ನಂದಿ ಗಿರಿಧಾಮ: ಪ್ರೇಮಿಗಳ ಹಾಟ್​ಸ್ಪಾಟ್​​ನಲ್ಲಿ ನಾಯಿ ಕೋತಿಗಳ ತುಂಟಾಟ!

ಚಿಕ್ಕಬಳ್ಳಾಪುರ: ನಾಯಿಯ ಬಾಲ ಹಿಡಿದು ಗಿರಗಿರ ತಿರುಗಿಸೋದೇನು. ಕಿವಿ ಹಿಂಡಿ ಬಗ್ಗಿಸೋದೇನು. ಕೀಟಲೆ ಮಾಡಿ ಮರ ಹತ್ತೋ ಕೋತಿಗಳು ಒಂದ್ಕಡೆಯಾದ್ರೆ. ಅದೇ ಕೋತಿಗಳ ಜೊತೆ ಎದ್ದು ಬಿದ್ದು ಆಟ ಆಡ್ತಿರೋ ಶ್ವಾನಗಳು. ಈ ದೃಶ್ಯಗಳು ಕಂಡುಬಂದಿದ್ದು ಚಿಕ್ಕಬಳ್ಳಾಪುರದ ಪ್ರಸಿದ್ಧ ಪ್ರವಾಸಿ ತಾಣ ನಂದಿ ಗಿರಿದಾಮದಲ್ಲಿ. ನಂದಿ ಹಿಲ್ಸ್ ಹೇಳಿ ಕೇಳಿ ಪ್ರೇಮಿಗಳ ಹಾಟ್​ಸ್ಪಾಟ್. ಎಲ್ಲಿ ನೋಡಿದ್ರೂ ಜೋಡಿ ಹಕ್ಕಿಗಳೇ ಕಣ್ಣಿಗೆ ಬೀಳುತ್ತೆ. ಆದ್ರೀಗ ಇದೇ ಸ್ಥಳದಲ್ಲಿ ಕೋತಿಗಳು ಹಾಗೂ ನಾಯಿಗಳ ಆಟ, ತುಂಟಾಟ ಪ್ರವಾಸಿಗರ ಗಮನ ಸೆಳೀತಿದೆ. […]

ನಂದಿ ಗಿರಿಧಾಮ: ಪ್ರೇಮಿಗಳ ಹಾಟ್​ಸ್ಪಾಟ್​​ನಲ್ಲಿ ನಾಯಿ ಕೋತಿಗಳ ತುಂಟಾಟ!
Follow us
ಸಾಧು ಶ್ರೀನಾಥ್​
|

Updated on:Jan 06, 2020 | 11:41 AM

ಚಿಕ್ಕಬಳ್ಳಾಪುರ: ನಾಯಿಯ ಬಾಲ ಹಿಡಿದು ಗಿರಗಿರ ತಿರುಗಿಸೋದೇನು. ಕಿವಿ ಹಿಂಡಿ ಬಗ್ಗಿಸೋದೇನು. ಕೀಟಲೆ ಮಾಡಿ ಮರ ಹತ್ತೋ ಕೋತಿಗಳು ಒಂದ್ಕಡೆಯಾದ್ರೆ. ಅದೇ ಕೋತಿಗಳ ಜೊತೆ ಎದ್ದು ಬಿದ್ದು ಆಟ ಆಡ್ತಿರೋ ಶ್ವಾನಗಳು.

