Sign In

By signing in or creating an account, you agree with Associated Broadcasting Company's Terms & Conditions and Privacy Policy.

Tank irrigation: ಒಣಗುತಿರುವ ರಾಗಿ ಬೆಳೆ ಉಳಿಸಿಕೊಳ್ಳಲು ದುಬಾರಿ ಟ್ಯಾಂಕರ್ ನೀರಿಗೆ ಮೊರೆ! ಚಿಕ್ಕಬಳ್ಳಾಪುರ ರೈತರ ಪಾಡು ಯಾರಿಗೂ ಬೇಡ

Chikkaballapur drought: 1 ಟ್ಯಾಂಕರ್ ನೀರಿಗೆ 600 ರೂ. ಆದ್ರೂ ಪರವಾಗಿಲ್ಲ, ಹಸಿವಿನಿಂದ ಬಳಲುತ್ತಿರುವ ಹಸುಗಳಿಗೆ ಮೇವು ಆದ್ರೂ ಆಗಲಿ ಅಂತ ದುಬಾರಿ ಹಣ ತೆತ್ತು ಪ್ರತಿದಿನ 6 ಟ್ಯಾಂಕರ್ ತರಿಸಿ ರಾಗಿ ಜಮೀನಿಗೆ ನೀರು ಹರಿಸುತ್ತಿದ್ದಾರೆ ರೈತಾಪಿ ಜನ. ಜನರು ಎಲ್ಲಿಯಾದ್ರೂ ಕೂಲಿಗೆ ಹೋಗಿ ದುಡಿದು ತಿನ್ನಬಹುದು ಹಸುಗಳನ್ನು ಏನ್ ಮಾಡೊದು ಅನ್ನೊ ಚಿಂತೆ ರೈತರಿಗೆ ಕಾಡುತ್ತಿದೆ.

Tank irrigation: ಒಣಗುತಿರುವ ರಾಗಿ ಬೆಳೆ ಉಳಿಸಿಕೊಳ್ಳಲು ದುಬಾರಿ ಟ್ಯಾಂಕರ್ ನೀರಿಗೆ ಮೊರೆ! ಚಿಕ್ಕಬಳ್ಳಾಪುರ ರೈತರ ಪಾಡು ಯಾರಿಗೂ ಬೇಡ
ಒಣಗುತಿರುವ ರಾಗಿ ಬೆಳೆ ಉಳಿಸಿಕೊಳ್ಳಲು ದುಬಾರಿ ಟ್ಯಾಂಕರ್ ನೀರಿಗೆ ಮೊರೆ!
Follow us
ಭೀಮಪ್ಪ ಪಾಟೀಲ್​, ಚಿಕ್ಕಬಳ್ಳಾಪುರ
| Updated By: ಸಾಧು ಶ್ರೀನಾಥ್​

Updated on:Oct 28, 2023 | 2:07 PM

ಆ ಜಿಲ್ಲೆಯ ಆರು ತಾಲೂಕುಗಳು ತೀವ್ರ ಬರಪೀಡಿತವಾಗಿದ್ದು (drought) ಬಿತ್ತಿದ್ದ ಬೆಳೆಗಳು ಒಣಗಿ ನಿಂತಿವೆ. ಅಲ್ಲಿಷ್ಟು ಇಲ್ಲಷ್ಟು ಬೆಳೆಗಳು ಜೀವ ಹಿಡಿದು ನಿಂತಿವೆ, ರಾಗಿ ಫಸಲು ಒಣಗುತ್ತಿದೆ, ಒಣಗುತ್ತಿರುವ ಬೆಳೆ ಉಳಿಸಿಕೊಳ್ಳಲು ಅಲ್ಲಿಯ ರೈತರು, ಟ್ಯಾಂಕರ್ (tank irrigation) ಗಳ ಮೂಲಕ ನೀರು ಖರೀದಿಸಿ ಬೆಳೆ ರಕ್ಷಣೆ ಮಾಡಿಕೊಳ್ಳುತ್ತಿರುವ ದೃಶ್ಯ ಬರಗಾಲದ ಬವಣೆಯನ್ನು ಎತ್ತಿ ತೋರಿಸುತ್ತಿದೆ. ಅಷ್ಟಕ್ಕೂ ಅದೆಲ್ಲಿ ಅಂತೀರಾ ಈ ಕುರಿತು ಒಂದು ವರದಿ.

