ಗಂಡ ಹೆಂಡಿರ ಜಗಳ 112 ಪೊಲೀಸರು ಬರೋವರೆಗೂ ಮಾತ್ರ! ಇದರಿಂದ ಬಹುತೇಕ ಕ್ರೈಂಗಳು ಸ್ಮಾರ್ಟ್ ಆಗಿ ನಿಯಂತ್ರಣ ಆಗ್ತಿವೆ! ಎಲ್ಲಿ?
ಅತಿ ಹೆಚ್ಚು 112 ನಂಬರಿಗೆ ಕಾಲ್ ಗಳು ಬರ್ತಿರೋದು ಗಂಡ ಹೆಂಡಿರ ನಡುವಣ ಜಗಳಗಳು, ದೂರಿಗೆ ಸಂಬಂಧಿಸಿ. ರಾತ್ರಿಯಾದ್ರೆ ಸಾಕು ಗಂಡ ಹೊಡೆಯುತ್ತಾನೆ ಅಂತ ಅವಳು, ಹೆಂಡತಿ ಬರೆ ಇಕ್ಕುತ್ತಾಳೆ ಅಂತ ಇವನು ಜಗಳ ಕಾದು ಕಾದೂ ಕೊನೆಗೆ 112 ಪೊಲೀಸರಿಗೆ ಕರೆ ಮಾಡ್ತಾರೆ
ಮಹಿಳೆ ಮಕ್ಕಳು ಲೈಂಗಿಕ ದೌರ್ಜನ್ಯಗಳ ದೂರಿಗೆ ಕಡಿವಾಣ ಹಾಕಿದ 112!! ಇದು ಓಲಾ ಉಬರ್ ಗಿಂತ ತಂತ್ರಜ್ಞಾನದಲ್ಲಿ ಮುಂದು 112!! ಗಂಡ ಹೆಂಡಿರ ಜಗಳ ಉಂಡು ಮಲಗುವ ತನಕ ಅನ್ನೊ ಗಾದೆ ಇದೆ. ಆದ್ರೆ ಈಗ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ, ಕಾಲಕ್ಕೆ ತಕ್ಕಂತೆ ಅದು ಬದಲಾಗಿದೆ. ಗಂಡ ಹೆಂಡಿರ ಜಗಳ 112 ಪೊಲೀಸರು ಬರೊವರೆಗೆ ಅನ್ನೋ ರೀತಿ ಆಗಿದೆ! ಕುಡಿದು ಬಂದು ಗಂಡ ಹೆಂಡತಿಗೆ ಹೊಡೆದ್ರೆ… ಇಲ್ಲಾ ಹೆಂಡತಿಯ ತಲೆ ಕೆಟ್ಟು ಗಂಡನಿಗೆ ಬರೆ ಹಾಕಿದ್ರೆ… ಇಬ್ಬರು ಮೊರೆ ಹೊಗ್ತಿರೊದು 112 ಪೊಲೀಸರಿಗೆ. ಅಷ್ಟಕ್ಕೂ ಅದ್ಯಾಕೆ ಅಂತೀರಾ ಈ ವರದಿ ನೋಡಿ!!
ಗ್ರಾಹಕರನ್ನು ಪಿಕ್ ಅಪ್ ಆಂಡ್ ಡ್ರಾಪ್ ಮಾಡಲು ಓಲಾ ಉಬರ್ ಸಂಸ್ಥೆಗಳು, ಅತ್ಯಾಧುನಿಕ ಜಿ.ಪಿ.ಎಸ್, ಮೊಬೈಲ್, ವಿನೂತನ ತಂತ್ರಜ್ಞಾನ ಬಳಸಿಕೊಂಡು ಕ್ಯಾಬ್ ಉದ್ಯಮದಲ್ಲಿ ಕ್ರಾಂತಿ ಸೃಷ್ಟಿ ಮಾಡಿದ್ದು ಎಲ್ಲರಿಗೂ ತಿಳಿದೇಯಿದೆ. ಆದ್ರೆ ಪೊಲೀಸ್ ಇಲಾಖೆ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ, 112 ಕಾಲ್ ಸೆಂಟರ್ ಗಳ ಮೂಲಕ ಸಾರ್ವಜನಿಕರ ಕುಂದು ಕೊರತೆಗಳಿಗೆ ಸ್ಪಂದಿಸುತ್ತಿರುವುದು ಶ್ಲಾಘನೀಯ. 112 ನಂಬರಿಗೆ ಕಾಲ್ ಮಾಡಿ ದೂರು, ರಕ್ಷಣೆ, ವೈದ್ಯಕೀಯ ಹಾಗೂ ಅಗ್ನಿ ಅವಘಡಗಳು ಘಟಿಸಿದಾಗ ಸಹಾಯ ಪಡೆಯಬಹುದು ಅಂತಿದೆ.
