ಚಿಕ್ಕಬಳ್ಳಾಪುರದಲ್ಲಿ ಹಿಂದೂ – ಮುಸ್ಲಿಂ ಭಾವೈಕ್ಯತೆ; ಶ್ರೀರಾಮನವಮಿ ಪ್ರಯುಕ್ತ ಆಂಜನೇಯ ಹಾಗೂ ಬಾಬಯ್ಯನಿಗೆ ವಿಶೇಷ ಪೂಜೆ

ವಿವಿಧತೆಯಲ್ಲಿ ಏಕತೆ ಸಾರುವ ಈ ಊರಿನ ಭಾವೈಕ್ಯತೆ, ಕೇವಲ ದೇವಸ್ಥಾನಗಳಿಗೆ ಸೀಮಿತವಾಗದೆ, ಗ್ರಾಮದ ಕುಟುಂಬಗಳಲ್ಲಿ ಏನೇ ಶುಭಕಾರ್ಯಗಳು ಜರುಗಿದರೂ, ಒಟ್ಟಿಗೆ ಊಟೋಪಚಾರ ಮಾಡುತ್ತಾರೆ. ಇನ್ನು ಮುಸ್ಲೀಮರ ಹಬ್ಬ ಬಂದರೆ ಹಿಂದೂಗಳು, ಹಿಂದೂಗಳ ಹಬ್ಬದಲ್ಲಿ ಮುಸ್ಲೀಮರು ತಪ್ಪದೇ ಭಾಗವಹಿಸುತ್ತಾರೆ.

ಚಿಕ್ಕಬಳ್ಳಾಪುರದಲ್ಲಿ ಹಿಂದೂ - ಮುಸ್ಲಿಂ ಭಾವೈಕ್ಯತೆ; ಶ್ರೀರಾಮನವಮಿ ಪ್ರಯುಕ್ತ ಆಂಜನೇಯ ಹಾಗೂ ಬಾಬಯ್ಯನಿಗೆ ವಿಶೇಷ ಪೂಜೆ
ಮಲ್ಲಸಂದ್ರ ಗ್ರಾಮದಲ್ಲಿ ಬಾಬಯ್ಯ ಹಾಗೂ ಆಂಜನೇಯ ಸ್ವಾಮಿ ಒಟ್ಟಿಗೆ ಇರುವ ದೇವಾಲಯ
Follow us
preethi shettigar
| Updated By: Skanda

Updated on: Apr 21, 2021 | 8:07 AM

ಚಿಕ್ಕಬಳ್ಳಾಪುರ: ಹಿಂದೂ ಮುಸ್ಲಿಂ ಕೊಮುಗಲಭೆಗೆ ಅಪವಾದವೆಂಬಂತೆ ಚಿಕ್ಕಬಳ್ಳಾಪುರ ಗ್ರಾಮದಲ್ಲಿ ಹಿಂದೂ ಮುಸ್ಲಿಂ ಕುಟುಂಬಗಳು ಹಲವು ದಶಕಗಳಿಂದ ನಾವೆಲ್ಲರೂ ಒಂದೇ, ನಾವು ಅಣ್ಣ ತಮ್ಮಂದಿರು ಎನ್ನುವ ಭಾವನೆಯಲ್ಲಿ ಅತ್ಯಂತ ಸಾಮರಸ್ಯದಿಂದ ಬದುಕುತ್ತಿದ್ದಾರೆ. ಇದಕ್ಕೆ ಸಂಕೇತವೆಂಬಂತೆ ಒಂದೇ ಚಾವಡಿಯ ಮಂದಿರದಲ್ಲಿ ಒಂದೆಡೆ ಹಿಂದೂಗಳ ಆರಾಧ್ಯ ದೈವ ಆಂಜನೇಯಸ್ವಾಮಿ ಮತ್ತೊಂದೆಡೆ ಮುಸ್ಲಿಂ ಸಮುದಾಯಕ್ಕೆ ಸೇರಿದ ಬಾಬಯ್ಯ ದೇವರುಗಳು ಇಲ್ಲಿ ಇವೆ. ಇನ್ನು ಶ್ರೀರಾಮನವಮಿ ದಿನದ ಪ್ರಯುಕ್ತ ಒಂದೆಡೆ, ರಾಮಭಕ್ತ ಆಂಜನೇಯ ಮತ್ತೊಂದೆಡೆ ಬಾಬಯ್ಯಗೆ ವಿಶೇಷ ಪೂಜೆ ಪುನಸ್ಕಾರ ನಡೆಯುತ್ತದೆ ಎನ್ನುವುದೇ ಇಲ್ಲಿನ ವಿಶೇಷತೆ.

