Chikkaballapura Mega Job Fair 2023: ಜನವರಿ 12ಕ್ಕೆ ಚಿಕ್ಕಬಳ್ಳಾಪುರದಲ್ಲಿ ಬೃಹತ್ ಉದ್ಯೋಗ ಮೇಳ -ನೂರಾರು ಕಂಪನಿಗಳು ಭಾಗಿ, 10000 ಖಾಲಿ ಹುದ್ದೆ, ನೀವೂ ಭಾಗಿಯಾಗಿ
Job Fair: ಜನವರಿ 12 ರಂದು ಚಿಕ್ಕಬಳ್ಳಾಪುರದ SJCITಯಲ್ಲಿ ಬೃಹತ್ ಉದ್ಯೋಗ ಮೇಳದಲ್ಲಿ ಭಾಗಿಯಾಗಲು ಆನ್ ಲೈನ್ ನಲ್ಲಿ ಮೊದಲು ನೋಂದಣಿ ಮಾಡಬೇಕು. ಇಲ್ಲದಿದ್ದರೆ ಅಂದು ಸ್ಥಳದಲ್ಲೇ ನೋಂದಣಿ ಮಾಡಿಕೊಳ್ಳಲೂ ಸಹ ಅವಕಾಶ ಕಲ್ಪಿಸಲಾಗಿದೆ.
ಚಿಕ್ಕಬಳ್ಳಾಪುರ ಜಿಲ್ಲೆಯಾಗಿ (Chikkaballapura) 15 ವರ್ಷವಾಗಿರುವ ಹಿನ್ನೆಲೆಯಲ್ಲಿ ಚಿಕ್ಕಬಳ್ಳಾಪುರ ಜಿಲ್ಲಾಡಳಿತ ಹಾಗೂ ಡಾ. ಕೆ. ಸುಧಾಕರ್ ಫೌಂಡೇಷನ್ ವತಿಯಿಂದ ಜನವರಿ 7ರಿಂದ 14ರ ವರೆಗೂ 7 ದಿನಗಳ ಕಾಲ ನಗರದಲ್ಲಿ ಚಿಕ್ಕಬಳ್ಳಾಪುರ ಉತ್ಸವ ಆಯೋಜನೆ ಮಾಡಲಾಗಿದೆ. ಉತ್ಸವದ ಪ್ರಯುಕ್ತ ಚಿಕ್ಕಬಳ್ಳಾಪುರ ನಗರದ SJCIT ಇಂಜಿನಿಯರಿಂಗ್ ಕಾಲೇಜಿನಲ್ಲಿ ಜನವರಿ 12ರಂದು ಬೃಹತ್ ಉದ್ಯೋಗ ಮೇಳವನ್ನು ಆಯೋಜನೆ ಮಾಡಲಾಗಿದ್ದು, ನಿರುದ್ಯೋಗಿ ಯುವಕ ಯುವತಿಯರು ಉದ್ಯೋಗ ಮೇಳದ (Recruitment Drive) ಪ್ರಯೋಜನ ಪಡೆಯುವಂತೆ ಜಿಲ್ಲಾಡಳಿತ ಮನವಿ ಮಾಡಿದೆ (Chikkaballapura Mega Job Fair-2023).
ಉದ್ಯೋಗ ಮೇಳದಲ್ಲಿ ಎಷ್ಟು ಕಂಪನಿಗಳು ಭಾಗವಹಿಸುತ್ತವೆ?
SJCIT ಇಂಜಿನಿಯರಿಂಗ್ ಕಾಲೇಜಿನಲ್ಲಿ ನಡೆಯುವ ಬೃಹತ್ ಉದ್ಯೋಗ ಮೇಳದಲ್ಲಿ 100ಕ್ಕೂ ಹೆಚ್ಚು ವಿವಿಧ ಕಂಪನಿಗಳು ಭಾಗಿಯಾಗುವ ಬಗ್ಗೆ ಮಾಹಿತಿ ನೀಡಲಾಗಿದೆ. 10,000ಕ್ಕಿಂತ ಹೆಚ್ಚು ಖಾಲಿ ಹುದ್ದೆಗಳು ಇದ್ದು ಅವಶ್ಯಕತೆ ಇರುವ ನಿರುದ್ಯೋಗಿಗಳನ್ನು ತುಂಬಿಕೊಳ್ಳುವ ಬಗ್ಗೆ ಕಂಪನಿಯಿಂದ ಭರವಸೆ ನೀಡಲಾಗಿದೆ.
