ಪತಿಯ ಬಿಟ್ಟು ಒಂಟಿಯಾಗಿದ್ದ ನರ್ಸ್ ಶವ ಪತ್ತೆ, ಜೊತೆಗಾರನ ವಶಕ್ಕೆ ಪಡೆದು ವಿಚಾರಣೆ ಶುರು ಮಾಡಿದ ಖಾಕಿ

ಮೂಲತಃ ಚಿಕ್ಕಬಳ್ಳಾಪುರ ತಾಲೂಕಿನ ಗುಂತಪನಹಳ್ಳಿ ಗ್ರಾಮದ ನರ್ಸ್ ಅರುಣಾ, ಕೌಟುಂಬಿಕ ಕಲಹದಿಂದ ಗಂಡನನ್ನು ತೊರೆದು ಒಂಟಿಯಾಗಿ ಚಿಕ್ಕಬಳ್ಳಾಪುರ ನಗರದಲ್ಲಿ ವಾಸವಾಗಿದ್ದರು ಎನ್ನಲಾಗಿದೆ.

ಪತಿಯ ಬಿಟ್ಟು ಒಂಟಿಯಾಗಿದ್ದ ನರ್ಸ್ ಶವ ಪತ್ತೆ, ಜೊತೆಗಾರನ ವಶಕ್ಕೆ ಪಡೆದು ವಿಚಾರಣೆ ಶುರು ಮಾಡಿದ ಖಾಕಿ
ನರ್ಸ್ ಅರುಣಾ, ಶಿವಮೂರ್ತಿ
Edited By: ಆಯೇಷಾ ಬಾನು

Updated on: Jan 18, 2022 | 1:34 PM

ಚಿಕ್ಕಬಳ್ಳಾಪುರ: ಫ್ಯಾನಿಗೆ ನೇಣು ಬಿಗಿದ ಸ್ಥಿತಿಯಲ್ಲಿ ದಾದಿ ಮೃತದೇಹ ಪತ್ತೆಯಾಗಿದೆ. ಚಿಕ್ಕಬಳ್ಳಾಪುರ ನಗರದ ತಿಮ್ಮಕ್ಕ ಬಡಾವಣೆಯಲ್ಲಿ ಘಟನೆ ನಡೆದಿದೆ. ಚಿಕ್ಕಬಳ್ಳಾಪುರ ಜಿಲ್ಲಾಸ್ಪತ್ರೆಯಲ್ಲಿ ಗುತ್ತಿಗೆ ಆಧಾರದ ಮೇಲೆ ನರ್ಸ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ 26 ವರ್ಷದ ಅರುಣಾ ಮೃತಪಟ್ಟಿದ್ದಾರೆ.

ಮೂಲತಃ ಚಿಕ್ಕಬಳ್ಳಾಪುರ ತಾಲೂಕಿನ ಗುಂತಪನಹಳ್ಳಿ ಗ್ರಾಮದ ನರ್ಸ್ ಅರುಣಾ, ಕೌಟುಂಬಿಕ ಕಲಹದಿಂದ ಗಂಡನನ್ನು ತೊರೆದು ಒಂಟಿಯಾಗಿ ಚಿಕ್ಕಬಳ್ಳಾಪುರ ನಗರದಲ್ಲಿ ವಾಸವಾಗಿದ್ದರು ಎನ್ನಲಾಗಿದೆ. ಕಳೆದ ಒಂದೂವರೆ ವರ್ಷದಿಂದ ಜಿಲ್ಲಾಸ್ಪತ್ರೆಯ ಡಿ ಗ್ರೂಪ್ ನೌಕರ ಶಿವಮೂರ್ತಿ ಜೊತೆ ಅನೈತಿಕ ಸಂಬಂಧ ಹೊಂದಿದ್ದ ಆರೋಪವೂ ಕೇಳಿಬಂದಿದೆ. ತಡರಾತ್ರಿ ಶಿವಮೂರ್ತಿ ಮನೆ ಬಳಿ ತೆರಳಿದಾಗ ಬಾಗಿಲು ತೆಗೆದಿಲ್ಲವಂತೆ. ಕಿಟಿಕಿ ಮೂಲಕವೇ ವಾಗ್ವಾದ ನಡೆಸಿದ್ಲಂತೆ. ಇದ್ರಿಂದ ತಾನು ಗುಂತಪನಹಳ್ಳಿಗೆ ಹೋಗಿ ಅವರ ಅಕ್ಕ ಲಕ್ಷ್ಮಿಯನ್ನು ಕರೆದುಕೊಂಡು ಬಂದೆ ಅಷ್ಟರಲ್ಲೇ ಆಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಅಂತ ಪೊಲೀಸರ ಬಳಿ ಶಿವಮೂರ್ತಿ ಹೇಳಿದ್ದಾನೆ ಎಂದು ತಿಳಿದುಬಂದಿದೆ.

ಸದ್ಯ ಮೃತಳ ಪೋಷಕರು ಶಿವಮೂರ್ತಿ ವಿರುದ್ಧ ಕೊಲೆ ಶಂಕೆ ಆರೋಪ ವ್ಯಕ್ತಪಡಿಸಿದ್ದು ಚಿಕ್ಕಬಳ್ಳಾಪುರ ನಗರ ಪೊಲೀಸರು ಶಿವಮೂರ್ತಿಯನ್ನ ವಶಕ್ಕೆ ಪಡೆದು ಹೆಚ್ಚಿನ ವಿಚಾರಣೆ ನಡೆಸಿದ್ದಾರೆ. ಚಿಕ್ಕಬಳ್ಳಾಪುರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: ‘ಮ್ಯಾಟ್ನೀ’ ಶೂಟಿಂಗ್​ ಸೆಟ್​​ನಲ್ಲಿ ಸತೀಶ್​ ‘ನೀನಾಸಂ’, ರಚಿತಾ ರಾಮ್​; ಇಲ್ಲಿವೆ ಫೋಟೋಗಳು

TV9 Web

TV9 Kannada

Read More
Loading...
Unable to load recommendations.
Follow Us