ಚಿಕ್ಕಬಳ್ಳಾಪುರ ಜಿಲ್ಲೆ ಬಾಗೇಪಲ್ಲಿ ತಾಲೂಕು ಮಲ್ಲಸಂದ್ರ ಎನ್ನುವ ಗ್ರಾಮದಲ್ಲಿ ಬಾಬಯ್ಯ ಹಾಗೂ ಶ್ರೀರಾಮನ ಬಂಟ ಆಂಜನೇಯ ಸ್ವಾಮಿ ಒಂದೇ ಚಾವಡಿಯಲ್ಲಿ ಪವಡಿಸಿದ್ದಾರೆ. ಇದರಿಂದ ಮುಸ್ಲಿಂ ಹಬ್ಬಗಳಾದ ರಂಜಾನ್, ಬಕ್ರೀದ್, ಮೊಹರಂ, ಈದ್ ಮಿಲಾದ್ ಸೇರಿದಂತೆ ಅನೇಕ ಹಬ್ಬಗಳಲ್ಲಿ ಇಲ್ಲಿರುವ ಆಂಜನೇಯ ಸ್ವಾಮಿಗೆ ವಿಶೇಷ ಪೂಜೆ ಪುನಸ್ಕಾರ ನಡೆಯುತ್ತದೆ. ಇನ್ನು ಹಿಂದೂ ಹಬ್ಬಗಳಾದ ಯುಗಾದಿ, ರಾಮನವಮಿ, ಹನುಮಜಯಂತಿ, ಮಹಾಶಿವರಾತ್ರಿ, ಗಣೇಶ ಹಬ್ಬ, ದೀಪಾವಳಿ ಸೆರಿದಂತೆ ಹಲವು ಹಬ್ಬಗಳಿಗೆ ಇಲ್ಲಿರುವ ಬಾಬಯ್ಯನಿಗೂ ವಿಶೇಷ ಪೂಜೆ ಪುನಸ್ಕಾರ ನಡೆಯುತ್ತದೆ. ಒಂದೇ ಚಾವಡಿಯಲ್ಲಿ ಒಂದೆಡೆ ಹಿಂದೂಗಳು, ಮತ್ತೊಂದೆಡೆ ಮುಸ್ಲಿಂ ಬಾಂಧವರು, ಪ್ರಾರ್ಥನೆ ಹಾಗೂ ಪೂಜೆ ಸಲ್ಲಿಸುತ್ತಾರೆ. ಕಡಲೆ ಪಪ್ಪು, ಸಕ್ಕರೆ ಅರ್ಪಿಸಿ ಇಲ್ಲಿ ಪ್ರಾರ್ಥನೆ ಸಲ್ಲಿಸಿದ ಬಳಿಕ ಪ್ರಸಾದವನ್ನು ಸ್ವೀಕರಿಸುತ್ತಾರೆ.

