ನಂದಿಗಿರಿಧಾಮದಲ್ಲಿರುವ ಟಿಪ್ಪು ಅರಮನೆ ಮೇಲೆ ಬಿಷ್ಣೋಯ್ ಹೆಸರು: ಸುಮೋಟೋ ಕೇಸ್ ದಾಖಲು
ನಂದಿಗಿರಿಧಾಮದಲ್ಲಿರುವ ಟಿಪ್ಪು ಸುಲ್ತಾನ್ ಸಮ್ಮರ್ ಪ್ಯಾಲೇಸ್ ಮೇಲೆ ಕುಖ್ಯಾತ ಗ್ಯಾಂಗ್ಸ್ಟರ್ ಲಾರೆನ್ಸ್ ಬಿಷ್ಣೋಯ್ ಹೆಸರನ್ನು ದೊಡ್ಡದಾಗಿ ಬರೆದ ಘಟನೆ ಸಂಬಂಧ ಸುಮೋಟೋ ಕೇಸ್ ದಾಖಲಾಗಿದೆ. ಈ ಬಗ್ಗೆ ಟಿವಿ9 ವರದಿ ಬೆನ್ನಲ್ಲೇ ಎಚ್ಚೆತ್ತ ಚಿಕ್ಕಬಳ್ಳಾಪುರ ಪೊಲೀಸರು, ಎಸ್ಪಿ ಕುಶಲ್ ಚೌಕ್ಸೆ ಸೂಚನೆ ಮೇರೆಗೆ ಪ್ರಕರಣ ದಾಖಲಿಸಿದ್ದಾರೆ.

ಚಿಕ್ಕಬಳ್ಳಾಪುರ, ಅಕ್ಟೋಬರ್ 28: ಟಿಪ್ಪು ಅರಮನೆ ಮೇಲೆ ಬಿಷ್ಣೋಯ್ (Lawrence Bishnoi) ಹೆಸರು ಬರೆದು ವಿಕೃತಿ ಪ್ರಕರಣ ಸಂಬಂಧ ಟಿವಿ9 ವರದಿ ಬೆನ್ನಲ್ಲೇ ನಂದಿಗಿರಿಧಾಮ ಪೊಲೀಸ್ ಠಾಣೆಯಲ್ಲಿ ಸುಮೋಟೋ ಕೇಸ್ ದಾಖಲಾಗಿದೆ. ನಂದಿಗಿರಿಧಾಮದಲ್ಲಿರುವ ಭಾರತೀಯ ಪುರಾತತ್ವ ಹಾಗೂ ಸರ್ವೇಕ್ಷಣ ಇಲಾಖೆ ಅಧೀನದ ಟಿಪ್ಪು ಸುಲ್ತಾನ್ ಸಮ್ಮರ್ ಪ್ಯಾಲೇಸ್ ಮೇಲೆ ಕುಖ್ಯಾತ ಗ್ಯಾಂಗ್ಸ್ಟರ್ ಲಾರೆನ್ಸ್ ಬಿಷ್ಣೋಯ್ ಹೆಸರನ್ನು ದೊಡ್ಡದಾಗಿ ಬರೆಯಲಾಗಿತ್ತು. ಇದರಿಂದ ಟಿಪ್ಪು ಸುಲ್ತಾನ್ ಅಭಿಮಾನಿಗಳು ಹಾಗೂ ಪ್ರವಾಸಿಗರು ಅಸಮಾಧಾನ ವ್ಯಕ್ತಪಡಿಸಿದ್ದರು.
ಸದ್ಯ ತಿಹಾರ್ ಜೈಲಿನಲ್ಲಿರುವ ಅಂತಾರಾಷ್ಟ್ರೀಯ ಗ್ಯಾಂಗ್ಸ್ಟರ್ ಲಾರೆನ್ಸ್ ಬಿಷ್ಣೋಯ್ ಹೆಸರನ್ನು ಟಿಪ್ಪು ಅರಮನೆ ಮೇಲೆ ಬರೆದಿರುವ ಬಗ್ಗೆ ಟಿವಿ9 ವರದಿ ಮಾಡಿತ್ತು. ಈ ವರದಿಯಿಂದ ಚಿಕ್ಕಬಳ್ಳಾಪುರ ಜಿಲ್ಲಾ ಪೊಲೀಸರು ಅಲರ್ಟ್ ಆಗಿದ್ದು, ಎಸ್ಪಿ ಕುಶಲ್ ಚೌಕ್ಸೆ ಸೂಚನೆ ಮೇರೆಗೆ ಸುಮೋಟೋ ಪ್ರಕರಣ ದಾಖಲಿಸಿದ್ದಾರೆ. ದುಷ್ಕರ್ಮಿಗಳು ಒಂದು ತಿಂಗಳ ಹಿಂದೆಯೇ ಬಿಷ್ಣೋಯ್ ಹೆಸರು ಬರೆದಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದ್ದು, ಪಿಡಿಎಲ್ಪಿ ಹಾಗೂ ಬಿಎನ್ಎಸ್ ಆ್ಯಕ್ಟ್ 324(2), 329(3)ರಡಿ ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ಇದನ್ನೂ ಓದಿ: ಟಿಪ್ಪು ಸುಲ್ತಾನ್ ಪ್ಯಾಲೇಸ್ ಮೇಲೆ ಕುಖ್ಯಾತ ಗ್ಯಾಂಗ್ಸ್ಟರ್ ಲಾರೆನ್ಸ್ ಬಿಷ್ಣೋಯ್ ಹೆಸರು: ಭುಗಿಲೆದ್ದ ಆಕ್ರೋಶ
ಘಟನೆ ಬಗ್ಗೆ ಚಿಕ್ಕಬಳ್ಳಾಪುರ ಎಸ್ಪಿ ಹೇಳಿದ್ದೇನು?
ಬರಹ ಅಳಿಸಿದ ಇಲಾಖೆ ಸಿಬ್ಬಂದಿ
ಟಿಪ್ಪು ಅರಮನೆ ಮೇಲೆ ದುಷ್ಕರ್ಮಿಗಳು ಬರೆದಿದ್ದ ಬರಹವನ್ನು ಪುರಾತತ್ವ ಹಾಗೂ ಸರ್ವೇಕ್ಷಣಾ ಇಲಾಖೆ ಸಿಬ್ಬಂದಿ ಅಳಿಸಿದ್ದಾರೆ. ಲಾರೆನ್ಸ್ ಬಿಷ್ಣೋಯ್ ಹೆಸರಿನ ಮೇಲೆ ಬಣ್ಣವನ್ನು ಬಳಿಯಲಾಗಿದೆ. ಘಟನೆ ಸಂಬಂಧ ಸ್ಥಳದಲ್ಲಿರುವ ಸಿಸಿ ಕ್ಯಾಮರಾಗಳ ಪರಿಶೀಲನೆಯನ್ನೂ ನಡೆಸಲಾಗುತ್ತಿದ್ದು, ಶೀಘ್ರ ಆರೋಪಿಗಳ ಪತ್ತೆ ಮಾಡಿ ಕಠಿಣ ಕ್ರಮದ ಭರವಸೆಯನ್ನು ಪೊಲೀಸರು ನೀಡಿದ್ದಾರೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.




