AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಚಿಕ್ಕಬಳ್ಳಾಪುರ: ಕಾಂಗ್ರೆಸ್ ದರೋಡೆಕೋರರ ಕೂಟ-ಕಂದಾಯ ಸಚಿವ ಆರ್ ಅಶೋಕ್

ಕಾಂಗ್ರೆಸ್​ ನಾಲಾಯಕ್ ಪಕ್ಷ ಎಂದು 16 ಜನ ಹೊರ ಬಂದರು, ಹೀಗಿದ್ದರೂ ಬಿದ್ದರೂ ಮೀಸೆ ಮಣ್ಣಾಗಲಿಲ್ಲ ಎನ್ನುವ ರೀತಿ ಕಾಂಗ್ರೆಸ್​ನವರು ಹೊರಟಿದ್ದಾರೆ. ಆದಷ್ಟು ಬೇಗ ಅವರಿಗೆ ಭ್ರಮನಿರಸನವಾಗಲಿದೆ ಎಂದು ಸಚಿವ ಆರ್ ಅಶೋಕ್​ ವಾಗ್ದಾಳಿ ಮಾಡಿದ್ದಾರೆ.

ಚಿಕ್ಕಬಳ್ಳಾಪುರ: ಕಾಂಗ್ರೆಸ್ ದರೋಡೆಕೋರರ ಕೂಟ-ಕಂದಾಯ ಸಚಿವ ಆರ್ ಅಶೋಕ್
ಸಚಿವ ಆರ್​ ಅಶೋಕ, ಕಾಂಗ್ರೆಸ್​ ಧ್ವಜ
TV9 Web
| Updated By: ವಿವೇಕ ಬಿರಾದಾರ|

Updated on:Jan 13, 2023 | 8:49 AM

Share

ಚಿಕ್ಕಬಳ್ಳಾಪುರ: ಕಾಂಗ್ರೆಸ್ (Congress) ದರೋಡೆಕೋರರ ಕೂಟ, ಸಿದ್ದರಾಮಯ್ಯ (Siddaramaiah) ಸಂಪುಟ ಇದ್ದಾಗ ಏನಾದರು ಒಳ್ಳೆಯದು ಆಗಿದೆಯಾ? ಅವರು ಧರ್ಮಾತ್ಮರಾಗಿದ್ದರೆ, ಸತ್ಯ ಹರಿಶ್ಚಂದ್ರರ ಮೊಮ್ಮಕ್ಕಳಾಗಿದ್ದರೆ ಅವರ ಪಕ್ಷ ಬಿಟ್ಟು 16 ಜನ ಯಾಕೆ ಓಡಿಹೋದರು ಎಂದು ಕಂದಾಯ ಸಚಿವ ಆರ್. ಅಶೋಕ್ (R. Ashoka) ಪ್ರಶ್ನಿಸಿದರು.

ಚಿಕ್ಕಬಳ್ಳಾಪುರ ಉತ್ಸವದ 6ನೇ ದಿನದ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾತನಾಡಿದ ಅವರು, ಕಾಂಗ್ರೆಸ್ ಸರಿ ಇಲ್ಲ, ಅವರು ನೀರು ಹಾಕಿ ತೊಳೆದರೆ ಸಾಲದು, ಗಂಜಲ ಹಾಕಿ ತೊಳೆದಾಗ ಮಾತ್ರ ಪಾಪ ಹೋಗೋದು. ಕಾಂಗ್ರೆಸ್​​ ಅವರು ಎಲ್ಲೆಲ್ಲಿ ಹೋಗುತ್ತಿದ್ದಾರೆ ಆ ಸ್ಥಳಗಳನ್ನು ಗಂಜಲ ಹಾಕಿ ತೊಳೆದಾಗ ಮಾತ್ರ ಪಾಪ ಹೋಗುತ್ತದೆ ಎಂದು ವಾಗ್ದಾಳಿ ಮಾಡಿದರು.

