20ಕ್ಕೂ ಹೆಚ್ಚು ಕುಖ್ಯಾತ ರೌಡಿಶೀಟರ್‌ ಮನೆ ಮೇಲೆ ಪೊಲೀಸರ ದಾಳಿ: ಕಾನೂನುಬಾಹಿರ ಚಟುವಟಿಕೆಯಲ್ಲಿ ಭಾಗಿ ಆಗದಂತೆ ಎಚ್ಚರಿಕೆ

20ಕ್ಕೂ ಹೆಚ್ಚು ಕುಖ್ಯಾತ ರೌಡಿಶೀಟರ್​ ಮನೆಗಳ ಮೇಲೆ ಜಿಲ್ಲೆಯ ಗೌರಿಬಿದನೂರು ಠಾಣೆ ಪೊಲೀಸರಿಂದ ದಾಳಿ ಮಾಡಿದ್ದು, ಮಾರಕಾಸ್ತ್ರಗಳು, ಗನ್‌ಗಳಿಗಾಗಿ ಶೋಧ ಮಾಡಲಾಗಿದೆ.

20ಕ್ಕೂ ಹೆಚ್ಚು ಕುಖ್ಯಾತ ರೌಡಿಶೀಟರ್‌ ಮನೆ ಮೇಲೆ ಪೊಲೀಸರ ದಾಳಿ: ಕಾನೂನುಬಾಹಿರ ಚಟುವಟಿಕೆಯಲ್ಲಿ ಭಾಗಿ ಆಗದಂತೆ ಎಚ್ಚರಿಕೆ
ಕುಖ್ಯಾತ ರೌಡಿಶೀಟರ್‌ ಮನೆ ಮೇಲೆ ಪೊಲೀಸರ ದಾಳಿ
Follow us
ಗಂಗಾಧರ​ ಬ. ಸಾಬೋಜಿ
|

Updated on:Apr 03, 2023 | 10:56 PM

ಚಿಕ್ಕಬಳ್ಳಾಪುರ: 20ಕ್ಕೂ ಹೆಚ್ಚು ಕುಖ್ಯಾತ ರೌಡಿಶೀಟರ್‌ (Rowdy Sheetrs) ಮನೆಗಳ ಮೇಲೆ ಜಿಲ್ಲೆಯ ಗೌರಿಬಿದನೂರು ಠಾಣೆ ಪೊಲೀಸರಿಂದ ದಾಳಿ ಮಾಡಲಾಗಿದೆ. ಮೊಹಮ್ಮದ್ ಜಕ್ರಿಯಾ, ಲಂಕೇಶ್‌, ವಿನಯಕುಮಾರ್‌, ರಾಮಿರೆಡ್ಡಿ ಅರ್ಜುನ್ ಗೌಡ ಹಾಗೂ ಚಿಗಟಗೆರೆ ಪ್ರವೀಣ್‌ ಸೇರಿದಂತೆ ಕುಖ್ಯಾತ ರೌಡಿಶೀಟರ್‌ ಮನೆಗಳಲ್ಲಿ ಮಾರಕಾಸ್ತ್ರಗಳು, ಗನ್‌ಗಳಿಗಾಗಿ ಶೋಧ ಮಾಡಲಾಗಿದೆ. ಬಳಿಕ ರೌಡಿಶೀಟರ್‌ಗಳನ್ನು ಠಾಣೆಗೆ ಕರೆತಂದು ಚುನಾವಣಾ ಅಕ್ರಮ, ಕಾನೂನುಬಾಹಿರ ಚಟುವಟಿಕೆಯಲ್ಲಿ ಭಾಗಿ ಆಗದಂತೆ ಇನ್ಸ್‌ಪೆಕ್ಟರ್ ಕೆ.ಪಿ.ಸತ್ಯನಾರಾಯಣ ಎಚ್ಚರಿಕೆ ನೀಡಿದ್ದಾರೆ. ಇತ್ತೀಚೆಗೆ ಐವರು ರೌಡಿಶೀಟರ್​ಗಳು ಗಡಿಪಾರು ಮಾಡಲು ಮೈಸೂರು ಪೊಲೀಸ್ ಕಮಿಷನರ್ ರಮೇಶ್ ಬಾನೋತ್ ಸೂಚನೆ ನೀಡಿದ್ದರು. ಅದರಂತೆ ಡಿಸಿಪಿ ಮುತ್ತುರಾಜ್ ಐವರನ್ನ ಗಡಿಪಾರು ಮಾಡಲು ಆದೇಶ ಹೊರಡಿಸಲಾಗಿತ್ತು. ಸಮಾಜದ ಸ್ವಾಸ್ಥ್ಯ ಕದಡಿ ಅಶಾಂತಿ ಮೂಡಿಸುವ ಸಂಭಾವ್ಯವಿರುವ ಕಾರಣ ಮುಂಜಾಗ್ರತಾ ಕ್ರಮವಾಗಿ ಕಾನೂನು ಬಾಹಿರ ಚಟುವಟಿಕೆ, ಹಿಂಸೆ, ಬೆದರಿಕೆ, ಅಪರಾಧ ಚಟುವಟಿಕೆ ನಡೆಸದಂತೆ ಪೊಲೀಸ್ ಕಮಿಷನರ್ ರಮೇಶ್ ಬಾನೋತ್ ಎಚ್ಚರಿಕೆ ನೀಡಿ ರೌಡಿ ಶೀಟರ್‌ಗಳನ್ನ ಗಡಿಪಾರಿಗೆ ಸೂಚನೆ ನೀಡಿದ್ದರು.

