ಮಳೆಗೆ ತುಂಬಿ ಹರಿಯುತ್ತಿವೆ ಜಲಾಶಯಗಳು: ಅಪಾಯಕಾರಿ ಸ್ಥಳದಲ್ಲಿ ಪ್ರೇಮಿಗಳ ಚುಂಬನ
ಯಾರಿಗೂ ಕೇರ್ ಮಾಡದ ಜೋಡಿಯೊಂದು, ಜಲಾಶಯದ ಅಪಾಯಕಾರಿ ಸ್ಥಳದಲ್ಲಿ ಕುಳಿತು ಸಾರ್ವಜನಿಕರ ಸಮ್ಮುಖದಲ್ಲೆ ರೋಮ್ಯಾನ್ಸ್ ಮಾಡಿದ ಪ್ರಸಂಗ ನಡೆದಿದೆ.
ಚಿಕ್ಕಬಳ್ಳಾಪುರ: ಇತ್ತೀಚೆಗೆ ಸುರಿದ ಧಾರಾಕಾರ ಮಳೆಯಿಂದ ಚಿಕ್ಕಬಳ್ಳಾಪುರ ಜಿಲ್ಲೆಯ ಕೆರೆ, ಕುಂಟೆ, ನದಿ, ನಾಲೆಗಳು ತುಂಬಿ ಭೋರ್ಗರೆಯುತ್ತಿವೆ. ಇನ್ನೂ ಕೋಡಿ ತುಂಬಿ ಹರಿಯುತ್ತಿರುವ ಜಲಾಶಯ ನೋಡಲು ಜನ ಮುಗಿಬಿದ್ದಿದ್ದಾರೆ. ಜಲಾಶಯದ ನೀರು ನೋಡಲು ಹೋಗಿ ಸಾವು ನೋವು ಸಂಭವಿಸುತ್ತಿರುವ ಕಾರಣ ಅಲ್ಲಿಯ ಪೊಲೀಸ್ ಇಲಾಖೆ ಜಲಾಶಯಗಳಲ್ಲಿ ಮುಂಜಾಗ್ರತಾ ಕ್ರಮವಾಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಿದೆ. ಆದ್ರೂ ಯಾರಿಗೂ ಕೇರ್ ಮಾಡದ ಜೋಡಿಯೊಂದು, ಜಲಾಶಯದ ಅಪಾಯಕಾರಿ ಸ್ಥಳದಲ್ಲಿ ಕುಳಿತು ಸಾರ್ವಜನಿಕರ ಸಮ್ಮುಖದಲ್ಲೆ ರೋಮ್ಯಾನ್ಸ್ ಮಾಡಿದ ಪ್ರಸಂಗ ನಡೆದಿದೆ.
ರಾಜಧಾನಿ ಬೆಂಗಳೂರಿನಲ್ಲಿ ಧಾರಾಕಾರ ಮಳೆಯಾಗಿ ನಗರದ ವಿವಿಧ ಬಡಾವಣೆಗಳು ಜಲಾವೃತವಾಗಿದೆ. ಇನ್ನೂ ಕೆಲವೆಡೆ ಜನ ಜೀವನ ಅಸ್ತವ್ಯಸ್ಥವಾಗಿದೆ. ಇತ್ತ ರಾಜಧಾನಿಗೆ ಹೊಂದಿಕೊಂಡಿರುವ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲೂ ಮೇಘಸ್ಪೋಟವಾಗಿ ಕೆರೆ, ಕುಂಟೆ, ನದಿ, ನಾಲೆಗಳು ತುಂಬಿ ಭೋರ್ಗರಿಯುತ್ತಿವೆ. ಇನ್ನೂ ಕೆರೆಗಳು ಕೋಡಿ ತುಂಬಿ ಹರಿಯುತ್ತಿರುವುದನ್ನು ನೋಡಲು ಜನ ಮುಗಿಬಿದ್ದಿದ್ದಾರೆ. ಜಲಾಶಯದ ನೀರು ನೋಡಲು ಹೋಗಿ ಹಾಗೂ ನೀರಿನಲ್ಲಿ ಮನಸ್ಸೊ ಇಚ್ಚೆ ಆಟವಾಡಲು ಹೋಗಿ ಇತ್ತೀಚೆಗೆ ಓರ್ವ ಪ್ರವಾಸಿ ಮೃತಪಟ್ಟ ಕಾರಣ ಚಿಕ್ಕಬಳ್ಳಾಪುರ ಜಿಲ್ಲಾ ಪೊಲೀಸ್ ಇಲಾಖೆ, ಜಲಾಶಯಗಳಿಗೆ ಮುಂಜಾಗೃತಾ ಕ್ರಮವಾಗಿ ಪೊಲೀಸ್ ಬಂದೋಬಸ್ತ್ ಕೈಗೊಂಡಿದೆ.