ಹೊರಗಡೆಯಿಂದ ನೋಡಿದರೆ ಒಂದೆಡೆ ಮಸೀದಿಯ ಮಿನಾರ್, ಮತ್ತೊಂದೆಡೆ ಹಿಂದೂ ಸಂಪ್ರದಾಯದ ಗೋಪುರ, ಎರಡೂ ಒಂದಕ್ಕೊಂದು ಅಂಟಿಕೊಂಡಿದ್ದು. ಒಂದೇ ನಾಣ್ಯದ ಎರಡು ಮುಖಗಳಂತಿದೆ. ಮಂದಿರದ ಮೇಲೆ ಆಂಜನೇಯ ಸಮೇತ ರಾಮ ಲಕ್ಷ್ಮಣ ಸೀತೆಯ ವಿಗ್ರಹಗಳ ಗೋಪುರವಿದೆ. ಮತ್ತೊಂದೆಡೆ ಇಸ್ಲಾಂ ಧಾರ್ಮಿಕ ಸಂಕೇತವಾಗಿ ಮಿನಾರ್ ಇದೆ. ಇನ್ನು ಶ್ರೀರಾಮನವಮಿ ಪ್ರಯುಕ್ತ ವಿಶೇಷ ಪೂಜೆ-ಪುನಸ್ಕಾರಗಳು ನಡೆಯುತ್ತದೆ. ಈ ಕಡೆ ಅಭಿಷೇಕದ ಮಂಗಳ ವಾದ್ಯ ಮೊಳಗುತ್ತಿದರೆ. ಮತ್ತೊಂದೆಡೆ ಅಲ್ಲಾಹ್​ನಿಗಾಗಿ ನಮಾಜ್ ನಡೆಯುತ್ತದೆ. ಹೀಗೆ ಒಂದೇ ಸೂರಿನಡಿಯಲ್ಲಿ ಹಿಂದೂ ಮುಸ್ಲಿಂ ಸಮುದಾಯದವರು ಭಾವೈಕ್ಯತೆ ಸಾರುತ್ತಿದ್ದಾರೆ.

muslim and hindu god

ಬಾಬಯ್ಯ ಹಾಗೂ ಶ್ರೀರಾಮನ ಬಂಟ ಅಭಯ ಆಂಜನೇಯ ಸ್ವಾಮಿ

ಹಿಂದೂ ಮುಸ್ಲಿಂ ಎನ್ನುವ ಭೇದಭಾವ ತೋರಿ ಕೋಮು ಸೌಹಾರ್ದ ಹಾಳು ಮಾಡುವವರ ಮಧ್ಯೆ, ಮಲ್ಲಸಂದ್ರ ಗ್ರಾಮದಲ್ಲಿ ಒಂದೇ ಚಾವಡಿಯಲ್ಲಿ ಒಂದೆಡೆ ಹಿಂದೂ ಆಂಜನೇಸ್ವಾಮಿ, ಮತ್ತೊಂದೆಡೆ ಮುಸ್ಲಿಂ ಬಾಬಯ್ಯ ದೇವರ ವಿಗ್ರಹಗಳನ್ನು ಪ್ರತಿಷ್ಟಾಪಿಸಿ, ದೇವರೊಬ್ಬ ನಾಮ ಹಲವು ಎನ್ನುವ ಹಾಗೆ, ಆ ಧರ್ಮ.ಈ ಧರ್ಮ ಎನ್ನುವ ಗೊಡವೆಯಿಲ್ಲದೆ, ಅಭಿಷೇಕ, ಗಂಟೆನಾದ, ನಮಾಜ್ ಮಾಡುವುದರ ಮೂಲಕ ಎರಡೂ ಧರ್ಮದ ಜನ ಅನ್ಯೋನ್ಯ ಸಂಬಂಧ ಬೆಳೆಸಿಕೊಂಡಿದ್ದಾರೆ.

