AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ದೀಪಾವಳಿ ದಿನವೆ ಮನೆಯಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ ಗೃಹಿಣಿ ಶವವಾಗಿ ಪತ್ತೆ, ಗೃಹಪ್ರವೇಶ ಸಂಭ್ರಮದ ಮನೆಯಲ್ಲಿ ಸೂತಕದ ಛಾಯೆ

ಅವರಿಬ್ಬರೂ ಪರಸ್ಪರ ಇಷ್ಟಪಟ್ಟು ಗ್ರ್ಯಾಂಡ್ ಆಗಿ ಮದುವೆ ಮಾಡಿಕೊಂಡಿದ್ದರು. ಇಬ್ಬರ ಹಾಲು ಜೇನಿನಂಥ ಸಂಸಾರಕ್ಕೆ ಮೂರು ವರ್ಷದ ಮಗ ಸಾಕ್ಷಿಯಾಗಿದ್ದ. ನಾಳೆ ಶುಕ್ರವಾರ ನೂತನ ಗೃಹ ಪ್ರವೇಶ ಮಾಡಬೇಕಿತ್ತು. ಅಷ್ಟರಲ್ಲೆ... ಈ ದೀಪಾವಳಿ ಅವರ ಬದುಕಿನಲ್ಲಿ ತರಬಾರದ ಸಂಕಷ್ಟ, ಕಗ್ಗತ್ತಲು ತಂದಿಟ್ಟಿದೆ.

ದೀಪಾವಳಿ ದಿನವೆ ಮನೆಯಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ ಗೃಹಿಣಿ ಶವವಾಗಿ ಪತ್ತೆ, ಗೃಹಪ್ರವೇಶ ಸಂಭ್ರಮದ ಮನೆಯಲ್ಲಿ ಸೂತಕದ ಛಾಯೆ
ಮೃತ ಸುಪ್ರಿಯಾ, ಅತ್ತೆ ಮತ್ತು ಪತಿ
TV9 Web
| Edited By: |

Updated on: Oct 27, 2022 | 4:26 PM

Share

ಅವರಿಬ್ಬರೂ ಪರಸ್ಪರ ಇಷ್ಟಪಟ್ಟು ಗ್ರ್ಯಾಂಡ್ ಆಗಿ ಮದುವೆ ಮಾಡಿಕೊಂಡಿದ್ದರು. ಇಬ್ಬರ ಹಾಲು ಜೇನಿನಂಥ ಸಂಸಾರಕ್ಕೆ ಮೂರು ವರ್ಷದ ಮಗ ಸಾಕ್ಷಿಯಾಗಿದ್ದ. ನಾಳೆ ಶುಕ್ರವಾರ ನೂತನ ಗೃಹ ಪ್ರವೇಶ ಮಾಡಬೇಕಿತ್ತು. ಅಷ್ಟರಲ್ಲೆ… ಈ ದೀಪಾವಳಿ ಅವರ ಬದುಕಿನಲ್ಲಿ ತರಬಾರದ ಸಂಕಷ್ಟ, ಕಗ್ಗತ್ತಲು ತಂದಿಟ್ಟಿದೆ.

ಆಕೆಯ ಹೆಸರು ಸುಪ್ರಿಯಾ, ಬಿಕಾಂ ಪದವೀಧರೆ. ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ತಾಲೂಕಿನ ಮಂಡಿಬೆಬೆಲೆ ನಿವಾಸಿ. ತಂದೆ ಈಶ್ವರಪ್ಪ -ತಾಯಿ ರಾಧಮ್ಮ. ರೈತರಾದರೂ ಮಗಳನ್ನು ಮುದ್ದಾಗಿ ಸಾಕಿ ವಿದ್ಯಾಭ್ಯಾಸ ಮಾಡಿಸಿದ್ದರು. ಸುಪ್ರೀಯಾಳನ್ನು ಚಿಕ್ಕಬಳ್ಳಾಪುರ ಜಿಲ್ಲೆ ಚಿಂತಾಮಣಿ ನಗರದ ವಿನಾಯಕ ಬಡಾವಣೆಯ ನಿವಾಸಿ ವೆಂಕಟೇಶ ಎನ್ನುವಾತನಿಗೆ ಕೊಟ್ಟು ಮದುವೆ ಮಾಡಿದ್ರು. ಇಬ್ಬರೂ ಅನೋನ್ಯತೆಯಿಂದ ಇದ್ದರು. ಆದ್ರೆ ನಿನ್ನೆ ಸುಪ್ರಿಯಾ ಗಂಡನ ಮನೆಯಲ್ಲಿ ಮಗುವನ್ನು ಬಿಟ್ಟು ನೇಣು ಬಿಗಿದು ಸ್ಥಿತಿಯಲ್ಲಿ ಪತ್ತೆಯಾಗಿದ್ದಾಳೆ.

