ನಂದಿಬೆಟ್ಟದಲ್ಲಿ ಅಕ್ರಮ ಗಣಿಗಾರಿಕೆ: ಸ್ಥಳಕ್ಕೆ ಭೇಟಿ ನೀಡಿದ ಹಿರಿಯ ಅಧಿಕಾರಿಗಳು
ಟಿವಿ9 ಕನ್ನಡದಲ್ಲಿ ವರದಿ ಪ್ರಕಟವಾದ ನಂತರ ಜಿಲ್ಲಾ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಹಿರಿಯ ಭೂ ವಿಜ್ಞಾನಿ ಎನ್.ಲೋಕೇಶ್ ಮತ್ತು ಇತರ ಅಧಿಕಾರಿಗಳು ಬುಧವಾರ ಪರಿಶೀಲಿಸಿದರು

ಚಿಕ್ಕಬಳ್ಳಾಪುರ: ಜಿಲ್ಲೆಯ ನಂದಿಗಿರಿಧಾಮ ಸೇರಿದಂತೆ ಪಂಚಗಿರಿಧಾಮಗಳ ಸಾಲಿನಲ್ಲಿ ನಡೆಯುತ್ತಿರುವ ಕಲ್ಲು ಕ್ವಾರಿಗಳಿಂದ ಪರಿಸರಕ್ಕೆ ಆಗಿರುವ ಹಾನಿಯ ಕುರಿತು ಟಿವಿ9 ಕನ್ನಡದಲ್ಲಿ ವರದಿ ಪ್ರಕಟವಾದ ನಂತರ ಜಿಲ್ಲಾ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಹಿರಿಯ ಭೂ ವಿಜ್ಞಾನಿ ಎನ್.ಲೋಕೇಶ್ ಮತ್ತು ಇತರ ಅಧಿಕಾರಿಗಳು ಬುಧವಾರ ಪರಿಶೀಲಿಸಿದರು. ಕಣಿವೆನಾರಾಯಣಪುರದ ಬಳಿ 17 ಕಲ್ಲು ಕ್ವಾರಿ ಹಾಗೂ 7 ಕ್ರಷರ್ಗಳಿವೆ.
ಕಲ್ಲು ಗಣಿಗಾರಿಕೆಯಿಂದ ನಂದಿ ಬೆಟ್ಟಕ್ಕೆ ಹಾನಿಯಾಗುತ್ತಿರುವ ಕುರಿತು ಬೆಳಗಾವಿಯಲ್ಲಿ ಪ್ರತಿಕ್ರಿಯಿಸಿದ ಗಣಿ ಖಾತೆ ಸಚಿವ ಹಾಲಪ್ಪ ಆಚಾರ್ ನಿಯಮಗಳನ್ನು ಯಾರೇ ಉಲ್ಲಂಘಿಸಿದ್ದರೂ ಕಠಿಣ ಕ್ರಮ ತೆಗೆದುಕೊಳ್ಳಲಾವುದು ಎಂದರು. ನಂದಿಬೆಟ್ಟಕ್ಕೆ ಭಾನುವಾರ ನಾನೇ ಭೇಟಿ ನೀಡಿ ಪರಿಶೀಲನೆ ನಡೆಸುತ್ತೇನೆ ಎಂದು ಹೇಳಿದರು.
ನಂದಿಬೆಟ್ಟಕ್ಕೆ 20 ದಿನ ಪ್ರವೇಶ ಬಂದ್ ನಂದಿ ಗಿರಿಧಾಮಲ್ಲಿ ಗುಡ್ಡ ಕುಸಿದು ರಸ್ತೆ ಕೊಚ್ಚಿ ಹೋದ ಹಿನ್ನಲೆಯಲ್ಲಿ ಪ್ರವಾಸಿಗರ ಹಿತದೃಷ್ಟಿಯಿಂದ 20 ದಿನಗಳ ಕಾಲ ನಂದಿ ಗಿರಿಧಾಮ ಬಂದ್ ಮಾಡಲು ನಿರ್ಧರಿಸಲಾಗಿದೆ ಎಂದು ಟಿವಿ9 ಡಿಜಿಟಲ್ಗೆ ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿ ಲತಾ.ಆರ್ ಹೇಳಿಕೆ ನೀಡಿದ್ದಾರೆ.
ಘಟನಾ ಸ್ಥಳಕ್ಕೆ ಭೇಟಿ ನೀಡಿ ಮಾತನಾಡಿದ ಅವರು, ರಸ್ತೆ ಕೊಚ್ಚಿ ಹೋಗಿದ್ದು, ಶಾಶ್ವತ ಕಾಮಗಾರಿ ಮುಗಿಯತನಕ ಪ್ರವೇಶ ನಿರ್ಬಂಧಿಸಲಾಗಿದೆ. ಹೀಗಾಗಿ ಗಿರಿಧಾಮದ ಮೇಲೆರುವ ವಸತಿ ಗೃಹಗಳಿಗೆ ಅವಕಾಶ ಇಲ್ಲ. ನಿನ್ನೆ ರಾತ್ರಿ ತಂಗಿದ್ದವರನ್ನು ಪರ್ಯಾಯ ಮಾರ್ಗದ ಮೂಲಕ ಕೆಳಗಿಳಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.
(Senior officials from Geological Department Visit Nandi Hills to inspect illegal quarries)
ಇದನ್ನೂ ಓದಿ: Nandi Hills: ನಂದಿಬೆಟ್ಟದ ವಾಹನ ನಿಲುಗಡೆ ಸ್ಥಳದಲ್ಲಿ ಕುಸಿತ; ಪ್ರಾಣಹಾನಿ ಸಂಭವಿಸಿಲ್ಲ
ಇದನ್ನೂ ಓದಿ: ಗುಡ್ಡ ಕುಸಿತ ಹಿನ್ನೆಲೆ ನಂದಿಬೆಟ್ಟಕ್ಕೆ 20 ದಿನ ಪ್ರವೇಶ ಬಂದ್: ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿ ಆರ್.ಲತಾ




