ಚಿಕ್ಕಬಳ್ಳಾಪುರ: ತಾಪಮಾನ ಎಫೆಕ್ಟ್ – ಸೌತೆಕಾಯಿಗೆ ಭಾರೀ ಡಿಮ್ಯಾಂಡ್!

ಒಂದೆಡೆ ಬಿರು ಬಿಸಿಲು, ಮತ್ತೊಂದೆಡೆ ತಾಪಮಾನ ಹೆಚ್ಚಳ, ಅತಿಯಾದ ಉಷ್ಣಕ್ಕೆ ಮದ್ದು ಎಂಬಂತೆ ಊಟ ತಿಂಡಿಯ ಜೊತೆ ಸೌತೆಕಾಯಿ ನಂಚಿಕೊಳ್ಳಲು ಜನ ಮುಂದಾಗುತ್ತಿದ್ದಾರೆ. ಮತ್ತೊಂದೆಡೆ ಅತಿಯಾದ ಉಷ್ಣ ಹಾಗೂ ಬಿಸಿಲಿನಿಂದ ಸೌತೆಕಾಯಿ ಉತ್ಪಾದನೆಯಲ್ಲಿ ಗಣನೀಯ ಕಡಿಮೆಯಾಗಿದೆ. ಇದರಿಂದ ಸೌತೆಕಾಯಿಗೆ ಎಲ್ಲಿಲ್ಲದ ಡಿಮ್ಯಾಂಡ್ ಬಂದಿದೆ. ಕೆಜಿ ಸೌತೆಕಾಯಿ ಬೆಲೆ 60 ರೂಪಾಯಿ ಆಗಿದ್ದು, ಒಂದು ಸೌತೆಕಾಯಿ ಬೆಲೆ 15 ರೂಪಾಯಿ ಆಗಿದೆ. 

ಚಿಕ್ಕಬಳ್ಳಾಪುರ: ತಾಪಮಾನ ಎಫೆಕ್ಟ್ - ಸೌತೆಕಾಯಿಗೆ ಭಾರೀ ಡಿಮ್ಯಾಂಡ್!
ಸೌತೆಕಾಯಿಗೆ ಹೆಚ್ಚಿದ ಬೆಲೆ
Follow us
ಭೀಮಪ್ಪ ಪಾಟೀಲ್​, ಚಿಕ್ಕಬಳ್ಳಾಪುರ
| Updated By: ಕಿರಣ್ ಹನುಮಂತ್​ ಮಾದಾರ್

Updated on: Apr 28, 2024 | 7:03 PM

ಚಿಕ್ಕಬಳ್ಳಾಪುರ, ಏ.28: ಈಗ ಮೊದಲೇ ಬಿರು ಬಿಸಿಲು, ಮತ್ತೊಂದೆಡೆ ಬರ ತಾಂಡವವಾಡುತ್ತಿದೆ. ಇನ್ನೊಂದೆಡೆ ನೀರಿನ ಕೊರತೆ ಇದೆಲ್ಲದರ ಮಧ್ಯೆ ಅತಿಯಾದ ತಾಪಮಾನದಿಂದ ಸೌತೆಕಾಯಿ ಉತ್ಪಾದನೆ ಕುಂಠಿತಗೊಂಡಿದೆ. ಭೂಮಿಯಲ್ಲಿ ಸೌತೆಕಾಯಿ (Cucumber) ಬಳ್ಳಿಗಳು ಬೆಳೆಯುತ್ತಿಲ್ಲ. ಹೂ ಬಿಟ್ಟರೂ ಪಿಂದಿ(ಮೊಗ್ಗು) ಬರದೆ ಬಳ್ಳಿಗಳು ಒಣಗಿಹೋಗುತ್ತಿವೆ. ಚಿಕ್ಕಬಳ್ಳಾಪುರದ ಎಪಿಎಂಸಿ ಮಾರುಕಟ್ಟೆಗೆ ಪ್ರತಿದಿನ ಮೂರು ಸಾವಿರದಿಂದ ಐದು ಸಾವಿರ ಸೌತೆಕಾಯಿ ಮೂಟೆಗಳು ಬರುತ್ತಿದ್ದವು. ಆದರೆ, ಈಗ ಇನ್ನೂರು ಮುನ್ನೂರು ಸೌತೆಕಾಯಿ ಮೂಟೆಗಳು ಮಾತ್ರ ಬರುತ್ತಿವೆ. ಇದರಿಂದ ಬೇಡಿಕೆಯಷ್ಟು ಸೌತೆಕಾಯಿ ಸರಬರಾಜು ಮಾಡಲಾಗುತ್ತಿಲ್ಲ.

