ಜ.15 ಕ್ಕೆ ಚಿಕ್ಕಬಳ್ಳಾಪುರದಲ್ಲಿ ಯೋಗಥಾನ್! ಗಿನ್ನಿಸ್ ವಿಶ್ವ ದಾಖಲೆ ಸೃಷ್ಟಿಸಲು ವೇದಿಕೆ ಸಜ್ಜು- ಜಿಲ್ಲಾಧಿಕಾರಿ
Guinness World Record: ರಾಜ್ಯ ವ್ಯಾಪ್ತಿ ಆಯೋಜಿಸಿರುವ ‘ಯೋಗಥಾನ್-2023’ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಜಿಲ್ಲೆಯಲ್ಲಿ ಸುಮಾರು 5 ಲಕ್ಷ ಯುವಕರಿಂದ ‘ಯೋಗಾಸನ’ ಕಾರ್ಯಕ್ರಮವನ್ನು ನಡೆಸುವುದರ ಮೂಲಕ ಗಿನ್ನಿಸ್ ವಿಶ್ವ ದಾಖಲೆ ಸೃಷ್ಟಿಗೆ ವೇದಿಕೆ ಸಜ್ಜಾಗಿದೆ
ಚಿಕ್ಕಬಳ್ಳಾಪುರ: ರಾಜ್ಯಾದ್ಯಂತ ಏಕಕಾಲದಲ್ಲಿ ‘ಯೋಗಥಾನ್-2022’ (Yogathon 2022) ಕಾರ್ಯಕ್ರಮವನ್ನು ಹಮ್ಮಿಕೊಂಡಿರುವ ಹಿನ್ನೆಲೆಯಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಜನವರಿ 13 ಮತ್ತು 14 ರಂದು ರಿಹರ್ಸಲ್ ಹಾಗೂ ಜನವರಿ 15 ರಂದು ಬೆಳಿಗ್ಗೆ: 6.30 ರಿಂದ 8.00 ಗಂಟೆಯವರೆಗೆ ನಗರದ ಎಸ್.ಜೆ.ಸಿ.ಐ.ಟಿ. ಕಾಲೇಜು ಆವರಣದಲ್ಲಿ ಯೋಗಥಾನ್-2022 ಆಯೋಜಿಸಲಾಗಿದೆ. ಈ ಕಾರ್ಯಕ್ರಮದಲ್ಲಿ ಯುವಕ-ಯುವತಿಯರು (Youth), ಕಾಲೇಜಿನ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಜಿಲ್ಲಾಧಿಕಾರಿ (Chikkaballapur) ಎನ್.ಎಂ.ನಾಗರಾಜ್ ಅವರು ಮನವಿ ಮಾಡಿದರು.
ರಾಜ್ಯ ವ್ಯಾಪ್ತಿ ಆಯೋಜಿಸಿರುವ ‘ಯೋಗಥಾನ್-2023’ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಜಿಲ್ಲೆಯಲ್ಲಿ ಸುಮಾರು 5 ಲಕ್ಷ ಯುವಕರಿಂದ ‘ಯೋಗಾಸನ’ ಕಾರ್ಯಕ್ರಮವನ್ನು ನಡೆಸುವುದರ ಮೂಲಕ ‘ಗಿನ್ನಿಸ್ ವಿಶ್ವ ದಾಖಲೆ’ (Guinness World Record) ಸೃಷ್ಟಿಸಲು ವೇದಿಕೆ ಕಲ್ಪಿಸಲು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಚಿಕ್ಕಬಳ್ಳಾಪುರ ಹಾಗೂ ಖಾಸಗಿ ವಾಹಿನಿ ಬೆಂಗಳೂರು ಇವರ ಸಹಯೋಗದಲ್ಲಿ ಕಾರ್ಯಕ್ರಮದ ದಾಖಲೀಕರಣ ಮತ್ತು ಪ್ರಚಾರ ಕಾರ್ಯವನ್ನು ನಡೆಸುವ ಜವಾಬ್ದಾರಿ ನೀಡಲಾಗಿದೆ ಎಂದರು.
ಜಿಲ್ಲೆಯ ಆಸಕ್ತ ಸ್ಥಳೀಯ ನಾಗರಿಕರು, ಯೋಗಪಟುಗಳು, ವಿದ್ಯಾರ್ಥಿ/ವಿದ್ಯಾರ್ಥಿನಿಯರು ಆನ್ ಲೈನ್ ಮೂಲಕ https://www.yogathon2022.com ನಲ್ಲಿ ನೋಂದಾಯಿಸಿಕೊಂಡು ಚಿಕ್ಕಬಳ್ಳಾಪುರ ನಗರದ ಎಸ್.ಜೆ.ಸಿ.ಐ.ಟಿ. ಕಾಲೇಜು ಆವರಣದಲ್ಲಿ ಜನವರಿ 13 ರಿಂದ 15 ರವರೆಗೆ ಆಯೋಜಿಸಿರುವ ‘ಯೋಗಥಾನ್-2022’ ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮದ ಯಶಸ್ವಿಗೆ ಸಹಕರಿಸುವಂತೆ ಕೋರಿದರು.
ವರದಿ: ಭೀಮಪ್ಪ ಪಾಟೀಲ ಟಿವಿ9 ಚಿಕ್ಕಬಳ್ಳಾಪುರ