Chikkaballapura: ಸುಧಾಕರ್ ಈ ರಾಜ್ಯದ, ದೇಶದ ಆಸ್ತಿ; ಸಚಿವ ಶಿವರಾಮ್ ಹೆಬ್ಬಾರ್
ಚಿಕ್ಕಬಳ್ಳಾಪುರ ಉತ್ಸವದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಸುಧಾಕರ್ ಈ ರಾಜ್ಯದ ಹಾಗೂ ದೇಶದ ಆಸ್ತಿ ಜನರ ಆಶೀರ್ವಾದ ಅವರ ಮೇಲಿರಬೇಕು ಎಂದು ಮನವಿ ಮಾಡಿದರು.
ಚಿಕ್ಕಬಳ್ಳಾಪುರ: ಸಚಿವ ಸುಧಾಕರ್ ಅವರು ಚಿಕ್ಕಬಳ್ಳಾಪುರಕ್ಕೆ ಮಾತ್ರ ಸೀಮಿತವಲ್ಲ, ಅವರು ಈ ರಾಜ್ಯದ ಮತ್ತು ದೇಶದ ಆಸ್ತಿ. ಜನರ ಆಶೀರ್ವಾದ ಸದಾ ಅವರ ಮೇಲಿರಬೇಕು. ಚಿಕ್ಕಬಳ್ಳಾಪುರ ಉತ್ಸವ ಅಭೂತಪೂರ್ವ ಕಾರ್ಯಕ್ರಮವಾಗಿದ್ದು, ಇಲ್ಲಿ ಸುಧಾಕರ್ ಅವರು ತಮ್ಮ ಚಾಣಾಕ್ಷತೆ ತೋರಿದ್ದಾರೆ. ಎಂದು 5ನೇ ದಿನದ ಚಿಕ್ಕಬಳ್ಳಾಪುರ ಉತ್ಸವದ ಅಂಗವಾಗಿ ನಗರದ ಸರ್ ಎಂ.ವಿ ಜಿಲ್ಲಾ ಕ್ರೀಡಾಂಗಣದಲ್ಲಿ ಬುಧವಾರ ರಾತ್ರಿ ಆಯೋಜಿಸಿದ್ದ ವೇದಿಕೆ ಕಾರ್ಯಕ್ರಮದಲ್ಲಿ ಕಾರ್ಮಿಕ ಸಚಿವ ಶಿವರಾವಮ್ ಹೆಬ್ಬಾರ್ ಹೇಳಿದರು.
ಇದೇ ವೇಳೆ ಕೋವಿಡ್ ಸಂದರ್ಭದಲ್ಲಿ ಸಮರ್ಥವಾಗಿ ನಿಭಾಯಿಸಿ ರಾಜ್ಯದ ಜನತೆಯ ಜೀವ ಉಳಿಸಿದ ಕೀರ್ತಿ ಸುಧಾಕರ್ ಅವರಿಗಿದೆ. ಅವರಿಗೆ ಅಸಾಧ್ಯ ಎಂಬುದು ಯಾವುದೂ ಇಲ್ಲ. ತೋಟಗಾರಿಕಾ ಬೆಳೆಗಳಿಗೆ ಖ್ಯಾತಿ ಪಡೆದ ಚಿಕ್ಕಬಳ್ಳಾಪುರದಲ್ಲಿ ಶೀಥಲೀಕಣ ಘಟಕ ಬೇಕು ಎಂದು 10 ಕೋಟಿ ವೆಚ್ಚದಲ್ಲಿ ಘಟಕ ನೀಡಲಾಗಿದೆ. ಕ್ಷೇತ್ರದ ಜನರು ಸುಧಾಕರ್ ಅವರ ಕೈ ಹಿಡಯಬೇಕು. ಇಲ್ಲಿ ಅವರಿಗೆ ಎದುರಾಳಿಯೇ ಇಲ್ಲ. ಅವರಿಗೆ ಮುಂದಿನ ದಿನಗಳಲ್ಲಿ ಉತ್ತಮ ಭವಿಷ್ಯ ಇದೆ. ಹಾಗಾಗಿ ಅವರನ್ನು ನೀವು ಬೆಳೆಸಿದರೆ ಕ್ಷೇತ್ರವನ್ನು ಅವರು ಬೆಳೆಸುತ್ತಾರೆ ಎಂದು ಕೃಷಿ ಸಚಿವ ಬಿ.ಸಿ. ಪಾಟೀಲ್ ಹೇಳಿದರು.