ಆದ್ರೆ ಈಗ ಅತಿ ಹೆಚ್ಚು 112 ನಂಬರಿಗೆ ಕಾಲ್ ಗಳು ಬರ್ತಿರೋದು ಗಂಡ ಹೆಂಡಿರ ನಡುವಣ ಜಗಳಗಳು, ದೂರಿಗೆ ಸಂಬಂಧಿಸಿ. ರಾತ್ರಿಯಾದ್ರೆ ಸಾಕು ಗಂಡ ಹೊಡೆಯುತ್ತಾನೆ ಅಂತ ಅವಳು, ಹೆಂಡತಿ ಬರೆ ಇಕ್ಕುತ್ತಾಳೆ ಅಂತ ಇವನು ಜಗಳ ಕಾದು ಕಾದೂ ಕೊನೆಗೆ 112 ಪೊಲೀಸರಿಗೆ ಕರೆ ಮಾಡ್ತಾರೆ, ತಕ್ಷಣ ಪೊಲೀಸರು ಸ್ಥಳಕ್ಕೆ ಬಂದು ಇಬ್ಬರಿಗೂ ಬೈದು ಬುದ್ದಿ ಹೇಳುತ್ತಿದ್ದಂತೆ, ಗಂಡ ಹೆಂಡಿರ ಜಗಳ ಮಾಯವಾಗಿ ಬೆಡ್ ರೂಮ್ ನತ್ತ ಹೊರಡ್ತಾರಂತೆ!
ಇನ್ನು ಮೊಬೈಲ್ ಹೊಂದಿರುವ ಯಾವುದೆ ವ್ಯಕ್ತಿ ತನ್ನ ಕುಂದುಕೊರತೆ, ತೊಂದರೆಗಳಿಗೆ 112 ನಂಬರಿಗೆ ಕರೆ ಮಾಡಿದ್ರೆ… ಆ ಕಾಲ್ ಮಾಸ್ಟರ್ ಕಂಟ್ರೋಲ್ ರೂಮ್ ಗೆ ಹೊಗುತ್ತೆ, ಆ ಕಾಲ್ ಅನ್ನು ಅವರು ವಾಯ್ಸ್ ರೆಕಾರ್ಡ್ ಮಾಡಿಕೊಂಡು, ಕಾಲ್ ಮಾಡಿದವರ ವಿಳಾಸ, ಸ್ಥಳ, ಜಿ.ಪಿ.ಎಸ್ ಲೊಕೇಷನ್ ಅನ್ನು ಆಯಾ ಜಿಲ್ಲೆಗಳ ಪೊಲೀಸ್ ಕಂಟ್ರೋಲ್ ರೂಮ್ ಗೆ ಸಾಫ್ಟ್ ವೇರ್ ಗಳಲ್ಲಿ ಆನ್ ಲೈನ್ ನಲ್ಲಿ ಫಾರ್ವರ್ಡ್ ಮಾಡ್ತಾರೆ. ಸಾಫ್ಟ್ವೇರ್ ನಲ್ಲಿ ಸಂಪೂರ್ಣ ಮಾಹಿತಿಯುಳ್ಳ ಕರೆಯನ್ನು, ಪೊಲೀಸ್ ಕಂಟ್ರೋಲ್ ರೂಮ್ ನಿಂದ, ಕರೆ ಮಾಡಿದವರ ಸ್ಥಳದಿಂದ ಹತ್ತಿರದಲ್ಲಿ ಇರುವ 112 ಪೊಲೀಸ್ ವಾಹನಕ್ಕೆ ಸಂಪರ್ಕ ಮಾಡ್ತಾರೆ, ಅದರಲ್ಲಿರುವ ಪೊಲೀಸ್ ಸಿಬ್ಬಂದಿ ತಕ್ಷಣ ಕರೆ ಮಾಡಿದವರ ಸ್ಥಳಕ್ಕೆ ತೆರಳಿ ರಕ್ಷಣೆ, ಸಹಾಯ, ಆಸ್ಪತ್ರೆ, ದೂರು ಅಥವಾ ಠಾಣೆಗೆ ಕರೆ ತರುವುದನ್ನು ಮಾಡ್ತಾರೆ ಎನ್ನುತ್ತಾರೆ ಜಿ.ಕೆ.ಮಿಥುನ್ ಕುಮಾರ್, ಎಸ್ಪಿ, ಚಿಕ್ಕಬಳ್ಳಾಪುರ.
ಖಾಸಗಿ ಸಂಸ್ಥೆಗಳು ಅತಿ ಹೆಚ್ಚಾಗಿ ಬಳಕೆ ಮಾಡ್ತಿದ್ದ ವಿನೂತನ ತಂತ್ರಜ್ಞಾನವನ್ನು ಪೊಲೀಸರು ಬಳಸಿಕೊಂಡು ಸಕಾಲಕ್ಕೆ ಗಲಾಟೆ ಗದ್ದಲ ಹೊಡೆದಾಟ ದಂತಹ ಸ್ಥಳಗಳಿಗೆ ಹೊಗ್ತಿರುವ ಕಾರಣ, ಬಹುತೇಕ ಕ್ರೈಮ್ ಗಳು ಸ್ಮಾರ್ಟ್ ಆಗಿ ನಿಯಂತ್ರಣ ಆಗಿವೆ! -ಭೀಮಪ್ಪ ಪಾಟೀಲ್, ಟಿವಿ 9, ಚಿಕ್ಕಬಳ್ಳಾಪುರ
ಇನ್ನಷ್ಟು ಅಪರಾಧ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 7:37 pm, Fri, 17 June 22