ಇನ್ನೂ ಚಿಕ್ಕಬಳ್ಳಾಪುರ ತಾಲೂಕಿನ ಶ್ರೀನಿವಾಸ ಸಾಗರ ಜಲಾಶಯ ತುಂಬಿ ನಿರಂತರವಾಗಿ ಕೋಡಿ ಹರಿಯುತ್ತಿದೆ. ಸುಮಾರು 80 ಅಡಿಗಳ ಮೇಲಿನಿಂದ ನೀರು ಭೋರ್ಗರಿಯುತ್ತಿರುವ ದೃಶ್ಯ ನೋಡಲು ಎರಡು ಕಣ್ಣುಗಳೆ ಸಾಲದು. ಇದ್ರಿಂದ ದಿನದಿಂದ ದಿನಕ್ಕೆ ಜಲಾಶಯ ಪ್ರವಾಸಿಗರ ಹಾಟ್ ಫೇವರೆಟ್ ಸ್ಪಾಟ್ ಆಗಿದೆ. ನಂದಿಗಿರಿಧಾಮ ಬದಲು ಪ್ರೇಮಿಗಳು ಶ್ರೀನಿವಾಸಸಾಗರ ಜಲಾಶಯದತ್ತ ಮುಖ ಮಾಡಿದ್ದಾರೆ. ಸಾರ್ವಜನಿಕರ ಸಮ್ಮುಖದಲ್ಲೇ ಜೋಡಿಯೊಂದು ಕೆರೆಯ ಅಪಾಯಕಾರಿ ಸ್ಥಳದಲ್ಲಿ ಕುಳಿತು ಚುಂಬಿಸುವುದರ ಮೂಲಕ ನೆರೆದವರು ನಾಚುವಂತೆ ಮಾಡಿದ್ರು.
ಬಯಲು ಸೀಮೆಯ ಚಿಕ್ಕಬಳ್ಳಾಪುರ ಜಿಲ್ಲೆ ಇತ್ತೀಚೆಗೆ ಸುರಿದ ಧಾರಾಕಾರ ಮಳೆಯಿಂದ ಮಲೆನಾಡಿನಂತಾಗಿದೆ. ಹಗಲು ತಪ್ಪಿದರೆ ರಾತ್ರಿ, ರಾತ್ರಿ ತಪ್ಪಿದರೆ ಹಗಲು ಮಳೆ ಬಿಟ್ಟು ಬಿಡದಂತೆ ಸುರಿಯುತ್ತಿದೆ. ಇದ್ರಿಂದ ಜಲಾಶಯಗಳು ತುಂಬಿ ಹರಿಯುತ್ತಿದ್ದು ಪ್ರವಾಸಿಗರನ್ನು ಕೈ ಬಿಸಿ ಕರೆಯುತ್ತಿವೆ.
ವರದಿ: ಭೀಮಪ್ಪ ಪಾಟೀಲ್, ಟಿವಿ9 ಚಿಕ್ಕಬಳ್ಳಾಪುರ
Published On - 7:55 pm, Thu, 8 September 22