ಪ್ರಾಣ ಭಯದಲ್ಲಿ ನೂತನ ದಂಪತಿ, ಅಂತರ್ಜಾತಿ ವಿವಾಹಕ್ಕೆ ಪೋಷಕರ ವಿರೋಧ, ಎಸ್ಪಿ ಮೊರೆ ಹೋದ ಜೋಡಿ
ಮೋನಿಕಾ ಹಾಗೂ ಸುರೇಶ ಊರು ಬಿಟ್ಟು ಹೋಗಿ ಮದುವೆ ಮಾಡಿಕೊಂಡ ಕಾರಣ ಆಕ್ರೋಶಗೊಂಡಿದ್ದ ಮೋನಿಕಾ ಮನೆಯವರು ಇತ್ತಿಚಿಗೆ ಸುರೇಶ ತಮ್ಮನ ಆಟೊಗೆ ಬೆಂಕಿ ಹಾಕಿದ ಪ್ರಕರಣವೂ ಆಗಿತ್ತು. ಇದ್ರಿಂದ ಮತ್ತಷ್ಟು ಭಯಗೊಂಡಿರುವ ಜೋಡಿ... ಕದ್ದುಮುಚ್ಚಿ ದಿನಕ್ಕೊಂದು ಊರಲ್ಲಿ ಬದುಕುತ್ತಿದ್ದಾರೆ.
ಚಿಕ್ಕಬಳ್ಳಾಪುರ, ಡಿಸೆಂಬರ್ 11: ಆ ಯುವಕ-ಯುವತಿ ಜಾತಿಯ ಎಲ್ಲೆ ಮೀರಿ ಒಬ್ಬರಿಗೊಬ್ಬರು ಪರಸ್ಪರ ಪ್ರೀತಿಸಿದ್ರು. ಅವರಿಬ್ಬರ ಮದುವೆಗೆ ಯುವತಿಯ ಕಡೆಯವರು ತೀವ್ರ ವಿರೋಧ ವ್ಯಕ್ತಪಡಿಸಿದ್ರು. ಇದರಿಂದಾಗಿ, ಪೋಷಕರ ವಿರೋಧ ಲೆಕ್ಕಿಸದೆ ಮನೆಯಿಂದ ಓಡಿಹೋಗಿ ಪ್ರೇಮಿಗಳು ಮದುವೆ ಮಾಡಿಕೊಂಡಿದ್ದಾರೆ. ಆದ್ರೆ ಈಗ ಪ್ರಾಣಭಯದಿಂದ ಸ್ವಗ್ರಾಮಕ್ಕೆ ಹೋಗದೆ ಅಲ್ಲಿಯ ಎಸ್ಪಿ ಮೊರೆ ಹೋಗಿದ್ದಾರೆ. ಅಷ್ಟಕ್ಕೂ ಅದೆಲ್ಲಿ ಅಂತೀರಾ ಈ ವರದಿ ನೋಡಿ!!
ನಾ ನಿನ್ನ ಬೀಡಲಾರೆ ಚಲನಚಿತ್ರದ ಗೀತೆ ಕಥನ ಇಲ್ಲಿಯೂ ಹೀಗಿದೆ: -ನಾನು ನೀನು ಒಂದಾದ ಮೇಲೆ, ಹೀಗೇಕೆ ನೀ ದೂರ ಹೊಗುವೆ, ಮುತ್ತಲ್ಲೆ ನಿನ್ನ ಸಿಂಗಾರ ಮಾಡಿ, ಕಣ್ತುಂಬ ನಾ ನೋಡುವೆ. ಗೀತೆಯ ದೃಶ್ಯಗಳಿಗೆ ಸಡ್ಡು ಹೊಡೆದ ಚಿಕ್ಕಬಳ್ಳಾಪುರ ಜಿಲ್ಲೆ ಗುಡಿಬಂಡೆ ತಾಲೂಕಿನ ಮೇಲಿನ ಅಪ್ಪಿರೆಡ್ಡಿಹಳ್ಳಿಯ ಎದುರುಬದರು ಮನೆಯ ಮೋನಿಕಾ ಹಾಗೂ ಸುರೇಶ… ಪರಸ್ಪರ ಪ್ರೀತಿಸಿ ಒಬ್ಬರಿಗೊಬ್ಬರು ಒಂದಾಗಿದ್ದಾರೆ.