ಇದರಿಂದ ಸುಪ್ರಿಯಾ ಸಾವಿನ ಹಿಂದೆ ಹಲವು ಅನುಮಾನಗಳು ಮೂಡಿವೆ. ಸುಪ್ರಿಯಾ ಗಂಡ ನೂತನವಾಗಿ ಮನೆ ನಿರ್ಮಾಣ ಮಾಡಿದ್ದು, ನಾಳೆ ಶುಕ್ರವಾರ ಮನೆ ಗೃಹ ಪ್ರವೇಶ ಇತ್ತು. ಜೊತೆಗೆ, ದೀಪಾವಳಿ ಹಬ್ಬ ಇರುವ ಕಾರಣ ಕುಟುಂಬದ ಮಂದಿ ಸಂತಸ ಸಡಗರ ಸಂಭ್ರಮದಿಂದ ಇದ್ದರು. ಆದ್ರೆ ಸುಪ್ರಿಯಾ ಮೃತಪಟ್ಟಿರುವ ಕಾರಣ ಆಕೆಯ ತಂದೆ ತಾಯಿಯು, ಮೃತಳ ಅತ್ತೆಯ ಮೇಲೆ ಅನುಮಾನ ವ್ಯಕ್ತಪಡಿಸಿದ್ದಾರೆ. ವರದಕ್ಷಿಣೆ ತರಲು ಹೇಳಿದ್ದರು. ನಾವು ಹಣ ಇಲ್ಲ ಅಂತಾ ಹೇಳಿದ್ದೆವು. ಮನೆಯಲ್ಲಿ ಅತ್ತೆ ಸೊಸೆ ಜಗಳ ಇತ್ತು. ಅದರಿಂದಲೇ… ಸುಪ್ರೀಯಾ ಸಾವಿನ ಮನೆ ಸೇರಿದ್ದಾಳೆ ಅಂತ ಅನುಮಾನ ವ್ಯಕ್ತಪಡಿಸಿದ್ದಾರೆ. ಮೃತಳ ಗಂಡ ವೆಂಕಟೇಶ ಮನೆಯಲ್ಲಿ ಯಾವುದೆ ಹೇಳಿಕೊಳ್ಳುವಂಥ ಸಮಸ್ಯೆ ಇರಲಿಲ್ಲ, ಸಣ್ಣ ಪುಟ್ಟ ಸಮಸ್ಯೆ ಬಿಟ್ರೆ ಏನೂ ಇರಲಿಲ್ಲ ಅಂತ ಹೇಳುತ್ತಾರೆ. (ವರದಿ: ಭೀಮಪ್ಪ ಪಾಟೀಲ, ಟಿವಿ 9, ಚಿಕ್ಕಬಳ್ಳಾಪುರ)

ಇನ್ನು ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಮನೆ ನಿರ್ಮಾಣ ಮಾಡಲಾಗಿತ್ತು. ಶುಕ್ರವಾರ ಗೃಹ ಪ್ರವೇಶ, ಬಂಧು ಬಳಗಕ್ಕೆ ಗೃಹ ಪ್ರವೇಶ ಆಹ್ವಾನ ಪತ್ರ ನೀಡಲಾಗಿತ್ತು. ಆದ್ರೂ ಸುಪ್ರಿಯಾ ಯಾಕೆ ಸಾವಿನ ಮನೆ ಸೆರಿದ್ದಾಳೆ? ಆಕೆಯೇ ಮನನೊಂದು ಆತ್ಮಹತ್ಯೆ ಮಾಡಿಕೊಂಡಳಾ? ಇಲ್ಲ ಆಕೆಯ ಅತ್ತೆ ಗಂಡ ನೇಣು ಬಿಗಿದು ಆತ್ಮಹತ್ಯೆ ಕಥೆ ಸೃಷ್ಟಿ ಮಾಡಿದ್ದಾರಾ? ಗೊತ್ತಿಲ್ಲ! ಸದ್ಯಕ್ಕೆ ಚಿಂತಾಮಣಿ ನಗರ ಠಾಣೆ ಪೊಲೀಸರು, ವರದಕ್ಷಣೆ ಕಿರುಕುಳ ಹಾಗೂ ಆತ್ಮಹತ್ಯೆ ಪ್ರಚೋದನೆ ಆರೋಪದ ಹಿನ್ನೆಲೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದಾರೆ.

