AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸ್ಕಂದಗಿರಿ ಬೆಟ್ಟದಲ್ಲಿ ಟ್ರಕ್ಕಿಂಗ್‍ಗೆ ಹೋಗಿ ಕಾಲು ಮುರಿದುಕೊಂಡ ಖಾಸಗಿ ಕಂಪನಿ ಉದ್ಯೋಗಿ, ಹೊತ್ತುಕೊಂಡ ಬಂದ ಗೈಡ್‍ಗಳು!

Skandagiri hills Trekking: ಸ್ಕಂದಗಿರಿ ಬೆಟ್ಟದಲ್ಲಿ ಹತ್ತಿಳಿಯುವುದಕ್ಕೆ ಮೆಟ್ಟಿಲು ಇಲ್ಲವೇ ರಸ್ತೆಯಾಗಲೀ ಇಲ್ಲ. ಕಲ್ಲು ಗುಡ್ಡ, ಬಂಡೆ, ಮರಗಳ ಮದ್ಯೆ ದಾರಿ ಮಾಡಿಕೊಂಡು ಹತ್ತಿ ಇಳಿಯಬೇಕು. ಇಂತಹದರಲ್ಲಿ ಅರಣ್ಯ ಇಲಾಖೆಯ ನೇಚರ್ ಗೈಡ್ಸ್ ಮಾನವೀಯತೆಯಿಂದ ಗಾಯಾಳು ಚಾರಣಿಗನನ್ನು ಹೊತ್ತುಕೊಂಡು ಕೆಳಗೆ ಬಂದದ್ದು ಸಾಹಸವೇ ಸರಿ.

ಸ್ಕಂದಗಿರಿ ಬೆಟ್ಟದಲ್ಲಿ ಟ್ರಕ್ಕಿಂಗ್‍ಗೆ ಹೋಗಿ ಕಾಲು ಮುರಿದುಕೊಂಡ ಖಾಸಗಿ ಕಂಪನಿ ಉದ್ಯೋಗಿ, ಹೊತ್ತುಕೊಂಡ ಬಂದ ಗೈಡ್‍ಗಳು!
ಸ್ಕಂದಗಿರಿ: ಟ್ರಕ್ಕಿಂಗ್‍ಗೆ ಬಂದು ಕಾಲು ಮುರಿದುಕೊಂಡ ಖಾಸಗಿ ಕಂಪನಿ ಉದ್ಯೋಗಿ
ಭೀಮಪ್ಪ ಪಾಟೀಲ್​, ಚಿಕ್ಕಬಳ್ಳಾಪುರ
| Updated By: ಸಾಧು ಶ್ರೀನಾಥ್​|

Updated on:Mar 01, 2024 | 5:15 PM

Share

ಚಿಕ್ಕಬಳ್ಳಾಪುರ, ಮಾರ್ಚ್​ 1: ಹೇಳಿ-ಕೇಳಿ ಅದು ಟ್ರಕ್ಕಿಂಗ್‍ಗೆ ಖ್ಯಾತಿಯಾಗಿರುವ ಬೆಟ್ಟ. 1450 ಮೀಟರಿನಷ್ಟು ಎತ್ತರದಲ್ಲಿದೆ. ಆ ಬೆಟ್ಟಕ್ಕೆ ಟ್ರಕ್ಕಿಂಗ್ (Trekking) ಬಂದ ಖಾಸಗೀ ಕಂಪನಿಗಳ ಉದ್ಯೋಗಿಯೋರ್ವ (private company employee) ಬೆಟ್ಟದಲ್ಲಿ ಬಿದ್ದು, ಕಾಲು ಊನ ಮಾಡಿಕೊಂಡಿದ್ದಾನೆ. ನಡೆಯಲಾಗದೇ ಪರದಾಡುತ್ತಿದ್ದ ಕಾರಣ ನೇಚರ್ ಗೈಡ್‍ಗಳು ಗಾಯಾಳುನನ್ನು ಸುಮಾರು 2 ಕೀಲೊ ಮೀಟರ್ ನಷ್ಟು ಬೆಟ್ಟದ ಮೇಲಿನಿಂದ ಹೊತ್ತುಕೊಂಡು ಬಂದ ಪ್ರಸಂಗ ನಡೆದಿದೆ. ಅಷ್ಟಕ್ಕೂ ಅದೆಲ್ಲಿ ಅಂತೀರಾ ಈ ವರದಿ ನೊಡಿ!!