ಬಿತ್ತಿದ್ದ ರಾಗಿ ಪೈರು, ಇನ್ನೇನು ಒಂದಿಷ್ಟು ಮಳೆ ಬಂದಿದ್ರೆ… ರೈತರ ಹಸಿವು ನೀಗಿಸಬೇಕಿತ್ತು, ಆದ್ರೆ ಮಳೆರಾಯ ಕೈಕೊಟ್ಟ ಕಾರಣ ಜಮೀನಿನಲ್ಲಿ ರಾಗಿ ಪೈರು ಒಣಗುತ್ತಿದೆ. ಇದ್ರಿಂದ ಕನಿಷ್ಠ ಮನೆಯಲ್ಲಿರುವ ಹಸುಗಳಿಗೆ ಮೇವು ಆಗಲಿ ಅಂತ ಚಿಕ್ಕಬಳ್ಳಾಪುರ (Chikkaballapur) ತಾಲೂಕು ಕೊಳವನಹಳ್ಳಿ ರೈತ ದೇವರಾಜ್… ದೂರದ ಬೋರ್ ವೇಲ್ ಗಳಲ್ಲಿ ನೀರು ಖರೀದಿ ಮಾಡಿ ಟ್ಯಾಂಕರ್ ಗಳ ಮೂಲಕ ಒಣಗುತ್ತಿರುವ ರಾಗಿಗೆ ನೀರು ಹರಿಸುತ್ತಿದ್ದಾನೆ. ಈ ಕುರಿತು ನಮ್ಮ ಪ್ರತಿನಿಧಿ ಭೀಮಪ್ಪ ಪಾಟೀಲ ರೈತನ ಜಮೀನಿನಿಂದ ಪ್ರತ್ಯಕ್ಷ ವರದಿ ನೀಡಿದ್ದಾರೆ.

ಒಂದು ಟ್ಯಾಂಕರ್ ನೀರಿಗೆ ಆರು ನೂರು ರೂಪಾಯಿ ಬೆಲೆ ಆಗುತ್ತಿದೆ, ಆದ್ರೂ ಪರವಾಗಿಲ್ಲ, ಹಸಿವಿನಿಂದ ಬಳಲುತ್ತಿರುವ ಹಸುಗಳಿಗೆ ಮೇವು ಆದ್ರೂ ಆಗಲಿ ಅಂತ ದುಬಾರಿ ಹಣ ತೆತ್ತು ಪ್ರತಿದಿನ ಆರು ಟ್ಯಾಂಕರ್ ನೀರು ತರಿಸಿ ರಾಗಿ ಜಮೀನಿಗೆ ನೀರು ಹರಿಸುತ್ತಿದ್ದಾನೆ, ಜನರು ಎಲ್ಲಿಯಾದ್ರೂ ಕೂಲಿಗೆ ಹೋಗಿ ದುಡಿದು ತಿನ್ನಬಹುದು ಹಸುಗಳನ್ನು ಏನ್ ಮಾಡೊದು ಅನ್ನೊ ಚಿಂತೆ ರೈತರಿಗೆ ಕಾಡುತ್ತಿದೆ.

ರಾಜ್ಯ ಸರ್ಕಾರ ಚಿಕ್ಕಬಳ್ಳಾಪುರ ಜಿಲ್ಲೆಯನ್ನು ಸಂಪೂರ್ಣ ಬರಪೀಡಿತ ಜಿಲ್ಲೆಯೆಂದು ಘೋಷಣೆ ಮಾಡಿದೆ. ಆದ್ರೆ ಇನ್ನೂ ಸೂಕ್ತ ಬರ ಪರಿಹಾರ ಕ್ರಮಕೈಗೊಂಡಿಲ್ಲ, ಗೋ ಶಾಲೆಗಳ ಆರಂಭ ಮಾಡಿದ ಬಗ್ಗೆ ಮಾಹಿತಿ ಇಲ್ಲ, ಇದ್ರಿಂದ ಒಂದೆಡೆ ರೈತರು, ಮತ್ತೊಂದೆಡೆ ಜಾನುವಾರುಗಳು ಪರದಾಡ್ತಿವೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 1:45 pm, Sat, 28 October 23

