ಹೆಚ್ಡಿ ಕುಮಾರಸ್ವಾಮಿಗೆ ಧಮ್, ತಾಕತ್ ಇದ್ದರೆ ಪೆನ್ಡ್ರೈವ್ನಲ್ಲಿ ಏನಿದೆ ಬಹಿರಂಗಪಡಿಸಲಿ -ವೀರಪ್ಪ ಮೊಯ್ಲಿ ಸವಾಲು
ಧಮ್, ತಾಕತ್ ಇದ್ದರೆ ಪೆನ್ಡ್ರೈವ್ನಲ್ಲಿ ಏನಿದೆ ಬಹಿರಂಗಪಡಿಸಿ ಎಂದು H.D.ಕುಮಾರಸ್ವಾಮಿಗೆ ಮಾಜಿ ಸಿಎಂ ವೀರಪ್ಪ ಮೊಯ್ಲಿ ಸವಾಲು ಹಾಕಿದ್ದಾರೆ.
ಚಿಕ್ಕಬಳ್ಳಾಪುರ: ಮಾಜಿ ಸಿಎಂ ಹೆಚ್ಡಿ ಕುಮಾರಸ್ವಾಮಿ(HD Kumaraswamy) ಅವರು ಸಿದ್ದರಾಮಯ್ಯ ಸರ್ಕಾರದ(Siddaramaiah Government) ವಿರುದ್ಧ ಆರೋಪಗಳ ಮೇಲೆ ಆರೋಪಗಳನ್ನು ಮಾಡ್ತಿದ್ದಾರೆ. ನಿನ್ನೆ(ಜುಲೈ 06) ಕೂಡ ವಿಧಾನಸೌಧದಲ್ಲಿ ಜೇಬಿನಿಂದ ಪೆನ್ ಡ್ರೈವ್(Pen Drive) ತೆಗೆದು ಹೊಸ ಬಾಂಬ್ ಸಿಡಿಸಿದ್ದರು. ಅಕ್ರಮದ ಮಾಹಿತಿ ಇದರಲ್ಲಿದೆ ಎಂದು ಎಚ್ಚರಿಕೆ ನೀಡಿದ್ದರು. ಸದ್ಯ ಈ ಬಗ್ಗೆ ಕಾಂಗ್ರೆಸ್ ನಾಯಕರು ಕೆಂಡಕಾರಿದ್ದಾರೆ. ಧಮ್ಮು, ತಾಕತ್ ಇದ್ರೆ ಪೆನ್ ಡ್ರೈವ್ನಲ್ಲೇನಿದೆ ಎಂದು ಬಹಿರಂಗಪಡಿಸಲಿ ಎಂದು ಮಾಜಿ ಸಿಎಂ ವೀರಪ್ಪ ಮೊಯ್ಲಿ(Veerappa Moily) ಸವಾಲು ಹಾಕಿದ್ದಾರೆ.
ನಿನ್ನೆ (ಜುಲೈ 06) ವಿಧಾನಸೌಧದಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡುವ ವೇಳೆ ತಮ್ಮ ಜೇಬಿನಿಂದ ಪೆನ್ ಡ್ರೈವ್ ತೆಗೆದು ಎಲ್ಲಾ ದಾಖಲೆ ಇದರಲ್ಲಿದೆ. ಸರಿಯಾದ ಸಮಯಕ್ಕೆ ಅದನ್ನು ರಿವಿಲ್ ಮಾಡ್ತೀನಿ. ನಾನು ಸುಮ್ ನುಮ್ನೇ ಚರ್ಚೆ ಮಾಡಲ್ಲ. ಎಲ್ಲವನ್ನೂ ರೆಡಿ ಮಾಡಿಟ್ಟುಕೊಂಡಿದ್ದೀನಿ ಎಂದು ಎಚ್ಚರಿಕೆ ಕೊಟ್ಟಿದ್ದರು. ಸದ್ಯ ಇದಕ್ಕೆ ಕೆಂಡಾಮಂಡಲರಾದ ಕಾಂಗ್ರೆಸ್ ನಾಯಕರು ವಾಗ್ದಾಳಿ ನಡೆಸಿದ್ದಾರೆ.
ಧಮ್, ತಾಕತ್ ಇದ್ದರೆ ಪೆನ್ಡ್ರೈವ್ನಲ್ಲಿ ಏನಿದೆ ಬಹಿರಂಗಪಡಿಸಿ ಎಂದು H.D.ಕುಮಾರಸ್ವಾಮಿಗೆ ಮಾಜಿ ಸಿಎಂ ವೀರಪ್ಪ ಮೊಯ್ಲಿ ಸವಾಲು ಹಾಕಿದ್ದಾರೆ. ವಿಧಾನಸಭೆ ಚುನಾವಣೆಯಲ್ಲಿ ಪಕ್ಷ ಸೋತು ಹೆಚ್ಡಿ ಕುಮಾರಸ್ವಾಮಿ ಹತಾಶರಾಗಿದ್ದಾರೆ. ಅವರು ಸಿಎಂ ಆಗಿದ್ದಾಗಿನ ದಾಖಲೆ ಪೆನ್ ಡ್ರೈವ್ನಲ್ಲಿ ಇರಬೇಕು. ರಾಜ್ಯ ಕಾಂಗ್ರೆಸ್ ಸರ್ಕಾರ ತಪ್ಪು ಮಾಡಲ್ಲ. ತಪ್ಪಿನಲ್ಲಿ ಸಿಲುಕಿಸಲು ಬಿಜೆಪಿ, ಜೆಡಿಎಸ್ ಯತ್ನಿಸುತ್ತಿದೆ. ಅವರ ಕನಸ್ಸು ಹಿಡೇರಲ್ಲ. ರಾಜ್ಯ ಸರ್ಕಾರದ ಬಗ್ಗೆ ಸಾರ್ವಜನಿಕರಲ್ಲಿ ಗೊಂದಲ ಮೂಡಿಸುವ ಕೆಲಸ ಮಾಡ್ತಿದ್ದಾರೆ ಅಷ್ಟೆ ಎಂದು ವಾಗ್ದಾಳಿ ನಡೆಸಿದರು.