ಎರಡೂ ಧರ್ಮಗಳ ವಿಭಿನ್ನ ಧಾರ್ಮಿಕತೆ ಸಂಗಮವೇ ವಿಶೇಷ: ನೆರೆರಾಜ್ಯ ಆಂಧ್ರದ ಗೂಗೂಡು ಎನ್ನುವ ಪ್ರದೇಶದಲ್ಲಿ ಒಂದೇ ಚಾವಡಿಯಲ್ಲಿ ಆಂಜನೇಯ ಹಾಗೂ ಬಾಬಯ್ಯ ಪ್ರತಿಷ್ಠಾಪನೆ ಮಾಡಲಾಗಿದೆ. ಇನ್ನು ಮಲ್ಲಸಂಧ್ರ ಗ್ರಾಮದ ಸರ್ಕಾರಿ ಅಧಿಕಾರಿ ಕಮಲ್ ಬಾಬು ಅಲ್ಲಿಗೆ ಭೇಟಿ ನೀಡಿದ್ದು, ಪ್ರಭಾವಿತರಾಗಿ ತಮ್ಮ ಸ್ವ ಗ್ರಾಮದಲ್ಲಿಯೂ ಒಂದೇ ಚಾವಡಿಯಲ್ಲಿ ಆಂಜನೇಯ ಹಾಗೂ ಬಾಬಯ್ಯ ವಿಗ್ರಹ ಪ್ರತಿಷ್ಠಾಪಿಸಿದ್ದಾರೆ. ಇನ್ನು ಕಮಲ್ ಬಾಬು ಅವರ ನಿಸ್ವಾರ್ಥ ಕಾರ್ಯಕ್ಕೆ ಇಡೀ ಮಲ್ಲಸಂದ್ರ ಗ್ರಾಮಸ್ಥರು ಬೆಂಬಲ ಸೂಚಿಸಿ ಎರಡೂ ಧಾರ್ಮಿಕ ಆಚರಣೆಗಳನ್ನ ಒಗ್ಗೂಡಿಸಿಕೊಂಡು ಬರುತ್ತಿದ್ದಾರೆ.

ವಿವಿಧತೆಯಲ್ಲಿ ಏಕತೆ ಸಾರುವ ಈ ಊರಿನ ಭಾವೈಕ್ಯತೆ, ಕೇವಲ ದೇವಸ್ಥಾನಗಳಿಗೆ ಸೀಮಿತವಾಗದೆ, ಗ್ರಾಮದ ಕುಟುಂಬಗಳಲ್ಲಿ ಏನೇ ಶುಭಕಾರ್ಯಗಳು ಜರುಗಿದರೂ, ಒಟ್ಟಿಗೆ ಊಟೋಪಚಾರ ಮಾಡುತ್ತಾರೆ. ಇನ್ನು ಮುಸ್ಲೀಮರ ರಂಜಾನ್ ಹಬ್ಬ ಬಂದರೆ ಹಿಂದೂಗಳು ಕೂಡ ಇರುತ್ತಾರೆ. ಇನ್ನು ಆಂಜನೇಯ, ಗೌರೀ-ಗಣೇಶ ಹಬ್ಬಗಳು ಬಂದರೆ ಇಲ್ಲಿರುವ ಮುಸ್ಲಿಮರು ಮಾಂಸಾಹಾರ ತ್ಯಜಿಸಿ ಹಬ್ಬಗಳಲ್ಲಿ ಪಾಲ್ಗೊಳ್ಳುತ್ತಾರೆ. ಇಷ್ಟೇ ಅಲ್ಲದೆ ಪ್ರತಿದಿನ ದೇವಸ್ಥಾನಕ್ಕೆ ಬರುವವರು ಬಾಬಯ್ಯಗೆ ನಮಾಜ್ ಮಾಡಿ, ಆಂಜನೇಯಸ್ವಾಮಿಗೆ ಭಕ್ತಿಭಾವದಿಂದ ಆರತಿ ಎತ್ತಿ ನಮಸ್ಕರಿಸುತ್ತಾರೆ..

