ಚಿಕ್ಕಬಳ್ಳಾಪುರ, ಆಗಸ್ಟ್ 20: ಸ್ವಾತಂತ್ರ್ಯ ದಿನಾಚರಣೆಯಂದು ಪ್ರಚೋದನಕಾರಿ ಭಾಷಣ ಆರೋಪದಡಿ ಹಿಂದೂ ಜಾಗರಣೆ ವೇದಿಕೆ (Hindu Jagarana Vedike) ಮುಖಂಡನನ್ನು ಜಿಲ್ಲೆಯ ಗೌರಿಬಿದನೂರು ಟೌನ್ ಪೊಲೀಸರು ಬಂಧಿಸಿದ್ದಾರೆ. ಹಿಂದೂ ಜಾಗರಣ ವೇದಿಕೆ ಕರ್ನಾಟಕ ದಕ್ಷಿಣ ಸಂಚಾಲಕ ಸತೀಶ್ ಬಂಧಿತ ವ್ಯಕ್ತಿ. ಗೌರಿಬಿದನೂರು ಟೌನ್ ಠಾಣೆಯಲ್ಲಿ ಐಪಿಸಿ ಸೆಕ್ಷನ್ 153A, 295A ಅಡಿ ಸ್ವಯಂಪ್ರೇರಿತ ಕೇಸ್ ದಾಖಲಾಗಿತ್ತು.
ಪಾಕಿಸ್ತಾನವನ್ನ ಸುಲಭದಲ್ಲಿ ಪಡೆದುಕೊಂಡೆವು. ಹಿಂದುಸ್ಥಾನವನ್ನು ಯುದ್ಧ ಮಾಡಿಯಾದರೂ ಪಡೆಯುತ್ತೇವೆ ಅಂತ ಮೊಹಮ್ಮದ್ ಅಲಿ ಜಿನ್ನಾ ಹೇಳಿದ್ದರು. ಆ ಯುದ್ಧದ ರಣತಂತ್ರವೇ ಈ ಜನಸಂಖ್ಯಾ ಸ್ಫೋಟ. ಇನ್ನೊಮ್ಮೆ ಪಾಕಿಸ್ತಾನ ಪರ ಕೇರಳ ಪ್ರತ್ಯೇಕತೆಯನ್ನು ಕೇಳುತ್ತಿದೆ. ಹೈದರಾಬಾದ್,ಕರ್ನಾಟಕದ ಭಟ್ಕಳ, ಉಲ್ಲಾಳ, ಬೆಂಗಳೂರಿನ ಡಿಜೆ ಹಳ್ಳಿ, ಕೆಜಿ ಹಳ್ಳಿಯಲ್ಲಿ ಸಂಪೂರ್ಣ ಮುಸಲ್ಮಾನರ ಆರ್ಭಟವಾಗುತ್ತಿದೆ.
