ಚಿಕ್ಕಬಳ್ಳಾಪುರದಲ್ಲಿ ಬಂದಾಗಿದ್ದ ಸ್ಟೋನ್ ಕ್ರಷರ್ಗಳು, ಮತ್ತೆ ಶುರು; ಶಾಸಕರಿಗೂ ಡೋಂಟ್ ಕೇರ್ ರೋಧದ ನಡುವೆಯು ಓಪನ್
ಆ ಕ್ಷೇತ್ರವೊಂದರಲ್ಲಿ ಒಂದಲ್ಲ, ಎರಡೆಲ್ಲಾ ಬರೋಬ್ಬರಿ 70ಕ್ಕೂ ಹೆಚ್ಚು ಸ್ಟೋನ್ ಕ್ರಷರ್ಗಳು ಹಾಗೂ ನೂರಕ್ಕೂ ಹೆಚ್ಚು ಕಲ್ಲುಕ್ವಾರಿಗಳಿವೆ. ಆದ್ರೆ, ಅಲ್ಲಿರುವ ಗಣಿ ಮಾಲೀಕರು ಸರ್ಕಾರದ ನೀತಿ ನಿಯಮಗಳನ್ನು ಉಲ್ಲಂಘಿಸಿ ಮನಸ್ಸೊ ಇಚ್ಚೆ ಸ್ಟೋನ್ ಕ್ರಷರ್ಗಳ ಚಾಲನೆ ಮಾಡುತ್ತಿದ್ದಾರೆ ಎಂದು ಆರೋಪಿಸಿ ಅಲ್ಲಿಯ ಶಾಸಕರ ಬೆಂಬಲಿಗರು ಧರಣಿ ಪ್ರತಿಭಟನೆ ನಡೆಸಿ ಕಲ್ಲು ಕ್ವಾರಿ ಕ್ರಷರ್ಗಳಿಗೆ ನುಗ್ಗಿ ಆಕ್ರೋಶ ವ್ಯಕ್ತಪಡಿಸಿದರು. ಇದರಿಂದ ಅಲ್ಲಿಯ ಕ್ರಷರ್ಗಳನ್ನು ನಿಲ್ಲಿಸಿ ಬಿಸಿ ಮುಟ್ಟಿಸಲಾಗಿತ್ತು. ಆದರೆ, ಎಂದಿನಂತೆ ಮತ್ತೆ ಕಲ್ಲು ಕ್ವಾರಿ ಕ್ರಷರ್ಗಳು ಆರಂಭವಾಗಿವೆ.
ಚಿಕ್ಕಬಳ್ಳಾಪುರ, ನ.08: ತಾಲ್ಲೂಕಿನ ಯಲಗಲಹಳ್ಳಿ ಕಲ್ಲುಪುಡಿ ಘಟಕಗಳ ಸೇಪರ್ ಜೋನ್‍ವೊಂದರಲ್ಲಿ ಒಂದಲ್ಲ, ಎರಡೆಲ್ಲಾ 42 ಸ್ಟೋನ್ ಕ್ರಷರ್ಗಳಿವೆ. ಅವುಗಳಿಂದ ಉತ್ಪತ್ತಿಯಾಗುವ ಧೂಳು, ಶಬ್ದ, ಕೆಟ್ಟ ವಾಸನೆ, ಬ್ಲಾಸ್ಟಿಂಗ್ ಸೇರಿ ಪರಿಸರ ಮಾಲಿನ್ಯ ವಾಗುತ್ತಿದೆ. ಸ್ಟೋನ್ ಕ್ರಷರ್(Stone Crusher) ಗಳು ಸರ್ಕಾರಿ ನೀತಿ ನಿಯಮಗಳನ್ನು ಉಲ್ಲಂಘಿಸಿ ಗಣಿಗಾರಿಕೆ ನಡೆಸಿದ್ದಾರೆ ಎಂದು ಆರೋಪಿಸಿ ಹಾಗೂ ಸ್ಟೋನ್ ಕ್ರಷರ್ಗಳನ್ನು ಬಂದ್ ಮಾಡುವಂತೆ ಒತ್ತಾಯಿಸಿ ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದ ಶಾಸಕ ಪ್ರದೀಪ್ ಈಶ್ವರ್ ಬೆಂಬಲಿಗರು ಪ್ರತಿಭಟನೆ ನಡೆಸಿ, ಕ್ರಷರ್ಗಳಿಗೆ ನುಗ್ಗಿ ಟಿಪ್ಪರ್ಗಳನ್ನು ತಡೆದು ಆಕ್ರೋಶ ವ್ಯಕ್ತಪಡಿಸಿದ್ದರು.