ಇದನ್ನೂ ಓದಿ: ಸುಧಾಕರ್ ಈ ರಾಜ್ಯದ, ದೇಶದ ಆಸ್ತಿ; ಸಚಿವ ಶಿವರಾಮ್ ಹೆಬ್ಬಾರ್

ಈ ಹಿಂದೆ ಕಾಂಗ್ರೆಸ್​ನ 5 ವರ್ಷ ಸರ್ಕಾರ ಇದ್ದಾಗ ಕಾಂಗ್ರೆಸ್​ನವರು ಜನರಿಗೆ ಮೋಸ ಮಾಡಿದ್ದರು. ಕಾಂಗ್ರೆಸ್​ ನಾಲಾಯಕ್ ಪಕ್ಷ ಎಂದು 16 ಜನ ಹೊರ ಬಂದರು. ಹೀಗಿದ್ದರೂ, ಬಿದ್ದರೂ ಮೀಸೆ ಮಣ್ಣಾಗಲಿಲ್ಲ ಎಂಬ ಮಾತಿನಂತೆ ಕಾಂಗ್ರೆಸ್​ನವರು ಹೊರಟಿದ್ದಾರೆ. ಆದಷ್ಟು ಬೇಗ ಅವರಿಗೆ ಭ್ರಮನಿರಸನವಾಗಲಿದೆ. ಈ ಹಿಂದೆ ರಾಜ್ಯವನ್ನು ಲೂಟಿ ಮಾಡಿದವರು ಈಗ ಬಸ್​ನಲ್ಲಿ ಬರುತ್ತಿದ್ದಾರೆ ಎಚ್ಚರವಾಗಿರಿ ಎಂದು ಹೇಳಿದರು.

ಮೋದಿ ಅಂದರೆ ದೇಶದ ಐಕಾನ್

ಮೋದಿ ಅಂದರೆ ದೇಶದ ಐಕಾನ್, ಮೋದಿ ಅಂದರೆ ನಮ್ಮ ಮನೆಯ ಮಗನ ರೀತಿ. ಯುವಕರಿಗೆ ಅಭಿವೃದ್ಧಿ ಪರ ಚಿಂತನೆ ಮಾಡುವ ಆದರ್ಶ ಪುರುಷ. ಮೋದಿ ಅಂದರೆ ಅಭಿವೃದ್ಧಿ, ಅಭಿವೃದ್ಧಿ ಅಂದರೆ ಮೋದಿ ಎಂದು ಹಾಡಿ ಹೊಗಳಿದರು.

ಭೀಮಪ್ಪ ಪಾಟೀಲ ಟಿವಿ9 ಚಿಕ್ಕಬಳ್ಳಾಪುರ

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 8:15 am, Fri, 13 January 23