ನೂತನ ಜಿಲ್ಲೆಯಾಗಿ ಬರೋಬ್ಬರಿ 15 ವರ್ಷಗಳ ನಂತರ ಇದೇ ಪ್ರಥಮ ಬಾರಿಗೆ ಅದ್ಧೂರಿ ಚಿಕ್ಕಬಳ್ಳಾಪುರ ಉತ್ಸವ ನಡೆಯುತ್ತಿದ್ದು, ದಸರಾ ಮಾದರಿಯಲ್ಲಿ ಉತ್ಸವ ನಡೆಸಲು ಮುಂದಾಗಿರುವ ಸ್ಥಳಿಯ ಶಾಸಕರು ಹಾಗೂ ಆರೋಗ್ಯ ಖಾತೆ ಸಚಿವ ಡಾ.ಕೆ.ಸುಧಾಕರ್, ಉತ್ಸವದ ಪ್ರಯುಕ್ತ ಜನರನ್ನ ಸೆಳೆಯಲು ವಿನೂತನ ಪ್ರಯೋಗ ನಡೆಸಿದ್ದಾರೆ. ಸ್ವತಃ ಸುಧಾಕರ್ ಪೌಂಡೇಷನ್ನಿಂದ 20 ಕ್ಕೂ ಹೆಚ್ಚು ಕುದುರೆ ಸಾರೋಟಗಳನ್ನು ಮೈಸೂರಿನಿಂದ ಚಿಕ್ಕಬಳ್ಳಾಪುರಕ್ಕೆ ಕರೆಸಿದ್ದು, ಸಾರ್ವಜನಿಕರು ಉಚಿತವಾಗಿ ಒಂದು ಕಡೆಯಿಂದ ಇನ್ನೊಂದು ಕಡೆಗೆ ಸಾರೋಟದಲ್ಲಿ ಸವಾರಿ ನಡೆಸಬಹುದಾಗಿದೆ.
ಇನ್ನು ಉತ್ಸವದ ಪ್ರಯುಕ್ತ ಸೋಲಾಲಪ್ಪನದಿನ್ನೆಯಲ್ಲಿ ತೋಟಗಾರಿಕೆ ಇಲಾಖೆಯಿಂದ ಕಲರ್ ಪುಲ್ ಫಲಪುಷ್ಪ ಪ್ರದರ್ಶನ ಏರ್ಪಡಿಸಲಾಗಿದೆ. ಪ್ಲವರ್ ಶೋನಲ್ಲಿ ತಾಲೂಕಿನ ನಂದಿ ಗ್ರಾಮದಲ್ಲಿರುವ ಶ್ರೀ ಭೋಗನಂದೀಶ್ವರ ದೇವಸ್ಥಾನವನ್ನು ಎರಡುವರೆ ಲಕ್ಷ ಗುಲಾಬಿ ಹೂಗಳಲ್ಲಿ ಅರಳಿಸಿದ್ದು ವಿಶೇಷವಾಗಿತ್ತು. ಮತ್ತೊಂದೆಡೆ ಆಹಾರ ಮೇಳ ಆಯೋಜನೆ ಮಾಡಲಾಗಿದ್ದು, ಇದರಿಂದ ಜನ ನಗರದ ಬಿಬಿ ರಸ್ತೆಯಿಂದ ಸೋಲಾಲಪ್ಪನದಿನ್ನೆವರೆಗೂ ಉಚಿತವಾಗಿ ಕುದುರೆ ಸಾರೋಟದಲ್ಲಿ ಪ್ರಯಾಣಿಸಬಹುದಾಗಿದೆ.
ವರದಿ: ಭೀಮಪ್ಪ ಪಾಟೀಲ ಟಿವಿ9 ಚಿಕ್ಕಬಳ್ಳಾಪುರ
ಇನ್ನಷ್ಟು ರಾಜ್ಯಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