ಚಿಕ್ಕಬಳ್ಳಾಪುರ ಜೈಲಿನಲ್ಲಿ ವಿಚಾರಣಾಧೀನ ಕೈದಿ ಅನುಮಾನಸ್ಪದ ಸಾವು

| Updated By: sandhya thejappa

Updated on: Sep 25, 2021 | 11:51 AM

ನಿನ್ನೆ ರಾತ್ರಿ 10.50ಕ್ಕೆ ಆರೋಗ್ಯದಲ್ಲಿ ಏರು ಪೇರು ಕಂಡಿದ್ದರಿಂದ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ನಾಗೇಶ್ ಸಾವನ್ನಪ್ಪಿದ್ದಾನೆ ಎಂದು ವೈದ್ಯರು ತಿಳಿಸಿದ್ದಾರೆ.

ಚಿಕ್ಕಬಳ್ಳಾಪುರ ಜೈಲಿನಲ್ಲಿ ವಿಚಾರಣಾಧೀನ ಕೈದಿ ಅನುಮಾನಸ್ಪದ ಸಾವು
ನಾಗೇಶ್ ಮೃತದೇಹ
Follow us on

ಚಿಕ್ಕಬಳ್ಳಾಪುರ: ಜಿಲ್ಲೆಯ ಜೈಲಿನಲ್ಲಿ ವಿಚಾರಣಾಧೀನ ಕೈದಿಯೊಬ್ಬ ಅನುಮಾನಸ್ಪದವಾಗಿ ಸಾವನ್ನಪ್ಪಿದ್ದಾನೆ. ನಿನ್ನೆವರೆಗೂ ಚೆನ್ನಾಗಿದ್ದ ವಿಚಾರಣಾಧೀನ ಕೈದಿ ಇದ್ದಕ್ಕಿದ್ದಂತೆ ಮೃತಪಟ್ಟಿದ್ದಾನೆ. 26 ವರ್ಷದ ನಾಗೇಶ್ ಎಂಬುವವನು ಸಾವನ್ನಪ್ಪಿದ ವಿಚಾರಣಾಧೀನ ಕೈದಿ. ನಾಗೇಶ್ನ ಮೂಗಿನಲ್ಲಿ ರಕ್ತ ಸುರಿದಿದೆ. ಸದ್ಯ ನಾಗೇಶ್ ಶವ ಚಿಕ್ಕಬಳ್ಳಾಪುರ ಜಿಲ್ಲಾಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ. ಕೊಲೆ ಪ್ರಕರಣದಲ್ಲಿ ನಾಗೇಶ್ ಜೈಲು ಸೇರಿದ್ದ. ಬಾಗಲೂರು ಪೊಲೀಸ್ ಠಾಣೆಯ ಕೊಲೆ ಪ್ರಕರಣದ ವಿಚಾರಣಾಧೀನ ಕೈದಿಯಾಗಿದ್ದ. ನಿನ್ನೆ ರಾತ್ರಿ 10.50ಕ್ಕೆ ಆರೋಗ್ಯದಲ್ಲಿ ಏರು ಪೇರು ಕಂಡಿದ್ದರಿಂದ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ನಾಗೇಶ್ ಸಾವನ್ನಪ್ಪಿದ್ದಾನೆ ಎಂದು ವೈದ್ಯರು ತಿಳಿಸಿದ್ದಾರೆ.

