್ಲಿ ಮತ್ತೆ ಸೈಕ್ಲೋನ್ ಬಂದು ಸೇವಂತಿ ಬೆಳೆ ಕೈ ಕೊಡುವ ಆತಂಕ ಹೆಚ್ಚಾಗಿತ್ತು. ಹೀಗಾಗಿ ರೈತ ರಾಮಾಂಜಿ ನಾಲ್ಕು ಎಕರೆ ಸೇವಂತಿ ತೋಟಕ್ಕೆ ವಿದ್ಯುತ್ ದೀಪಗಳನ್ನು ಅಳವಡಿಸಿ ಭೂಮಿಯಲ್ಲಿ ತಾಪಮಾನ ಏರಿಕೆ ಮಾಡಿದ್ದಾರೆ.

ರೈತ ರಾಮಾಂಜಿ ತಮ್ಮ ನಾಲ್ಕು ಎಕರೆಯಲ್ಲಿ ಐಶ್ವರ್ಯ ಎನ್ನುವ ವಿನೂತನ ಸೇವಂತಿ ತಳಿಯನ್ನು ನಾಟಿ ಮಾಡಿದ್ದು, ಸಾವಿರದ ನೂರು ವಿದ್ಯುತ್ ಬಲ್ಬ್​ಗಳನ್ನು ಇದಕ್ಕೆ ಅಳವಡಿಸಿದ್ದಾರೆ. ಒಂದು ಎಕರೆ ಜಮೀನಿಗೆ ವಿದ್ಯುತ್ ಬಲ್ಬ್​ಗಳನ್ನು ಅಳವಡಿಸಿಲು 30 ಸಾವಿರ ರೂಪಾಯಿ ಖರ್ಚು ಮಾಡಿದ್ದಾರೆ. ಹೀಗೆ ಹೂ ಬೆಳೆಗಳಿಗೆ ವಿದ್ಯುತ್ ದೀಪ ಅಳವಡಿಸಿ ಭೂಮಿಯ ತಾಪಮಾನವನ್ನು 28 ಡಿಗ್ರಿಯಿಂದ 30 ಡಿಗ್ರಿ ವರೆಗೂ ಕಾಪಾಡುವುದರಿಂದ ಸೇವಂತಿ ಹೂವಿನ ಗಿಡಗಳು ಚೆನ್ನಾಗಿ ಬೆಳೆಯುತ್ತವೆ. ಅವಧಿಗೂ ಮುನ್ನ ಹೂ ಬಿಡುವುದು ನಿಲ್ಲತ್ತದೆ. ಹೂ ಬಿಡುವ ಅವಧಿಯನ್ನು ವಿಸ್ತರಿಸಬಹುದು, ಹೂ ಬಂದಾಗ ಕಲರ್ ಗುಣಮಟ್ಟ ಶೈನಿಂಗ್ ಬಂದು ರೈತರ ಹೂಗಳಿಗೆ ಉತ್ತಮ ಬೆಲೆ ಬರುತ್ತದೆ ಎಂದು ತೋಟಗಾರಿಕೆ ಇಲಾಖೆ ಪ್ರಭಾರಿ ಉಪ ನಿರ್ದೇಶಕ ಅಧಿಕಾರಿ ರಮೇಶ ಹೇಳಿದ್ದಾರೆ.

ಇತ್ತಿಚಿಗೆ ಸುರಿದ ಧಾರಾಕರ ಮಳೆಗೆ ಚಿಕ್ಕಬಳ್ಳಾಪುರ ಜಿಲ್ಲೆಯೊಂದರಲ್ಲಿ ನಾಲ್ಕು ಸಾವಿರ ಹೆಕ್ಟರ್ ಪ್ರದೇಶದಲ್ಲಿ ಬೆಳೆದಿದ್ದ ಹೂ ಹಾಳಾಗಿದೆ. ಅಳಿದುಳಿದ ಹೂ ಬೆಳೆಯ ರಕ್ಷಣೆ ಕಷ್ಟವಾಗುತ್ತಿದೆ. ಭೂಮಿಯ ಮೇಲೆ ಕೆಳಗೆ ತಂಪಾದ ಹವಾಗುಣ ಇರುವ ಕಾರಣ ಬೆಳೆಗಳು ಭೂಮಿಯಲ್ಲೆ ಕಮರುತ್ತಿವೆ. ಇದಕ್ಕೆ ರೈತರೆ ಉಪಾಯ ಹುಡುಕಿಕೊಂಡಿದ್ದು, ವಿದ್ಯುತ್ ಮೊರೆ ಹೋಗಿದ್ದಾರೆ.

ವರದಿ: ಭೀಮಪ್ಪ ಪಾಟೀಲ್

ಇದನ್ನೂ ಓದಿ: ಚಿಕ್ಕಬಳ್ಳಾಪುರ: ಮಳೆಗೆ ಬೆಳೆ ನಾಶ; ದುಬಾರಿಯಾಗಲಿದೆ ತರಕಾರಿ, ಹೂವು, ಹಣ್ಣಿನ ಬೆಲೆ

ಚಿಕ್ಕಬಳ್ಳಾಪುರ ಎಪಿಎಮ್​ಸಿಯಲ್ಲಿ ಹೂವು ಮಾರಲು ಅವಕಾಶ ಸಿಗದೇ ಹೋಗಿದ್ದಕ್ಕೆ ರೊಚ್ಚಿಗೆದ್ದ ಬೆಳೆಗಾರರು ರಸ್ತೆಗೆ ಹೂ ಬಿಸಾಡಿ ಪ್ರತಿಭಟಿಸಿದರು

Published On - 1:04 pm, Tue, 30 November 21

Click on your DTH Provider to Add TV9 Kannada