ಗಡಿಪಾರು ಮಾಡಲಾದ ರೌಡಿ ಶೀಟರ್‌ಗಳು

ವಿದ್ಯಾರಣ್ಯಪುರಂ ಪೊಲೀಸ್ ಠಾಣೆಯ ರೌಡಿ ಶೀಟರ್ ಯಶವಂತ್ ಅಲಿಯಾಸ್ ಯಶು ಅಲಿಯಾಸ್ ಮಿಕ್ಕಿಯನ್ನ 4 ತಿಂಗಳು ಶಿವಮೊಗ್ಗ ಜಿಲ್ಲೆಗೆ ಗಡಿಪಾರು, ಸುಬಾನ್ ಅಲಿಯಾಸ್ ಕೊಯ್ತಾಬಾಬುನನ್ನ 4 ತಿಂಗಳ ಕಾಲ ಚಿಕ್ಕಬಳ್ಳಾಪುರ ಜಿಲ್ಲೆಗೆ ಗಡಿಪಾರು, ಎನ್.ಆರ್.ಹಾಗೂ ಮಂಡಿ ಪೊಲೀಸ್ ಠಾಣಾ ರೌಡಿಶೀಟರ್ ಕೃಷ್ಣ ಅಲಿಯಾಸ್ ಕಿಟ್ಟಿಯನ್ನ 5 ತಿಂಗಳ ಕಾಲ ದಾವಣಗೆರೆ ಜಿಲ್ಲೆಗೆ ಗಡಿಪಾರು.

ಇದನ್ನೂ ಓದಿ: ವಿಧಾನಸಭೆ ಚುನಾವಣೆ ಘೋಷಣೆ ಬೆನ್ನಲ್ಲೇ ಐವರು ರೌಡಿಶೀಟರ್ ಮೈಸೂರು ಜಿಲ್ಲೆಯಿಂದ ಗಡಿಪಾರು