ಯಾವೆಲ್ಲಾ ಕಂಪನಿಗಳು ಮೇಳದಲ್ಲಿ ಭಾಗಿ:
ಚಿಕ್ಕಬಳ್ಳಾಪುರ ಜಿಲ್ಲಾಡಳಿತ ಪ್ರಕಟಿಸಿರುವ ಉದ್ಯೋಗ ಮೇಳದ ಪಟ್ಟಿಯಲ್ಲಿ ಈ ಕೆಳಗಿನ ಕಂಪನಿಗಳು ಈಗಾಗಲೆ ನೋಂದಣಿ ಮಾಡಿಕೊಂಡಿವೆ: SIAL KIA MOTORS, WIPRO AEROSPACE, AIR INDIA SATS, AIRPORT SERVIECES VOLVO GROUPS, MANDOVI MOTORS, ICICI BANK, AJAX ENGINEERING, HONDA MOTORCYCLE, TITAN EYE WARE, JOHN DHEERE, ZUVENTUS HEALTHCARE LIMITED ಹಾಗೂ ಇನ್ನೂ ಮುಂತಾದ ಪ್ರತಿಷ್ಠಿತ ಕಂಪನಿಗಳು ಭಾಗವಹಿಸುತ್ತಿವೆ ಎಂದು ಜಿಲ್ಲಾಡಳಿತ ಹೇಳಿದೆ.
ಉದ್ಯೋಗ ಮೇಳದಲ್ಲಿ ನೋಂದಣಿ ಹೇಗೆ?:
ಜನವರಿ 12 ರಂದು ಚಿಕ್ಕಬಳ್ಳಾಪುರ ನಗರದ ಎಸ್.ಜೆ.ಸಿ.ಐ.ಟಿ ಯಲ್ಲಿ ನಡೆಯುವ ಬೃಹತ್ ಉದ್ಯೋಗ ಮೇಳದಲ್ಲಿ ಭಾಗಿಯಾಗಲು ಆನ್ ಲೈನ್ ನಲ್ಲಿ ಮೊದಲು ನೋಂದಣಿ ಮಾಡಬೇಕು. ಆನ್ ಲೈನ್ ನೋಂದಣಿ ಮಾಡಿಲ್ಲದವರಿಗಾಗಿ ಅಂದು ಸ್ಥಳದಲ್ಲೆ ನೋಂದಣಿ ಮಾಡಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ. ಈ ಕೆಳಗಿನ ಆನ್ ಲೈನ್ ಲಿಂಕ್ ಗಳನ್ನು ಬಳಸಿಕೊಂಡು ನೋಂದಣಿ ಮಾಡಬಹದು- ಅಭ್ಯರ್ಥಿಗಳು https://chikkaballapur.nic.in ಹಾಗೂ https://tinyurl.com/ckbudyogamela ಮೂಲಕ ನೋಂದಾಯಿಸಬಹುದು.
ಉದ್ಯೋಗ ಮೇಳದಲ್ಲಿ ಯಾರು ಯಾರು ಭಾಗವಹಿಸಬಹುದು:
ಚಿಕ್ಕಬಳ್ಳಾಪುರದಲ್ಲಿ ನಡೆಯುವ ಬೃಹತ್ ಉದ್ಯೋಗ ಮೇಳದಲ್ಲಿ 7ನೇ ತರಗತಿಯಿಂದ ಮಾಸ್ಟರ್ ಡಿಗ್ರಿವರೆಗೆ ಓದಿರುವ ನಿರುದ್ಯೋಗಿಗಳಿಗೆ ಆಕರ್ಷಕ ಸಂಬಳದೊಂದಿಗೆ, ಹಲವಾರು ಪ್ರತಿಷ್ಠಿತ ಕಂಪನಿಗಳಲ್ಲಿ ಕೆಲಸ ನೀಡುವ ಬಗ್ಗೆ ಭರವಸೆ ನೀಡಲಾಗಿದೆ.
ವರದಿ: ಭೀಮಪ್ಪ ಪಾಟೀಲ, ಟಿವಿ9, ಚಿಕ್ಕಬಳ್ಳಾಪುರ
Published On - 4:32 pm, Fri, 6 January 23