ಸಾವಿನ ಮನೆಯಾದ ರಾಷ್ಟ್ರೀಯ ಹೆದ್ದಾರಿಯಲ್ಲಿ 50 ಕಿಮೀ ವ್ಯಾಪ್ತಿಯೊಳಗೆ ಸಾವು, ನೋವುಗಳಿಂದ ಜನ ನರಳುತ್ತಿದ್ದಾರೆ

ಅದು ಎರಡು ಮಹಾನಗರಗಳಿಗೆ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿ. ಆ ಹೆದ್ದಾರಿ ನೋಡೋಕೆ ನೈಸ್ ಆಗಿದೆಯೆಂದು ನೈಸ್ ಆಗಿ ಡ್ರೈವಿಂಗ್ ಮಾಡಿದರೆ ಅಪಘಾತ ತಪ್ಪಿದ್ದಲ್ಲ. ಆ ರಸ್ತೆಯ 50 ಕಿ.ಮೀ. ವ್ಯಾಪ್ತಿಯೊಳಗೆ ಕಳೆದ 9 ತಿಂಗಳಲ್ಲಿ ಬರೋಬ್ಬರಿ 47 ಜನ ಮೃತಪಟ್ಟು, ನೂರಾರು ಜನ ಗಾಯಗಳಿಂದ ನರಳುತ್ತಿದ್ದಾರೆ. ಆ ರಸ್ತೆಯಲ್ಲಿ ಸಂಚರಿಸಲು ಪ್ರಾಣ ಕೈಯಲ್ಲಿ ಹಿಡಿದು ಸಂಚರಿಸುವಂತಾಗಿದೆ. ಅಷ್ಟಕ್ಕೂ ಆ ರಸ್ತೆ ಯಾವುದು ಅಂದರೆ… ಅದು ರಾಷ್ಟ್ರೀಯ ಹೆದ್ದಾರಿ-44 (National Highway 44), ಬೆಂಗಳೂರು-ಹೈದರಾಬಾದ್ ಮಹಾನಗರಗಳಿಗೆ ಸಂಪರ್ಕ […]

ಸಾವಿನ ಮನೆಯಾದ ರಾಷ್ಟ್ರೀಯ ಹೆದ್ದಾರಿಯಲ್ಲಿ 50 ಕಿಮೀ ವ್ಯಾಪ್ತಿಯೊಳಗೆ ಸಾವು, ನೋವುಗಳಿಂದ ಜನ ನರಳುತ್ತಿದ್ದಾರೆ
ಸಾವಿನ ಮನೆಯಾದ ರಾಷ್ಟ್ರೀಯ ಹೆದ್ದಾರಿಯಲ್ಲಿ 50 ಕಿಮೀ ವ್ಯಾಪ್ತಿಯೊಳಗೆ ಸಾವು, ನೋವುಗಳಿಂದ ಜನ ನರಳುತ್ತಿದ್ದಾರೆ
Updated By: ಸಾಧು ಶ್ರೀನಾಥ್​

Updated on: Oct 03, 2022 | 4:08 PM

ಅದು ಎರಡು ಮಹಾನಗರಗಳಿಗೆ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿ. ಆ ಹೆದ್ದಾರಿ ನೋಡೋಕೆ ನೈಸ್ ಆಗಿದೆಯೆಂದು ನೈಸ್ ಆಗಿ ಡ್ರೈವಿಂಗ್ ಮಾಡಿದರೆ ಅಪಘಾತ ತಪ್ಪಿದ್ದಲ್ಲ. ಆ ರಸ್ತೆಯ 50 ಕಿ.ಮೀ. ವ್ಯಾಪ್ತಿಯೊಳಗೆ ಕಳೆದ 9 ತಿಂಗಳಲ್ಲಿ ಬರೋಬ್ಬರಿ 47 ಜನ ಮೃತಪಟ್ಟು, ನೂರಾರು ಜನ ಗಾಯಗಳಿಂದ ನರಳುತ್ತಿದ್ದಾರೆ. ಆ ರಸ್ತೆಯಲ್ಲಿ ಸಂಚರಿಸಲು ಪ್ರಾಣ ಕೈಯಲ್ಲಿ ಹಿಡಿದು ಸಂಚರಿಸುವಂತಾಗಿದೆ. ಅಷ್ಟಕ್ಕೂ ಆ ರಸ್ತೆ ಯಾವುದು ಅಂದರೆ…