ಒಂದು ಸೌತೆಕಾಯಿ ಬೆಲೆ 15 ರೂಪಾಯಿ

ಇನ್ನು ಚಿಕ್ಕಬಳ್ಳಾಪುರದ ಎಪಿಎಂಸಿ ಮಾರುಕಟ್ಟೆಯಲ್ಲಿ 30 ಕೆಜಿಯ ಸೌತೆಕಾಯಿ ಒಂದು ಮೂಟೆಗೆ ಸಾವಿರದಿಂದ ಸಾವಿರದ ಐನೂರು ರೂಪಾಯಿ ದುಬಾರಿಯಾಗಿದೆ. ಕೇಳಿದಷ್ಟು ಹಣ ಕೊಟ್ಟರೂ ಸೌತೆಕಾಯಿಗಳು ದೊರೆಯುತ್ತಿಲ್ಲ. ಇನ್ನೂ ಸಂತೆ ಮಾರುಕಟ್ಟೆಯಲ್ಲಿ ಕೆ.ಜಿ ಸೌತೆಕಾಯಿ 60 ರಿಂದ 70 ರೂಪಾಯಿ ಮಾರಾಟವಾಗುತ್ತಿದೆ. ಕೆಜಿ ಸೌತೆಕಾಯಿಗೆ ನಾಲ್ಕು ಕಾಯಿಗಳು ಮಾತ್ರ ಬರುತ್ತೆ. ಒಂದು ಸೌತೆಕಾಯಿ ಬೆಲೆ 15 ರೂಪಾಯಿ ಆಗುತ್ತಿದೆ. ಒಂದೆಡೆ ಸೌತೆಕಾಯಿ ಬೆಲೆ ರೈತರಿಗೆ ವರದಾನವಾದರೆ ಗ್ರಾಹಕರ ಜೇಬಿಗೆ ಕತ್ತರಿಯಾಗಿದೆ.

ಇದನ್ನೂ ಓದಿ:ಹಾವೇರಿ: ಹೆಚ್ಚಿದ ತಾಪಮಾನ; ಆಧುನಿಕ ಬರಾಟೆಯಲ್ಲಿ ಮೂಲೆ ಸೇರಿದ್ದ ಮಣ್ಣಿನ ಮಡಿಕೆಗೆ ಭಾರಿ ಡಿಮ್ಯಾಂಡ್​

ಸೌತೆಕಾಯಿಯಲ್ಲಿ ವಿವಿಧ ಪದ್ದಾರ್ಥ

ದೇಹದ ಉಷ್ಣ ಕಡಿಮೆ ಮಾಡಲು ಸೌತೆಕಾಯಿ ಮದ್ದಿನಂತೆ ಆಗಿದೆ. ಇದರಿಂದ ವೆಜಿಟೇರಿಯನ್ ಹಾಗೂ ನಾನ್ ವೆಜಿಟೇರಿಯನ್ ಊಟದಲ್ಲಿ ನಂಚಿಕೊಳ್ಳಲು ಸೌತೆಕಾಯಿ ಉಪಯೋಗಿಸುತ್ತಿದ್ದಾರೆ. ಇನ್ನೂ ಕೆಲವರು ಸೌತೆಕಾಯಿ ಕಿಚಡಿ, ಜ್ಯೂಸ್ ಸೇರಿದಂತೆ ವಿವಿಧ ರೀತಿಯಲ್ಲಿ ಸೌತೆಕಾಯಿ ತಿನ್ನುತ್ತಿದ್ದಾರೆ. ಇದರಿಂದ ಸೌತೆಕಾಯಿಗೆ ಬಾರೀ ಡಿಮ್ಯಾಂಡ್ ಬಂದಿದೆ. ಆದರೆ, ಡಿಮ್ಯಾಂಡಿಗೆ ತಕ್ಕಂತೆ ಸೌತೆಕಾಯಿ ಬೆಳೆಯುತ್ತಿಲ್ಲ. ಎಲ್ಲದಕ್ಕೂ ತಾಪಮಾನ ಹೆಚ್ಚಳವೇ ಕಾರಣವಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್