ರಾಜಸ್ಥಾನದ ರಾಜ್ಯಪಾಲ ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್​ನಲ್ಲಿ ಬೆಂಕಿ
ರಾಜಸ್ಥಾನದ ರಾಜ್ಯಪಾಲ ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್​ನಲ್ಲಿ ಬೆಂಕಿ
‘ಕೆಡಿ’ ಸಿನಿಮಾದ ನಿಜವಾದ ‘ಹೀರೋ’ ಅನ್ನು ಕೊಂಡಾಡಿದ ಧ್ರುವ ಸರ್ಜಾ
‘ಕೆಡಿ’ ಸಿನಿಮಾದ ನಿಜವಾದ ‘ಹೀರೋ’ ಅನ್ನು ಕೊಂಡಾಡಿದ ಧ್ರುವ ಸರ್ಜಾ
ಹೊಸ ಚೆಂಡಿನಲ್ಲಿ ನಾನೇ ಬೆಸ್ಟ್; ರೋಹಿತ್​ಗೆ ಸಿರಾಜ್ ತಿರುಗೇಟು
ಹೊಸ ಚೆಂಡಿನಲ್ಲಿ ನಾನೇ ಬೆಸ್ಟ್; ರೋಹಿತ್​ಗೆ ಸಿರಾಜ್ ತಿರುಗೇಟು
ಮಹಿಳೆಯರನ್ನು ಕೋಟ್ಯಾಧಿಪತಿ ಮಾಡುತ್ತೇವೆ;WITT ಶೃಂಗಸಭೆಯಲ್ಲಿ ಸ್ಮೃತಿ ಇರಾನಿ
ಮಹಿಳೆಯರನ್ನು ಕೋಟ್ಯಾಧಿಪತಿ ಮಾಡುತ್ತೇವೆ;WITT ಶೃಂಗಸಭೆಯಲ್ಲಿ ಸ್ಮೃತಿ ಇರಾನಿ
2025 ಅಂತ್ಯದೊಳಗೆ ದೇಶಿ ಸೆಮಿಕಂಡಕ್ಟರ್ ಚಿಪ್, ಎಐ ಆರಂಭ;ಅಶ್ವಿನಿ ವೈಷ್ಣವ್
2025 ಅಂತ್ಯದೊಳಗೆ ದೇಶಿ ಸೆಮಿಕಂಡಕ್ಟರ್ ಚಿಪ್, ಎಐ ಆರಂಭ;ಅಶ್ವಿನಿ ವೈಷ್ಣವ್
ಅರ್ಜುನ್ ಜನ್ಯಗೆ ಹಾಡು ಹೊಳೆಯುವುದೆಲ್ಲಿ: ಸಂಗತಿ ವಿವರಿಸಿದ ಪ್ರೇಮ್
ಅರ್ಜುನ್ ಜನ್ಯಗೆ ಹಾಡು ಹೊಳೆಯುವುದೆಲ್ಲಿ: ಸಂಗತಿ ವಿವರಿಸಿದ ಪ್ರೇಮ್
ಮ್ಯಾನ್ಮಾರ್​ಗೆ ಸಹಾಯ ಮಾಡುವ ಆಪರೇಷನ್​ಗೆ ಸರ್ಕಾರ ದೇವರ ಹೆಸರಿಟ್ಟಿದ್ದೇಕೆ?
ಮ್ಯಾನ್ಮಾರ್​ಗೆ ಸಹಾಯ ಮಾಡುವ ಆಪರೇಷನ್​ಗೆ ಸರ್ಕಾರ ದೇವರ ಹೆಸರಿಟ್ಟಿದ್ದೇಕೆ?
ಯುಗಾದಿ: ಕೆಆರ್​ ಮಾರುಕಟ್ಟೆಯಲ್ಲಿ ಗ್ರಾಹಕರಿಗೆ ಶಾಕ್, ಹೂವಿನ ದರ ಏರಿಕೆ
ಯುಗಾದಿ: ಕೆಆರ್​ ಮಾರುಕಟ್ಟೆಯಲ್ಲಿ ಗ್ರಾಹಕರಿಗೆ ಶಾಕ್, ಹೂವಿನ ದರ ಏರಿಕೆ
ಬಿಜೆಪಿ ಎಲ್ಲ ಭಾಷೆಯನ್ನೂ ಗೌರವಿಸುತ್ತದೆ;WITT ಶೃಂಗಸಭೆಯಲ್ಲಿ ಕಿಶನ್ ರೆಡ್ಡಿ
ಬಿಜೆಪಿ ಎಲ್ಲ ಭಾಷೆಯನ್ನೂ ಗೌರವಿಸುತ್ತದೆ;WITT ಶೃಂಗಸಭೆಯಲ್ಲಿ ಕಿಶನ್ ರೆಡ್ಡಿ
ಯತ್ನಾಳ್ ಒಬ್ಬ ಒಳ್ಳೆಯ ನಾಯಕ ಅನ್ನೋದ್ರಲ್ಲಿ ಎರಡು ಮಾತಿಲ್ಲ: ತಂಗಡಿಗಿ
ಯತ್ನಾಳ್ ಒಬ್ಬ ಒಳ್ಳೆಯ ನಾಯಕ ಅನ್ನೋದ್ರಲ್ಲಿ ಎರಡು ಮಾತಿಲ್ಲ: ತಂಗಡಿಗಿ