ಈ ದೃಶ್ಯಗಳು ಕಂಡುಬಂದಿದ್ದು ಚಿಕ್ಕಬಳ್ಳಾಪುರದ ಪ್ರಸಿದ್ಧ ಪ್ರವಾಸಿ ತಾಣ ನಂದಿ ಗಿರಿದಾಮದಲ್ಲಿ. ನಂದಿ ಹಿಲ್ಸ್ ಹೇಳಿ ಕೇಳಿ ಪ್ರೇಮಿಗಳ ಹಾಟ್​ಸ್ಪಾಟ್. ಎಲ್ಲಿ ನೋಡಿದ್ರೂ ಜೋಡಿ ಹಕ್ಕಿಗಳೇ ಕಣ್ಣಿಗೆ ಬೀಳುತ್ತೆ. ಆದ್ರೀಗ ಇದೇ ಸ್ಥಳದಲ್ಲಿ ಕೋತಿಗಳು ಹಾಗೂ ನಾಯಿಗಳ ಆಟ, ತುಂಟಾಟ ಪ್ರವಾಸಿಗರ ಗಮನ ಸೆಳೀತಿದೆ. ಮಯೂರ ಹೋಟೆಲ್ ಬಳಿ ಇರೋ ಕೋತಿಗಳು ಎರಡು ನಾಯಿಗಳ ಜೊತೆ ಆಟವಾಡ್ತಿರೋ ದೃಶ್ಯ ಪ್ರೇಮಿಗಳನ್ನೇ ನಾಚಿಸುವಂತಿದೆ.

ಶ್ವಾನಗಳು ಸುಮ್ಮನಿದ್ರೂ ಕಾಲು ಕೆರೆದು ಬರೋ ಕೋತಿಗಳು ನಾಯಿಯ ಬಾಲ ಎಳೆಯೋದು, ಕಿವಿ ಹಿಂಡೋದು, ತಲೆಗೆ ಹೊಡೆಯೋದು. ಹೀಗೆ ನಾನಾ ಕಿತಾಪತಿಗಳನ್ನ ಮಾಡ್ತಿವೆ. ಶ್ವಾನಗಳೂ ಕೂಡ ಅಷ್ಟೇ ಕೋತಿಗಳ ಜೊತೆ ತರ್ಲೆ ಮಾಡ್ಕೊಂಡು ಎಂಜಾಯ್ ಮಾಡ್ತಿವೆ. ನಾಯಿ-ಕೋತಿಗಳ ಈ ಆಟ ನೋಡಿ ಗಿರಿಧಾಮಕ್ಕೆ ಬಂದ ಮಕ್ಕಳು ದಿಲ್ ಖುಷ್ ಆಗ್ತಿದ್ದಾರೆ.

ಒಟ್ನಲ್ಲಿ, ನಂದಿ ಗಿರಿಧಾಮದ ಹಚ್ಚ ಹಸಿರು ಸೊಬಗಿನ ಜೊತೆ ನಾಯಿ-ಕೋತಿಗಳ ತುಂಟಾಟ ಪ್ರವಾಸಿಗರ ಪಾಲಿಗೆ ಸಖತ್ ಖುಷಿ ತಂದಿದೆ.

