ನಂದಿನಿ ಹಾಲಿನ ಬೂತ್ಗೆ ಕನ್ನ; ಈ ಎರಡು ವಸ್ತುಗಳನ್ನು ಬಿಟ್ಟು ಇನ್ನೇನನ್ನೂ ಮುಟ್ಟದ ಕಳ್ಳರು !
ಚಿಕ್ಕಬಳ್ಳಾಪುರ ನಗರದ ಜ್ಯೂನಿಯರ್ ಕಾಲೇಜಿನ ಬಳಿ ಈ ಹಾಲಿನ ಬೂತ್ ಇದೆ. ನಿನ್ನೆ ರಾತ್ರಿ ಕಳ್ಳರು ಬೂತ್ನ ಛಾವಣಿಗೆ ಹಾಕಲಾಗಿದ್ದ ತಗಡಿನ ಶೀಟ್ನ್ನು ಕೊರೆದು ಒಳಹೊಕ್ಕಿದ್ದಾರೆ.
ಚಿಕ್ಕಬಳ್ಳಾಪುರ: ಗೌರಿ-ಗಣೇಶನ ಹಬ್ಬಕ್ಕೆ ರಾಜ್ಯದೆಲ್ಲೆಡೆ ಭರ್ಜರಿ ಸಿದ್ಧತೆ ನಡೆಯುತ್ತಿದೆ. ಜನರೆಲ್ಲ ಹೂವು-ಹಣ್ಣು, ಹಾಲು ಸೇರಿ ಅಗತ್ಯ ವಸ್ತುಗಳ ಖರೀದಿಯಲ್ಲಿ ತೊಡಗಿದ್ದಾರೆ. ಈ ಸಮಯದಲ್ಲೂ ಕಳ್ಳರು ತಮ್ಮ ಕೈಚಳಕ ತೋರಿದ್ದು, ಚಿಕ್ಕಬಳ್ಳಾಪುರದ ನಗರದಲ್ಲಿರುವ ಒಂದು ನಂದಿನಿ ಹಾಲಿನ ಬೂತ್ಗೆ ಕನ್ನ ಹಾಕಿದ್ದಾರೆ. ಆದೆ ಈ ಕಳ್ಳರು ವಿಚಿತ್ರವಾಗಿದ್ದು, ನಂದಿನಿ ಬೂತ್ನಲ್ಲಿದ್ದ ಜಾಮೂನು ಮತ್ತು ಬಾದಾಮಿ ಪೌಡರ್ ಮಾತ್ರ ಕಳವು ಮಾಡಿದ್ದಾರೆ.
ಚಿಕ್ಕಬಳ್ಳಾಪುರ ನಗರದ ಜ್ಯೂನಿಯರ್ ಕಾಲೇಜಿನ ಬಳಿ ಈ ಹಾಲಿನ ಬೂತ್ ಇದೆ. ನಿನ್ನೆ ರಾತ್ರಿ ಕಳ್ಳರು ಬೂತ್ನ ಛಾವಣಿಗೆ ಹಾಕಲಾಗಿದ್ದ ತಗಡಿನ ಶೀಟ್ನ್ನು ಕೊರೆದು ಒಳಹೊಕ್ಕಿದ್ದಾರೆ. ಅದೂ ಕೂಡ ಒಂದು ಚೌಕದಷ್ಟು ಭಾಗ ಕತ್ತರಿಸಿದ್ದಾರೆ. ಆಗಲೇ ಹೇಳಿದಂತೆ ಕಳ್ಳರು ಹಾಲು, ಹಾಲಿನ ಉತ್ಪನ್ನಗಳನ್ನು ಮುಟ್ಟಲಿಲ್ಲ. ಅದೆಲ್ಲವೂ ಇದ್ದಂತೆ ಹಾಗೇ ಇದೆ. ಆದರೆ ಜಾಮೂನು ಮತ್ತು ಬಾದಾಮಿ ಪೌಡರ್ ಪ್ಯಾಕೆಟ್ಗಳು ಒಂದೂ ಕಾಣುತ್ತಿಲ್ಲ ಎಂದು ಮಾಲೀಕರು ತಿಳಿಸಿದ್ದಾರೆ. ಸ್ಥಳಕ್ಕೆ ಚಿಕ್ಕಬಳ್ಳಾಪುರ ನಗರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬೂತ್ ಮುಂದೆ ಬ್ಯಾರಿಕೇಡ್ಗಳನ್ನು ಹಾಕಿದ್ದು, ಅಲ್ಲೀಗ ಪೊಲೀಸರು ಗಸ್ತು ತಿರುಗುತ್ತಿದ್ದಾರೆ. ಇನ್ನು ಸುತ್ತಲಿನ ಜನರೂ ಕೂಡ ಅಂಗಡಿಯ ಬಳಿ ನೆರೆದಿದ್ದಾರೆ.
Published On - 1:50 pm, Thu, 9 September 21