ರಾಜಕೀಯಕ್ಕೆ ಬಂದ್ರೆ ಸ್ಟೈಲ್ ಆಗಿ ಬರ್ತೀನಿ: ಸುದೀಪ್
ರಾಜಕೀಯಕ್ಕೆ ಬಂದ್ರೆ ಸ್ಟೈಲ್ ಆಗಿ ಬರ್ತೀನಿ: ಸುದೀಪ್
ಬಿಬಿಎಲ್ ಚೊಚ್ಚಲ ಪಂದ್ಯದಲ್ಲಿ ಮುಗ್ಗರಿಸಿದ ಬಾಬರ್ ಆಝಂ
ಬಿಬಿಎಲ್ ಚೊಚ್ಚಲ ಪಂದ್ಯದಲ್ಲಿ ಮುಗ್ಗರಿಸಿದ ಬಾಬರ್ ಆಝಂ
ಕಾಮಚೇಷ್ಟೆ ಮಾಡ್ತಿದ್ದ ಸೈಕೋಪಾತ್​​​ಗೆ ಮಹಿಳೆಯರಿಂದ ಬಿಸಿ ಬಿಸಿ ಕಜ್ಜಾಯ!
ಕಾಮಚೇಷ್ಟೆ ಮಾಡ್ತಿದ್ದ ಸೈಕೋಪಾತ್​​​ಗೆ ಮಹಿಳೆಯರಿಂದ ಬಿಸಿ ಬಿಸಿ ಕಜ್ಜಾಯ!
ಸಿಡ್ನಿಯ ಬೊಂಡಿ ಬೀಚ್​ನಲ್ಲಿ ಸಾಮೂಹಿಕ ಗುಂಡಿನ ದಾಳಿ, 10 ಮಂದಿ ಸಾವು
ಸಿಡ್ನಿಯ ಬೊಂಡಿ ಬೀಚ್​ನಲ್ಲಿ ಸಾಮೂಹಿಕ ಗುಂಡಿನ ದಾಳಿ, 10 ಮಂದಿ ಸಾವು
ಪರಪ್ಪನ ಅಗ್ರಹಾರ ಮಹಿಳಾ ಪೊಲೀಸ್ ಸಿಬ್ಬಂದಿಗೆ ಠಾಣೆಯಲ್ಲಿ ಸೀಮಂತ
ಪರಪ್ಪನ ಅಗ್ರಹಾರ ಮಹಿಳಾ ಪೊಲೀಸ್ ಸಿಬ್ಬಂದಿಗೆ ಠಾಣೆಯಲ್ಲಿ ಸೀಮಂತ
ಪ್ರೋಮೊನಲ್ಲೇ ಶಾಕ್ ಕೊಟ್ಟ ಬಿಗ್​​ಬಾಸ್: ಮನೆಯಿಂದ ಇಬ್ಬರು ಹೊರಕ್ಕೆ
ಪ್ರೋಮೊನಲ್ಲೇ ಶಾಕ್ ಕೊಟ್ಟ ಬಿಗ್​​ಬಾಸ್: ಮನೆಯಿಂದ ಇಬ್ಬರು ಹೊರಕ್ಕೆ
ದುರಹಂಕಾರದಿಂದ ಬಿಗ್ ಬಾಸ್ ನಿರೂಪಣೆ ಬೇಡ ಅಂತ ನಾನು ಹೇಳಲಿಲ್ಲ: ಸುದೀಪ್
ದುರಹಂಕಾರದಿಂದ ಬಿಗ್ ಬಾಸ್ ನಿರೂಪಣೆ ಬೇಡ ಅಂತ ನಾನು ಹೇಳಲಿಲ್ಲ: ಸುದೀಪ್
ಯಶಸ್ವಿ ಜೈಸ್ವಾಲ್ ಸ್ಫೋಟಕ ಸೆಂಚುರಿ: ಮುಂಬೈ ದಾಖಲೆಯ ರನ್ ಚೇಸ್​
ಯಶಸ್ವಿ ಜೈಸ್ವಾಲ್ ಸ್ಫೋಟಕ ಸೆಂಚುರಿ: ಮುಂಬೈ ದಾಖಲೆಯ ರನ್ ಚೇಸ್​
ಮೊಟ್ಟೆಗಳಲ್ಲಿ ಕ್ಯಾನ್ಸರ್ ಕಾರಕ ಅಂಶ ಪತ್ತೆ?: ಭಾರಿ ಚರ್ಚೆ
ಮೊಟ್ಟೆಗಳಲ್ಲಿ ಕ್ಯಾನ್ಸರ್ ಕಾರಕ ಅಂಶ ಪತ್ತೆ?: ಭಾರಿ ಚರ್ಚೆ
‘ಮಾರ್ಕ್’ ಸಿನಿಮಾದಲ್ಲಿ ಹೀರೋಯಿನ್ ಇಲ್ಲ ಯಾಕೆ? ಉತ್ತರಿಸಿದ ಕಿಚ್ಚ ಸುದೀಪ್
‘ಮಾರ್ಕ್’ ಸಿನಿಮಾದಲ್ಲಿ ಹೀರೋಯಿನ್ ಇಲ್ಲ ಯಾಕೆ? ಉತ್ತರಿಸಿದ ಕಿಚ್ಚ ಸುದೀಪ್