ಗಾಯಗೊಂಡ ಟ್ರಕ್ಕಿಂಗ್​​ ವ್ಯಕ್ತಿಯನ್ನು ಭುಜದ ಮೇಲೆ ಹೊತ್ತುಕೊಂಡು ಹರಸಾಹಸಪಡುತ್ತಾ, ಬೆಟ್ಟದ ಮೇಲಿನಿಂದ ಕೆಳಗಿಳಿಯುತ್ತಿರುವುದು ಚಿಕ್ಕಬಳ್ಳಾಪುರ (Chikkaballapur) ತಾಲ್ಲೂಕಿನ ಕಳವಾರ ಗ್ರಾಮದ ಬಳಿ ಇರುವ ಸ್ಕಂದಗಿರಿ ಬೆಟ್ಟದಲ್ಲಿ (Skandagiri hills). 1450 ಮೀ. ನಷ್ಟು ಎತ್ತರದಲ್ಲಿರುವ ಸ್ಕಂದಗಿರಿ ಬೆಟ್ಟ ಚಾರಣಕ್ಕೆ ಖ್ಯಾತಿ. ಇನ್ನು ಸ್ಕಂದಗಿರಿ ಬೆಟ್ಟದಲ್ಲಿ ಚಾರಣ ಮಾಡಲು ಇಂದು ಶುಕ್ರವಾರ ಬೆಂಗಳೂರು ಮೂಲದ ಖಾಸಗೀ ಕಂಪನಿಯ ಉದ್ಯೋಗಿ ರವೀಶ್ ಹಾಗೂ 8 ಜನರ ತಂಡ ಆಗಮಿಸಿತ್ತು. ಅತ್ಯುತ್ಸಾಹದಿಂದ ಬೆಟ್ಟ ಹತ್ತಿದ್ದ ರವೀಶ್, ಬೆಟ್ಟದಲ್ಲಿ ಕಾಲುಜಾರಿ ಬಿದ್ದು, ಕಾಲು ಮುರಿದುಕೊಂಡಿದ್ದ. ಇದರಿಂದ ಬೆಟ್ಟದಿಂದ ಕೆಳಗಿಳಿಯಲಾಗದೇ ನರಳುತ್ತಿದ್ದ ಕಾರಣ ಅರಣ್ಯ ಇಲಾಖೆಯ ನೇಚರ್ ಗೈಡ್ಸ್ ರವೀಶ್‍ನನ್ನು ಹೊತ್ತುಕೊಂಡು ಬೆಟ್ಟ ಇಳಿದ ಪ್ರಸಂಗ ನಡೆಯಿತು.

Also Read: ಬೆಂಗಳೂರು ಮತ್ತು ಅಂಕೋರ್ ವಾಟ್ ದೇವಾಲಯವಿರುವ ಕಾಂಬೋಡಿಯಾಕ್ಕೆ ಶೀಘ್ರವೇ ಬೇಕಿದೆ ನೇರ ವಿಮಾನ ಸಂಪರ್ಕ, ಕಾರಣಗಳು ಹೀಗಿವೆ

ಇನ್ನು ಸ್ಕಂದಗಿರಿ ಬೆಟ್ಟದಲ್ಲಿ ಹತ್ತಿಳಿಯುವುದಕ್ಕೆ ಮೆಟ್ಟಿಲು ಇಲ್ಲವೇ ರಸ್ತೆಯಾಗಲೀ ಇಲ್ಲ. ಕಲ್ಲು ಗುಡ್ಡ, ಬಂಡೆ, ಮರಗಳ ಮದ್ಯೆ ದಾರಿ ಮಾಡಿಕೊಂಡು ಹತ್ತಿ ಇಳಿಯಬೇಕು. ಇಂತಹದರಲ್ಲಿ ಅರಣ್ಯ ಇಲಾಖೆಯ ನೇಚರ್ ಗೈಡ್ಸ್ ಮಾನವೀಯತೆಯಿಂದ ಗಾಯಾಳು ಚಾರಣಿಗನನ್ನು ಹೊತ್ತುಕೊಂಡು ಕೆಳಗೆ ಬಂದದ್ದು ಸಾಹಸವೇ ಸರಿ.

ಇನ್ನು ಸ್ಕಂದಗಿರಿ ಚಾರಣಕ್ಕೆ ಬರುವ ಚಾರಣಿಗರಿಂದ ಪ್ರವೇಶ ಶುಲ್ಕವಾಗಿ ರೂ. 300/- ರಿಂದ 600/-ಗಳನ್ನು ತಲಾ ಒಬ್ಬರಿಗೆ ಹಣ ವಸೂಲಿ ಮಾಡಲಾಗುತ್ತಿದೆ. ಆದರೆ ಈ ರೀತಿಯ ಅವಘಡ, ಅಪಘಾತಗಳು ಆದಾಗ ವೈದ್ಯಕೀಯ ಸೌಲಭ್ಯಗಳಾಗಲೀ, ಕನಿಷ್ಠ ಅಂಬ್ಯುಲೆನ್ಸ್ ವ್ಯವಸ್ಥೆಯಾಗಲೀ ಇಲ್ಲ. ಸ್ಕಂದಗಿರಿ ಬೆಟ್ಟದಲ್ಲಿ ಸ್ವಲ್ಪ ಯಡುವಟ್ಟುಗಳಾದರೆ ಗೈಡ್‍ಗಳು ಕಾಪಾಡಬೇಕು, ಇಲ್ಲವೇ ದೇವರೇ ಕಾಪಾಡಬೇಕು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 5:11 pm, Fri, 1 March 24