ಇದನ್ನೂ ಓದಿ: ಜೇಬಿನಿಂದ ಪೆನ್ ಡ್ರೈವ್ ತೆಗೆದು ಅಕ್ರಮ ಬಯಲು ಮಾಡುವುದಾಗಿ ಹೆಚ್ಡಿ ಕುಮಾರಸ್ವಾಮಿಯಿಂದ ಎಚ್ಚರಿಕೆ
ಕಾಂಗ್ರೆಸ್ ಶುದ್ದ ಮುಕ್ತ ನ್ಯಾಯಸಮ್ಮತವಾಗಿದೆ
ಮಂತ್ರಿಗಳು ಭ್ರಷ್ಟಚಾರದಲ್ಲಿ ತೊಡಗುವವರಿದ್ದರೆ ಎಸ್ಐಟಿಯನ್ನು ಯ್ಯಾಕೆ ರಚನೆ ಮಾಡ್ತಿದ್ರು. ಬಿಜೆಪಿ ಸರ್ಕಾರದ 40 ಪರ್ಸೆಂಟ್ ಲಂಚದ ತನಿಖೆಗೆ ಯ್ಯಾಕೆ ಎಸ್ಐಟಿ ಮಾಡ್ತಿದ್ರು. ರಾಜ್ಯ ಸರ್ಕಾರ ಭ್ರಷ್ಟಚಾರ ಮಾಡ್ತಾರೆ ಅಂತ ಬಿಜೆಪಿ, ಜೆಡಿಎಸ್ ನಾಯಕರು ಅಂದುಕೊಂಡಿದ್ರೆ ಅವರ ಕಲ್ಪನೆ ತಪ್ಪು. ಎಸ್ಐಟಿ ಮಾಡಿ ನಾವೆ ಸಿಕ್ಕಿ ಹಾಕಿಕೊಳ್ತಿವಾ ಎಂದು ವೀರಪ್ಪ ಮೊಯ್ಲಿ ಪ್ರಶ್ನಿಸಿದರು. ಪಾರ್ಟಿ ಫಂಡ್ ಗೆ ಭ್ರಷ್ಟಚಾರದ ಹಣದ ಅವಶ್ಯಕತೆಯಿಲ್ಲ. ಕಾಂಗ್ರೆಸ್ ಶುದ್ದ ಮುಕ್ತ ನ್ಯಾಯಸಮ್ಮತವಾಗಿದೆ ಎಂದರು.
ಆರೋಪಗಳು ಸಾಬೀತಾಗಬೇಕು, ಬರೀ ಮಾತಲ್ಲಿ ಹೇಳಿದ್ರೇ ಸಾಕಾಗಲ್ಲ
ಇನ್ನು ಇದೇ ವಿಚಾರಕ್ಕೆ ವಿಧಾನಸೌಧದ ಬಳಿ ಸಚಿವ ಹೆಚ್.ಸಿ ಮಹದೇವಪ್ಪ ವಾಗ್ದಾಳಿ ನಡೆಸಿದ್ದಾರೆ. ಕುಮಾರಸ್ವಾಮಿಯವರಿಂದ ನಿನ್ನೆ ಪೆನ್ ಡ್ರೈವ್ ಪ್ರದರ್ಶನವಾಗಿದೆ. ಆರೋಪಗಳು ಸಾಬೀತಾಗಬೇಕು, ಬರೀ ಮಾತಲ್ಲಿ ಹೇಳಿದ್ರೇ ಸಾಕಾಗಲ್ಲ. ಪೆನ್ ಡ್ರೈವ್ ಇರಲಿ, ಸಾಕ್ಷ್ಯಗಳು ಇರಬೇಕು, ಸಾಬೀತಾಗಬೇಕು ಅಲ್ವಾ. ನಾಳೆ ಬಜೆಟ್ ಇದೆ, ರಾಜ್ಯದ ಆರ್ಥಿಕ ಅಭಿವೃದ್ಧಿಯ ಜೊತೆಗೆ ಜನರ ಕನಸಿಗೆ ಪೂರಕವಾಗಿರುವ ಬಜೆಟ್ ನೀಡಲಾಗುತ್ತೆ ಎಂದರು.
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