Published On - 7:58 am, Mon, 6 January 20

ಸರ್ಕಾರದಿಂದ ಪುನರ್ವಸತಿ ಮತ್ತು ತಲಾ 3 ಲಕ್ಷ ರೂ. ನೀಡುವ ಪ್ರಕಟಣೆ
ಸರ್ಕಾರದಿಂದ ಪುನರ್ವಸತಿ ಮತ್ತು ತಲಾ 3 ಲಕ್ಷ ರೂ. ನೀಡುವ ಪ್ರಕಟಣೆ
ವಾರಾಣಸಿಯಲ್ಲಿ 70 ವರ್ಷಗಳ ಬಳಿಕ ತೆರೆದ ಸಿದ್ಧೇಶ್ವರ ಮಹಾದೇವ ದೇಗುಲ
ವಾರಾಣಸಿಯಲ್ಲಿ 70 ವರ್ಷಗಳ ಬಳಿಕ ತೆರೆದ ಸಿದ್ಧೇಶ್ವರ ಮಹಾದೇವ ದೇಗುಲ
ವಿಶಾಖಪಟ್ಟಣದ ದಾರಿಯುದ್ಧಕ್ಕೂ ಮೋದಿಗೆ ಹೂವಿನ ಸುರಿಮಳೆ
ವಿಶಾಖಪಟ್ಟಣದ ದಾರಿಯುದ್ಧಕ್ಕೂ ಮೋದಿಗೆ ಹೂವಿನ ಸುರಿಮಳೆ
ಮಹಾಕುಂಭದ ವಿಶೇಷ ಹಾಡು ಬಿಡುಗಡೆ ಮಾಡಿದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್
ಮಹಾಕುಂಭದ ವಿಶೇಷ ಹಾಡು ಬಿಡುಗಡೆ ಮಾಡಿದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್
ಠಾಣೆಯ ರೂಂ ಕ್ಲೋಸ್ ಮಾಡಿ ನನ್ನ ಮೈಕೈ ಮುಟ್ಟಿ.. ಸಂತ್ರಸ್ತೆ ಕಣ್ಣೀರ ಮಾತು
ಠಾಣೆಯ ರೂಂ ಕ್ಲೋಸ್ ಮಾಡಿ ನನ್ನ ಮೈಕೈ ಮುಟ್ಟಿ.. ಸಂತ್ರಸ್ತೆ ಕಣ್ಣೀರ ಮಾತು
ಗಾಂಧಿ ಭಾರತ ಕಾರ್ಯಕ್ರಮ; ಹಿಂದಿನ ಕೆಲಸವನ್ನೇ ನಿರ್ವಹಿಸುತ್ತಿದ್ದೇನೆ: ಸಚಿವ
ಗಾಂಧಿ ಭಾರತ ಕಾರ್ಯಕ್ರಮ; ಹಿಂದಿನ ಕೆಲಸವನ್ನೇ ನಿರ್ವಹಿಸುತ್ತಿದ್ದೇನೆ: ಸಚಿವ
ಪೊಲೀಸ್ ಠಾಣೆಯ ಚಪಲಚೆನ್ನಿಗರಾಯ ರಾಮಚಂದ್ರಪ್ಪನ ಕರಾಳ ಮುಖ ಬಿಚ್ಚಿಟ್ಟ ಮಹಿಳೆ
ಪೊಲೀಸ್ ಠಾಣೆಯ ಚಪಲಚೆನ್ನಿಗರಾಯ ರಾಮಚಂದ್ರಪ್ಪನ ಕರಾಳ ಮುಖ ಬಿಚ್ಚಿಟ್ಟ ಮಹಿಳೆ
ಸಿಎಂ ಮುಂದೆ ಶರಣಾದ ಬಳಿಕ ನಕ್ಸಲ್​ ನಾಯಕಿ ಹೇಳಿದ್ದೇನು?
ಸಿಎಂ ಮುಂದೆ ಶರಣಾದ ಬಳಿಕ ನಕ್ಸಲ್​ ನಾಯಕಿ ಹೇಳಿದ್ದೇನು?
ಗಾಂಧಿ ಭಾರತ ಸಮಾವೇಶ ನಿಂತ ಹಂತದಿಂದಲೇ ಪುನರಾರಂಭ: ಶಿವಕುಮಾರ್
ಗಾಂಧಿ ಭಾರತ ಸಮಾವೇಶ ನಿಂತ ಹಂತದಿಂದಲೇ ಪುನರಾರಂಭ: ಶಿವಕುಮಾರ್
ಕಾಡಿಗೆ ಗುಡ್​ಬೈ ಹೇಳಿ ಶರಣಾಗತಿಯಾದ ನಕ್ಸಲರಿಗೆ ಸಂವಿಧಾನ ಪುಸ್ತಕ ನೀಡಿದ CM
ಕಾಡಿಗೆ ಗುಡ್​ಬೈ ಹೇಳಿ ಶರಣಾಗತಿಯಾದ ನಕ್ಸಲರಿಗೆ ಸಂವಿಧಾನ ಪುಸ್ತಕ ನೀಡಿದ CM