ಶಾಸಕರ ಬೆಂಬಲಿಗರ ಒತ್ತಡ, ಧರಣಿಗೆ ಮಣಿದಿದ್ದ ವಿವಿಧ ಇಲಾಖೆಗಳ ಅಧಿಕಾರಿಗಳು ಚಿಕ್ಕಬಳ್ಳಾಪುರ ತಾಲೂಕಿನ ಮಂಡಿಕಲ್ ಹೊಬಳಿಯಲ್ಲಿರುವ ಯಲಗಲಹಳ್ಳಿ ಕಲ್ಲುಪುಡಿ ಘಟಕಗಳ ಸೇಪರ್ ಜೋನ್ನಲ್ಲಿನ ಕ್ರಷರ್ಗಳನ್ನು ಕೆಲವು ದಿನಗಳ ಕಾಲ ಬಂದ್ ಮಾಡಿಸಿದ್ದರು. ಒಂದು ಟಿಪ್ಪರ್ ಸಹ ರಸ್ತೆಗೆ ಇಳಿಯದಂತೆ ಕ್ರಮ ಕೈಗೊಂಡಿದ್ದರು. ಆದ್ರೆ, ಇದೀಗ ಮತ್ತೆ ಕ್ರಷರ್ಗಳ ಕ್ವಾರಿಗಳು ಆರಂಭವಾಗಿವೆ.
ಇದನ್ನೂ ಓದಿ:ಚಿಕ್ಕಬಳ್ಳಾಪುರ: ಶಾಸಕ ಪ್ರದೀಪ್ ಈಶ್ವರ್ ಕ್ಷೇತ್ರದಲ್ಲಿ 42 ಸ್ಟೋನ್ ಕ್ರಷರ್ಗಳು ಬಂದ್
ಈ ಕುರಿತು ಮಾತನಾಡಿದ ಶಾಸಕ ಪ್ರದೀಪ್ ಈಶ್ವರ್ ‘ ಇಡೀ ಜಿಲ್ಲೆಯಲ್ಲಿ 170 ಕ್ಕೂ ಹೆಚ್ಚು ಕಲ್ಲು ಕ್ವಾರಿಗಳಿವೆ. ಅದರಲ್ಲಿ ಕಾನೂನು ಬಾಹಿರವಾಗಿ ನಡೆಸುತ್ತಿದ್ದ 42 ಕ್ವಾರಿಗಳನ್ನು ಮಾತ್ರ ಬಂದ್ ಮಾಡಿಸಲಾಗಿತ್ತು. ಜೊತೆಗೆ ಉಳಿದ ಕಲ್ಲು ಕ್ವಾರಿಗಳ ಓನರ್ಗಳಿಗೆ, ನಿಮ್ಮ ಯಾವುದೇ ವಾಹನಗಳಿಂದ ಸಾರ್ವಜನಿಕರಿಗೆ ತೊಂದರೆಯಾದಲ್ಲಿ, ನೊಂದ ಕುಟುಂಬದ ಸಂಪೂರ್ಣ ಜವಾಬ್ದಾರಿಯನ್ನು ಅವರು ಹೊತ್ತಿಕೊಳ್ಳುವಂತೆ ಮಾಡಿದ್ದೇನೆ ಎಂದರು.
ಇನ್ನು ಚಿಕ್ಕಬಳ್ಳಾಪುರ ತಾಲೂಕಿನ ಆದೆನ್ನಗಾರಹಳ್ಳಿ, ಬುಶೆಟ್ಟಿಹಳ್ಳಿ, ಪೆರೇಸಂದ್ರ, ಹಳೇಪೆರೇಸಂದ್ರ, ಶೆಟ್ಟಿವಾರಹಳ್ಳಿ, ಹೂವಿನವಾರಹಳ್ಳಿ, ಮುತ್ತುಕದಹಳ್ಳಿ ಸೇರಿದಂತೆ ಸುತ್ತಮುತ್ತಲ ಗ್ರಾಮಗಳಲ್ಲಿ ಗಣಿಗಾರಿಕೆಯಿಂದ ವಿವಿಧ ಕಾಯಿಲೆಗಳಿಗೆ ತುತ್ತಾಗಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದೆ. ಆದ್ರೆ, ಈಗ ಕಾಯಿಲೆಗಳು ಮಾಯವಾದವಾ? ಇದ್ದಕ್ಕಿದ್ದಂತೆ ಕ್ರಷರ್ ಗಳನ್ನು ನಿಲ್ಲಿಸಿ ಇದ್ದಕ್ಕಿದ್ದಂತೆ ಆರಂಭ ಮಾಡಿರುವುದರಿಂದ ಸಾರ್ವಜನಿಕರಲ್ಲಿ ಗುಸು ಗುಸು ಪಿಸು ಪಿಸು ಆರಂಭವಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