ಕಲಬುರಗಿಯ ಜಿಮ್ಸ್ ಆಸ್ಪತ್ರೆಯಲ್ಲಿ ತಾಯಿ, ಶಿಶು ಸಾವು
ಜಿಮ್ಸ್ ಆಸ್ಪತ್ರೆಯಲ್ಲಿ ತಾಯಿ ಮತ್ತು ಮಗು ಸಾವನ್ನಪ್ಪಿದ್ದಾರೆ. ಜಿಮ್ಸ್ ಆಸ್ಪತ್ರೆ ಸಿಬ್ಬಂದಿ ನಿರ್ಲಕ್ಷ್ಯದಿಂದ ಇಬ್ಬರು ಸಾವನ್ನಪ್ಪಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಪಟ್ಟಣ ಗ್ರಾಮದ ಕನ್ಯಾಕುಮಾರಿ(23) ಹಾಗೂ ಆಕೆಯ ಮಗು ಸಾವನ್ನಪ್ಪಿದೆ. ಕಳೆದ ರಾತ್ರಿ ಕನ್ಯಾಕುಮಾರಿಗೆ ಹೆರಿಗೆ ನೋವು ಕಾಣಿಸಿಕೊಂಡ ಹಿನ್ನೆಲೆ ರಾತ್ರಿ 9ಕ್ಕೆ ಜಿಮ್ಸ್ ಆಸ್ಪತ್ರೆಗೆ ಕುಟುಂಬಸ್ಥರು ಸೇರಿಸಿದ್ದರು. ತಡರಾತ್ರಿ 1 ಗಂಟೆ ಸುಮಾರಿಗೆ ಕನ್ಯಾಕುಮಾರಿಗೆ ಹೆರಿಗೆ ಆಯಿತು. ಹೆರಿಗೆ ಸಮಯದಲ್ಲೇ ಶಿಶು ಮೃತಪಟ್ಟಿದೆ. ಹೆರಿಗೆ ಬಳಿಕ ಹೊಟ್ಟೆ ನೋವು ಎಂದಿದ್ದ ಕನ್ಯಾಕುಮಾರಿ, ಅರ್ಧ ಗಂಟೆಯಲ್ಲಿ ಮೃತಪಟ್ಟಿದ್ದಾರೆ. ನರ್ಸ್​ಗಳು ನೀಡಿದ್ದ ಮಾತ್ರೆ ಸೇವಿಸಿ ಸಾವನ್ನಪ್ಪಿದ್ದಾರೆ ಎಂದು ಕುಟುಂಬಸ್ಥರು ಆರೋಪಿಸುತ್ತಿದ್ದಾರೆ.

20 ಮೇಕೆಗಳ ಸಾವು
ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಪಾಲಹಳ್ಳಿಯ ಕೊಟ್ಟಿಗೆಯಲ್ಲಿದ್ದ 20 ಮೇಕೆಗಳ ಸಾವನ್ನಪ್ಪಿವೆ. ಶ್ರೀನಿವಾಸು ಎಂಬುವರು ಸಾಕಿದ್ದ ಮೇಕೆ ನಿಗೂಢವಾಗಿ ಸಾವನ್ನಪ್ಪಿವೆ. ವಿಷದ ಆಹಾರ ತಿಂದು ಮೃತಪಟ್ಟಿರುವ ಅನುಮಾನ ವ್ಯಕ್ತವಾಗಿದೆ. ಶ್ರೀನಿವಾಸು ಮೇಕೆಗಳನ್ನು ಸಾಕಿ ಜೀವನ ಸಾಗಿಸುತ್ತಿದ್ದರು. ನಿನ್ನೆ ಸಂಜೆ ಮೇಕೆಗಳನ್ನು ಮೇಯಿಸಿಕೊಂಡು ಬಂದು ಕೊಟ್ಟಿಗೆಗೆ ಕೂಡಿ ಹಾಕಿದ್ದ. ಇಂದು ಬೆಳಿಗ್ಗೆ ನೋಡಿದಾಗ ಮೇಕೆಗಳ ನಿಗೂಢವಾಗಿ ಸಾವನ್ನಪ್ಪಿರುವು ತಿಳಿದುಬಂದಿದೆ. ಮೇಕೆಗಳ ನಿಗೂಢ ಸಾವಿನಿಂದ ವ್ಯಕ್ತಿ ಕಂಗಾಲಾಗಿದ್ದಾನೆ. ಸ್ಥಳಕ್ಕೆ ಪಶುವೈದ್ಯರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ವಿಷದ ಪದಾರ್ಥ ತಿಂದು ಸಾವನ್ನಿಪ್ಪಿರುವ ಶಂಕೆ ವ್ಯಕ್ತವಾಗಿದೆ.

ಇದನ್ನೂ ಓದಿ

ಬರ್ತ್​​ ಡೇ ಪಾರ್ಟಿಗೆ ಬಂದು ಜಕ್ಕಲಮಡಗು ಹಿನ್ನೀರಿನಲ್ಲಿ ಶವವಾದ ಬೆಂಗಳೂರಿನ ಅಕ್ಸೆಂಚರ್ ಟೆಕ್ಕಿ

ಕಾಮಾಕ್ಷಿಪಾಳ್ಯ ಬಳಿಕ, ರಾಜಗೋಪಾಲ ನಗರದಲ್ಲಿ ಗ್ರಾಹಕರ ನೆಪದಲ್ಲಿ ಬಂದ ಇಬ್ಬರು ಹಣ ಎಗರಿಸಿಕೊಂಡು ಹೋದರು!

(Prisoner dead in Chikkaballapur jail with doubt)

Published On - 11:47 am, Sat, 25 September 21