ಆದ್ರೆ ಪ್ರಣಯ ಪಕ್ಷಿಗಳಿಗೆ ಜಾತಿಯ ತಡೆಗೊಡೆ ಎದುರಾಗಿದೆ ಆದ್ರೆ ಲೆಕ್ಕಿಸದ ಮೋನಿಕಾ ತಾನು ಸವರ್ಣಿಯಳಾದ್ರೂ… ಪರಿಶಿಷ್ಟ ಪಂಗಡದ ಎದುರು ಮನೆಯ ಸುರೇಶನನ್ನು ಪ್ರೀತಿಸಿ ಕೆಲವು ದಿನಗಳ ಹಿಂದೆ ಧರ್ಮಸ್ಥಳದಲ್ಲಿ ಮದುವೆಯಾಗಿದ್ದಾರಂತೆ, ಆದ್ರೆ ಜಾತಿಯ ನೆಪಹೊಡ್ಡಿ ಮನೆಯಲ್ಲಿ ಪ್ರಾಣ ಬೆದರಿಕೆ ಹಾಕಿದ್ದಾರೆ ಅಂತ ರಕ್ಷಣೆ ಕೋರಿ ಚಿಕ್ಕಬಳ್ಳಾಪುರ ಎಸ್ಪಿಗೆ ದೂರು ನೀಡಿದ್ದಾಳೆ.
ಇದನ್ನೂ ಓದಿ: ಬಸವನಗುಡಿ ಕಡಲೆಕಾಯಿ ಪರಿಷೆಯಲ್ಲಿ ಜನವೋ ಜನ, ಬಿಸಿ ಬಿಸಿ ಕಡಲೆಕಾಯಿ ಸವಿದು ಜನ ಫುಲ್ ಖುಷ್
ಇನ್ನು ಮೋನಿಕಾ ಹಾಗೂ ಸುರೇಶ ಊರು ಬಿಟ್ಟು ಹೋಗಿ ಮದುವೆ ಮಾಡಿಕೊಂಡ ಕಾರಣ ಆಕ್ರೋಶಗೊಂಡಿದ್ದ ಮೋನಿಕಾ ಮನೆಯವರು ಇತ್ತಿಚಿಗೆ ಸುರೇಶ ತಮ್ಮನ ಆಟೊಗೆ ಬೆಂಕಿ ಹಾಕಿದ ಪ್ರಕರಣವೂ ಆಗಿತ್ತು. ಇದ್ರಿಂದ ಮತ್ತಷ್ಟು ಭಯಗೊಂಡಿರುವ ಜೋಡಿ… ಕದ್ದುಮುಚ್ಚಿ ದಿನಕ್ಕೊಂದು ಊರಲ್ಲಿ ಬದುಕುತ್ತಿದ್ದಾರೆ. ಇದ್ರಿಂದ ನೊಂದು ಸ್ವತಃ ದಲಿತ ಕುಂದು ಕೊರತೆ ಸಭೆ ನಡೆಯುತ್ತಿರುವಾಗಲೇ… ಎಸ್ಪಿ ಸೇರಿದಂತೆ ಪೊಲೀಸರ ಸಮ್ಮುಖದಲ್ಲಿ ರಕ್ಷಣೆಗೆ ಮನವಿ ಮಾಡಿದ್ರು.
ಪಿಯುಸಿ ಓದ್ಕೊಂಡು ಮನೆಯಲ್ಲಿದ್ದ ಮೋನಿಕಾ, ಸೆಂಟ್ರಿಂಗ್ ಕೆಲಸ ಮಾಡಿಕೊಂಡಿದ್ದ ಸುರೇಶ್ ಕುಮಾರ್ ಮದ್ಯೆ ಪ್ರೀತಿ ಪ್ರೇಮ ಮದುವೆ ಎಲ್ಲವೂ ಆಗಿದೆ. ಅಂತರ್ಜಾತಿಯ ಹುಡುಗ ಎನ್ನುವ ಕಾರಣ ಮದುವೆಗೆ ತೀವ್ರ ವಿರೋಧವ್ಯಕ್ತವಾಗಿದ್ದು, ಈಗ ಜೋಡಿ ಪೊಲೀಸರ ರಕ್ಷಣೆಗೆ ಮೊರೆ ಹೋಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