ಅದು ರಾಷ್ಟ್ರೀಯ ಹೆದ್ದಾರಿ-44 (National Highway 44), ಬೆಂಗಳೂರು-ಹೈದರಾಬಾದ್ ಮಹಾನಗರಗಳಿಗೆ ಸಂಪರ್ಕ ಕಲ್ಪಿಸುತ್ತೆ. ಇಲ್ಲಿ ರಸ್ತೆಯ ಮಿತಿಗಿಂತ ವಾಹನಗಳು ಹೆಚ್ಚಾಗಿ ಸಂಚರಿಸುತ್ತಿವೆ. ಇದರಿಂದ ಕೇಂದ್ರ ಸರ್ಕಾರ ಈ ರಸ್ತೆಯನ್ನು 8 ಪಥಗಳ ರಸ್ತೆಯನ್ನಾಗಿ ನಿರ್ಮಾಣ ಮಾಡಲು ಯೋಜನೆ ರೂಪಿಸಿದೆ. ಆದರೆ ಈ ರಸ್ತೆಯ ನಾಗಾರ್ಜುನ ಕಾಲೇಜಿನಿಂದ ಬಾಗೇಪಲ್ಲಿವರೆಗೂ 50 ಕಿ.ಮೀ. ಉದ್ದವಿದೆ. ಈ ಅಂತರವೇ ಈಗ ಸಾವಿನ ಮನೆಯಾಗಿ ಪರಿಣಮಿಸಿದೆ. ಪ್ರತಿದಿನ ಒಂದಿಲ್ಲ ಒಂದು ಕಡೆ ಅಪಘಾತ, ಸಾವು, ನೋವು ಸಂಭವಿಸುತ್ತಿದೆ. ಇದರಿಂದ ಚಿಕ್ಕಬಳ್ಳಾಪುರ ಜಿಲ್ಲೆಯ (Chikkaballapur) ಪೊಲೀಸರಿಗೆ ಇದೇ ಒಂದು ಕೆಲಸವಾಗಿದೆ.

ಇನ್ನು ಎನ್‌ಹೆಚ್-44 ನಾಗಾರ್ಜುನ ಕಾಲೇಜಿನಿಂದ ಬಾಗೇಪಲ್ಲಿವರೆಗೂ 50 ಕಿ.ಮೀ. ಒಳಗೆ ಕಳೆದ 9 ತಿಂಗಳಲ್ಲಿ 136 ಅಪಘಾತ ಪ್ರಕರಣಗಳು ನಡೆದಿದೆ. ಇದರಲ್ಲಿ 41 ಘೋರ ಅಪಘಾತ ಪ್ರಕರಣಗಳಾಗಿದ್ದು, 95 ಅಪಘಾತ ಪ್ರಕರಣಗಳಾಗಿವೆ. 47 ಜನ ರಸ್ತೆಯಲ್ಲಿ ಮೃತಪಟ್ಟರೆ ನೂರಾರು ಜನ ಕೈ, ಕಾಲು, ದೇಹಕ್ಕೆ ಗಾಯಗಳಾಗಿ ಪರದಾಡುತ್ತಿದ್ದಾರೆ. ಇದರಿಂದ ಈ ರಸ್ತೆಯಲ್ಲಿ ಸಂಚರಿಸಲು ಬೈಕ್, ಕಾರು ಸವಾರರು ಪ್ರಾಣಭೀತಿಯಲ್ಲಿ ಸಂಚರಿಸುವಂತಾಗಿದೆ.

ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿ-44 ಅವೈಜ್ಞಾನಿಕವಾಗಿದೆಯಂತೆ. ಅನಿವಾರ್ಯ ಇರುವ ಕಡೆಯೂ ಸರ್ವೀಸ್ ರಸ್ತೆ ಇಲ್ಲ. ಅಂಡರ್‌ಪಾಸ್, ಬ್ರಿಡ್ಜ್ಗಳು ಇಲ್ಲ. ರಸ್ತೆ ಕ್ರಾಸಿಂಗ್‌ಗೆ ಹಂಪ್‌ಗಳಿಲ್ಲ.. ಸಿಗ್ನಲ್‌ಗಳಿಲ್ಲ.. ಯಾರು ಎಲ್ಲಿ ಬೇಕಾದರೂ ಹೇಗೆ ಬೇಕಾದರೂ ರಸ್ತೆಯಲ್ಲಿ ನುಗ್ಗಬಹುದು. ಇದರಿಂದ ಪದೇಪದೇ ಅಪಘಾತ, ಸಾವು, ನೋವುಗಳಾಗಿ ಜನ ಸಾಯುತ್ತಿದ್ದಾರೆ. ಆದರೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಹಾಗೂ ಸ್ಥಳೀಯ ಜಿಲ್ಲಾಮಟ್ಟದ ರಸ್ತೆ ಸುರಕ್ಷತಾ ಪ್ರಾಧಿಕಾರ ಇತ್ತ ಕಡೆ ಗಮನಹರಿಸದೇ ಇರುವುದರಿಂದ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ –ಭೀಮಪ್ಪ ಪಾಟೀಲ, ಟಿವಿ 9, ಚಿಕ್ಕಬಳ್ಳಾಫುರ