ಇದನ್ನೂ ಓದಿ: ಬನ್ನೇರುಘಟ್ಟ: ಅತ್ಯಾಚಾರ-ಹತ್ಯೆ ಪ್ರಕರಣದ ಒರ್ವ ಆರೋಪಿ ಕಾಲಿಗೆ ಜಿಗಣಿ ಇನ್ಸ್‌ಪೆಕ್ಟರ್ ಗುಂಡಿಟ್ಟರು
15% ಮುಸ್ಲಿಂರಾದರೆ, ಹಿಂದೂಗಳು ಅವರ ಹಬ್ಬದಲ್ಲಿ ಪಾಲ್ಗೊಳ್ಳುತ್ತಾರೆ. ಅದೇ 30% ಮುಸ್ಲಿಂಮರಾದರೆ ಅವರ ಮನೆಯ ಎದುರು ಹಿಂದೂ ಹಬ್ಬಗಳನ್ನು ಆಚರಿಸಬೇಡಿ ಎನ್ನುತ್ತಾರೆ. ಕಳ್ಳತನ ಮಾಡಿದ ವ್ಯಕ್ತಿ ಮುಸ್ಲಿಂ ಆಗಿದ್ದರೆ, ಕಾನ್ಸ್ಟೇಬಲ್ ಅವನನ್ನು ಬಂದಿಸುವ ಮೊದಲು 50 ಬಾರಿ ಯೋಚಿಸುತ್ತಾನೆ. ಭಾರತ ಎಂದೂ ಸಹ ಭಾರತವಾಗಿರಬೇಕು, ಅಖಂಡವಾಗಿರಬೇಕು ಎನ್ನಲಾಗಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಚಿಕ್ಕಬಳ್ಳಾಪುರ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಸಿ.ಸುಧಾಕರ್ ಪ್ರತಿಕ್ರಿಯೆ ನೀಡಿದ್ದು, ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಇತಿಮಿತಿಗಳಿವೆ. ಬಿಜೆಪಿಯವರು ರಾಜ್ಯ, ದೇಶದಲ್ಲಿ ಅಶಾಂತಿ ಸೃಷ್ಟಿಸಲು ಯತ್ನಿಸುತ್ತಿದ್ದಾರೆ. ನಾವು ಸಹ ರಾಷ್ಟ್ರಪ್ರೇಮಿಗಳು, ರಾಷ್ಟ್ರವಾದಿಗಳು. ಕೇವಲ ರಾಜಕೀಯಕ್ಕೋಸ್ಕರ ಬಿಜೆಪಿಯವರು ಜನರ ದಿಕ್ಕು ತಪ್ಪಿಸುತ್ತಿದ್ದಾರೆ ಎಂದರು.
ಇದನ್ನೂ ಓದಿ: ಅಮೆರಿಕದಲ್ಲಿ ದಾವಣಗೆರೆ ಮೂಲದ ದಂಪತಿ, ಮಗು ಸಾವು: ಪತ್ನಿ, ಪುತ್ರನಿಗೆ ಗುಂಡುಹಾರಿಸಿ ಪತಿ ಆತ್ಮಹತ್ಯೆ ಶಂಕೆ
ಸಾಮಾಜಿಕ ಸಾಮರಸ್ಯ ಹಾಳುಗೆಡವುವವರ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ. ನಾಳೆ ಮುಗ್ದ ಜನರಿಗೆ ಅನ್ಯಾಯವಾದರೆ ಅದನ್ನು ನಾವೇ ಜವಾಬ್ದಾರಿ ಹೊತ್ತುಕೊಳ್ಳಬೇಕಾಗುತ್ತೆ. ಮುನ್ನೆಚ್ಚರಿಕೆ ಕ್ರಮವಾಗಿ ಕ್ರಮಕೈಗೊಳ್ಳಲಾಗಿದೆ ಎಂದು ಹೇಳಿದರು.
ಪ್ರಬಲವಾಗಿದ್ದ ಬಿಜೆಪಿ ಹೈಕಮಾಂಡ್ ದುರ್ಬಲವಾಗಿದ್ದು ಆಶ್ಚರ್ಯ ತಂದಿದೆ. ವಿಪಕ್ಷ ನಾಯಕನ ಆಯ್ಕೆ ಹಾಗೂ ರಾಜ್ಯ ಬಿಜೆಪಿ ಅಧ್ಯಕ್ಷರ ಆಯ್ಕೆ ಗೊಂದಲ ಆಗಿದೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕರ್ನಾಟಕ ಸೋತಿರುವುದು ಬಿಜೆಪಿ ಹೈಕಮಾಂಡ್‌ಗೆ ಆಘಾತವಾಗಿದೆ. ಕರ್ನಾಟಕದಲ್ಲಿ ಬಿಜೆಪಿ ಸೋತಿರುವುದರಿಂದ ಬಿಜೆಪಿ ಹೈಕಮಾಂಡ್ ಕಂಗೆಟ್ಟಿದೆ ಎಂದು ಕಿಡಿಕಾರಿದರು.
ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.