ಆಟೋ ಚಾಲಕನಿಗೆ ಬಿಜೆಪಿ ಶಾಸಕನಿಂದ ಕಪಾಳಮೋಕ್ಷ; ವೈರಲ್ ವಿಡಿಯೋಗೆ ಆಕ್ರೋಶ
ಆಟೋ ಚಾಲಕನಿಗೆ ಬಿಜೆಪಿ ಶಾಸಕನಿಂದ ಕಪಾಳಮೋಕ್ಷ; ವೈರಲ್ ವಿಡಿಯೋಗೆ ಆಕ್ರೋಶ
ಸೇತುವೆಯಿಂದ ಕೆಳಗೆ ಬಿದ್ದರೂ ಯುವಕನ ಜೀವ ಉಳಿಸಿತು ಲೈಟ್ ಕಂಬ!
ಸೇತುವೆಯಿಂದ ಕೆಳಗೆ ಬಿದ್ದರೂ ಯುವಕನ ಜೀವ ಉಳಿಸಿತು ಲೈಟ್ ಕಂಬ!
ಗಿಲ್ಲಿ ಮೇಲೆ ರಕ್ಷಿತಾ ಶೆಟ್ಟಿಗೆ ಲವ್ ಇದ್ಯಾ? ಅಸಲಿ ವಿಷಯ ತೆರೆದಿಟ್ಟ ರಜತ್
ಗಿಲ್ಲಿ ಮೇಲೆ ರಕ್ಷಿತಾ ಶೆಟ್ಟಿಗೆ ಲವ್ ಇದ್ಯಾ? ಅಸಲಿ ವಿಷಯ ತೆರೆದಿಟ್ಟ ರಜತ್
ಶಿವ ಶಿವ..ಮಠದಲ್ಲಿ ಇದೆಂತಾ ಅನಾಚಾರ: ಕುಡಿದು ತೂರಾಡಿದ ಸ್ವಾಮೀಜಿ!
ಶಿವ ಶಿವ..ಮಠದಲ್ಲಿ ಇದೆಂತಾ ಅನಾಚಾರ: ಕುಡಿದು ತೂರಾಡಿದ ಸ್ವಾಮೀಜಿ!
ಚೈತ್ರಾ ಕುಂದಾಪುರ ಯಾರು ಅಂತ ನನಗೆ ಗೊತ್ತಿಲ್ಲ, ಅವರ ಬಗ್ಗೆ ಮಾತು ಬೇಡ: ರಜತ್
ಚೈತ್ರಾ ಕುಂದಾಪುರ ಯಾರು ಅಂತ ನನಗೆ ಗೊತ್ತಿಲ್ಲ, ಅವರ ಬಗ್ಗೆ ಮಾತು ಬೇಡ: ರಜತ್
ಬೆಂಗಳೂರಲ್ಲಿ 50 ಕಿಮೀ ಎಲಿವೇಟೆಡ್‌ ಕಾರಿಡಾರ್​​​: ಡಿಕೆ ಶಿವಕುಮಾರ್​ ಘೋಷಣೆ
ಬೆಂಗಳೂರಲ್ಲಿ 50 ಕಿಮೀ ಎಲಿವೇಟೆಡ್‌ ಕಾರಿಡಾರ್​​​: ಡಿಕೆ ಶಿವಕುಮಾರ್​ ಘೋಷಣೆ
ಪ್ರೀತಿಸಿ ಮದ್ವೆಯಾದವಳನ್ನ ಕೊಚ್ಚಿ ಕೊಂದ್ರು, ಭೀಕರತೆಯನ್ನು ಬಿಚ್ಚಿಟ್ಟ ಪತಿ
ಪ್ರೀತಿಸಿ ಮದ್ವೆಯಾದವಳನ್ನ ಕೊಚ್ಚಿ ಕೊಂದ್ರು, ಭೀಕರತೆಯನ್ನು ಬಿಚ್ಚಿಟ್ಟ ಪತಿ
ಜಿನ್ನಾ ಕಾಂಗ್ರೆಸ್‌ ಬಿಟ್ಟ ತಕ್ಷಣ 'ವಂದೇ ಮಾತರಂ' ಹಾಡಿನಲ್ಲಿ ಬದಲಾವಣೆ
ಜಿನ್ನಾ ಕಾಂಗ್ರೆಸ್‌ ಬಿಟ್ಟ ತಕ್ಷಣ 'ವಂದೇ ಮಾತರಂ' ಹಾಡಿನಲ್ಲಿ ಬದಲಾವಣೆ
ಮಾನ್ಯಾ ಚಿತೆಗೆ ಪತಿ ಅಗ್ನಿ ಸ್ಪರ್ಶ, ಕರುಳು ಚುರ್ ಅನ್ನಿಸುವ ಸನ್ನಿವೇಶ
ಮಾನ್ಯಾ ಚಿತೆಗೆ ಪತಿ ಅಗ್ನಿ ಸ್ಪರ್ಶ, ಕರುಳು ಚುರ್ ಅನ್ನಿಸುವ ಸನ್ನಿವೇಶ
ಗಿಲ್ಲಿ ನಟ ದೊಡ್ಡ ಕುತಂತ್ರಿ: ಬಿಗ್​ ಬಾಸ್ ಮನೆಯಲ್ಲಿ ರಾಶಿಕಾ ಶೆಟ್ಟಿ ಆರೋಪ
ಗಿಲ್ಲಿ ನಟ ದೊಡ್ಡ ಕುತಂತ್ರಿ: ಬಿಗ್​ ಬಾಸ್ ಮನೆಯಲ್ಲಿ ರಾಶಿಕಾ ಶೆಟ್ಟಿ ಆರೋಪ