ಲೇಡಿ ಗೆಟಪ್ ವಿಷಯಕ್ಕೆ ಶಿವಣ್ಣನ ಕಾಲೆಳೆದ ಉಪೇಂದ್ರ; ಎಷ್ಟು ಕ್ಯೂಟ್ ನೋಡಿ
ಲೇಡಿ ಗೆಟಪ್ ವಿಷಯಕ್ಕೆ ಶಿವಣ್ಣನ ಕಾಲೆಳೆದ ಉಪೇಂದ್ರ; ಎಷ್ಟು ಕ್ಯೂಟ್ ನೋಡಿ
ಬಿಗ್​​ಬಾಸ್ ಫಿನಾಲೆಗೆ ಕನ್ನಡತಿಯರ ಎಂಟ್ರಿ: ಗೆದ್ದವರಿಗೆ ಸಿಗುವ ಹಣವೆಷ್ಟು?
ಬಿಗ್​​ಬಾಸ್ ಫಿನಾಲೆಗೆ ಕನ್ನಡತಿಯರ ಎಂಟ್ರಿ: ಗೆದ್ದವರಿಗೆ ಸಿಗುವ ಹಣವೆಷ್ಟು?
ಮುಂದೆ ನಮ್ರತೆ ಕಲಿತುಕೊಳ್ಳೋಣ ಬಿಡಿ: ಮೋಹನ್ ದಾಸ್ ಪೈಗೆ ಡಿಕೆಶಿ ಟಾಂಗ್
ಮುಂದೆ ನಮ್ರತೆ ಕಲಿತುಕೊಳ್ಳೋಣ ಬಿಡಿ: ಮೋಹನ್ ದಾಸ್ ಪೈಗೆ ಡಿಕೆಶಿ ಟಾಂಗ್
8 ಮಂದಿ ಪೊಲೀಸ್ ಸಸ್ಪೆಂಡ್: ಅಧಿವೇಶನದಲ್ಲಿ ಸದ್ದು ಮಾಡಲಿದೆ ಖಾಕಿ ಕಳ್ಳಾಟ
8 ಮಂದಿ ಪೊಲೀಸ್ ಸಸ್ಪೆಂಡ್: ಅಧಿವೇಶನದಲ್ಲಿ ಸದ್ದು ಮಾಡಲಿದೆ ಖಾಕಿ ಕಳ್ಳಾಟ
ಬೆಳಗಾವಿಯ ಚಳಿಗಾಲದ ಅಧಿವೇಶನದ ನೇರಪ್ರಸಾರ
ಬೆಳಗಾವಿಯ ಚಳಿಗಾಲದ ಅಧಿವೇಶನದ ನೇರಪ್ರಸಾರ
Video: ಗಾಳಿಯ ರಭಸಕ್ಕೆ ಕುಸಿದು ಬಿತ್ತು ಬ್ರೆಜಿಲ್​ನ ಲಿಬರ್ಟಿ ಸ್ಟ್ಯಾಚ್ಯೂ
Video: ಗಾಳಿಯ ರಭಸಕ್ಕೆ ಕುಸಿದು ಬಿತ್ತು ಬ್ರೆಜಿಲ್​ನ ಲಿಬರ್ಟಿ ಸ್ಟ್ಯಾಚ್ಯೂ
ಚಿಕ್ಕಬಳ್ಳಾಪುರದಲ್ಲಿ ಸರಣಿ ಅಪಘಾತ: ತಪ್ಪಿದ ಭಾರಿ ಅನಾಹುತ
ಚಿಕ್ಕಬಳ್ಳಾಪುರದಲ್ಲಿ ಸರಣಿ ಅಪಘಾತ: ತಪ್ಪಿದ ಭಾರಿ ಅನಾಹುತ
ವೇದಿಕೆಯಲ್ಲಿ ವೈದ್ಯೆಯ ಹಿಜಾಬ್ ಎಳೆದ ಸಿಎಂ ನಿತೀಶ್ ಕುಮಾರ್
ವೇದಿಕೆಯಲ್ಲಿ ವೈದ್ಯೆಯ ಹಿಜಾಬ್ ಎಳೆದ ಸಿಎಂ ನಿತೀಶ್ ಕುಮಾರ್
ಧ್ರುವಂತ್​ನ ಸೀಕ್ರೆಟ್​ರೂಂನಲ್ಲಿ ಇಟ್ಟ ಬಗ್ಗೆ ಬಿಗ್ ಬಾಸ್​ಗೆ ಬೇಸರ?
ಧ್ರುವಂತ್​ನ ಸೀಕ್ರೆಟ್​ರೂಂನಲ್ಲಿ ಇಟ್ಟ ಬಗ್ಗೆ ಬಿಗ್ ಬಾಸ್​ಗೆ ಬೇಸರ?
‘ಸು ಫ್ರಮ್ ಸೋ’ ಯಶಸ್ಸಿನ ಮೂಲವನ್ನು‘45’ ನಿರ್ಮಾಪಕನಿಗೆ ಹಸ್ತಾಂತರಿಸಿದ ರಾಜ್
‘ಸು ಫ್ರಮ್ ಸೋ’ ಯಶಸ್ಸಿನ ಮೂಲವನ್ನು‘45’ ನಿರ್ಮಾಪಕನಿಗೆ ಹಸ್ತಾಂತರಿಸಿದ ರಾಜ್