ಧರ್ಮ, ಜಾತಿ, ಪಂಥ ರಹಿತ ಸೌಹಾರ್ದ ಸಮಾಜ ಕಟ್ಟಬೇಕೆಂದು ಅದೆಷ್ಟೋ ಶರಣರು, ಸೂಫಿ ಸಂತರು, ಮಹಾನ್ ವ್ಯಕ್ತಿಗಳು ಕನಸು ಕಂಡಿದ್ದರು. ಅವರ ಕನಸು ಇಡಿ ಜಗತ್ತಿನಲ್ಲಿ ನನಸಾಯಿತೋ ಇಲ್ಲವೋ ಗೊತ್ತಿಲ್ಲ, ಆದರೆ ಮಲ್ಲಸಂಧ್ರ ಗ್ರಾಮದಲ್ಲಿ ಇದೀಗ ನನಸಾಗಿ, ಎಲ್ಲರಿಗೂ ಮಾದರಿಯಾಗಿದೆ. ಧರ್ಮಗಳ ಮಧ್ಯೆ ಸಾಮರಸ್ಯ ಎಲ್ಲಾ ಗ್ರಾಮಗಳು ಮತ್ತು ನಗರಗಳಲ್ಲಿ ಬರಲಿ ಎನ್ನುವುದು ಈ ಗ್ರಾಮಸ್ಥರ ಆಶಯ.

ಇದನ್ನೂ ಓದಿ: Rama Navami 2021: ರಾಮನವಮಿ ಆಚರಣೆಯ ಮುಹೂರ್ತ, ಇತಿಹಾಸ ಮತ್ತು ತಿಳಿದುಕೊಳ್ಳಲೇಬೇಕಾದ ಮಹತ್ವ ಇಲ್ಲಿದೆ

(hindu and muslim celebrates sri rama navami in same roof in chikkaballapur)

ಬುಲಂದ್‌ಶಹರ್‌ನಲ್ಲಿ ಟ್ರ್ಯಾಕ್ಟರ್ ಸ್ಟಂಟ್‌ ವೇಳೆ ದುರಂತ
ಬುಲಂದ್‌ಶಹರ್‌ನಲ್ಲಿ ಟ್ರ್ಯಾಕ್ಟರ್ ಸ್ಟಂಟ್‌ ವೇಳೆ ದುರಂತ
ಸರ್ಕಾರದ ಪ್ರಸ್ತಾವನೆಯನ್ನು ಆಶಾ ಕಾರ್ಯಕರ್ತೆಯರು ಒಪ್ಪಿಲ್ಲವೇ?
ಸರ್ಕಾರದ ಪ್ರಸ್ತಾವನೆಯನ್ನು ಆಶಾ ಕಾರ್ಯಕರ್ತೆಯರು ಒಪ್ಪಿಲ್ಲವೇ?
ಡಿಕೆಶಿ ಮಾಡಿಸಿದ ಹೋಮದ ಹಿಂದಿನ ರಹಸ್ಯವೇನು? ಶತ್ರುನಾಶವಾಗುತ್ತಾ?
ಡಿಕೆಶಿ ಮಾಡಿಸಿದ ಹೋಮದ ಹಿಂದಿನ ರಹಸ್ಯವೇನು? ಶತ್ರುನಾಶವಾಗುತ್ತಾ?
ಶಾಸಕ ಚಂದ್ರರನ್ನು ಸುನೀಲ ಮಾಮಾ ಅಂತ ಕರೆಯುತ್ತಿದ್ದ: ಆನಂದ್
ಶಾಸಕ ಚಂದ್ರರನ್ನು ಸುನೀಲ ಮಾಮಾ ಅಂತ ಕರೆಯುತ್ತಿದ್ದ: ಆನಂದ್
ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ
ಕೆರೆಗಳ ಸೌಂದರ್ಯೀಕರಣಕ್ಕೆ ಸಚಿವ ಸೋಮಣ್ಣ ₹ 50 ಕೋಟಿ ನೀಡಿದ್ದಾರೆ: ಶಾಸಕ
ಕೆರೆಗಳ ಸೌಂದರ್ಯೀಕರಣಕ್ಕೆ ಸಚಿವ ಸೋಮಣ್ಣ ₹ 50 ಕೋಟಿ ನೀಡಿದ್ದಾರೆ: ಶಾಸಕ