ಮದುವೆ ನಿರಾಕರಿಸಿದ್ದಕ್ಕೆ ಶಿಕ್ಷಕಿ ಜತೆ ಪೇದೆ ಅಸಭ್ಯ ವರ್ತನೆ
ಚಿಕ್ಕಬಳ್ಳಾಪುರ: ಮದುವೆ ನಿರಾಕರಿಸಿದ್ದಕ್ಕೆ ಶಿಕ್ಷಕಿ ಜತೆ ಪೇದೆ ಅಸಭ್ಯವಾಗಿ ವರ್ತಿಸಿರುವ ಘಟನೆ ಗುಡಿಬಂಡೆಯ ಶಾಲೆಯಲ್ಲಿ ನಡೆದಿದೆ. ಖಾಸಗಿ ಶಾಲೆಯೊಂದರಲ್ಲಿ ಕಾರ್ಯ ನಿರ್ವಹಿಸುತ್ತಿರುವ ಶಿಕ್ಷಕಿಯನ್ನು ಮದುವೆಯಾಗುವಂತೆ ಗುಡಿಬಂಡೆ ಪೊಲೀಸ್ ಠಾಣೆಯ ಗುಪ್ತವಾರ್ತೆಯ ಪೇದೆ ರಮೇಶ್ ಪೀಡಿಸಿದ್ದಾನೆ. ಶಿಕ್ಷಕರು ಮತ್ತು ಮಕ್ಕಳೆದುರೇ ಶಿಕ್ಷಕಿ ಕೈ ಹಿಡಿದು ಎಳೆದಾಡಿ ಮದುವೆಯಾಗುವಂತೆ ಒತ್ತಾಯಿಸಿದ್ದಾನೆ. ರಮೇಶ್ ವರ್ತನೆಗೆ ಶಿಕ್ಷಕಿ ಶಾಲೆಯಲ್ಲೇ ಕಣ್ಣೀರಿಟ್ಟಿದ್ದಾರೆ. ನೊಂದ ಶಿಕ್ಷಕಿ ಹಾಗೂ ಶಾಲೆ ಮುಖ್ಯಸ್ಥರು ಪೇದೆ ರಮೇಶ್ ವಿರುದ್ಧ ಗುಡಿಬಂಡೆ ಠಾಣೆಯಲ್ಲಿ ದೂರು ನೀಡಿದ್ದಾರೆ. ಶಿಕ್ಷಕಿ ಪೋಷಕರು ರಮೇಶ್ ವಿರುದ್ಧ […]
ಚಿಕ್ಕಬಳ್ಳಾಪುರ: ಮದುವೆ ನಿರಾಕರಿಸಿದ್ದಕ್ಕೆ ಶಿಕ್ಷಕಿ ಜತೆ ಪೇದೆ ಅಸಭ್ಯವಾಗಿ ವರ್ತಿಸಿರುವ ಘಟನೆ ಗುಡಿಬಂಡೆಯ ಶಾಲೆಯಲ್ಲಿ ನಡೆದಿದೆ. ಖಾಸಗಿ ಶಾಲೆಯೊಂದರಲ್ಲಿ ಕಾರ್ಯ ನಿರ್ವಹಿಸುತ್ತಿರುವ ಶಿಕ್ಷಕಿಯನ್ನು ಮದುವೆಯಾಗುವಂತೆ ಗುಡಿಬಂಡೆ ಪೊಲೀಸ್ ಠಾಣೆಯ ಗುಪ್ತವಾರ್ತೆಯ ಪೇದೆ ರಮೇಶ್ ಪೀಡಿಸಿದ್ದಾನೆ.
ಶಿಕ್ಷಕರು ಮತ್ತು ಮಕ್ಕಳೆದುರೇ ಶಿಕ್ಷಕಿ ಕೈ ಹಿಡಿದು ಎಳೆದಾಡಿ ಮದುವೆಯಾಗುವಂತೆ ಒತ್ತಾಯಿಸಿದ್ದಾನೆ. ರಮೇಶ್ ವರ್ತನೆಗೆ ಶಿಕ್ಷಕಿ ಶಾಲೆಯಲ್ಲೇ ಕಣ್ಣೀರಿಟ್ಟಿದ್ದಾರೆ. ನೊಂದ ಶಿಕ್ಷಕಿ ಹಾಗೂ ಶಾಲೆ ಮುಖ್ಯಸ್ಥರು ಪೇದೆ ರಮೇಶ್ ವಿರುದ್ಧ ಗುಡಿಬಂಡೆ ಠಾಣೆಯಲ್ಲಿ ದೂರು ನೀಡಿದ್ದಾರೆ. ಶಿಕ್ಷಕಿ ಪೋಷಕರು ರಮೇಶ್ ವಿರುದ್ಧ ಕ್ರಮಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.