ಲಕ್ಷ್ಮೀಪುರಂ ಪೊಲೀಸ್ ಠಾಣಾ ವ್ಯಾಪ್ತಿಯ ರೌಡಿ ಶೀಟರ್ ಸೈಯದ್ ಅಯೂಬ್ ಅಲಿಯಾಸ್ ಬಿಡ್ಡನನ್ನ 5 ತಿಂಗಳು ಚಿಕ್ಕಮಂಗಳೂರು ಜಿಲ್ಲೆಗೆ ಗಡಿಪಾರು ಮತ್ತು ಉದಯಗಿರಿ ಪೊಲೀಸ್ ಠಾಣಾ ವ್ಯಾಪ್ತಿಯ ರೌಡಿ ಶೀಟರ್ ತೌಸೀಫ್ ಖಾನ್ ಅಲಿಯಾಸ್ ಡಾನ್​ನನ್ನ 5 ತಿಂಗಳು ಚಿಕ್ಕಬಳ್ಳಾಪುರ ಜಿಲ್ಲೆಗೆ ವಿವಿಧ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಹಲವು ಪ್ರಕರಣಗಳಲ್ಲಿ ಭಾಗಿಯಾದ ಹಿನ್ನೆಲೆ ಈ ಐವರನ್ನ ಗಡಿಪಾರು ಮಾಡಲಾಗಿದೆ.

ಇದನ್ನೂ ಓದಿ: ರಾಜ್ಯದಲ್ಲಿ ಚುನಾವಣಾಧಿಕಾರಿಗಳ ಭರ್ಜರಿ ಬೇಟೆ: 6 ದಿನಗಳಲ್ಲಿ 47 ಕೋಟಿಗೂ ಹೆಚ್ಚು ಮೌಲ್ಯದ ವಸ್ತು ಸೇರಿದಂತೆ 12 ಕೋಟಿಗೂ ಹೆಚ್ಚು ನಗದು ಜಪ್ತಿ

ರೌಡಿ ಶೀಟರ್​ಗಳಿಗೆ ಪೊಲೀಸರ ಖಡಕ್ ಎಚ್ಚರಿಕೆ

ಅದೇ ರೀತಿಯಾಗಿ ಬೀದರ್ ಪೊಲೀಸರು ನಗರದ ಓಲ್ಡ್ ಸಿಟಿ ಮಾಂಗರ್ ವಾಡಿ ಗಲ್ಲಿಯಲ್ಲಿ ವಾಸಿಸುವ ಅಕ್ರಮ ಚಟುವಟಿಕೆಯಲ್ಲಿ ಭಾಗಿಯಾದ ರೌಡಿಶೀಟರ್​ಗಳ ಮನೆ ಮೇಲೆ ದಾಳಿ ಮಾಡಿದ್ದರು. ಎಸ್ಪಿ ಚನ್ನಬಸವಣ್ಣ ಲಂಗೋಟಿ ಮಾರ್ಗದರ್ಶನದಲ್ಲಿ ಡಿಎಸ್​​ಪಿ ಕೆ.ಎಂ ಸತೀಶ್ ತಂಡ ದಾಳಿ ಮಾಡಿದ್ದು, ದಾಳಿ ವೇಳೆ ಕೆಲವು ಮನೆಗಳಲ್ಲಿ ಎಂಬ ಹೆಸರಿನ ನಶೆ ಎರಿಸುವ ಮೇಡಿಸೀನ್​ಗಳು ಪತ್ತೆಯಾಗಿದ್ದವು. ಇಬ್ಬರನ್ನು ವಶಕ್ಕೆ ಕೂಡ ಪಡೆದುಕೊಂಡಿದ್ದರು. ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆ ಗಲಾಟೆ ಅಕ್ರಮ ಚಟುವಟಿಕೆಗಳಲ್ಲಿ ಭಾಗಿಯಾಗದಂತೆ ರೌಡಿ ಶೀಟರ್​ಗಳಿಗೆ ಪೊಲೀಸರು ಖಡಕ್ ಎಚ್ಚರಿಕೆ ನೀಡಿದ್ದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 10:55 pm, Mon, 3 April 23

ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